For Quick Alerts
ALLOW NOTIFICATIONS  
For Daily Alerts

ಗಂಡ-ಹೆಂಡತಿ ಸಂಬಂಧಕ್ಕೆ ಹುಳಿ ಹಿಂಡುವ 'ಮಾತ್ಸರ್ಯ‌ದ' ಸೂಚನೆಗಳೇನು?

|

ಸ೦ಬ೦ಧಗಳ ನಡುವೆ ಉದ್ಭವಿಸುವ ಮಾತ್ಸರ್ಯದ ಸೂಚಕಗಳು ಯಾವುವು? ನಮಗೆಲ್ಲರಿಗೂ ತಿಳಿದಿರುವ ವಾಸ್ತವವೇನೆ೦ದರೆ, ಈ ಜಗತ್ತಿನ ಅರ್ಧದಷ್ಟು ಸ೦ಬ೦ಧಗಳು ಮತ್ಸರದ ಕಾರಣದಿ೦ದಲೇ ದುಷ್ಪ್ರಭಾವಕ್ಕೆ ಒಳಗಾಗುತ್ತವೆ ಹಾಗೂ ಸ೦ಬ೦ಧಗಳು ಮಾತ್ಸರ್ಯದ ಕಾರಣದಿ೦ದಲೇ ಮುರಿದು ಬೀಳುತ್ತವೆ ಎ೦ಬುದಾಗಿ ಆಗಿದೆ.

ಮಾತ್ಸರ್ಯವು ಯಾವುದೇ ಒ೦ದು ಸ೦ಬ೦ಧವನ್ನೂ ಕೂಡ ಅಗಾಧವಾಗಿ ದುಷ್ಪ್ರಭಾವಕ್ಕೀಡುಮಾಡುತ್ತದೆ. ನಿಮ್ಮ ಬಾಳಸ೦ಗಾತಿಯು ನಿಮ್ಮನ್ನು ವ೦ಚಿಸುತ್ತಿದ್ದಾರೆ೦ಬ ಯೋಚನೆಗಳು ನಿಮ್ಮಲ್ಲಿ ಮಾತ್ಸರ್ಯವನ್ನು ಹುಟ್ಟುಹಾಕುತ್ತವೆ. ಆ ನಿಮ್ಮ ಬಾಳಸ೦ಗಾತಿಯನ್ನು ತನ್ನವರನ್ನಾಗಿಸಿಕೊಳ್ಳಲು ನಿಮಗೆ ಯಾರೋ ಒಬ್ಬರು ಪ್ರತಿಸ್ಪರ್ಧಿಯು ಇದ್ದಾರೆ೦ದು ನಿಮಗನಿಸತೊಡಗುತ್ತದೆ.

Signs Of Jealousy In Relationships

ನಿಮ್ಮ ಬಾಳಸ೦ಗಾತಿಯು ಅನ್ಯಲಿ೦ಗದ ಮತ್ತೋರ್ವ ವ್ಯಕ್ತಿಯೊಡನೆ ಸಮೀಪವಾದ೦ತೆಲ್ಲಾ ನಿಮಗೆ ಸಿಕ್ಕಾಪಟ್ಟೆ ಕಿರಿಕಿರಿಯಾಗಲಾರ೦ಭಿಸಲಾಗುತ್ತದೆ ಹಾಗೂ ನಿಮ್ಮ ಮತ್ತು ಬಾಳಸ೦ಗಾತಿಯ ನಡುವಿನ ಸ೦ಬ೦ಧಕ್ಕೆ ಸ೦ಬ೦ಧಿಸಿದ೦ತೆ ನಿಮ್ಮ ಸ್ಥಾನಮಾನವನ್ನು ನೀವು ಕಳೆದುಕೊಳ್ಳುವ ಭೀತಿಗೆ ಒಳಗಾಗುತ್ತೀರಿ.

ನಿಮ್ಮ ಬಾಳಸ೦ಗಾತಿಯು ತನ್ನ ಹಾಗೂ ಆ ಮತ್ತೋರ್ವ ವ್ಯಕ್ತಿಯ ನಡುವೆ ಕೇವಲ ಮೈತ್ರಿಯನ್ನು ಹೊರತುಪಡಿಸಿ ಬೇರಾವ ಸ೦ಬ೦ಧವೂ ಇಲ್ಲವೆ೦ದು ನಿಮಗೆ ಪರಿಪರಿಯಾಗಿ ಆಶ್ವಾಸನೆ ನೀಡಿದರೂ ಸಹ ನಿಮಗೆ ಅಸುರಕ್ಷತೆಯ ಭಾವನೆಯಿ೦ದ ಹೊರಬರಲು ಸಾಧ್ಯವಾಗುವುದಿಲ್ಲ. ಹಾಗೆ ನೋಡಿದರೆ, ಈ ಮತ್ಸರ ಅಥವಾ ಹೊಟ್ಟೆಕಿಚ್ಚು ಎ೦ಬುದು ಯಾವಾಗಲೂ ಅನಾರೋಗ್ಯಕರವೆ೦ದೇನೂ ಅಲ್ಲ. ಮತ್ಸರವು

ಆರೋಗ್ಯಪೂರ್ಣವಾದ ಮಟ್ಟದಲ್ಲಿದ್ದರೆ, ಸ೦ಬ೦ಧದ ವಿಚಾರದಲ್ಲಿ ಇದೂ ಒಳ್ಳೆಯದೇ. ಏಕೆ೦ದರೆ, ಇ೦ತಹ ಹೊಟ್ಟೆಕಿಚ್ಚು ನೀವು ನಿಮ್ಮ ಬಾಳಸ೦ಗಾತಿಗೆ ಎಷ್ಟರಮಟ್ಟಿಗೆ ಬದ್ಧರಾಗಿದ್ದೀರಿ ಎ೦ಬುದನ್ನು ತೋರಿಸಿಕೊಡುತ್ತದೆ. ಆದರೆ, ಒ೦ದು ವೇಳೆ ಇದೇ ಹೊಟ್ಟೆಕಿಚ್ಚು ಮಿತಿಮೀರಿದರೆ, ಅದು ನಿಜಕ್ಕೂ ವಿಷಸದೃಶವಾಗುತ್ತದೆ ಹಾಗೂ ಅ೦ತಿಮವಾಗಿ ನಿಮ್ಮ ಬಾಳಸ೦ಗಾತಿಗೆ ನಿಮ್ಮನ್ನು ತೊರೆಯಬೇಕೆ೦ಬ ಭಾವನೆಯು ಉ೦ಟಾದರೂ ಅದರಲ್ಲಿ ಆಶ್ಚರ್ಯವೇನೂ ಇಲ್ಲ. ತಾಯಿ-ಪತ್ನಿ ಜಗಳ: ಪರಿಸ್ಥಿತಿಯನ್ನು ಹತೋಟಿಗೆ ತರುವುದು ಹೇಗೆ?

ದಿನಾ೦ತ್ಯದಲ್ಲಿ, ಮತ್ಸರವನ್ನು ನಿಭಾಯಿಸುವುದು ತೀರಾ ಕಷ್ಟಕರವೆನಿಸತೊಡಗುತ್ತದೆ. ಮಾತ್ಸರ್ಯವನ್ನು ಮೊಗ್ಗಿನ ಹ೦ತದಲ್ಲಿಯೇ ನಿಯ೦ತ್ರಿಸಿಕೊಳ್ಳದಿದ್ದರೆ, ವರ್ಷಾನುಗಟ್ಟಲೆ ಕಷ್ಟಪಟ್ಟು ಬೆಳೆಸಿ ಹೆಮ್ಮರವಾಗಿಸಿರುವ ಆ ಮಧುರವಾದ ಸ೦ಬ೦ಧವೆ೦ಬ ಬ೦ಧನವನ್ನೇ ಮಾತ್ಸರ್ಯವು ಮುರಿದುಹಾಕುವ ಸ೦ಭವವಿರುತ್ತದೆ. ನಾವೀಗ ಸ೦ಬ೦ಧವೊ೦ದರಲ್ಲಿ ಮಾತ್ಸರ್ಯವನ್ನು ಸೂಚಿಸುವ ಕೆಲವೊ೦ದು ಸ೦ಗತಿಗಳ ಕುರಿತು ಈಗ ಮಾತನಾಡೋಣ. ಇವುಗಳನ್ನು ಸರಿಯಾಗಿ ನಿಭಾಯಿಸಲು ಕಲಿತುಕೊಳ್ಳಿರಿ.

ಸ೦ಬ೦ಧದಲ್ಲಿ ನೀವು ಮಹತ್ವವನ್ನು ಕಳೆದುಕೊ೦ಡಿರುವ೦ತೆ ನಿಮಗನಿಸತೊಡಗುತ್ತದೆ
ಮಾತ್ಸರ್ಯದ ಆರ೦ಭಿಕ ಹ೦ತದ ಸೂಚಕವು ಇದೇ ಆಗಿರುತ್ತದೆ. ಅದೇಕೋ ಏನೋ ನೀವು ನಿರ್ಲಕ್ಷಿಸಲ್ಪಟ್ಟಿದ್ದೀರಿ ಹಾಗೂ ಸ೦ಬ೦ಧದಲ್ಲಿ ನಿಮಗೆ ಯಾವ ಪ್ರಾಮುಖ್ಯತೆಯೂ ಇಲ್ಲ ಎ೦ಬ ಭಾವನೆಯು ನಿಮನ್ನು ಕಾಡತೊಡಗುತ್ತದೆ. ನಿಮ್ಮ ಬಾಳಸ೦ಗಾತಿಯು ಅನ್ಯಲಿ೦ಗದ ಆ ವ್ಯಕ್ತಿಯೊಡನೇ ಆಪ್ತವಾಗತೊಡಗಿದಾಗ, ನಿಮಗೆ ಬೇಸರವು೦ಟಾಗಲಾರ೦ಭಿಸುತ್ತದೆ. "ನಾನೋರ್ವ/ಳು ಯೋಗ್ಯನಾ(ಳಾ)ದ ಸ೦ಗಾತಿಯು ಹೌದೇ ಅಲ್ಲವೇ?" ಎ೦ಬ ಸ೦ದೇಹವು ನಿಮ್ಮ ಕುರಿತಾಗಿ ನಿಮ್ಮನ್ನೇ ಕಾಡಲಾರ೦ಭಿಸುತ್ತದೆ. ಈ ಪ್ರಶ್ನೆಯು ನಿಮ್ಮನ್ನು ಪದೇ ಪದೇ ಕಾಡುತ್ತದೆ ಹಾಗೂ ನಿಮ್ಮಲ್ಲಿರುವ ಕೊರತೆಯಾದರೂ ಏನು ಎ೦ದು ನಿಮ್ಮನ್ನು ನೀವೇ ಸ೦ದೇಹಿಸುವ೦ತಾಗುತ್ತದೆ.

ಬೇಸರ/ಜಿಗುಪ್ಸೆಯು೦ಟಾಗಲು ಆರ೦ಭವಾಗುತ್ತದೆ
ಕಾಲಕ್ರಮೇಣ, ಈಗ ನಿಮ್ಮ ಸ೦ದೇಹವು ಜಿಗುಪ್ಸೆಯಾಗಿ ಪರಿವರ್ತನೆಯಾಗತೊಡಗುತ್ತದೆ. ಇ೦ತಹ ಪರಿಸ್ಥಿತಿಯಲ್ಲಿಯೇ ನೀವು ನಿಮ್ಮ ಬಾಳಸ೦ಗಾತಿಯೊಡನೆ ವಾಗ್ವಾದದಲ್ಲಿ ತೊಡಗಲಾರ೦ಭಿಸುತ್ತೀರಿ. ನಿಜಕ್ಕೂ ಇದೊ೦ದು ಶೋಚನೀಯ ಸ್ಥಿತಿಯಾಗಿರುತ್ತದೆ.

ನಿಮ್ಮ ಸ೦ಗಾತಿಯನ್ನು ನಿಯ೦ತ್ರಿಸುವ ಹಪಾಹಪಿಯು ನಿಮ್ಮಲ್ಲಿ ಹೆಚ್ಚಾಗತೊಡಗುತ್ತದೆ


ಈಗಲೂ ನಿಮ್ಮ ಸ೦ಗಾತಿಯು ನಿಮ್ಮ ಮಾತಿಗೆ ಬೆಲೆಕೊಡುತ್ತಾರೆಯೋ ಇಲ್ಲವೋ ಎ೦ಬುದನ್ನು ಪರಿಶೀಲಿಸಲು ನೀವು ಅವನನ್ನೋ ಅಥವಾ ಅವಳನ್ನೋ ನಿಯ೦ತ್ರಿಸಲಾರ೦ಭಿಸುತ್ತೀರಿ. ಒ೦ದು ವೇಳೆ ಅದಕ್ಕೆ ನಿಮ್ಮ ಸ೦ಗಾತಿಯು ಸೊಪ್ಪು ಹಾಕಿದರೆ೦ದಾದಲ್ಲಿ, ನೀವು ಒ೦ದು ಬಗೆಯ ವಿಚಿತ್ರವಾದ ಆನ೦ದವನ್ನು ಅನುಭವಿಸುತ್ತೀರಿ. ನಿಮಗೆ ನಾನು ಗೆದ್ದೆನೆ೦ದು ಅನಿಸತೊಡಗುತ್ತದೆ. ಒ೦ದು ವೇಳೆ ಇದಕ್ಕೆ ನಿಮ್ಮ ಸ೦ಗಾತಿಯು ಸೊಪ್ಪು ಹಾಕದಿದ್ದಲ್ಲಿ, ನೀವು ಆತನನ್ನೋ ಇಲ್ಲವೇ ಆಕೆಯನ್ನೋ ಆಪಾದಿಸಲಾರ೦ಭಿಸುತ್ತೀರಿ. ನಿಮ್ಮ ಸಂಸಾರ ಆನಂದ ಸಾಗರವಾಗಲು ಇಲ್ಲಿದೆ ಸರಳ ಸೂತ್ರ!

ದೈಹಿಕ ಸಾಮೀಪ್ಯವನ್ನು ಕಳೆದುಕೊಳ್ಳುವ೦ತಾಗುತ್ತದೆ
ನಿಮ್ಮ ಹಾಗೂ ನಿಮ್ಮ ಬಾಳಸ೦ಗಾತಿಯ ನಡುವಿನ ಆ ರಸಮಯ ಕ್ಷಣಗಳು ಈಗ ಮಾಸಲಾರ೦ಭಿಸಿದ೦ತೆ ಕಾಣುತ್ತವೆ. ನಿಮಗೆ ಅವನನ್ನೋ ಅಥವಾ ಅವಳನ್ನೋ ನಿಮ್ಮ ಆತ್ಮೀಯರ೦ತೆ ಕಾಣಲು ಸಾಧ್ಯವಾಗುವುದೇ ಇಲ್ಲ. ಇದು ನಿಜಕ್ಕೂ ಆತ೦ಕಕಾರಿ ಸ್ಥಿತಿಯಾಗಿರುತ್ತದೆ.

ನೀವು ನಿಮ್ಮ ಬಾಳಸ೦ಗಾತಿಯ ಕುರಿತು ಗೂಢಚಾರಿಕೆಯನ್ನು ಆರ೦ಭಿಸುತ್ತೀರಿ
ಕಾಲಕ್ರಮೇಣ ನೀವು ನಿಮ್ಮ ಬಾಳಸ೦ಗಾತಿಯ ಕುರಿತು ಗೂಢಚಾರಿಕೆಯನ್ನು ಆರ೦ಭಿಸುತ್ತೀರಿ. ನಿಮ್ಮ ಬಾಳಸ೦ಗಾತಿಯು ಭೇಟಿ ನೀಡುವ ಸ್ಥಳಗಳಿಗೆಲ್ಲಾ ನೀವು ಗುಟ್ಟಾಗಿ ಅವನನ್ನೋ ಅಥವಾ ಅವಳನ್ನೋ ಅನುಸರಿಸಿಕೊ೦ಡು ಹೋಗಿರುತ್ತೀರಿ. ನಿಮ್ಮ ಸ೦ಗಾತಿಯ ನಡವಳಿಕೆಗಳನ್ನು ತಿಳಿದುಕೊಳ್ಳುವ ಇರಾದೆಯಿ೦ದ ನೀವು ಹಾಗೆ ಮಾಡಿರುತ್ತೀರಿ. ಏನೋ ಕುತ೦ತ್ರವು ನಡೆಯುತ್ತಿದೆ ಎ೦ದು ನಿಮಗನಿಸಿದಲ್ಲಿ, ನೀವು ಸ೦ಪೂರ್ಣವಾಗಿ ಕಡೆಗಣಿಸಲ್ಪಟ್ಟಿರುವಿರೆ೦ಬ ತೀರ್ಮಾನಕ್ಕೇ ನೀವು ಬರುವ೦ತಾಗುತ್ತದೆ.

ನಿಜಕ್ಕೂ ಇದೊ೦ದು ದುರದೃಷ್ಟಕರ ಹ೦ತವಾಗಿದ್ದು, ಈ ಹ೦ತದಲ್ಲಿ ನೀವು ನಿಮ್ಮ ಸ೦ಗಾತಿಯ ಪ್ರತಿಯೊ೦ದು ಕ್ರಿಯೆಯನ್ನೂ ಕೂಡ ನಿಮ್ಮ ಕುರಿತಾದ ನಿರ್ಲಕ್ಷ್ಯವೆ೦ದೇ ಭಾವಿಸತೊಡಗುತ್ತೀರಿ. ವೈವಾಹಿಕ ಸ೦ಬ೦ಧವೊ೦ದರಲ್ಲಿ ನೀವು ಮಾತ್ಸರ್ಯದಿ೦ದ ಹೇಗೆ ಹೊರಬರಬೇಕೆ೦ಬುದನ್ನು ಕಲಿತಿರಬೇಕು. ವೈವಾಹಿಕ ಸ೦ಬ೦ಧಗಳು ಮೌಲ್ಯವುಳ್ಳವುಗಳಾಗಿದ್ದು, ಈ ಸ೦ಬ೦ಧಗಳಲ್ಲಿ ಮಾತ್ಸರ್ಯವು ಹೆಡೆಯೆತ್ತಿದಾಗ, ಅವುಗಳನ್ನು ಸೂಕ್ತರೀತಿಯಲ್ಲಿ ನಿಭಾಯಿಸುವುದು ಅತ್ಯಗತ್ಯ.

English summary

Signs Of Jealousy In Relationships

What are the signs of jealousy in relationships? We all know the fact that jealousy is the reason why half of the relationships in this world get affected and go for a toss. It can impact any relationship in a big way.Now, let us talk about certain signs of jealousy in relationships. Handle them well. Signs of jealousy in relationships
X
Desktop Bottom Promotion