For Quick Alerts
ALLOW NOTIFICATIONS  
For Daily Alerts

ವಿಚ್ಛೇದನಕ್ಕೆ ಟೂ ಬಿಡಿ, ಸುಖ ಸಂಸಾರಕ್ಕೆ ಜೈ ಅನ್ನಿ!

By Manu
|

ಒಂದೂರಿನಲ್ಲಿ ಒಬ್ಬ ರಾಜಕುಮಾರಿ ಇದ್ದಳಂತೆ ಎಂದು ಪ್ರಾರಂಭವಾಗುವ ಅಜ್ಜಿಕಥೆಗಳು ಬಳಿಕ ಅವರು ಮದುವೆಯಾಗಿ ಸುಖವಾಗಿದ್ದರಂತೆ ಎಂಬ ವಾಕ್ಯದೊಂದಿಗೆ ಮುಕ್ತಾಯವಾಗುತ್ತದೆ. ಆದರೆ ಇಂದಿನ ದಿನಗಳಲ್ಲಿ ಕಥೆ ಮದುವೆಯ ಬಳಿಕವೇ ಪ್ರಾರಂಭವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವಿಚ್ಛೇದನಗಳ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕೆಲವು ದಂಪತಿಗಳ ನಡುವೆ ಮದುವೆಯ ಮೊದಲ ದಿನದಂದೇ ವಿರಸ ಪ್ರಾರಂಭವಾದರೆ ಕೆಲವರಲ್ಲಿ ಇಪ್ಪತ್ತು ವರ್ಷಗಳ ಬಳಿಕ ಜ್ವಾಲಾಮುಖಿಯಂತೆ ಸ್ಫೋಟಿಸಿರುವುದೂ ಕಂಡುಬಂದಿದೆ.

ಪ್ರತಿ ದಂಪತಿಗಳಲ್ಲಿಯೂ ಯಾವುದಾದರೊಂದು ವಿಷಯದಲ್ಲಿ ಒಮ್ಮತ ಮೂಡದೇ ಚಿಕ್ಕಪುಟ್ಟ ಕಲಹಗಳಾಗುವುದುಂಟು. ಸಂಪನ್ನ ಮತ್ತು ಸುಖಕರ ಜೀವನಕ್ಕೆ ಈ ಚಿಕ್ಕಪುಟ್ಟ ಜಗಳಗಳು ಅಗತ್ಯವೂ ಹೌದು. ಜೀವನದ ಸಿಹಿಕಹಿಗಳನ್ನು ಸಮನಾಗಿ ಹಂಚಿಕೊಂಡು ಬಾಳಿ ಎಂದೇ ವಿವಾಹದ ಮಂತ್ರಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಎಲ್ಲಾ ಧರ್ಮಗಳಲ್ಲಿಯೂ ಕಷ್ಟಸುಖಗಳನ್ನು ಸಮಾನವಾಗಿ ಹಂಚಿಕೊಂಡು ಉತ್ತಮ ಬಾಳನ್ನು ಬಾಳಿ ಎಂದೇ ಸಾರಲಾಗುತ್ತದೆ. ಅಂದರೆ ತಮ್ಮ ಸಂಗಾತಿಯ ಒಳ್ಳೆಯ ಗುಣಗಳನ್ನು ಸ್ವೀಕರಿಸಿದಂತೆ ಕೆಟ್ಟ ಗುಣಗಳನ್ನೂ ಸಹಿಸಿಕೊಳ್ಳಬೇಕಾಗುತ್ತದೆ. ಇದೇ ರೀತಿಯಲ್ಲಿ ತನ್ನ ಸಂಗಾತಿಗೆ ಇಷ್ಟವಾಗದ ನಡತೆಯನ್ನು ಅನಿವಾರ್ಯವಾಗಿ ಬಿಡಬೇಕಾಗುತ್ತದೆ. ಇದೇ ಸುಖದಾಂಪತ್ಯದ ಗುಟ್ಟು. ದಂಪತಿಗಳ ವಿವಾಹ ವಿಚ್ಛೇದನ ಅಂದುಕೊಂಡಷ್ಟು ಸುಲಭವಲ್ಲ!

ವಿಚ್ಛೇದನಕ್ಕೆ ಟೂ ಬಿಡಿ, ಸುಖ ಸಂಸಾರಕ್ಕೆ ಜೈ ಅನ್ನಿ!

ಬೇರೆಯವರಿಗೆ ತಮ್ಮನ್ನು ಹೋಲಿಸಿಕೊಳ್ಳದೇ ತಮ್ಮ ಪಾಲಿಗೆ ಬಂದದ್ದನ್ನು ಅನುಭವಿಸುವ, ಮುಕ್ತ ಸಮಾಲೋಚನೆಗಳೊಂದಿಗೆ ತಮ್ಮ ಅಭಿಪ್ರಾಯಗಳನ್ನು ಪ್ರಕಟಿಸಿ ಸಂಗಾತಿಯ ಅಭಿಪ್ರಾಯವನ್ನೂ ಪರಿಗಣಿಸುವ ಮೂಲಕ ಒಬ್ಬರನ್ನೊಬ್ಬರು ಗೌರವಿಸುವುದೇ ಸುಖವಾದ ಬಾಳಿನ ತಳಹದಿ. ಆದರೆ ಈ ತಳಹದಿಯನ್ನು ಅರಿಯದೇ ತಮ್ಮದೇ ಅಭಿಪ್ರಾಯವನ್ನು ಹೇರುವ ಮೂಲಕ ಇನ್ನೊಬ್ಬರ ಮೇಲೆ ಒಡೆತನ ಸಾಧಿಸುವುದಾದರೆ ಅದು ದಾಂಪತ್ಯವಲ್ಲ, ಗುಲಾಮಗಿರಿ, ವಿಚ್ಛೇದನಕ್ಕೆ ತಿರುಗಿದ ತೊಂಬತ್ತು ಶೇಖಡಾ ದಂಪತಿಗಳು ಎಡವುವುದೇ ಇಲ್ಲಿ.

ಆದರೆ ಹೆಚ್ಚಿನವರಿಗೆ ಇದರ ಬಗ್ಗೆ ಅರಿವಿರುವುದೇ ಇಲ್ಲ. ತಮ್ಮ ಮೊಲಕ್ಕೆ ಮೂರೇ ಕಾಲು ಎಂಬಂತೆ ಮಾತನಾಡುತ್ತಾ ತಮ್ಮ ಮೊಂಡುವಾದವನ್ನೇ ಮಂಡಿಸುತ್ತಾ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಲೇ ಹೋಗುತ್ತಾರೆ ಇಷ್ಟೇ ಸಾಕು ವಿಚ್ಛೇದನ ಹಾದಿ ಹಿಡಿಯಲು. ಬನ್ನಿ ಇಂತಹ ಸಮಸ್ಯೆಯಿಂದ ಆದಷ್ಟು ಹಿಂಜರಿಯಲು ಕೆಲವೊಂದು ಸಲಹೆಯನ್ನು ಬೋಲ್ಡ್ ಸ್ಲೈ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ ಅವು ಯಾವುದು ಎಂಬುದನ್ನು ಮುಂದೆ ಓದಿ...

ಸಂಸಾರದಲ್ಲಿ ನಿಂದನೆ ಮಾತಿಗೆ ಆಸ್ಪದ ನೀಡಬೇಡಿ
ಪರಸ್ಪರ ನಿಂದನೆಯಿಂದ ನಿಮ್ಮಿಬ್ಬರ ನಡುವಣ ಅಂತರ ಪ್ರತಿ ಪದದ ಬಳಕೆಯ ಬಳಿಕ ಹೆಚ್ಚುತ್ತಾ ಹೋಗುತ್ತದೆ. ಕೆಲವೇ ದಿನಗಳಲ್ಲಿ ಪರಸ್ಪರರಿಂದ ದೂರವಾಗುವ ಬಯಕೆ ಹುಟ್ಟುತ್ತದೆ. ನಿಂದನೆ ಹೆಚ್ಚುತ್ತಿದ್ದಂತೆಯೇ ಈ ಬಯಕೆ ಗಾಢವಾಗುತ್ತಾ ಹೋಗುತ್ತದೆ. ಈ ಸಂದರ್ಭದಲ್ಲಿ ಅಪಾರ ತಾಳ್ಮೆ ವಹಿಸುವುದು ಅಗತ್ಯ. ಪರಸ್ಪರ ನಿಂದನೆಯ ಬದಲಿಗೆ ಇಬ್ಬರೂ ಗೌರವಿಸುವ ಮೂರನೆಯ ವ್ಯಕ್ತಿಯ ಬಳಿ ತಮ್ಮ ಅಹವಾಲುಗಳನ್ನು ಹೇಳಿಕೊಂಡು ಪರಿಹಾರ ಪಡೆಯುವುದು ಉತ್ತಮ. ಅಥವಾ ಇಬ್ಬರೂ ತಮ್ಮ ಅಹಮ್ಮಿಕೆಗಳನ್ನು ಇಳಿಸಿ ಪರಸ್ಪರ ಶರಣಾಗತರಾಗುವುದು ಇನ್ನೂ ಉತ್ತಮ

ಹಿಂದೆ ನಡೆದುಹೋದ ಸಂಗತಿಗಳನ್ನು ತರಬೇಡಿ
ಹಿಂದೆ ನಡೆದುಹೋದ ಸಂಗತಿಗಳನ್ನು ಮತ್ತೆ ಚರ್ಚಿಸಿದರೆ ಅನಗತ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬಹಳ ದಿನಗಳ ಅಥವ ವಾರಗಳ ಅಥವ ತಿಂಗಳಗಳ ಹಿಂದೆ ಜರುಗಿದ ಕಲಹಗಳ ಬಗ್ಗೆ ಮಾತನಾಡುವುದು, ಖಂಡಿತವಾಗಿಯೂ ಒಂದು ಅನಗತ್ಯ ಕಲ್ಪನೆ. ಹಾಗೆ ಮಾಡಿದಾಗ ಅದು ಸಂಬಂಧಗಳನ್ನು ನಾಶಮಾಡುತ್ತದೆ ಮತ್ತು ಒಳ್ಳೆಯ ಸಂಬಂಧಗಳನ್ನು ಮುಂದುವರಿಸಲು ಅಡ್ಡಬರುತ್ತದೆ.

ನಂಬಿಕೆಗೆ ಬೆಲೆ ನೀಡಿ
ಕೈ ಹಿಡಿದ ಬಾಳಸ೦ಗಾತಿಯ ನಂಬಿಕೆಗೆ ಮೋಸಮಾಡಿದರೆ ಅಥವಾ ನಿಮ್ಮ ಸ೦ಗಾತಿಗೆ ನಿಮ್ಮನ್ನು ಕುರಿತ೦ತೆ ನೀವು ಮು೦ದೆ೦ದೂ ನ೦ಬಿಕೆಗೆ ಅರ್ಹರಲ್ಲವೆನ್ನುವ ಭಾವನೆಯು ಆತನಲ್ಲಿ ಅಥವಾ ಆಕೆಯಲ್ಲಿ ಉ೦ಟಾಗಿದ್ದಲ್ಲಿ, ನಿಮ್ಮೀರ್ವರ ನಡುವಿನ ಬಾ೦ಧವ್ಯವು ಆಕರ್ಷಣೆಯನ್ನು ಕಳೆದುಕೊಳ್ಳತೊಡಗುತ್ತದೆ. ಪರಸ್ಪರರ ನ೦ಬಿಕೆಗೆ ಧಕ್ಕೆಯೊದಗಿ ಬ೦ದಿರಬಹುದಾದ ಹ೦ತವು ಸ೦ಬ೦ಧದ ಕುರಿತ೦ತೆ ನಿಜಕ್ಕೂ ಆತ೦ಕಕಾರಿ ವಿಚಾರವಾಗಿದ್ದು, ಈ ಸ೦ಗತಿಯನ್ನು ಇಬ್ಬರೂ ಪರಸ್ಪರ ಧೈರ್ಯದಿ೦ದ ಎದುರಿಸಬೇಕಾಗುತ್ತದೆ.

ಹಣದ ವಿಚಾರದಲ್ಲಿ ಎಚ್ಚರವಹಿಸಿ
ಹಣದ ಮಾತುಕತೆ ಹಣದ ವಿಚಾರವು ತುಂಬಾ ಸೂಕ್ಷ್ಮ ವಿಚಾರವಾಗಿದ್ದು, ಇದು ನಿಮ್ಮ ಮದುವೆಯ ಜೀವನದಲ್ಲಿ ಬೇಗ ಬಿರುಕನ್ನು ಉಂಟು ಮಾಡಬಹುದು. ನಿಮ್ಮ ಮದುವೆಯ ಸಂಬಂಧದಲ್ಲಿ ಹಣದ ವಿಚಾರವಿದ್ದರೆ ಅಥವಾ ಇದರ ಸೂಚನೆಗಳು ಕಂಡುಬಂದರೆ ಆಗ ನೀವು ಸಮಸ್ಯೆಗೆ ಸಿಲುಕಿದ್ದೀರಿ ಎಂದರ್ಥ. ಇದನ್ನು ಆದಷ್ಟು ಬೇಗನೆ ನಿವಾರಿಸಿದರೆ ಆಗ ಮುಂದೆ ಆಗುವಂತಹ ಅನಾಹುತವನ್ನು ತಪ್ಪಿಸಬಹುದಾಗಿದೆ.

ಇತರರ ಜೊತೆ ಹೋಲಿಕೆ ಮಾಡಬೇಡಿ
ಇದು ಸಹ ದಾಂಪತ್ಯದಲ್ಲಿರುವವರು ಕೇಳಿಕೊಳ್ಳಬೇಕಾದ ಪ್ರಶ್ನೆಗಳಲ್ಲಿ ಒಂದಾಗಿದೆ. ನೀವು ಅವರನ್ನು ಇತರರೊಂದಿಗೆ ಅಥವಾ ನಿಮ್ಮ ಮಾಜಿ... ಜೊತೆಗೆ ಹೋಲಿಕೆ ಮಾಡುತ್ತಿದ್ದಲ್ಲಿ ಖಂಡಿತ ಇದರಿಂದ ನಿಮ್ಮ ಸಂಗಾತಿ ನೊಂದು ಕೊಳ್ಳುತ್ತಾರೆ. ಅದು ಖಂಡಿತ ಅವರನ್ನು ಘಾಸಿಗೊಳಿಸುತ್ತದೆ. ಪ್ರತಿಯೊಬ್ಬರು ಜೀವನದಲ್ಲಿ ಅನನ್ಯ. ಅವರ ರೀತಿ ಇನ್ನೊಬ್ಬರಿಲ್ಲ ಎಂಬುದನ್ನು ತಿಳಿದುಕೊಳ್ಳಿ. ಪ್ರತಿಯೊಬ್ಬರು ತಮ್ಮನ್ನು ಯಾರಾದರು ಹೊಗಳಲಿ ಎಂದು ಭಾವಿಸುತ್ತಾರೆ, ಟೀಕೆ ಮಾಡಲಿ ಎಂದು ಬಯಸುವುದಿಲ್ಲ. ಆದ್ದರಿಂದ ನೀವು ನಿಮ್ಮ ಸಂಗಾತಿಯನ್ನು ನೋಯಿಸಿದ್ದೀರಾ ಎಂದು ಒಮ್ಮೆ ನಿಮ್ಮನ್ನು ನೀವೇ ಕೇಳಿಕೊಳ್ಳಿ.

English summary

Strong Steps to Stop a Divorce

Many spouses ignore for years the alarms of discontent that their partner has been ringing. None of the complaints sounded like they might end up being causes for divorce (link is external). When their spouse “suddenly” announces that he or she is moving out, wants to end the marriage, or even has filed already for divorce, the ground below shakes like an earthquake. Is there any way, at that last-ditch point, to stop a divorce
Story first published: Monday, November 2, 2015, 15:58 [IST]
X
Desktop Bottom Promotion