For Quick Alerts
ALLOW NOTIFICATIONS  
For Daily Alerts

ಮೊದಲ ರಾತ್ರಿ ದಾಂಪತ್ಯ ಜೀವನದ ಪ್ರಮುಖ ಘಟ್ಟ

By Super
|

ತಾರುಣ್ಯದಲ್ಲಿ ಸಂಗಾತಿಯ ಬಗ್ಗೆ ಎಷ್ಟು ಕನಸುಗಳನ್ನು ಕಾಣುತ್ತಾರೋ ಅದಕ್ಕಿಂತ ಹೆಚ್ಚು ಕನಸು ಮತ್ತು ಕಲ್ಪನೆಗಳನ್ನು ತಮ್ಮ ಪ್ರಥಮ ರಾತ್ರಿ ಹೇಗಿರಬಹುದೆಂಬ ವಿಷಯದ ಮೇಲೆ ಯುವಜನತೆ ತಲೆಕೆಡಿಸಿಕೊಳ್ಳುತ್ತಾರೆ. ಇದಕ್ಕೆ ಪೂರಕವಾದುದು ಚಲನಚಿತ್ರ, ಕಾದಂಬರಿ ಮತ್ತು ಅನುಭವಸ್ಥರಿಂದ ಸಿಗುವ ಸೊಗಸಾದ ಮತ್ತು ಮಸಾಲೆಯುಕ್ತ ಶೃಂಗಾರ ಮಾಹಿತಿ. ಮದುವೆ ಗೊತ್ತಾಗಿ ದಿನಾಂಕ ಹತ್ತಿರ ಬರುತ್ತಿದ್ದಂತೆ ಮನದಲ್ಲಿ ಈ ಕಲ್ಪನೆಗಳೆಲ್ಲಾ ಸಾಕಾರವಾಗಲಿವೆ ಎಂಬ ದುಗುಡ ಕೊಂಚ ಅಧೀರರನ್ನಾಗಿಸಲೂಬಹುದು. ಎಲ್ಲಾ ಓಕೆ, ಮದುವೆ ವಿಷಯದಲ್ಲಿ ಮಾತ್ರ ಲೇಟ್ ಯಾಕೆ?

ಆದರೆ ಕೆಲವರು ಮಾತ್ರ ತಾನು ಇಂತಹ ಸಿಕ್ಸರ್ ಹೊಡೆದೆ, ಸೆಂಚುರಿ ಹೊಡೆದೆ ಎಂದೆಲ್ಲಾ ಬೊಗಳೆ ಬಿಡಬಹುದು. ವಾಸ್ತವವಾಗಿ ಪ್ರಥಮ ರಾತ್ರಿಯಂದು ಕಲ್ಪಿಸಿಕೊಂಡಂತಹ ಕಾರ್ಯಗಳಲ್ಲಿ ಬಹುತೇಕವು ನಡೆಯುವುದೇ ಇಲ್ಲ. ದಾಂಪತ್ಯ ಜೀವನದಲ್ಲಿ ದೈಹಿಕ ಸಂಪರ್ಕವೇ ಪ್ರಮುಖವಾದ ಘಟ್ಟ ಎಂದು ಮದುವೆಗೂ ಮುನ್ನ ಬಹಳಷ್ಟು ಜನರು ತಿಳಿದುಕೊಂಡಿರುತ್ತಾರೆ. ಆದರೆ ಒಮ್ಮೆ ವಿವಾಹ ಬಂಧನದಲ್ಲಿ ಬಂಧನವಾದ ಬಳಿಕ ಇದರ ಮಹತ್ವ ಶೇಖಡಾ ಹತ್ತರಷ್ಟು ಮಾತ್ರ ಎಂಬ ವಾಸ್ತವ ಮನವರಿಕೆಯಾಗುತ್ತದೆ. ಮದುವೆಯ ಬಳಿಕ ಹುಡುಗಿಯರು ಏಕೆ ಇಷ್ಟೊಂದು ಬದಲಾಗಿ ಬಿಡುತ್ತಾರೆ?

ಜವಾಬ್ದಾರಿ, ಒಬ್ಬರನ್ನೊಬ್ಬರು ಅರಿತುಕೊಳ್ಳಲು ತಗಲುವ ಸಮಯ, ಕುಟುಂಬಕ್ಕೆ ನೀಡಬೇಕಾದ ಆದ್ಯತೆ, ಕುಟುಂಬ ನಿರ್ವಹಣೆಯಲ್ಲಿ ವಹಿಸಬೇಕಾದ ಪಾತ್ರ, ಸಮಾಜದಲ್ಲಿ ಮನ್ನಣೆ, ವೃತ್ತಿರಂಗಕ್ಕೆ ನೀಡಬೇಕಾದ ಆದ್ಯತೆ ಮೊದಲಾದವು ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜೀವನದ ತಿರುವಿನ ಪ್ರಮುಖ ಘಟ್ಟ ಮೊದಲ ರಾತ್ರಿಯಂದೇ ಪ್ರಾರಂಭವಾಗುವುದರಿಂದ ಹೆಚ್ಚಿನವರು ವ್ಯಾಕುಲಗೊಳ್ಳುತ್ತಾರೆ. ಮೊದಲ ರಾತ್ರಿಯ ವೇಳೆ ನವದಂಪತಿಗಳು ಹೇಗೆ ಕಳೆದರು ಎಂಬುವುದನ್ನು ತಿಳಿಯಲು ವಿವಾಹಿತರಿಗಿಂತಲೂ ಅವಿವಾಹಿತರೇ ಹೆಚ್ಚು ಉತ್ಸುಕರಾಗಿರುತ್ತಾರೆ. ಏನಿರಬಹುದೆಂಬ ಕುತೂಹಲವೇ? ಮುಂದೆ ಓದಿ..

ಮೊದಲ ರಾತ್ರಿ ದಾಂಪತ್ಯ ಜೀವನದ ಪ್ರಮುಖ ಘಟ್ಟ!

ಮೊದಲ ರಾತ್ರಿ ದಾಂಪತ್ಯ ಜೀವನದ ಪ್ರಮುಖ ಘಟ್ಟ!

ಭಾರತೀಯ ವಿವಾಹದ ಸಂಪ್ರದಾಯಗಳು ಬಹಳ ಹೆಚ್ಚು. ಪ್ರಾರಂಭದಿಂದ ಕಡೆಯವರೆಗೆ ಎಲ್ಲಾ ಹಂತಗಳನ್ನು ದಾಟುವಷ್ಟರಲ್ಲಿ ವರ ಮತ್ತು ವಧು ಇಬ್ಬರೂ ನಿತ್ರಾಣರಾಗಿರುತ್ತಾರೆ. ಮದುವೆಯ ಬಳಿಕ ಶುಭಕೋರುವವರಿಗೆ ಧನ್ಯವಾದ ಹೇಳುತ್ತಾ, ಆಗಮಿಸಿದವರು ನೀಡಿದ ಉಡುಗೊರೆಗಳನ್ನು ಸ್ವೀಕರಿಸಿ ಫೋಟೋ, ವೀಡಿಯೋ ತೆಗೆಸಿ ಕಟ್ಟಕಡೆಗೆ ಮಂಚಕ್ಕೆ ತಲುಪಿದ ಬಳಿಕ ತೊಟ್ಟಿದ್ದ ಬಟ್ಟೆಯಲ್ಲಿಯೇ ಬಿದ್ದುಕೊಂಡ ಹಾಗೇ ನಿದ್ದೆ ಹೋಗಿ ಮರುದಿನ ಬೆಳಿಗ್ಗೆ ಎಬ್ಬಿಸಿದ ಬಳಿಕವೇ ರಾತ್ರಿ ಏನೂ ನಡೆದಿಲ್ಲದಿರುವುದು ನೆನಪಿಗೆ ಬರುತ್ತದೆ.

ಮದುವೆಯ ಅಲಂಕಾರ ಮತ್ತು ವೇಷಭೂಷಣಗಳನ್ನು ಕಳಚುವುದು

ಮದುವೆಯ ಅಲಂಕಾರ ಮತ್ತು ವೇಷಭೂಷಣಗಳನ್ನು ಕಳಚುವುದು

ಮದುವೆಯ ಅಲಂಕಾರ ಎಂದರೆ ಜೀವನದಲ್ಲಿ ಮಾಡಿಕೊಳ್ಳಬೇಕಾದ, ಹಿಂದೆಂದೂ ಇಲ್ಲದ, ಮುಂದೆಂದೂ ಬರದ ರೀತಿಯಲ್ಲಿ ಅಲಂಕಾರ ಮಾಡಿಕೊಳ್ಳಬೇಕು ಎಂದೇ ಯುವಜನತೆ ನಂಬಿದ್ದಾರೆ. ಇದರ ಪ್ರಕಾರ ವಧುವಿನ ಅಲಂಕಾರಕ್ಕೆ ವೃತ್ತಿಪರ ಸೌಂದರ್ಯಕಾರ್ತಿ ಹೆಚ್ಚೂ ಕಡಿಮೆ ಇಡಿಯ ದಿನ ತೆಗೆದುಕೊಳ್ಳುತ್ತಾಳೆ. ಜೊತೆಗೇ ಭಾರಿ ಆಭರಣ, ಸೀರೆ, ಪಾದರಕ್ಷೆ ಮೊದಲಾದವು ವಧುವಿನ ತೂಕವನ್ನು ಒಂದೂವರೆ ಪಟ್ಟು ಹೆಚ್ಚಿಸಿದರೆ ವರನೂ ಮದುವೆಗೆಂದೇ ಹೊಲಿಸಿದ ಉಡುಗೆ, ತೊಡುಗೆ ಮತ್ತು ವಿಶೇಷ ಅಲಂಕಾರಗಳಿಂದ ಶೋಭಿತನಾಗಿರುತ್ತಾನೆ.

ಮದುವೆಯ ಅಲಂಕಾರ ಮತ್ತು ವೇಷಭೂಷಣಗಳನ್ನು ಕಳಚುವುದು

ಮದುವೆಯ ಅಲಂಕಾರ ಮತ್ತು ವೇಷಭೂಷಣಗಳನ್ನು ಕಳಚುವುದು

ಮದುವೆಯ ಬಳಿಕ ಎಲ್ಲರೂ ಹೋದ ಮೇಲೆ ಈ ಅಲಂಕಾರವನ್ನು ನಿವಾರಿಸುವುದೇ ತುಂಬಾ ತೊಡಕಾದ ಕೆಲಸವಾಗಿದೆ. ಈ ಕೆಲಸವನ್ನೂ ಬಲ್ಲವರೇ ತುಂಬಾ ನಾಜೂಕಾಗಿ ನಿರ್ವಹಿಸಬೇಕಾದುದರಿಂದ ತುಂಬಾ ಸಮಯ ಹಿಡಿಯುತ್ತದೆ. ಕಟ್ಟಕಡೆಗೆ ಎಲ್ಲ ಅಲಂಕಾರ ಕಳಚಿ, ಆಭರಣ, ಬಟ್ಟೆಬರೆಗಳನ್ನು ಬದಲಿಸಿ ರಾತ್ರಿಯುಡುಗೆಯಲ್ಲಿ ಕೋಣೆಗೆ ಆಗಮಿಸಿದಾಗ ತಡರಾತ್ರಿ ದಾಟಿರುತ್ತದೆ. ಇನ್ನು ಕೊಂಚ ವೇಳೆ ಕಳೆದರೆ ಬೆಳಗಾಗುತ್ತದೆ. ಮೈಯೆಲ್ಲಾ ಸುಸ್ತಾಗಿ ಒಮ್ಮೆ ಮಲಗಿದರೆ ಸಾಕು ಎನ್ನಿಸುತ್ತಿರುವ ಹೊತ್ತಿನಲ್ಲಿ ಪ್ರಥಮ ರಾತ್ರಿಯ ಬಗ್ಗೆ ಕಟ್ಟಿಕೊಂಡಿದ್ದ ಕಲ್ಪನೆಗಳು ಯಾವುದೂ ನೆನಪಾಗುವುದೇ ಇಲ್ಲ.

ಕುಚೋದ್ಯ ಅಥವಾ ಕೀಟಲೆ ಎದುರಾಗಬಹುದು ಎಂಬ ದುಗುಡ

ಕುಚೋದ್ಯ ಅಥವಾ ಕೀಟಲೆ ಎದುರಾಗಬಹುದು ಎಂಬ ದುಗುಡ

ಮದುವೆ ಮುಗಿದು ಪ್ರಥಮ ರಾತ್ರಿಗಾಗಿ ನವದಂಪತಿಗಳನ್ನು ಕೋಣೆಯೊಳಕ್ಕೆ ಕಳುಹಿಸಿ ಎಲ್ಲರನ್ನೂ ಅತ್ತ ಅಟ್ಟಿದ ಬಳಿಕವೂ ನವದಂಪತಿಗಳ ಎದೆಯಲ್ಲಿ ಅವಲಕ್ಕಿ ಕುಟ್ಟುತ್ತಾ ಇರುತ್ತದೆ. ಏಕೆಂದರೆ ಇಬ್ಬರ ಕುಟುಂಬದಲ್ಲೂ ಇರುವ ಕೀಟಲೆಕೋರರು. ಧಿಡೀರನೇ ಬಾಗಿಲು ಬಡಿಯುವುದು, ಕಿಟಕಿಯಿಂದ ಕ್ಯಾಮೆರಾ ತೂರಿಸಿ ಚಿತ್ರೀಕರಣ ಮಾಡುವುದು, ಏನು ಮಾತನಾಡುತ್ತಿದ್ದಾರೆ ಎಂದು ಬಾಗಿಲಿಗೆ ಕಿವಿಯಾನಿಸಿ ಆಲಿಸುವುದು ಮೊದಲಾದ ಕುಚೇಷ್ಟೆಗಳನ್ನು ಮಾಡುವ ಸಂಭವ ಇದ್ದೇ ಇರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೀಟಲೆ ಎದುರಾಗಬಹುದು ಎಂಬ ದುಗುಡ

ಕೀಟಲೆ ಎದುರಾಗಬಹುದು ಎಂಬ ದುಗುಡ

ಹೀಗೆ ಮಾಡದಂತೆ ಹಿರಿಯರು ಕ್ರಮ ಕೈಗೊಂಡಿದ್ದರೂ ಅವರ ಕಣ್ತಪ್ಪಿಸಿ ಏನಾದರೂ ಎಡವಟ್ಟು ಮಾಡಬಹುದೆಂದು ನವದಂಪತಿಗಳು ಅನುಮಾನದಲ್ಲಿಯೇ ಇರುತ್ತಾರೆ. ಈ ಅನುಮಾನ ಪ್ರಥಮ ರಾತ್ರಿಯ ಸುಂದರ ಕಲ್ಪನೆಗಳನ್ನೆಲ್ಲಾ ನೀರಿನಲ್ಲಿ ಹೋಮ ಮಾಡುತ್ತದೆ.

ಹೃದಯ ಬಿಚ್ಚಿ ಮಾತನಾಡುವುದು

ಹೃದಯ ಬಿಚ್ಚಿ ಮಾತನಾಡುವುದು

ಮದುವೆಯ ದಿನ ಹತ್ತಿರಾದಂತೆ ವಧು ಮತ್ತು ವರರು ತಮ್ಮ ತಮ್ಮ ಸಿದ್ಧತೆಗಳಲ್ಲಿ ಮಗ್ನರಾಗಿ ಒಬ್ಬರನ್ನೊಬ್ಬರು ಮಾತನಾಡುವುದನ್ನೇ ಕಡಿಮೆ ಮಾಡಿಕೊಂಡಿರುತ್ತಾರೆ. ಮದುವೆಯ ಸಿದ್ಧತೆ, ಉಡುಪು, ಆಹ್ವಾನಗಳು,ಮದುವೆಗೆ ಆಗಮಿಸಿದವರ ಯೋಗಕ್ಷೇಮ ವಿಚಾರಿಸಿಕೊಳ್ಳುವುದು ಮೊದಲಾದ ಕೆಲಸಗಳ ನಡುವೆ ಇಬ್ಬರ ನಡುವೆ ಮಾತುಕತೆ ಹೆಚ್ಚೂ ಕಡಿಮೆ ನಿಂತೇ ಹೋಗಿರುತ್ತದೆ. ಪ್ರಥಮ ರಾತ್ರಿಗೆ ಇಬ್ಬರಿಗೂ ಮಾತನಾಡಲು ಅವಕಾಶ ಸಿಕ್ಕಿ ಹಿಂದಿನ ದಿನಗಳ ಎಲ್ಲಾ ವಿಷಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಕೊಳ್ಳುತ್ತಾ ನೋಡಿದರೆ ಬೆಳಗಾಗಿ ಹೋಗಿರುತ್ತದೆ, ಆದರೆ ಮಾತು ಮುಗಿದಿರುವುದಿಲ್ಲ.

ಪ್ರಥಮ ಸಮಾಗಮಕ್ಕೂ ಮುಂಚೆ ಜೊತೆಯಾಗಿ ಸ್ನಾನ ಮಾಡುವುದು

ಪ್ರಥಮ ಸಮಾಗಮಕ್ಕೂ ಮುಂಚೆ ಜೊತೆಯಾಗಿ ಸ್ನಾನ ಮಾಡುವುದು

ಇತ್ತೀಚಿನ ಮದುವೆಗಳಲ್ಲಿ ಪ್ರಥಮ ರಾತ್ರಿಯನ್ನು ದೂರದ ಹೋಟೆಲ್ ಅಥವಾ ರೆಸಾರ್ಟ್ ಗಳಲ್ಲಿಯೇ ಏರ್ಪಡಿಸಲಾಗುತ್ತದೆ. ಆಗಮಿಸಿದ ಅತಿಥಿಗಳಿಂದ ಮತ್ತು ಇತರ ಕಿರಿಕಿರಿಯಿಂದ ತಪ್ಪಿಸಿ ವಧೂವರರಿಗೆ ಸಂಪೂರ್ಣವಾಗಿ ಏಕಾಂತ ನೀಡಲು ಈ ವ್ಯವಸ್ಥೆ ಅತ್ಯುತ್ತಮವಾಗಿದೆ. ಈ ಸ್ಥಳದಲ್ಲಿ ಶೌಚಾಲಯದ ವ್ಯವಸ್ಥೆ ಕೋಣೆಯಲ್ಲಿಯೇ ಇರುವುದರಿಂದ ಬಹುತೇಕ ದಂಪತಿಗಳು ತಮ್ಮ ಏಕಾಂತದ ಸಮಯವನ್ನು ಮೊದಲು ಸ್ನಾನ ಮಾಡುವುದರೊಂದಿಗೆ ಪ್ರಾರಂಭಿಸುತ್ತಾರೆ. ಹೆಚ್ಚಿನವರು ಜೊತೆಯಾಗಿಯೇ ಸ್ನಾನ ಮಾಡಿದರೆ ಕೆಲವರು ಮಾತ್ರ ಒಬ್ಬೊಬ್ಬರಾಗಿ ಪೂರೈಸುತ್ತಾರೆ. ಈ ಕ್ರಮದಿಂದ ದುಗುಡದಲ್ಲಿದ್ದ ಮನಸ್ಸು ನಿರಾಳವಾಗಿ ನಂತರದ ಮಿಲನಕ್ಕೆ ಅತ್ಯುತ್ತಮವಾದ ಪೂರ್ವಾಭ್ಯಾಸವಾಗಿದ್ದು ಜೀವನಪರ್ಯಂತ ನೆನಪಿರಬಹುದಾದ ರಾತ್ರಿಯಾಗಿ ಉಳಿಯುತ್ತದೆ.

ತಾನು ಖರೀದಿಸಿದ ವಸ್ತುಗಳನ್ನು ತೋರಿಸುವುದು

ತಾನು ಖರೀದಿಸಿದ ವಸ್ತುಗಳನ್ನು ತೋರಿಸುವುದು

ಅಚ್ಚರಿ ಎನಿಸಿದರೂ ಇದು ನಿಜ! ಎಷ್ಟೋ ವಧುಗಳು ಪ್ರಥಮ ರಾತ್ರಿಯ ಏಕಾಂತ ಪ್ರಾರಂಭವಾಗುತ್ತಿದ್ದಂತೆಯೇ ಮಂಚದಡಿಯಿಂದ ದೊಡ್ಡ ಸೂಟ್ ಕೇಸ್ ಒಂದನ್ನು ಹೊರತೆಗೆದು ತಮ್ಮ ಭವಿಷ್ಯಜೀವನಕ್ಕಾಗಿ ತಾನು ಇದುವರೆಗೆ ಖರೀದಿಸಿ ಸಂಗ್ರಹಿಸಿಟ್ಟಿದ್ದ ವಸ್ತುಗಳನ್ನೆಲ್ಲಾ ಒಂದೊಂದಾಗಿ ತೆಗೆದು ತನ್ನ ಪತಿಗೆ ತೋರಿಸಿ ಪತಿಯ ಮೆಚ್ಚುಗೆ ಪಡೆಯುವ ಹುನ್ನಾರದಲ್ಲಿರುತ್ತಾರೆ. ಕೇವಲ ತೋರಿಸುವುದು ಮಾತ್ರವಲ್ಲ, ಪ್ರತಿ ವಸ್ತುವಿನ ಬಗೆಗಿನ ಮಾಹಿತಿ, ಕೊಳ್ಳುವಾಗ ಆದ ಫಜೀತಿ, ಪ್ರಸಂಗಗಳು, ಇದಕ್ಕೆ ಹಣ ಹೊಂದಿಸಲು ಪಟ್ಟ ಕಷ್ಟ, ಇದು ತಂದ ಊರಿನ ವಿವರ, ಒಂದು ವೇಳೆ ಯಾವುದಾದರೂ ವಸ್ತು ಒಡೆದು ಅಥವಾ ಹಾನಿಗೊಂಡಿದ್ದರೆ ಅದಕ್ಕೆ ಕಾರಣರಾದವರನ್ನು ಹಿಡಿಶಾಪ ಹಾಕುವುದು ಮೊದಲಾದ ಚಟುವಟಿಕೆಗಳು ಮರುದಿನ ಬೆಳಿಗ್ಗೆಯವರೆಗೂ ನಡೆಯುತ್ತವೆ. ಪಾಪದ ಪತಿರಾಯ ಅತ್ತ ನಿದ್ದೆ ಮಾಡಲಿಕ್ಕಾದೇ, ಇತ್ತ ಪತ್ನಿಯ ಉತ್ಸಾಹಕ್ಕೆ ತಣ್ಣೀರೆರೆಚಲೂ ಆಗದೇ ಬಲವಂತವಾಗಿ ಕಣ್ಣು ಬಿಟ್ಟುಕೊಂಡು ಬೆಳಿಗ್ಗೆ ತೇಲುಗಣ್ಣು ಮಾಡುತ್ತಾ ಹೊರಬರುತ್ತಾನೆ.

ಹನಿಮೂನ್‌ಗೆಂದು ತಯಾರಿ ಮಾಡುವುದು

ಹನಿಮೂನ್‌ಗೆಂದು ತಯಾರಿ ಮಾಡುವುದು

ಹೆಚ್ಚಿನ ನವವಿವಾಹಿತರು ತಮ್ಮ ಮದುವೆಯ ಮರುದಿನದಂದೇ ಹನಿಮೂನ್ ಗೆ ತೆರಳಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿರುತ್ತಾರೆ. ಮರುದಿನ ಬೆಳಿಗ್ಗೆ ಬಸ್ ಹೊರಡುವ ಸ್ಥಳಕ್ಕೆ ಕ್ಲುಪ್ತಕಾಲದಲ್ಲಿ ತಲುಪಲು ಇಂದೇ ಎಲ್ಲಾ ತಯಾರಿ ಮಾಡಬೇಕಾದುದರಿಂದ ಪ್ರಥಮ ರಾತ್ರಿಯ ಸಮಯವೆಲ್ಲಾ ಅಲಂಕಾರ ಕಳಚಿ ಹನಿಮೂನ್ ಯಾತ್ರೆಯ ತಯಾರಿಯಲ್ಲಿ ನಡೆಯುತ್ತದೆ. ಈ ತಯಾರಿಯಲ್ಲಿ ವಧುವಿಗೆ ತನ್ನ ತಾಯಿ, ಅಕ್ಕ, ತಂಗಿ ತಮ್ಮಂದಿರ ಸಹಕಾರ ಅಗತ್ಯವಿರುವುದರಿಂದ ತಡರಾತ್ರಿಯವರೆಗೂ ಇವರೆಲ್ಲಾ ಪ್ರಥಮ ರಾತ್ರಿಯ ಕೋಣೆಯೊಳಕ್ಕೆ ಬರುತ್ತಾ ಹೋಗುತ್ತಾ ಇರುತ್ತಾರೆ.

ಉಡುಗೊರೆಗಳನ್ನು ಬಿಚ್ಚಿ ನೋಡುವುದು

ಉಡುಗೊರೆಗಳನ್ನು ಬಿಚ್ಚಿ ನೋಡುವುದು

ಅಚ್ಚರಿಯಾಗಿ ಕಂಡರೂ ಇದು ನಿಜ! ಎಷ್ಟೋ ನವವಿವಾಹಿತ ವಧುಗಳು ತಮ್ಮ ಪ್ರಥಮ ರಾತ್ರಿಯಂದೇ ತಮಗೆ ಸಿಕ್ಕ ಉಡುಗೊರೆಗಳನ್ನು ತೆರೆದು ಅದರೊಳಗೇನಿದೆ ಎಂಬ ಕುತೂಹಲವನ್ನು ತಣಿಸಿಕೊಳ್ಳಲು ಹೆಚ್ಚು ಕಾತುರರಾಗಿರುತ್ತಾರೆ. ಕೇವಲ ನೋಡುವುದು ಮಾತ್ರವಲ್ಲ, ಅದನ್ನು ತಮ್ಮ ಪತಿದೇವರಿಗೆ ತೋರಿಸಿ ಅವರ ಮೆಚ್ಚುಗೆಯನ್ನು ಪಡೆಯಲೂ ಹವಣಿಸುತ್ತಿರುತ್ತಾರೆ. ಎಲ್ಲವನ್ನೂ ತೆರೆದು ಮತ್ತೆ ಒಳಗಿಟ್ಟ ಬಳಿಕವೂ ಸಮಾಧಾನವಿಲ್ಲ, ಮತ್ತೊಮ್ಮೆ ಯಾರು ಯಾವ ಉಡುಗೊರೆ ಕೊಟ್ಟರು, ಯಾರು ಯಾರು ಕೊಟ್ಟಿಲ್ಲ ಎಂಬ ವಿಷಯದ ಬಗ್ಗೆ ಸಮಾಲೋಚನೆ ನಡೆಯುತ್ತದೆ...ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಉಡುಗೊರೆಗಳನ್ನು ಬಿಚ್ಚಿ ನೋಡುವುದು

ಉಡುಗೊರೆಗಳನ್ನು ಬಿಚ್ಚಿ ನೋಡುವುದು

ತಡರಾತ್ರಿಯವರೆಗೂ ಉಡುಗೊರೆ, ಉಡುಪು ಪಾದರಕ್ಷೆಗಳ ಗುಂಗಿನಿಂದ ಹೊರಬರದ ವಧುವಿನ ನಡವಳಿಕೆಯಿಂದ ಬೇಸತ್ತ ಪತಿ ಹಾಗೇ ನಿದ್ದೆ ಹೋಗುತ್ತಾನೆ. ಎಲ್ಲಾ ಉಡುಗೊರೆಗಳ ಬಗ್ಗೆ ಪೂರ್ಣ ಮಾಹಿತಿ ಪಡೆದ ವಧು ಬೆಳಿಗ್ಗೆ ವರ ಎದ್ದ ಬಳಿಕವೂ ನೀವು ಏನೇನು ಮಿಸ್ ಮಾಡಿಕೊಂಡಿರಿ ಎಂಬ ಮಾತುಗಳೊಂದಿಗೆ ದಿನಾರಂಭ ಮಾಡುತ್ತಾಳೆ.

ವಿಷಯದ ಬಗ್ಗೆ ವಿಮರ್ಶೆ

ವಿಷಯದ ಬಗ್ಗೆ ವಿಮರ್ಶೆ

ಹಲವು ದಂಪತಿಗಳ ಮದುವೆ ಬಹಳ ಪ್ರಯತ್ನಗಳ ಬಳಿಕ ಸಂಪನ್ನಗೊಂಡಿರುತ್ತದೆ. ವಿಶೇಷವಾಗಿ ಪ್ರೇಮ ವಿವಾಹಗಳು. ಈ ವಿವಾಹಕ್ಕೂ ಮುನ್ನ ಹಲವು ಅಡ್ಡಿ ಆತಂಕ, ತಗಾದೆ, ಬೆದರಿಕೆ ಮೊದಲಾದ ಎಷ್ಟೋ ಸಂಗತಿಗಳು ನಡೆದುಹೋಗಿ ಕಡೆಗೆ ವಿವಾಹದಲ್ಲಿ ಸುಖಾಂತ್ಯ ಕಂಡಿರುತ್ತದೆ.

ವಿಷಯದ ಬಗ್ಗೆ ವಿಮರ್ಶೆ ಮಾಡುವುದು

ವಿಷಯದ ಬಗ್ಗೆ ವಿಮರ್ಶೆ ಮಾಡುವುದು

ಈ ದಂಪತಿಗಳು ತಮ್ಮ ಪ್ರಥಮ ರಾತ್ರಿಯನ್ನು ತಮ್ಮ ಮೊದಲ ಭೇಟಿಯಿಂದ ತೊಡಗಿ ಇಂದಿನವರೆಗೆ ಘಟಿಸಿದ ಎಲ್ಲಾ ಅನುಭವಗಳನ್ನು ನೆನಪಿಸಿಕೊಳ್ಳುತ್ತಾ ವಿಮರ್ಶಿಸುತ್ತಾ, ಹಾಗಾಗಿದ್ದಿದ್ದರೆ ಹೀಗಾಗಿರೋದು ಎಂಬ ಸಂಭಾವ್ಯ ಸನ್ನಿವೇಶಗಳನ್ನು ಕಲ್ಪಿಸಿಕೊಳ್ಳುತ್ತಾ ಕಾಲ ಕಳೆಯುತ್ತಾರೆ. ಮಾತು ನಿಲ್ಲಿಸಿದಾದ ಬೆಳಗ್ಗಿನ ಕೋಳಿ ಕೂಗಿ ಎಲ್ಲರೂ ಉಪಾಹಾರ ತೆಗೆದುಕೊಳ್ಳುತ್ತಿರುವ ಸದ್ದು ಕೇಳಿಸುತ್ತದೆ.

ಸಮಾಗಮದ ಬಗ್ಗೆ ಯೋಚಿಸುತ್ತಲೇ ಏನೂ ಮಾಡದೇ ಕಾಲ ಕಳೆಯುವುದು

ಸಮಾಗಮದ ಬಗ್ಗೆ ಯೋಚಿಸುತ್ತಲೇ ಏನೂ ಮಾಡದೇ ಕಾಲ ಕಳೆಯುವುದು

ಕೆಲವು ನವದಂಪತಿಗಳು ತುಂಬಾ ಸಂಕೋಚ ಸ್ವಭಾವದವರಾಗಿದ್ದು ಒಬ್ಬರನ್ನೊಬ್ಬರು ಮುಟ್ಟಲೂ ಅಂಜುತ್ತಾ, ನಾಚಿಕೆಯಿಂದ ಕೆನ್ನೆ ಕೆಂಪಗಾಗಿಸಿಕೊಳ್ಳುತ್ತಾ ಕೊಂಚ ಸಮಯದ ಬಳಿಕ, ಇನ್ನೂ ಸ್ವಲ್ಪ ಸಮಯದ ಬಳಿಕ ಎಂದು ಇಡಿಯ ರಾತ್ರಿಯನ್ನು ಮಾತುಕತೆ ಇಲ್ಲದೇ ಹಾಗೇ ಕಳೆದು ಬೆಳಿಗ್ಗೆ ಇದ್ದ ಸ್ಥಿತಿಯಲ್ಲಿಯೇ ಹೊರಬರುತ್ತಾರೆ. ಮದುವೆಗೂ ಮುನ್ನು ಸಂಪೂರ್ಣ ಅಪರಿಚಿತರಾಗಿದ್ದ ದಂಪತಿಗಳಲ್ಲಿ ಇದು ಸಾಮಾನ್ಯವಾಗಿದೆ.

English summary

Things That Indian Couples Actually Do On Their Wedding Night

Before getting married, almost all couples imagine their wedding night. High expectations, a lot of excitement, a bit of nervousness, and many more things like these, lay the floor for the wedding After Well, maybe or maybe not! While most of the Indian couples expect to have a never-ending lovemaking session on their wedding night, it rarely happens in reality.
Story first published: Thursday, June 18, 2015, 20:04 [IST]
X
Desktop Bottom Promotion