For Quick Alerts
ALLOW NOTIFICATIONS  
For Daily Alerts

ಉಂಡು ಮಲಗಿದ ಬಳಿಕವೂ ಜಗಳ ಮುಗಿದಿಲ್ಲವೇ?

By Arshad
|

ವಿವಾಹಗಳು ಸ್ವರ್ಗದಲ್ಲಿಯೇ ನಡೆಯುತ್ತವೆ ಎಂದು ಸುಭಾಷಿತವೊಂದು ಹೇಳುತ್ತದೆ. ಹಾಗಾದರೆ ವಿಚ್ಛೇದನಗಳು? ಅವೂ ಸ್ವರ್ಗದಲ್ಲಿಯೇ ನಡೆಯುತ್ತವೆ ಅಂದರೆ ತಪ್ಪಾಗುತ್ತದೆ. ವಿವಾಹಗಳು ಸ್ವರ್ಗದಲ್ಲಿ ನಡೆಯುತ್ತವೆ ಎಂದೇಕೆ ಹೇಳಲಾಗಿದೆ ಎಂದರೆ ಪ್ರತಿಯೊಬ್ಬರೂ ತಮ್ಮ ಜೀವನ ಸಂಗಾತಿಯ ಕುರಿತಾಗಿ ಕಂಡುಕೊಂಡಿರುವ ಕನಸುಗಳು ನೆರವೇರಲಿವೆ ಎಂದು ಊಹಿಸುವ ಜೀವನದ ಅತ್ಯಂತ ಸಂತೋಷಕರ ಕ್ಷಣ ಪ್ರಾರಂಭವಾಗುತ್ತದೆ. ಈ ಸಂತೋಷ ಸ್ವರ್ಗಸಮಾನವಾಗಿದೆ.

ದಿನಗಳೆದಂತೆ ಎಲ್ಲರಲ್ಲೂ ಇರುವ ನ್ಯೂನ್ಯತೆಗಳು ಒಂದೊಂದಾಗಿ ಅನಾವರಣಗೊಳ್ಳುತ್ತಾ ಹೋಗುತ್ತವೆ. ನಿಜವಾದ ಪ್ರೀತಿ ಈ ನ್ಯೂನ್ಯತೆಗಳ ಜೊತೆಗೇ ಸಂಗಾತಿಯನ್ನು ಸ್ವೀಕರಿಸುತ್ತದೆ. ಆದರೆ ಹಲವರು ಈ ನ್ಯೂನ್ಯತೆಗಳನ್ನು ಸ್ವೀಕರಿಸುವ ಅಥವಾ ತನ್ನ ನ್ಯೂನ್ಯತೆಯನ್ನು ಸರಿಪಡಿಸಿ ಸಂಗಾತಿಗೆ ಸಹಕರಿಸುವ ಉದಾರ ಭಾವನೆಯನ್ನು ಕುಂಠಿತಗೊಳಿಸುವ ಮೂಲಕ ವಿವಾಹದ ಬಂಧನವನ್ನೇ ಸಡಿಲಗೊಳಿಸುತ್ತಿದ್ದಾರೆ.

Warning Signs Of A Failed Marriage

ಯಾವುದೇ ವಿವಾಹ ಸಂಪನ್ನವಾಗಲು ಪ್ರೀತಿ, ವಿಶ್ವಾಸಕ್ಕಿಂತಲೂ ಪರಸ್ಪರ ಗೌರವಿಸುವುದು ಮುಖ್ಯವಾಗಿದೆ. ಯಾವಾಗ ಒಣಪ್ರತಿಷ್ಠೆ ಅಥವಾ ಅಹಂಭಾವ ಈ ಗೌರವವನ್ನು ಮೀರುತ್ತದೆಯೋ ಆಗ ವಿವಾಹ ಬಂಧನ ಕೊನೆಗೊಳ್ಳಲು ಪ್ರಾರಂಭವಾಗುತ್ತದೆ. ಈ ನಿಟ್ಟಿನಲ್ಲಿ ಕೆಲವು ಭಾವನೆಗಳು ವಿವಾಹ ಮುರಿಯುತ್ತಿದೆ ಈಗಲೇ ಸರಿಪಡಿಸಿಕೊಳ್ಳದಿದ್ದರೆ ಅನಾಹುತವಾಗುತ್ತದೆ ಎಂದು ಸ್ಪಷ್ಟ ಸಂಜ್ಞೆಗಳನ್ನು ನೀಡುತ್ತವೆ. ಇವನ್ನು ಗಮನಿಸಿ ಕೊಂಚ ತಾಳ್ಮೆ ಮತ್ತು ಸ್ವಲ್ಪ ತಗ್ಗಿ ಬಗ್ಗಿ ನಡೆಯುವುದರಿಂದ ವಿವಾಹವನ್ನು ಪುನಃ ಮೊದಲಿನಂತೆಯೇ ಸಂತೋಷಕರವಾಗಿಟ್ಟುಕೊಳ್ಳಬಹುದು. ಈ ಬಗ್ಗೆ ಕೆಲವು ಉಪಯುಕ್ತ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಪತಿ-ಪತ್ನಿ ಅನುಬಂಧ - ಮುರಿಯದಿರಲಿ ಬಾಂಧವ್ಯ

ನಿಮ್ಮ ಸಂಗಾತಿಯೊಡನೆ ಮಾತು ಕಡಿಮೆ ಮಾಡಿದ್ದೀರಿ
ಯಾವುದೇ ಸಂಬಂಧದಲ್ಲಿ ಸಂಗಾತಿಗಳು ಪರಸ್ಪರ ಮಾತನಾಡುವುದು ಅಗತ್ಯ. ಒಂದು ವೇಳೆ ಮಾತು ನಿಂತುಹೋಗಿದ್ದರೆ ಅಥವಾ ಕಾಟಾಚಾರಕ್ಕೆ ಕೆಲವು ಕ್ಷಣಗಳ ಮಾತ್ರ ಮಾತುಕತೆಯಾಗುತ್ತಿದ್ದರೆ ಇದು ಅಪಾಯದ ಸೂಚನೆಯಾಗಿದೆ. ಉದ್ಯೋಗನಿಮಿತ್ತ ವಿದೇಶದಲ್ಲಿರುವವರೂ ದುಬಾರಿಯಾದರೂ ಸರಿ, ಕೆಲ ನಿಮಿಷಗಳಾದರೂ ಮಾತನಾಡಿ ಕ್ಷೇಮ ವಿಚಾರಿಸುವುದು ಅಗತ್ಯ.

ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬ ಪರಿಸ್ಥಿತಿ ಎದುರಾಗುತ್ತದೆ
ನಿಮ್ಮಿಬ್ಬರ ನಡುವೆ ಸದಾ ಜಗಳವಾಗುತ್ತಿದ್ದು ಇದಕ್ಕೆ ಕಾರಣಗಳನ್ನು ಕೆದಕಿದರೆ ಕೋಳಿಪುಕ್ಕ ಹಾರಿಬಂದಿದ್ದ, ಮೇಲೆ ಸಿಕ್ಕಿಸಿದ್ದ ಅಂಗಿ ಗಾಳಿಗೆ ಕೆಳಕ್ಕೆ ಬಿದ್ದಿದ್ದ, ತನ್ನ ಮೊಬೈಲಿಗೆ ತಾಗಿಸಿದ್ದ ಚಾರ್ಜರ್ ಬದಲಿಸಿದ್ದಂತಹ ಕ್ಷುಲ್ಲುಕ ಕಾರಣಗಳು ಕಂಡುಬರುತ್ತಿವೆಯೇ? ಇದು ಸಹಾ ಅಪಾಯದ ಮುನ್ಸೂಚನೆಯಾಗಿದೆ.

ನಿಮ್ಮ ಅನುಮತಿಯಿಲ್ಲದೆಯೇ ನಿಮ್ಮ ಸಂಗಾತಿ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆಯೇ?
ತನ್ನ ಅತ್ಯಂತ ಖಾಸಗಿ ವಸ್ತುಗಳನ್ನು ಕೊಳ್ಳುವಾಗಲೂ ಸಂಗಾತಿಯೊಡನೆ ಚರ್ಚಿಸುತ್ತಿದ್ದು ಈಗ ಯಾವುದೇ ಪ್ರಮುಖ ವಿಚಾರ ಅಥವಾ ವಸ್ತು ಅಥವಾ ಲೇವಾದೇವಿಯಂತಹ ಪ್ರಮುಖ ವಿಚಾರನ್ನೂ ನಿಮ್ಮೊಂದಿಗೆ ಚರ್ಚಿಸದೇ ನಿಮ್ಮ ಸಂಗಾತಿ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆಯೇ? ಇದೂ ಸಹಾ ಅಪಾಯದ ಮುನ್ಸೂಚನೆಯಾಗಿದೆ. ಇವನು ತನ್ನ ಜೀವನ ಸಂಗಾತಿಯಾಗಲು ಅರ್ಹನೇ?

ಉಂಡು ಮಲಗಿದ ಬಳಿಕವೂ ಜಗಳ ಮುಗಿದಿಲ್ಲವೇ?
ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಗಾದೆಯೇ ಇದೆ. ಯಾವುದೇ ಜಗಳವಾದರೂ ರಾತ್ರಿ ಮಲಗಿದ ಬಳಿಕದ ಸಾಂಗತ್ಯದಲ್ಲಿ ಅಂತ್ಯಗೊಳ್ಳಬೇಕು. ಮರುದಿನ ಬೆಳಿಗ್ಗೆ ಎದ್ದ ಬಳಿಕ ನಿನ್ನೆ ಇದಾವುದೂ ನಡೆದೇ ಇಲ್ಲ ಎಂದು ಎಲ್ಲವನ್ನೂ ಮರೆತು ಮತ್ತೆ ನಗುನಗುತ್ತಾ ದಿನದ ಚಟುವಟಿಕೆಗಳಲ್ಲಿ ಮಗ್ನರಾಗುವುದು ಅತ್ಯಂತ ಆರೋಗ್ಯಕರವಾಗಿದೆ. ಇದು ನಿಮ್ಮ ನಡುವೆ ನಡೆಯುತ್ತಿಲ್ಲವೇ? ಸಾಂಗತ್ಯವಿಲ್ಲದೇ ರಾತ್ರಿ ಕಳೆದೇ ಹೋಯಿತೇ? ಇದೂ ವಿವಾಹ ಅಂತ್ಯಕ್ಕೆ ಸರಿಯುತ್ತಿದೆ ಎಂದು ಸ್ಪಷ್ಟವಾಗಿ ಸೂಚಿಸುವ ಸಂಜ್ಞೆಯಾಗಿದೆ.

English summary

Warning Signs Of A Failed Marriage

It is not safe to take any relationship for granted. It is important to know about certain signs of a failed marriage. One must stay alert so that one will know where the relationship is going. Relationship experts say that in most of the relationships, the partner who takes the relationship for granted is the one who ends up getting shocked when the divorce papers are served.
Story first published: Tuesday, June 16, 2015, 18:27 [IST]
X
Desktop Bottom Promotion