For Quick Alerts
ALLOW NOTIFICATIONS  
For Daily Alerts

ಸಂಗಾತಿಯ ನಿರ್ಲಕ್ಷ್ಯವನ್ನು ಸೂಚಿಸುವ ಸಂಜ್ಞೆಗಳೇನು?

By Super
|

ಜಗತ್ತಿನಲ್ಲಿ ಅತ್ಯಂತ ಅಮೂಲ್ಯವಾದುದೇನೆಂದರೆ ಅದು ನಾವು ಪಡೆಯುವ ಪ್ರೀತಿ. ಮಗುವಿಗೆ ತಾಯಿಯ ಪ್ರೀತಿ, ಹೆಂಡತಿಗೆ ಗಂಡನ, ಗಂಡನಿಗೆ ಹೆಂಡತಿಯ ಪ್ರೀತಿ ಜೀವನದ ಅತ್ಯಂತ ಆದ್ಯತೆಯ ಐಶ್ವರ್ಯಗಳು. ಪ್ರೀತಿಯೇ ಇಲ್ಲದ ಯಾವುದೇ ಐಶ್ವರ್ಯಕ್ಕೆ ಬೆಲೆಯಿಲ್ಲ. ಪ್ರತಿಯೊಬ್ಬರೂ ತಮ್ಮ ಸಂಗಾತಿಯಿಂದ ತಮಗೆ ಪ್ರಾಮುಖ್ಯತೆ ದೊರಕಬೇಕೆಂದೂ, ತಮಗಾಗಿ ಸಮಯವನ್ನು ವ್ಯಯಿಸಬೇಕೆಂದೂ ಬಯಸುತ್ತಾರೆ.

ತಮ್ಮ ಮಟ್ಟಿಗೆ ತಮ್ಮ ಸಂಗಾತಿಯೇ ಜಗತ್ತಿನ ಕೇಂದ್ರ ಎಂದು ಭಾವಿಸುತ್ತಾರೆ, ಹಾಗೆ ಭಾವಿಸಲೂಬೇಕು. ಆಗಲೇ ದಾಂಪತ್ಯದ ಅಥವಾ ಯಾವುದೇ ಹತ್ತಿರದ ಸಂಬಂಧಕ್ಕೆ ನಿಜವಾದ ಅರ್ಥ ಬರುತ್ತದೆ. ಆದರೆ ಕೆಲವೊಮ್ಮೆ ನಿಮ್ಮ ಸಂಗಾತಿಯಿಂದ ನಿಮಗೆ ಸಿಗುತ್ತಿರುವ ಪ್ರೀತಿ ಕೇವಲ ತೋರಿಕೆಯೆಂದು ಕಂಡುಬರಬಹುದು. ಅಥವಾ ನಿಜವಾದ ಪ್ರೀತಿಯನ್ನು ಅರ್ಥಮಾಡಿಕೊಳ್ಳದೇ ನೀವೇ ಉತ್ಪ್ರೇಕ್ಷಿಸಿಕೊಳ್ಳುತ್ತಿರಬಹುದು.

Signs You Are Not His Priority

ಆದರೆ ಒಂದು ವೇಳೆ ನಿಮ್ಮ ಗಂಡ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದರೆ ಅಥವಾ ಕೇವಲ ತೋರಿಕೆಯ ಪ್ರೀತಿ ಪ್ರಕಟಿಸುತ್ತಿದ್ದರೆ ಅದನ್ನು ಅವರ ನಡವಳಿಕೆಯಲ್ಲಿ ಸೂಕ್ಷ್ಮವಾಗಿ ಗಮನಿಸಬಹುದು. ಇನ್ನು ಕೆಲವರು ಕುಟಿಲರಾಗಿದ್ದು ನಿಮ್ಮ ಗಮನ ಪಡೆಯುವವರೆಗೆ ನಿಮ್ಮನ್ನು ಆರಾಧ್ಯ ದೈವದಂತೆ ಕಂಡು ನಿಮ್ಮ ಪ್ರೀತಿ ಪಡೆದ ಬಳಿಕ ನಿಮ್ಮನ್ನು ಗೆದ್ದು ಗುಲಾಮಳನ್ನಾಗಿಸಿದ ಹುಮ್ಮಸ್ಸಿನಲ್ಲಿ ನಿಮ್ಮನ್ನು ನಿರ್ಲಕ್ಷಿಸುವ ಚಾಕಚಕ್ಯತೆ ಹೊಂದಿರುತ್ತಾರೆ.

ಸ್ಪುರದ್ರೂಪಿಗಳಲ್ಲಿ ಈ ನಡವಳಿಕೆ ಹೆಚ್ಚಾಗಿ ಕಂಡುಬರುತ್ತದೆ. ಮದುವೆಗೂ ಮುನ್ನ ಒಂದು ವೇಳೆ ಈ ಪರಿಸ್ಥಿತಿಯೀ ಇದ್ದರೆ ನೀವು ನಿಜವಾಗಿ ಯೋಚನೆ ಮಾಡಬೇಕಾದ ಅಗತ್ಯವಿದೆ. ಒಂದು ವೇಳೆ ಆತ ನಿಮ್ಮನ್ನು ನಿರ್ಲಕ್ಷಿಸುತ್ತಿರುವುದು ದಿಟವಾದರೆ ಇನ್ನು ಆತನ ಗಮನ ಸೆಳೆದು ಬಲವಂತವಾಗಿ ಪ್ರೀತಿಯನ್ನು ಪಡೆಯಲು ಯತ್ನಿಸುವುದರಲ್ಲಿ ಯಾವ ಅರ್ಥವೂ ಇಲ್ಲ. ಏಕೆಂದರೆ ಆತನ ಪ್ರಾಮುಖ್ಯತೆಯ ಪಟ್ಟಿಯಲ್ಲಿ ನಿಮ್ಮ ಹೆಸರು ಕೆಳಗೆಲ್ಲೋ ದೂಡಲ್ಪಟ್ಟಿದೆ. ಇದನ್ನು ಸ್ಪಷ್ಟಪಡಿಸಿಕೊಳ್ಳಲು ನಿಮಗೆ ಕೆಳಗಿನ ಮಾಹಿತಿ ನೆರವಾಗಲಿದೆ... ಅನುಮಾನವೇ ಸಂಸಾರವನ್ನು ನುಚ್ಚುನೂರು ಮಾಡಬಹುದು!

ಆತ ಯಾವಾಗಲೂ ತಡವಾಗಿ ಬರುತ್ತಾನೆ
ಸಂಗಾತಿಗಳ ಪ್ರೀತಿಗೆ ಅತ್ಯಂತ ಅಗತ್ಯವಾಗಿರುವುದು ಎಂದರೆ ಬದ್ಧತೆ. ಒಂದು ವೇಳೆ ಮಾತು ಕೊಟ್ಟರೆ ಅದಕ್ಕೆ ತಪ್ಪದಿರುವುದು ಬದ್ಧತೆಯ ಒಂದು ಭಾಗ. ಒಂದು ವೇಳೆ ನಿಮ್ಮನ್ನು ಭೇಟಿಯಾಗಲು ನಿಗದಿಗೊಳಿಸಿದ ಸಮಯಕ್ಕೆಂದೂ ಆತ ಬಾರದೇ ಪ್ರತಿಬಾರಿಯೂ ವಿಭಿನ್ನವಾದ ಮತ್ತು ನಂಬದಿರಲು ಸಾಧ್ಯವಾಗದಂತಹ ಸಬೂಬುಗಳನ್ನು ಹೇಳಿ ನಿಮ್ಮನ್ನು ಒಲಿಸಿಕೊಳ್ಳಲು ಯತ್ನಿಸಿದರೆ ಇದು ಆತನ ನಿರಾಸಕ್ತಿಯ ಸಂಕೇತವಾಗಿದೆ. ವಾಸ್ತವವಾಗಿ ಪ್ರೀತಿಯಲ್ಲಿರುವ ಪುರುಷರು ಮಹಿಳೆಯರಿಗಿಂತಲೂ ಮುಂಚಿತವಾಗಿಯೇ ಸ್ಥಳಕ್ಕೆ ತಲುಪಿ ನಿರೀಕ್ಷಿಸುವುದನ್ನು ಹೆಚ್ಚಾಗಿ ಗಮನಿಸಲಾಗಿದೆ.

ನಿಮ್ಮನ್ನು ಸಾಮಾಜಿಕ ಕಾರ್ಯಕ್ರಮಗಳಿಗೆ ಕೊಂಡೊಯ್ಯಲು ನಿರಾಕರಿಸುತ್ತಾನೆ
ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸ್ನೇಹಿತರ ಮತ್ತು ಸಂಬಂಧಿಕರ ನಡುವಣ ಬಾಂಧವ್ಯ ಉತ್ತಮಗೊಳ್ಳುತ್ತದೆ. ಅದರಲ್ಲೂ ದಂಪತಿಗಳು ಅಥವಾ ನಿಶ್ಚಿತಾರ್ಥವಾದವರು ಜೊತೆಯಲ್ಲಿ ತೆರಳಿ ತಮ್ಮ ಸಂಗಾತಿಗಳನ್ನು ತಮ್ಮ ಬಾಂಧವರ ಮತ್ತು ಸ್ನೇಹಿತರಿಗೆ ಪರಿಚಯಿಸುವುದು ಅವರ ಮೇಲಿನ ಪ್ರೀತಿ ಮತ್ತು ಬದ್ಧತೆಯನ್ನು ಪ್ರಕಟಿಸುವ ಉತ್ತಮ ಮಾರ್ಗವಾಗಿದೆ.

ಈ ಸಂದರ್ಭದಲ್ಲಿ ಭೇಟಿಯಾದ ಹಿರಿಯರು ಮತ್ತು ಹಿತೈಷಿಗಳು ನೀಡುವ ಆಶೀರ್ವಾದ ಇಡಿಯ ಜೀವಮಾನ ರಕ್ಷೆಯಾಗಿ ಕಾಪಾಡುತ್ತದೆ ಎಂದೂ ಹಿರಿಯರು ಅಭಿಪ್ರಾಯಪಡುತ್ತಾರೆ. ಆದರೆ ಒಂದು ವೇಳೆ ಇಂತಹ ಕಾರ್ಯಕ್ರಮಗಳಿಗೆ ಜೊತೆಯಲ್ಲಿ ಕೊಂಡೊಯ್ಯಲು ಆತ ನಿರಾಕರಿಸಿದರೆ ಅಥವಾ ಕುಂಟುನೆವಗಳನ್ನು ಹೇಳಿದರೆ ನೀವು ಆತನ ಬಗ್ಗೆ ಪರಾಮರ್ಶಿಸುವುದು ಅಗತ್ಯವಾಗಿದೆ. ಕಣ್ಣು-ಕಣ್ಣು ಕಲೆತಾಗ ಮನದಲ್ಲಿ ಪ್ರೇಮಾಂಕುರ!

ಆತನ ಪ್ರತಿಕ್ರಿಯೆ ತಡವಾಗಿ ಬರುತ್ತದೆ
ಒಂದು ವೇಳೆ ನೀವು ಆತನಿಗೆ ಯಾವುದಾದರೂ ಪ್ರಶ್ನೆ ಕೇಳಿದರೆ ಅಥವಾ ಮೆಸೇಜ್ ಕಳುಹಿಸಿದರೆ ಆತನಿಂದ ಪ್ರತಿಕ್ರಿಯೆ ಬೇಗನೇ ಬಾರದಿರುವುದೂ ನಿಮ್ಮನ್ನು ಆತ ನಿರ್ಲಕ್ಷಿಸುತ್ತಿರುವುದರ ಸಂಜ್ಞೆಯಾಗಿದೆ. ಏಕೆಂದರೆ ಸತ್ಯ ಹೇಳಲು ನಮ್ಮೆ ಮೆದುಳಿಗೆ ಹೆಚ್ಚು ಶ್ರಮ ಬೇಕಾಗಿಲ್ಲ, ಹೆಚ್ಚು ಸಮಯವೂ ಬೇಕಾಗಿಲ್ಲ. ಆದರೆ ಸುಳ್ಳು ಹೇಳಬೇಕಾದರೆ ಅಥವಾ ಪರಿಸ್ಥಿತಿಗೆ ತಕ್ಕ ಕಟ್ಟು ಕಥೆಯನ್ನು ಸೃಷ್ಟಿಸಲು ಮೆದುಳಿಗೆ ಕೊಂಚವಾದರೂ ಕಾಲಾವಕಾಶ ಬೇಕಾಗುತ್ತದೆ. ಆದ್ದರಿಂದ ತಡವಾಗಿ ಬಂದ ಉತ್ತರದ ತಾತ್ಪರ್ಯ ಸತ್ಯ ಎಂದು ನಂಬುವ ಮೊದಲು ಆತನ ನಿಜವಾದ ಅಭಿಪ್ರಾಯವೇನೆಂದು ಅರಿಯುವ ಅಗತ್ಯವಿದೆ.

English summary

Signs You Are Not His Priority

Is he ignoring you? Every woman wants her man to treat her as the center of the universe. Of course, we all want love and attention. But you will receive all that only if he genuinely loves you. So, the question is- does he love you? Let us take a look at them. Signs You Are Not His Priority
X
Desktop Bottom Promotion