For Quick Alerts
ALLOW NOTIFICATIONS  
For Daily Alerts

ಸಂಬಂಧಕ್ಕೆ ಹುಳಿಹಿಂಡುವ ಕೋಪವನ್ನು ನಿಯಂತ್ರಿಸುವುದು ಹೇಗೆ?

|

ಸಂಬಂಧದಲ್ಲಿರುವಾಗ ನಿಮ್ಮ ಕೋಪವನ್ನು ನೀವು ಹೇಗೆ ನಿಭಾಯಿಸುವಿರಿ? ಹೌದು, ಸರಿಯಾಗಿ ಕೇಳುತ್ತಿದ್ದೇವೆ, ಒಂದು ವೇಳೆ ನಿಮ್ಮ ಭಾವನೆಗಳನ್ನು ನೀವು ಸರಿಯಾಗಿ ನಿಭಾಯಿಸುವುದನ್ನು ಕಲಿತಿಲ್ಲ ಎಂದಲ್ಲಿ, ನಿಮ್ಮ ಸಂಬಂಧದಲ್ಲಿ ಉದ್ವೇಗವು ಮನೆ ಮಾಡುತ್ತದೆ. ಆಗ ನಿಮ್ಮ ಸಂಬಂಧದಲ್ಲಿ ಇದರಿಂದ ಬಿರುಕು ಮೂಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ನಮ್ಮಲ್ಲಿ ಮೂಡುವ ಭಾವನೆಗಳಲ್ಲಿಯೇ, ಕೋಪವು ಅತ್ಯಂತ ವಿನಾಶಕಾರಿ ಭಾವನೆಯಾಗಿರುತ್ತದೆ.

ಇದರಿಂದ ನಿಮ್ಮ ಸಂಗಾತಿಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ಊಹಿಸಲು ಸಹ ಸಾಧ್ಯವಾಗುವುದಿಲ್ಲ. ಕೋಪ ಬಂದಾಗ ನಿಮಗೆ ವಿಚಾರ ಶಕ್ತಿಯ ಮೇಲೆ ನಿಯಂತ್ರಣವೇ ಇರುವುದಿಲ್ಲ, ಇದೇ ಮಾತು ನಿಮ್ಮ ಸಂಗಾತಿಗೂ ಸಹ ಅನ್ವಯವಾಗುತ್ತದೆ.

Ways To Handle Your Anger In Relationships

ಇದರ ಜೊತೆಗೆ ನಿಮಗೆ ಕೋಪ ಬಂದಾಗ ನಿಮ್ಮ ಸಂಗಾತಿಗೂ ಸಹ ನೀವು ಕೋಪವನ್ನು ಉಂಟು ಮಾಡುತ್ತೀರಿ. ಇದರಿಂದಾಗಿ ನಿಮ್ಮ ಸಂಬಂಧದಲ್ಲಿ ಜಗಳ ಆರಂಭವಾಗುತ್ತದೆ. ಕೋಪ ಬರುವುದು ಸ್ವಾಭಾವಿಕ, ಆದರೆ ಅದನ್ನು ನೀವು ಹೇಗೆ ನಿಭಾಯಿಸುವಿರಿ ಎಂಬುದು ಮುಖ್ಯ. ಮತ್ತೊಬ್ಬ ವ್ಯಕ್ತಿಯನ್ನು ನೀವು ನೋಯಿಸುವ ಸಂದರ್ಭವನ್ನು ಈ ಕೋಪವು ತಂದಿಡುತ್ತದೆ. ಸುಮ್ಮನೆ ಇತರರನ್ನು ನಿಮ್ಮ ಮಾತು ಮತ್ತು ವರ್ತನೆಯಿಂದ ನೋಯಿಸುವ ಬದಲು, ನಿಮ್ಮ ಕೋಪಕ್ಕೆ ಇರುವ ಕಾರಣವನ್ನು ಪ್ರಾಮಾಣಿಕವಾಗಿ ತಿಳಿಸಿ. ಇದರಿಂದ ನಿಮ್ಮ ನಡುವಿನ ಉದ್ವಿಗ್ನ ಪರಿಸ್ಥಿತಿಯು ತಿಳಿಯಾಗಬಹುದು. ನಿಮ್ಮ ಸಂಬಂಧ ಗಟ್ಟಿಯಾಗಬಹುದು.

ವಿವರಿಸಿ
ನಿಮ್ಮ ಕೋಪವನ್ನು ಹೊರಹಾಕುವ ಅಥವಾ ಅದನ್ನು ಸರಿಯಾದ ಮಾರ್ಗದಲ್ಲಿ ತಿಳಿಸುವ ಬಗೆಯನ್ನು ಮೊದಲು ತಿಳಿಯಿರಿ. ಇದರಿಂದ ನಿಮ್ಮ ಸಂಗಾತಿಗೆ ಬಹಳಷ್ಟು ಉಪಯೋಗವಾಗುತ್ತದೆ. ನಿಮ್ಮ ಕೋಪಕ್ಕೆ ಕಾರಣ ಏನು ಎಂಬುದು ಅವರಿಗು ಸಹ ಅರ್ಥವಾಗುತ್ತದೆ. ಅದನ್ನು ಸುಮ್ಮನೆ ಕಣ್ಣು ಮುಚ್ಚಿಕೊಂಡು ನೀವು ವ್ಯಕ್ತಪಡಿಸಿದರೆ, ಅದಕ್ಕೆ ತಕ್ಕಂತೆ ನಿಮ್ಮ ಸಂಗಾತಿಯು ಸಹ ಅರ್ಥ ಮಾಡಿಕೊಳ್ಳದೆ ಪ್ರತಿಕ್ರಿಯಿಸುತ್ತಾರೆ. ನಡುವಯಸ್ಸಿನ ಸಮಸ್ಯೆಗಳನ್ನು ನೀವು ಅನುಭವಿಸುತ್ತಿದ್ದೀರಾ?

ಸಮಸ್ಯೆಗಳನ್ನು ಪರಿಹರಿಸಿ
ಚರ್ಚೆ ಮಾಡುವುದರಿಂದ ಸಮಸ್ಯೆಗಳು ಬಗೆಹರಿಯುತ್ತವೆ ನಂಬಿ. ಇಬ್ಬರೂ ಕುಳಿತು ಮೊದಲು ಸಮಸ್ಯೆಯ ಬಗ್ಗೆ ಮಾತನಾಡಿ, ಅದಕ್ಕೆ ಪರಿಹಾರವನ್ನು ಹುಡುಕಿ. ಒಂದು ವೇಳೆ ನಿಮ್ಮ ಉದ್ವೇಗವನ್ನು ಸುಮ್ಮನೆ ನಿಮ್ಮ ಸಂಗಾತಿಯ ಮೇಲೆ ಹೇರುವ ಮನೋಭಾವ ನಿಮಗಿದ್ದಲ್ಲಿ, ಅದನ್ನೆ ಅವರು ಸಹ ತಿರುಗಿ ನೀಡುತ್ತಾರೆ ಎಂಬುದನ್ನು ಮರೆಯಬೇಡಿ. ಇದರಿಂದ ಸಮಸ್ಯೆ ಬಗೆ ಹರಿಯುವುದಿಲ್ಲ. ಆದ್ದರಿಂದ ನಿಮ್ಮ ಭಾವನೆಗಳನ್ನು ನಿಭಾಯಿಸುವ ಬಗೆಯನ್ನು ಮೊದಲು ತಿಳಿದುಕೊಳ್ಳಿ. ಕೋಪವನ್ನು ನಿಭಾಯಿಸುವುದ ಒಂದು ಸಮರ್ಥ ಕಲೆ ಎಂಬುದನ್ನು ತಿಳಿದುಕೊಳ್ಳಿ. ಸಂಬಂಧ ಮುರಿದು ಹೋದ ನಂತರ ಒಂಟಿತನದ ಭಯವೇ?

ಕೋಪದಂತಹ ಭಾವನೆಗಳು ನಮ್ಮನ್ನು ಉದ್ಧೀಪನಗೊಳಿಸಲು ಪ್ರಯತ್ನಿಸುತ್ತವೆ ಎಂಬುದನ್ನು ಮರೆಯಬೇಡಿ
ಇದರ ಜೊತೆಗೆ ಇವುಗಳು ನಮಗೆ ಬಂದಾಗ ಅದಕ್ಕೆ ಆರೋಗ್ಯಕರವಾಗಿ ಸ್ಪಂದಿಸುವ ಗುಣವನ್ನು ನಾವು ಬೆಳೆಸಿಕೊಳ್ಳಬೇಕು. ಅದೆಲ್ಲಕ್ಕಿಂತ ಮುಖ್ಯವಾಗಿ ನಿಮಗೆ ಎಂತಹ ಸಂದರ್ಭದಲ್ಲಿ ಕೋಪ ಬರುತ್ತದೆ ಎಂಬುದನ್ನು ನಿಮ್ಮ ಸಂಗಾತಿಗೆ ಮನವರಿಕೆ ಮಾಡಿಕೊಡಿ. ಇದನ್ನು ನಿಯಂತ್ರಿಸಿದರೆ ನೀವು ಕೋಪಕ್ಕೆ ತುತ್ತಾಗುವ ಸಂಭವವೇ ಇರುವುದಿಲ್ಲ. ಹೀಗೆ ಜಾಣತನದಿಂದ ಕೋಪವನ್ನು ನಿಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಿ. ಸಾತ್ವಿಕವಾದ ಕೋಪ ಒಳ್ಳೆಯದೇ, ಆದರೆ ಪದೇ ಪದೇ ಸಣ್ಣ ಸಣ್ಣ ವಿಚಾರಕ್ಕೂ ಕೋಪಿಸಿಕೊಳ್ಳುವುದು ಒಳ್ಳೆಯದಲ್ಲ. ಎಲ್ಲದಕ್ಕೂ ಕೋಪಿಸಿಕೊಂಡರೆ ಆ ಕೋಪಕ್ಕೆ ಅರ್ಥವೇ ಇರುವುದಿಲ್ಲ.

English summary

Ways To Handle Your Anger In Relationships

Do you know how to handle anger effectively in relationships? Well, frankly speaking, if you don't handle your emotions well, your relationships tend to have shorter shelf period as people may get frustrated and walk out of your life.
Story first published: Wednesday, April 1, 2015, 15:00 [IST]
X
Desktop Bottom Promotion