For Quick Alerts
ALLOW NOTIFICATIONS  
For Daily Alerts

ದಾಂಪತ್ಯದಲ್ಲಿ ತಲೆದೋರುವ ಒತ್ತಡಕ್ಕೆ ಶೀಘ್ರ ಕಡಿವಾಣ ಹಾಕಿ..!

|

ನಾವು ಅತ್ಯಂತ ಒತ್ತಡದ ಪ್ರಪಂಚದಲ್ಲಿ ಜೀವಿಸುತ್ತಿದ್ದೇವೆ. ತಮ್ಮ ಕೆಲಸ ಕಾರ್ಯಗಳ ಮೂಲಕ ಜನ ತಮ್ಮ ಸಂತೋಷವನ್ನು ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ತಮ್ಮ ಸಂಬಂಧದಲ್ಲಿ ಸಂತೋಷ ಸಿಗುತ್ತಿಲ್ಲ. ಏಕೆಂದರೆ ಇಂದು ಒತ್ತಡವು ಕೆಲಸ ಕಾರ್ಯಗಳನ್ನು ದಾಟಿ ದಾಂಪತ್ಯದವರೆಗು ಬಂದು ಕುಳಿತಿದೆ. ಹಾಗಾಗಿ ಈಗ ದಾಂಪತ್ಯವು ಸಹ ಸವಾಲುಗಳನ್ನು ಎದುರಿಸುತ್ತಿದೆ.

ಯಾವಾಗಲೊ ಒಮ್ಮೆ ಒತ್ತಡದ ಸಮಸ್ಯೆ ನಿಮ್ಮ ಸಂಬಂಧವನ್ನು ಕಾಡಿದರೆ ಪರವಾಗಿಲ್ಲ. ಆದರೆ ದೀರ್ಘಾವಧಿಯಲ್ಲಿ ಕಾಡುವ ಒತ್ತಡವು ಅನೇಕ ಆರೋಗ್ಯದ ಸಮಸ್ಯೆಗಳಿಗೆ ನಿಮ್ಮನ್ನು ದೂಡುತ್ತದೆ. ಆದ್ದರಿಂದ ಈ ಒತ್ತಡವನ್ನು ಆದಷ್ಟು ಬೇಗ ನಿವಾರಿಸಿಕೊಳ್ಳಿ.

ದಾಂಪತ್ಯವನ್ನು ಉತ್ತಮವಾಗಿರಿಸಿಕೊಳ್ಳಲು ಇಬ್ಬರು ಸಂಗಾತಿಗಳು ಮನಸ್ಸು ಮಾಡುವವರೆಗು ಈ ಸಮಸ್ಯೆ ಬಗೆಹರಿಯುವುದಿಲ್ಲ. ಹೊಸ ಅನುಭವಗಳಿಗೆ ನಾವು ತೀವ್ರತರವಾಗಿ ಸ್ಪಂದಿಸುವುದು ಸಾಮಾನ್ಯ. ದಾಂಪತ್ಯದಲ್ಲಿ ಒತ್ತಡದ ಪರಿಣಾಮವಾಗಿ ಸಂಗಾತಿಗಳು ಪರಸ್ಪರರ ಮೇಲೆ ಕೂಗಾಡುವುದು ಸಾಮಾನ್ಯ. ಇದರಿಂದ ಯಾವುದೇ ಪ್ರಯೋಜನ ಬರುವುದಿಲ್ಲ ಎಂಬುದು ಅವರಿಬ್ಬರಿಗು ಗೊತ್ತು. ಆದರು ಸಹ ಒತ್ತಡದ ಪರಿಣಾಮವಾಗಿ ಅವರು ಪರಸ್ಪರರ ಮೇಲೆ ಕೂಗಾಡುವುದು, ವಾದ ಮಾಡುವುದು, ಇತರರ ಸಮಸ್ಯೆಯ ಕುರಿತು ಜಾಣ ಕುರುಡನ್ನು ಪ್ರದರ್ಶಿಸುವುದು ಸಹಜ. ಬನ್ನಿ ದಾಂಪತ್ಯದಲ್ಲಿ ಇಂತಹ ಒತ್ತಡವನ್ನು ಹೇಗೆ ನಿವಾರಿಸುವುದು ಎಂಬುದನ್ನು ಮುಂದೆ ಓದಿ.... ಕ್ಷುಲ್ಲಕ ವಿಷಯಗಳಿಗೆ ಮುರಿಯದಿರಲಿ ಮಧುರ ಸಂಬಂಧ!

Tips To Handle Stress In A Relationship

ನಿಮ್ಮ ಸಂಗಾತಿಯ ಕಾಳಜಿಗಳನ್ನು ತಿಳಿದುಕೊಳ್ಳಿ
ದಾಂಪತ್ಯದಲ್ಲಿದ್ದಾಗ ನಾವು ನಮ್ಮ ಸಂಗಾತಿಯ ಕಾಳಜಿಗಳ ಕುರಿತಾಗಿ ಜಾಣ ಕುರುಡು ಪ್ರದರ್ಶಿಸುವುದು ಸಾಮಾನ್ಯ. ನಾವು ಯಾವಾಗಲು ರಕ್ಷಣಾತ್ಮಕ ನಡೆಯನ್ನು ಪ್ರದರ್ಶಿಸುತ್ತೇವೆ ಅಥವಾ ಇತರರ ಸಮಸ್ಯೆಯನ್ನು ಕಡೆಗಣಿಸುತ್ತೇವೆ. ಒತ್ತಡವನ್ನು ನಿಭಾಯಿಸುವುದು ಹೇಗೆಂದು ತಿಳಿದುಕೊಳ್ಳಲು ಮೊದಲು ಸಂಗಾತಿಯ ಕಾಳಜಿಗಳನ್ನು ಅರ್ಥ ಮಾಡಿಕೊಳ್ಳಲು ಆರಂಭಿಸಿ.

ಪರಸ್ಪರರನ್ನು ನಿಂದಿಸಿಕೊಳ್ಳಲು ಹೋಗಬೇಡಿ
ದಾಂಪತ್ಯವು ಒತ್ತಡದ ಕುಲುಮೆಯಲ್ಲಿ ಬೇಯುತ್ತದೆ. ಆಗ ಯಾವುದೇ ಕಾರಣಕ್ಕು ಸಂಗಾತಿಯನ್ನು ನಿಂದಿಸಲು ಹೋಗಬೇಡಿ. ಅದರ ಬದಲಿಗೆ ನಿಮ್ಮ ಒತ್ತಡಕ್ಕೆ ಕಾರಣವಾದ ಸಮಸ್ಯೆಯ ಮೂಲವನ್ನು ಕುರಿತು ಚರ್ಚಿಸಿ. ಜೀವನದಲ್ಲಿ ಒಳ್ಳೆಯದು ಮತ್ತು ಕೆಟ್ಟದು ಎಲ್ಲವು ಇದ್ದದ್ದೆ, ಆದರೆ ಅದು ಶಾಶ್ವತವಾಗಿ ಇರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಎಚ್ಚರ: ಇಂತಹ ಸುಳ್ಳುಗಳು ಸಂಸಾರದ ಬುಡವನ್ನೇ ಅಲುಗಾಡಿಸಿಬಿಡಬಲ್ಲವು!!

ನೀವು ಸದಾ ಅವರ ಜೊತೆ ಇರುವಿರಿ ಎಂಬ ಭಾವ ಮೂಡಿಸಿ
ನಂಬಿಕೆಯೇ ಸಂಬಂಧದ ಜೀವಾಳ. ನಿಮ್ಮ ಸಂಗಾತಿಗೆ ಸಮಸ್ಯೆ ಬಂದಾಗ ಮತ್ತು ಇಲ್ಲದಿದ್ದಾಗ ಸದಾ ಅವರ ಹಿಂದೆ ನೀವು ಇರುವಿರಿ ಎಂಬ ಭಾವವನ್ನು ಅವರಲ್ಲಿ ಮೂಡಿಸಿ. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳು, ಏರು-ಪೇರುಗಳು ಬರುವುದು ಸಹಜ. ಇದನ್ನು ಕುಳಿತು ಆಲೋಚಿಸಿ ನಿಭಾಯಿಸಿ. ಮೊದಲ ನೋಟದಲ್ಲೇ ಹೆಣ್ಣಿನ ಚಂಚಲ ಮನಸ್ಸನ್ನು ಗೆಲ್ಲಬಹುದೇ?

ಪರಸ್ಪರರನ್ನು ಗೌರವಿಸಿ


ಒಂದು ಸಂಬಂಧವು ಕೆಲ ಕಾಲ ಆದ ನಂತರ, ಎಲ್ಲವನ್ನು ಉದಾಸೀನ ಮಾಡಲು ಆರಂಭಿಸುತ್ತದೆ. ಇದಕ್ಕೆ ದಾಂಪತ್ಯವು ಹೊರತಲ್ಲ. ಒತ್ತಡವು ನಿಮ್ಮ ಬಾಳಸಂಗಾತಿಯನ್ನು ಸಹ ಮರೆಯುವಂತೆ ಮಾಡುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕು ಸಂಗಾತಿಯ ಕುರಿತಾಗಿ ಗೌರವವನ್ನು ಕಳೆದುಕೊಳ್ಳಬೇಡಿ. ಇದರಿಂದ ಒತ್ತಡ ತಾನೇ ತಾನಾಗಿ ನಿವಾರಣೆಯಾಗುತ್ತದೆ.
English summary

Tips To Handle Stress In A Relationship

We live in a world which is stressed to its wits end. People are increasingly unhappy with their jobs. They don't find happiness in their relationships and marriages often crumble because of stress and its after effects.
Story first published: Tuesday, February 24, 2015, 9:52 [IST]
X
Desktop Bottom Promotion