For Quick Alerts
ALLOW NOTIFICATIONS  
For Daily Alerts

ಮದುವೆಯ ನಂತರ ಬಾಯಿಗೆ ಸ್ವಲ್ಪ ಬ್ರೇಕ್ ಹಾಕಿ..!

By Super
|

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಗಾದೆ ಇದೆ. ಏಕೆಂದರೆ ಮದುವೆಯಾಗುವ ಜೋಡಿ ಜೀವನಪರ್ಯಂತ ಒಬ್ಬರಿಗೊಬ್ಬರು ಜೊತೆ ನೀಡಬೇಕಾಗುವುದರಿಂದ ಪ್ರತಿಯೊಬ್ಬರು ತಮ್ಮ ಮನಸ್ಸಿನ ಕನಸಿನ ರಾಜಕುಮಾರ/ರಾಜಕುಮಾರಿಯನ್ನೇ ಬಯಸುತ್ತಾರೆ. ಆದರೆ ಯಾರಿಗೂ ಈ ಎಲ್ಲಾ ಗುಣಗಳಿರುವ ರಾಜಕುಮಾರ ಖಂಡಿತಾ ಸಿಗುವುದಿಲ್ಲ. ಎಲ್ಲಾ ಗುಣಗಳಿರಲೇಬೇಕೆಂದು ಹಠ ಹಿಡಿದು ಕಠಿಣ ತಪಸ್ಸಿನ ಬಳಿಕ ದ್ರೌಪದಿಗೂ ಈ ಗುಣಗಳು ಐವರು ಪತಿಯರಿಂದ ದೊರಕುವಂತಾಯಿತು. ಅಂತಹದ್ದಿರುವಾಗ ಹುಲುಮಾನವರಾದ ನಮಗೆ ಎಲ್ಲಾ ಗುಣಗಳಿರುವ ವ್ಯಕ್ತಿ ಜೀವನಸಂಗಾತಿಯಾಗಿ ದೊರಕುವರೇ? ಕಂಡಿತವಾಗಿಯೂ ಇಲ್ಲ.

ಬದಲಿಗೆ ನಮ್ಮ ಸಂಗಾತಿಯ ನೈಜ್ಯ ವ್ಯಕ್ತಿತ್ವವನ್ನು ಒಪ್ಪಿಕೊಂಡು ಒಬ್ಬರಿಗೊಬ್ಬರು ಪೂರಕವಾಗಿದ್ದರೆ ಜೀವನ ಸ್ವರ್ಗವಾಗುತ್ತದೆ. ನೀವು ಬಯಸುವ ಈ ಸಂಗತಿಗಳೆಲ್ಲಾ ನೀವು ಮದುವೆಯಾಗುವವರಲ್ಲಿದೆ ಎಂದು ಸುಳ್ಳು ಹೇಳಿ ನಂಬಿಸುವುದೇ 'ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು' ಎಂಬ ಗಾದೆಯಂತೆ ಹಿರಿಯರು ಕಂಡುಕೊಂಡ ಉಪಾಯ. ಮದುವೆ ಮುಂಚೆ ವಧುವಿಗೆ ಕಾಡುವ ಸಂದೇಹ ಅಷ್ಟಿಷ್ಟಲ್ಲ!

ಆದರೆ ಈ ಸುಳ್ಳುಗಳು ಸುಂದರವಾದರೂ ಸತ್ಯವಲ್ಲ ಎಂಬುದು ಮದುವೆಯ ಬಳಿಕ ಕೆಲವೇ ದಿನಗಳಲ್ಲಿ ಒಬ್ಬರಿಗೊಬ್ಬರಿಗೆ ಗೊತ್ತಾಗುತ್ತದೆ. ಆದ್ದರಿಂದಲೇ ವಿವಾಹದ ಮೊದಲ ವರ್ಷ ಇಬ್ಬರಿಗೂ ಅತ್ಯಂತ ಮುಖ್ಯವಾಗಿದೆ. ಅಂತೆಯೇ ವಿವಾಹದ ಬಳಿಕ ಮಧುಚಂದ್ರ ಸಹಾ. ಇಬ್ಬರೂ ಈ ಅವಧಿಯಲ್ಲಿ ತಮ್ಮ ಇಷ್ಟ ಮತ್ತು ಆಕಾಂಕ್ಷೆಗಳನ್ನು ಹೇಳಿಕೊಂಡು ಜೀವನಪರ್ಯಂತದ ಬದ್ಧತೆಗೆ ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸುವುದೂ ಸುಖಜೀವನಕ್ಕೆ ಭದ್ರ ಅಡಿಪಾಯ ಹಾಕುತ್ತದೆ. ಆದರೆ ಈ ಭರದಲ್ಲಿ ನೀವು ಎಲ್ಲಾ ಸಂಗತಿಗಳನ್ನು ಹೇಳಕೂಡದು. ಗೆಳೆಯ ಮದುವೆಯಾಗದೇ ಕೈ ಕೊಡಬಹುದು, ಜೋಕೆ!

ಏಕೆಂದರೆ ನಿಮ್ಮ ಮದುವೆ ಮಾಡಲು ಹಿರಿಯಲು ಕೆಲವೊಂದು ಸುಳ್ಳುಗಳನ್ನು 'ಸಾವಿರ ಸುಳ್ಳುಗಳಲ್ಲಿ' ಕೆಲವಾಗಿ ಹೇಳಿರುತ್ತಾರೆ. ಈ ವಿಷಯಗಳನ್ನು ವಿವಾಹದ ತಕ್ಷಣವೇ ಹೇಳುವ ಬದಲು ಸೂಕ್ತ ಸಮಯ ಬಂದ ಬಳಿಕ ಸಾವಧಾನದಿಂದ ಹೇಳುವುದು ಉತ್ತಮ. ಏಕೆಂದರೆ ಈಗತಾನೇ ಚಿಗುರುತ್ತಿರುವ ನಿಮ್ಮ ಬಾಂಧವ್ಯ ಈ ವಿಷಯಗಳಿಂದ ಸಂಗಾತಿಯ ಮನನೋಯಿಸಿ ಈ ಚಿಗುರನ್ನು ಚಿವುಟುತ್ತದೆ. ಇದರ ಪರಿಣಾಮ ವ್ಯತಿರಿಕ್ತವಾಗಲೂ ಬಹುದು. ನಿಮ್ಮ ದ್ವಂದ್ವವನ್ನು ಕೆಳಗಿನ ಸ್ಲೈಡ್ ಶೋ ನಿವಾರಿಸಲಿದೆ:

ಮದುವೆಯ ಖರ್ಚುವೆಚ್ಚಗಳ ಬಗ್ಗೆ ವಿಮರ್ಷಿಸದಿರಿ

ಮದುವೆಯ ಖರ್ಚುವೆಚ್ಚಗಳ ಬಗ್ಗೆ ವಿಮರ್ಷಿಸದಿರಿ

ಮದುವೆಯ ಬಳಿಕ ಗಂಡಹೆಂಡಿರ ನಡುವಣ ಕಲಹಗಳಲ್ಲಿ ಶೇಖಡಾ ತೊಂಭತ್ತರಷ್ಟು ಕಾರಣಗಳು ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ್ದಾಗಿವೆ. ಆದ್ದರಿಂದ ವಿವಾಹದ ತಕ್ಷಣ ಯಾವುದೇ ಕಾರಣಕ್ಕೂ ನಿಮ್ಮ ಮದುವೆಯ ಖರ್ಚುವೆಚ್ಚಗಳ ಬಗ್ಗೆ ಯಾವುದೇ ಪ್ರಸ್ತಾಪ ಮಾಡದಿರಿ. ಇದನ್ನು ನಿಮ್ಮ ಹಿರಿಯರು ನೋಡಿಕೊಳ್ಳಲಿ. ವಿವಾಹದ ಬಳಿಕ ನಿಮ್ಮ ಮಾತುಗಳಲ್ಲಿ ಮುಂದಿನ ಜೀವನ, ಭವಿಷ್ಯದ ಭದ್ರತೆ, ಮನೆ, ಮಧುಚಂದ್ರ, ಮಧುಚಂದ್ರಕ್ಕೆ ಪ್ರಶಸ್ತ ಸ್ಥಳದ ಆಯ್ಕೆ, ವೃತ್ತಿಪರ ಜೀವನಕ್ಕೆ ಜೀವನಸಂಗಾತಿಯಿಂದ ಬೇಕಾದ ಪ್ರೋತ್ಸಾಹ ಮತ್ತು ಬೆಂಬಲ ಮೊದಲಾದ ವಿಷಯಗಳು ನಿಮ್ಮ ಮಾತುಗಳಲ್ಲಿರಲಿ. ಹಣದ ವಿಷಯವೇನಿದ್ದರೂ ನಿಮ್ಮ ನಿತ್ಯದ ಖರ್ಚುವೆಚ್ಚಗಳು ಮತ್ತು ಮಧುಚಂದ್ರಕ್ಕೆ ಹೋಗಿಬರುವ ಪ್ರವಾಸಕ್ಕೆ ಸೀಮಿತವಾಗಿರಲಿ.

ಸಂಗಾತಿಯ ಸಂಬಂಧಿಕರ ಬಗ್ಗೆ ಚರ್ಚಿಸದಿರಿ

ಸಂಗಾತಿಯ ಸಂಬಂಧಿಕರ ಬಗ್ಗೆ ಚರ್ಚಿಸದಿರಿ

ವಿವಾಹದ ಬಳಿಕ ನಿಮ್ಮ ಸಂಗಾತಿಯ ಮನೆಯವರ ಬಗ್ಗೆ ಯಾವುದೇ ಬಗೆಯ ಪ್ರತಿಕ್ರಿಯೆ ವ್ಯಕ್ತಪಡಿಸದಿರಿ. ಏಕೆಂದರೆ ಅವರ ಮನೆಯವರ ಬಗ್ಗೆ ಇದುವರೆಗೆ ಅರಿವಿರದ ನೀವು ನೀಡುವ ಯಾವುದೇ ಪ್ರತಿಕ್ರಿಯೆ ನಿಮ್ಮ ಸಂಗಾತಿಯ ಮನ ನೋಯಿಸಬಹುದು. ಅಲ್ಲದೇ ಯಾವುದೇ ವ್ಯಕ್ತಿಯ ಬಾಹ್ಯ ಚಹರೆಯಿಂದ ಆ ವ್ಯಕ್ತಿಯ ಅಂತರಂಗವನ್ನು ನೋಡಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ನಿಮ್ಮ ಸಂಗಾತಿ ಅವರನ್ನು ನಿಮಗಿಂತಲೂ ಹೆಚ್ಚು ಅರಿತಿದ್ದು ನಿಮ್ಮ ಆ ವ್ಯಕ್ತಿಯ ಬಗ್ಗೆ ಯಾವುದೇ ಮಾತು ನಿಮ್ಮ ಸಂಗಾತಿಯ ಮನನೋಯಿಸಬಹುದು. ಆದ್ದರಿಂದ ಬಂದವರೆಲ್ಲರೂ ನಮ್ಮ ಅತಿಥಿಗಳೇ ಎಂಬ ಉದಾರಭಾವದಿಂದ ಎಲ್ಲರನ್ನೂ ಏಕಸಮಾನವಾಗಿ ಗೌರವಿಸುವ ಮೂಲಕ ನಿಮ್ಮ ಸಂಗಾತಿಯ ಮನ ಗೆಲ್ಲಬಲ್ಲಿರಿ.

ಸಂಗಾತಿಯನ್ನು ನಿಮ್ಮ ಹಿಂದಿನ ಗೆಳೆಯ/ಗೆಳತಿಗೆ ಹೋಲಿಸದಿರಿ

ಸಂಗಾತಿಯನ್ನು ನಿಮ್ಮ ಹಿಂದಿನ ಗೆಳೆಯ/ಗೆಳತಿಗೆ ಹೋಲಿಸದಿರಿ

ವಿವಾಹಕ್ಕೂ ಮುನ್ನ ಒಂದು ವೇಳೆ ನಿಮ್ಮ ಗೆಳೆಯನ ಬೇರೋರ್ವ ವ್ಯಕ್ತಿಯೊಂದಿಗೆ ನಿಕಟವಾಗಿದ್ದು ಕಾರಣಾಂತರಗಳಿಂದ ದೂರವಾಗಿದ್ದರೂ ಆ ವ್ಯಕ್ತಿಯ ಬಗೆಗಿನ ಕೆಲವು ಉತ್ತಮ ಗುಣಗಳು ನಿಮ್ಮ ಮನದಲ್ಲಿ ಸದಾ ಹಸಿರಾಗಿರುತ್ತವೆ. ಇದನ್ನು ನಿವಾರಿಸಲು ಸಾಧ್ಯವಿಲ್ಲ. ಆದರೆ ಆ ನೆನಪುಗಳು ಒಂದು ಸುಂದರ ನೆನಪಾಗಿ ಸದಾ ನಿಮ್ಮ ಮನದಲ್ಲಿಯೇ ಇರುವುದು ಉತ್ತಮ. ಬದಲಿಗೆ ಈ ಗುಣಗಳನ್ನು ನಿಮ್ಮ ಸಂಗಾತಿಯಲ್ಲಿ ಬಯಸಿ ಆ ತರಹ ಇಲ್ಲ ಎಂಬ ಹೋಲಿಕೆಯನ್ನು ಮಾಡುವುದು ಸರ್ವಥಾ ಸಲ್ಲದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸಂಗಾತಿಯನ್ನು ನಿಮ್ಮ ಹಿಂದಿನ ಗೆಳೆಯ/ಗೆಳತಿಗೆ ಹೋಲಿಸದಿರಿ

ಸಂಗಾತಿಯನ್ನು ನಿಮ್ಮ ಹಿಂದಿನ ಗೆಳೆಯ/ಗೆಳತಿಗೆ ಹೋಲಿಸದಿರಿ

ಹೀಗೊಬ್ಬರು ಗೆಳೆಯ/ಗೆಳತಿ ಇದ್ದರು, ಈಗ ನಾವು ಗೆಳೆತನದಲ್ಲಿ ಇಲ್ಲ ಎಂಬ ಒಂದು ಮಾಹಿತಿಯನ್ನು ಮಾತ್ರವೇ ನೀಡಿ ಉಳಿದ ಯಾವುದೇ ಪ್ರಸಂಗವನ್ನು ನಿಮ್ಮ ಸಂಗಾತಿಯಲ್ಲಿ ಪ್ರಸ್ತಾಪಿಸಲೇಬೇಡಿ. ಈಗ ನಿಮ್ಮ ಮನವೇನಿದ್ದರೂ ನಿಮ್ಮ ಸಂಗಾತಿಯ ಬಗ್ಗೆಯೇ ಯೋಚಿಸಬೇಕೇ ಹೊರತು ಹಿಂದೆಂದೋ ಆಗಿದ್ದ ಸಂಬಂಧಕ್ಕಲ್ಲ. ಇದು ನಿಮ್ಮ ದಾಂಪತ್ಯವನ್ನು ಸುಖಮಯವಾಗಿಸುತ್ತದೆ. ವಿವಾಹದ ತಕ್ಷಣ ಮಾತ್ರವಲ್ಲ, ಜೀವನಪರ್ಯಂತ ಆ ವ್ಯಕ್ತಿಯ ಬಗ್ಗೆ ಪ್ರಸ್ತಾವನೆ ಮಾಡದೇ ಇರುವುದೇ ಲೇಸು.

ನಿಮಗೆ ಕೊಂಚ ಸಮಯ ಏಕಾಂತ ಬೇಕು ಎಂದು ಹೇಳಬೇಡಿ

ನಿಮಗೆ ಕೊಂಚ ಸಮಯ ಏಕಾಂತ ಬೇಕು ಎಂದು ಹೇಳಬೇಡಿ

ವಿವಾಹದ ತಕ್ಷಣ ನಿಮಗೆ ಏಕಾಂತ ಬೇಕು ಎಂದು ಎಂದಿಗೂ ಹೇಳಬೇಡಿ. ಒಂದು ವೇಳೆ ಹೇಳಿದರೆ ಸಾವಿರ ಪ್ರಶ್ನೆಗಳು ಏಳುತ್ತವೆ. ಇದರಲ್ಲಿ ಮೊದಲಾಗಿ ಬರುವುದು ಏಕಾಗಿ ಬೇಕು? ಇದಕ್ಕೆ ನೀವು ಉತ್ತರವನ್ನು ಹೇಳುವ ಮೊದಲೇ ನಿಮ್ಮ ಸಂಗಾತಿಯ ಮನದಲ್ಲಿ ಸಾವಿರ ಆತಂಕಗಳು ಎದುರಾಗುತ್ತವೆ. ಇದರಲ್ಲಿ ಪ್ರಮುಖವಾದುದು ನಿಮ್ಮ ಹಿಂದಿನ ಸಂಬಂಧವನ್ನು ನೀವು ಕಳೆದುಕೊಳ್ಳಲಿಚ್ಛಿಸದೇ ಈಗಿರುವ ಸಂಗಾತಿಯೊಂದಿಗೆ ಬೆರೆಯಲೂ ಆಗದೇ ಇರುವ ಸಂಗ್ದಿಗ್ದತೆ.

ನಿಮಗೆ ಕೊಂಚ ಸಮಯ ಏಕಾಂತ ಬೇಕು ಎಂದು ಹೇಳಬೇಡಿ

ನಿಮಗೆ ಕೊಂಚ ಸಮಯ ಏಕಾಂತ ಬೇಕು ಎಂದು ಹೇಳಬೇಡಿ

ನೀವು ಒಂದು ಸಕಾರಣಕ್ಕೇ ನಿಮ್ಮ ಸಂಗಾತಿಯಿಂದ ದೂರವಾಗಿದ್ದರೂ ಅತ್ತ ಅದೇ ಸಮಯದಲ್ಲಿ ಒಂಟಿಯಾಗಿರುವ ನಿಮ್ಮ ಸಂಗಾತಿಯನ್ನು ಕಂಡವರು ಬಗೆಬಗೆಯ ಮಾತುಗಳಿಗೆ ಪುಷ್ಟಿ ನೀಡುತ್ತಾರೆ. ಏನೂ ಇಲ್ಲದಿದ್ದರೂ ಹಲವಾರು ಊಹಾಪೋಹ ಮತು ಕಲ್ಪಿತ ಮಾತುಗಳ ಬಿರುಬಾಣಕ್ಕೆ ನೀವು ಮತ್ತು ಮುಖ್ಯವಾಗಿ ನಿಮ್ಮ ಕುಟುಂಬ ಗುರಿಯಾಗಬೇಕಾಗುತ್ತದೆ. ಆದ್ದರಿಂದ ಎಂದಿಗೂ ವಿವಾಹದ ಬಳಿಕ ಏಕಾಂತಕ್ಕೆ ಆಸ್ಪದ ನೀಡಬೇಡಿ. ಸಾಧ್ಯವಾದಷ್ಟೂ ಹೊತ್ತು ಸಂಗದಲ್ಲಿರಿ. ಸಂಗಾತಿಯಿಂದ ಅಗಲಲೇಬೇಕಾದ ಸಕಾರಣವಿದ್ದರೆ ಹಿರಿಯರಿಗೆ ವಿಷಯವನ್ನು ಸ್ಪಷ್ಟಪಡಿಸಿ.

ನಿಮ್ಮ ಸಂಗಾತಿಯ ಸ್ನೇಹಿತರ ಬಗ್ಗೆ ಟೀಕೆ ಬೇಡ

ನಿಮ್ಮ ಸಂಗಾತಿಯ ಸ್ನೇಹಿತರ ಬಗ್ಗೆ ಟೀಕೆ ಬೇಡ

ವಿವಾಹಕ್ಕೆ ನಿಮ್ಮ ಸಂಗಾತಿಯ ಸ್ನೇಹಿತರೂ ಆಗಮಿಸಿರುತ್ತಾರೆ. ಅವರ ಬಗ್ಗೆ ನಿಮ್ಮ ಸಂಗಾತಿ ತಿಳಿದುಕೊಂಡಷ್ಟು ನೀವು ತಿಳಿದಿರುವುದಿಲ್ಲ. ಕೆಲವರು ಈ ಸಂದರ್ಭವನ್ನು ಮೋಜು ಮಸ್ತಿಗಾಗಿಯೂ ಬಳಸಿ ನಿಮಗೆ ಇಷ್ಟವಾಗದ ಕೆಲವು ಜೋಕು ಅಥವಾ ವಿಷಯಗಳನ್ನು ಕೆದಕಬಹುದು. ಈ ಬಗ್ಗೆ ದಿವ್ಯಮೌನ ವಹಿಸುವುದು ಜಾಣರ ಲಕ್ಷಣ. ಬದಲಿಗೆ ನಿಮ್ಮ ಸಂಗಾತಿಯ ಸ್ನೇಹಿತರ ಬಗ್ಗೆ ಮಾಡುವ ಯಾವುದೇ ಟೀಕೆ ನಿಮ್ಮ ಸಂಬಂಧಕ್ಕೆ ಹುಳಿ ಹಿಂಡಬಹುದು.

ನಿಮ್ಮ ಸಂಗಾತಿಯ ಸ್ನೇಹಿತರ ಬಗ್ಗೆ ಟೀಕೆ ಬೇಡ

ನಿಮ್ಮ ಸಂಗಾತಿಯ ಸ್ನೇಹಿತರ ಬಗ್ಗೆ ಟೀಕೆ ಬೇಡ

ಅಷ್ಟಕ್ಕೂ ವಿವಾಹದ ಶುಭಸಂದರ್ಭದಲ್ಲಿ ಸ್ನೇಹಿತರು ಮೋಜಿಗಾಗಿ ಹೇಳಿರುವ ವಿಷಯಗಳು ಮರುದಿನವೇ ಅವರಿಗೂ ಮರೆತುಹೋಗಿರುತ್ತದೆ. ಆದ್ದರಿಂದ ವಿವಾಹದ ಬಳಿಕ ಯಾರದ್ದೂ ಮಾತು ಅಥವಾ ಕೃತಿಗಳನ್ನು ಗಂಭೀರವಾಗಿ ಪರಿಗಣಿಸದೇ ನಿಮ್ಮ ಮತ್ತು ನಿಮ್ಮ ಸಂಗಾತಿಯ ಮುಂದಿನ ಜೀವನದ ಬಗ್ಗೆಯೇ ಹೆಚ್ಚಾಗಿ ಚರ್ಚಿಸುವುದು ಇಬ್ಬರಿಗೂ ಉಪಯುಕ್ತವಾಗಿದೆ.

English summary

Things You Must Never Discuss With Your Spouse Right After Your Wedding

For a marriage to last long, its foundation needs to be strong. That is obviously determined by the kind of bond that you both would develop from the beginning of your marriage. As time passes, your bond gets stronger with honesty, commitment, love and dedication that you both have towards each other.It is also very important to be open and more communicative towards one another.
Story first published: Saturday, October 10, 2015, 19:21 [IST]
X
Desktop Bottom Promotion