For Quick Alerts
ALLOW NOTIFICATIONS  
For Daily Alerts

ಮದುವೆ ಬಗ್ಗೆ ಮಗಳಿಗೆ ತಾಯಿ ಹೇಳಲೇಬೇಕಾದ ಹತ್ತು ರಹಸ್ಯವೇನು?

By Super Admin
|

ಒಂದು ವೇಳೆ ನಿಮಗೆ ಅಲ್ಲಾವುದ್ದೀನನ ಅಧ್ಬುತ ದೀಪ ಸಿಕ್ಕಿದ್ದು ಅದರ ಭೂತ ನಿಮಗೇನೆಂದು ಬೇಕೆಂದು ಥಟ್ಟನೇ ಹೇಳು ಎಂದು ಕೇಳಿದರೆ ಚಿನ್ನ, ಹಣ, ನೆಲ,ಕಟ್ಟಡ ಎಂಬ ಬೇಡಿಕೆಗಳೇ ಥಟ್ಟನೆ ನೆನಪಿಗೆ ಬರುತ್ತವೆ.

ಆದರೆ ಇದೇ ಮಾತನ್ನು ಭೂತ ಒಬ್ಬ ತಾಯಿಯಲ್ಲಿ ಕೇಳಿದರೆ ಆಕೆಯಿಂದ ಬರುವ ಉತ್ತರ-ನನ್ನ ಮಗಳಿಗೆ ಒಬ್ಬ ಉತ್ತಮನಾದ ವರ ಬೇಕು! ಇದೇ ತಾಯಿಯ ಹೃದಯ, ಮಮತೆ ಮತ್ತು ಬೆಲೆಕಟ್ಟಲಾಗದ ವಾತ್ಸಲ್ಯ. ಮಗಳು ಪ್ರಾಪ್ತವಯಸ್ಕಳಾದಂತೆ ಆಕೆಯನ್ನು ಉತ್ತಮ ಗುಣಗಳುಳ್ಳ ವ್ಯಕ್ತಿಯೊಬ್ಬನೊಂದಿಗೆ ಮದುವೆ ಮಾಡಿಕೊಟ್ಟು ಅವಳ ಮನೆ ಸುಖಮಯವಾಗುವುದನ್ನು ನೋಡುವುದು ಪ್ರತಿಯೊಬ್ಬ ತಾಯಿಯ ಕನಸಾಗಿದೆ.

ನಮ್ಮ ಸಂಸ್ಕೃತಿಯಲ್ಲಿ ಹೆಣ್ಣುಮಕ್ಕಳು ವಿಹಾಹದ ಬಳಿಕ ತಮ್ಮ ಗಂಡನ ಮನೆಗೆ ತೆರಳಿ ಆ ಮನೆಯನ್ನು ಬೆಳಗುವುದು ಸಂಪ್ರದಾಯವಾಗಿದೆ. ಹೊಸ ಮನೆ, ಹೊಸ ವಾತಾವರಣ, ನೂತನ ದಾಂಪತ್ಯ, ಗಂಡನ ಮನೆಯವರ ಆಕಾಂಕ್ಷೆಗಳು ಮೊದಲಾದ ಸವಾಲುಗಳನ್ನು ಹೊಸಮನೆಗೆ ಅಡಿಯಿಡುತ್ತಿರುವ ವಧು ಎದುರಿಸಬೇಕಾಗುತ್ತದೆ. ಈ ಸಂದರ್ಭವನ್ನು ಸಮರ್ಥವಾಗಿ ಎದುರಿಸಲು ತಾಯಿ ಮಗಳಿಗೆ ಕೆಲವೊಂದು ಆಪ್ತ ಸಲಹೆಗಳನ್ನು ನೀಡುವುದು ಅತ್ಯಂತ ಅವಶ್ಯವಾಗಿದೆ. ಹೆಂಗಸರ ಮನದಾಳವನ್ನು ಅರಿಯಲು 10 ಸಲಹೆಗಳು

ಹೊಸಮನೆಯಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ವಿವರಗಳನ್ನು ತಾಯಿ ಈ ಮೊದಲೇ ಗ್ರಹಿಸಿ ಅವುಗಳನ್ನು ಎದುರಿಸಲು ನೀಡುವ ಅತ್ಯಮೂಲ್ಯ ಸಲಹೆಗಳಲ್ಲಿ ಪ್ರಮುಖವಾದ ಎಂಟು ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ಈ ಸಲಹೆಗಳನ್ನು ಪಾಲಿಸುವ ಮೂಲಕ ನೂತನ ವಧು ತನ್ನ ಹೊಸಮನೆಯಲ್ಲಿ ಯಾವುದೇ ತೊಂದರೆ ಎದುರಿಸದೇ ಸುಖಮಯ ಜೀವನ ನಡೆಸಲು ಸಾಧ್ಯವಾಗುತ್ತದೆ.

ಹೊಸಮನೆಯನ್ನು ಸ್ವ ಇಚ್ಛೆಯಿಂದಲೇ ಬೆಳಗು, ಯಾವುದೇ ಬಲವಂತದಿಂದಲ್ಲ

ಹೊಸಮನೆಯನ್ನು ಸ್ವ ಇಚ್ಛೆಯಿಂದಲೇ ಬೆಳಗು, ಯಾವುದೇ ಬಲವಂತದಿಂದಲ್ಲ

ಭಾರತದಲ್ಲಿ ಮದುವೆ ಎಂದರೆ ವಾಸ್ತವವಾಗಿ ಎರಡು ಜೀವಗಳಿಗಿಂತ ಮಿಗಿಲಾಗಿ ಎರಡು ಕುಟುಂಬಗಳ ಮಿಲನ ಎಂದೇ ಪರಿಗಣಿಸಲಾಗುತ್ತದೆ. ನಿನ್ನ ಗಂಡನ ಮನೆಯನ್ನು ಬೆಳಗುವ ಮುನ್ನ ಆ ಮನೆಯನ್ನು ಸೇರಲು ನಿನ್ನ ಸ್ವ ಇಚ್ಚೆಯ, ಯಾವುದೇ ಬಲವಂತವಿಲ್ಲದ ಒಪ್ಪಿಗೆ ಮುಖ್ಯ. ಗಂಡನೊಂದಿಗಿನ ಪ್ರೇಮ, ಅತ್ತೆ ಮಾವನವರಲ್ಲಿ ತಂದೆ ತಾಯಿಯರನ್ನು ಕಾಣುವುದು, ಕಿರಿಯರಲ್ಲಿ ತಮ್ಮ ಸ್ವಂತ ತಮ್ಮ ತಂಗಿಯರನ್ನು ಕಾಣುವುದು, ಮನೆಯ ವಿಸ್ತಾರ, ಆಡಂಬರಕ್ಕಿಂತಲೂ ಮನೆಯವರ ಮನಗಳ ವಿಸ್ತಾರವನ್ನು ಅರಿಯುವುದು ನೀನು ಹೊಸಮನೆಯಲ್ಲಿ ಸುಖವಾಗಿರಲು ಕಾರಣವಾಗುತ್ತವೆ. ಒಂದು ವೇಳೆ ನಿನಗಿಷ್ಟವಿಲ್ಲದ ಮನೆಗೆ ಹೋಗುವ ಸಂದರ್ಭ ಎದುರಾದರೆ ಈ ಮದುವೆಯ ಬಗ್ಗೆ ಎರಡು ಬಾರಿ ಯೋಚಿಸಲು ತಾಯಿ ಮೊದಲು ಮಗಳಿಂದ ಖಚಿತವಾದ ಅಭಿಪ್ರಾಯ ಪಡೆಯಬೇಕು.

ನಿನ್ನ ಪ್ರೀತಿ ಪರಸ್ಪರ ಇರಬೇಕೇ ವಿನಃ ಅಗ್ನಿಪರೀಕ್ಷೆಯಾಗಬಾರದು

ನಿನ್ನ ಪ್ರೀತಿ ಪರಸ್ಪರ ಇರಬೇಕೇ ವಿನಃ ಅಗ್ನಿಪರೀಕ್ಷೆಯಾಗಬಾರದು

ನೀನು ಮದುವೆಯಾಗುವ ವ್ಯಕ್ತಿಯನ್ನು ನೀನು ಮನಸಾರೆ ಪ್ರೀತಿಸುತ್ತಿದ್ದೀಯಾ, ಆ ಪ್ರೀತಿಯನ್ನು ಅರಿಯಲು ಅಗ್ನಿಪರೀಕ್ಷೆಯ ಅಗತ್ಯ ಬೀಳಬಾರದು. ನಿನ್ನ ಗಂಡನಾಗುವವನನ್ನು ಅವಲಂಬಿಸಿ ಜೀವಮಾನವಿಡೀ ಸುಖವಾಗಿರಬಲ್ಲೆ ಎಂಬ ನಂಬಿಕೆ ನಿನಗಿದೆಯೇ? ನಿನ್ನ ಆಸೆ ಆಕಾಂಕ್ಷೆಗಳನ್ನು ಆತ ಪೂರೈಸಬಲ್ಲನೇ? ಈ ಮೊದಲಾದ ಪ್ರಶ್ನೆಗಳನ್ನು ತಾಯಿ ಮಗಳನ್ನು ಕೇಳಿ ಖಚಿತವಾದ ಉತ್ತರಗಳನ್ನು ಪಡೆಯಬೇಕು.

ನಿನ್ನ ಪ್ರೀತಿ ಅಂತರಾಳದಿಂದ ಹುಟ್ಟಬೇಕೇ ವಿನಃ ಆಕರ್ಷಣೆಯಿಂದಲ್ಲ

ನಿನ್ನ ಪ್ರೀತಿ ಅಂತರಾಳದಿಂದ ಹುಟ್ಟಬೇಕೇ ವಿನಃ ಆಕರ್ಷಣೆಯಿಂದಲ್ಲ

ಸಾಮಾನ್ಯವಾಗಿ ಪ್ರತಿಯೊಬ್ಬ ಹದಿಹರೆಯದ ಯುವತಿಯರು ಆಕರ್ಷಕ ಯುವಕರನ್ನೇ ಬಯಸುತ್ತಾರೆ. ಆದರೆ ಪ್ರೀತಿ ಮತ್ತು ಆಕರ್ಷಣೆ ಬೇರೆ ಬೇರೆಯಾಗಿದೆ. ಗಂಡನ ಮನೆಗೆ ಕಾಲಿಟ್ಟ ಕ್ಷಣದಿಂದ ಮಗಳ ಪಾತ್ರಗಳು ಬದಲಾಗುತ್ತವೆ. ಆ ಮನೆಯಲ್ಲಿ ಪತಿಗೆ ಪತ್ನಿಯಾಗಿ, ಅತ್ತೆಮಾವಂದಿರಿಗೆ ಸೊಸೆಯಾಗಿ, ಗಂಡನ ತಮ್ಮನಿಗೆ ಅತ್ತಿಗೆಯಾಗಿ ಮನೆಯ ಇತರ ಸದಸ್ಯರಿಗೆ ಆಯಾ ಪ್ರಕಾರದ ಪಾತ್ರ ವಹಿಸಬೇಕಾಗಿ ಬರುತ್ತದೆ. ಮನೆಯವರೆಲ್ಲರೊಂದಿಗೆ ಉತ್ತಮವಾಗಿ ವ್ಯವಹರಿಸಲು ನಿನ್ನ ಹೃದಯದಲ್ಲಿ ಮೊದಲು ಆ ಮನೆಯ ಬಗ್ಗೆ ಒಲುಮೆ ಹುಟ್ಟಬೇಕು.

ನಿನ್ನ ಪ್ರೀತಿ ಅಂತರಾಳದಿಂದ ಹುಟ್ಟಬೇಕೇ ವಿನಃ ಆಕರ್ಷಣೆಯಿಂದಲ್ಲ

ನಿನ್ನ ಪ್ರೀತಿ ಅಂತರಾಳದಿಂದ ಹುಟ್ಟಬೇಕೇ ವಿನಃ ಆಕರ್ಷಣೆಯಿಂದಲ್ಲ

ಅವರೆಲ್ಲರೂ ತನ್ನವರು ಎಂಬ ಭಾವನೆ ಮೊಳೆಯಬೇಕು. ಅವರಿಗಾಗಿ ಜೀವ ಕೊಡಲೂ ಸಿದ್ಧಳೆಂಬ ಭಾವನೆ ಹುಟ್ಟಿಸಬೇಕು. ಎಂದಿಗೂ ಮನೆಯವರ ಕುರಿತಾಗಿ ಕೆಟ್ಟದ್ದನ್ನಾಡುವುದನ್ನಾಗಲೀ ಟೀಕಿಸುವುದನ್ನಾಗಲೀ ಮಾಡಬಾರದು. ಎಲ್ಲರ ಪ್ರತಿ ಪ್ರೀತಿ ನಿನ್ನ ಅಂತರಾಳದಿಂದ ಹುಟ್ಟಬೇಕು. ಆಗ ಮಾತ್ರ ಎಲ್ಲರೂ ನಿನ್ನನ್ನು ತಮ್ಮ ಸ್ವಂತದವಳೆಂಬಂತೆ ಸ್ವೀಕರಿಸಿ ನಿನ್ನ ಬಾಳು ಸ್ವರ್ಗವಾಗುತ್ತದೆ.

ನಿನ್ನ ಪ್ರೀತಿ ಬೆಳೆಯಲು ಅಗತ್ಯವಾದ ಸಮಯ ಮತ್ತು ಅವಕಾಶ ನೀಡಬೇಕು

ನಿನ್ನ ಪ್ರೀತಿ ಬೆಳೆಯಲು ಅಗತ್ಯವಾದ ಸಮಯ ಮತ್ತು ಅವಕಾಶ ನೀಡಬೇಕು

ಯಾವುದೇ ಪ್ರೀತಿ ಒಮ್ಮೆಲೇ ಬೆಳೆಯುವುದಿಲ್ಲ. ಪ್ರಥಮ ನೋಟದಲ್ಲಿ ಪರವಶಳಾದೆ ಎನ್ನುವುದು ಕೇವಲ ಆಕರ್ಷಣೆಯಷ್ಟೇ. ನಿನ್ನ ಗಂಡನ ಪ್ರೀತಿಯೂ ಹಾಗೆಯೇ. ಅವರ ಬಗ್ಗೆ ಅರಿಯಲು, ಅವರಲ್ಲಿ ಪ್ರೀತಿ ಬೆಳೆಯಲು ಸಮಯ ಮತ್ತು ಅವಕಾಶ ಅಗತ್ಯ. ಇದಕ್ಕಾಗಿ ಎಂದಿಗೂ ಗಂಡನ ಬಗ್ಗೆ ಹೊಟ್ಟೆಕಿಚ್ಚು ಪಡುವುದಾಗಲೀ, ತನ್ನ ಗಂಡ ತನ್ನೊಂದಿಗೇ ಹೆಚ್ಚಿನ ಸಮಯ ಕಳೆಯಬೇಕು ಎಂಬ ಉದ್ಧಟತನವಾಗಲೀ ಕೂಡದು. ಬದಲಿಗೆ ನಿನ್ನ ಗಂಡನ ಅಭಿರುಚಿಗಳನ್ನು ತಿಳಿದುಕೊಂಡು ಅದಕ್ಕೆ ಸಹಕಾರ ನೀಡಬೇಕು. ಇದೇ ರೀತಿ ನಿನ್ನಲ್ಲಿರುವ ಒಳ್ಳೆಯ ಹವ್ಯಾಸಗಳನ್ನು ಮುಂದುವರೆಸಬೇಕು. ಪರಸ್ಪರ ಪ್ರೀತಿಸುವ ಗಂಡ ಹೆಂಡಿರು ಅವರ ಹವ್ಯಾಸಗಳಿಗೂ ಪ್ರೋತ್ಸಾಹ ನೀಡುವ ಮೂಲಕ ಪ್ರೀತಿ ಬೆಳೆಯುತ್ತದೆ. ನಿನ್ನ ಗಂಡ ತನ್ನ ಸ್ನೇಹಿತರೊಡನೆ ಸಮಯ ಕಳೆಯಲು, ನಿನ್ನನ್ನು ನಿನ್ನ ಸ್ನೇಹಿತೆಯರೊಡನೆ ಕೊಂಚಕಾಲ ಕಳೆಯಲು ಅನುವು ಮಾಡಿಕೊಡಬೇಕು. ಇದರಿಂದ ಪರಸ್ಪರರ ಮೇಲಿನ ಗೌರವ, ಪ್ರೀತಿ, ಅಭಿಮಾನ ಹೆಚ್ಚುತ್ತದೆ.

ನಿನ್ನ ಆತ್ಮಾಭಿಮಾನವನ್ನು ಕಳೆದುಕೊಳ್ಳದಿರು

ನಿನ್ನ ಆತ್ಮಾಭಿಮಾನವನ್ನು ಕಳೆದುಕೊಳ್ಳದಿರು

ನಿನ್ನ ಆತ್ಮಾಭಿಮಾನ ನಿನ್ನ ಅಮೂಲ್ಯ ಸೊತ್ತಾಗಿದೆ. ಎಂದಿಗೂ ನಿನ್ನ ಸ್ವಾಭಿಮಾನವನ್ನು ಕಳೆದುಕೊಳ್ಳಬಾರದು. ಉತ್ತಮ ಪತಿ ಎಂದಿಗೂ ಸ್ವಾಭಿಮಾನಿ ಪತ್ನಿಯನ್ನು ಬೆಂಬಲಿಸುತ್ತಾನೆ. ಗಂಡನ ಮನೆಯಲ್ಲಿ ನಿನ್ನ ಪಾತ್ರ ಬದಲಾಗಬಹುದೇ ವಿನಃ ನಿನ್ನ ಆತ್ಮಾಭಿಮಾನವಲ್ಲ. ಒಂದು ವೇಳೆ ನಿನ್ನ ಆತ್ಮಾಭಿಮಾನಕ್ಕೆ ಧಕ್ಕೆ ಬರುವಂತಹ ಯಾವುದೇ ಪ್ರಸಂಗ ಎದುರಾದರೆ ಆ ಮನೆ ನಿನಗಲ್ಲ. ಉದಾಹರಣೆಗೆ ನಿನ್ನ ಶಿಕ್ಷಣ ನಿನಗೆ ಉದ್ಯೋಗ ದೊರಕಿಸಿಕೊಟ್ಟು ಆ ಉದ್ಯೋಗದ ಮೂಲಕ ನಿನ್ನ ಜೀವನವನ್ನು ಸಾರ್ಥಕಗೊಳಿಸುವುದು ನಿನ್ನ ಕನಸಾಗಿದ್ದು ಗಂಡನ ಮನೆಯವರು ಮದುವೆಗೆ ಮುಂಚೆಯೇ ಇದಕ್ಕೆ ಕಡಿವಾಣ ಹಾಕುವುದಾದರೆ ಆ ಮನೆ ಖಂಡಿತಾ ನಿನಗಲ್ಲ. ಎಷ್ಟೇ ಪ್ರಬಲವಾದ ಕಾರಣಗಳಿದ್ದರೂ ನಿನ್ನ ಆತ್ಮಾಭಿಮಾನವನ್ನು ಕಳೆದುಕೊಳ್ಳದೇ ಇರುವ ನಿರ್ಧಾರವನ್ನು ಪ್ರಕಟಿಸು. ಒಂದು ವೇಳೆ ನಿನ್ನ ಆತ್ಮವಿಶ್ವಾಸ ಕುಂದಿದರೆ ಬೇರೆ ಯಾರೂ ನಿನ್ನ ಸಹಾಯಕ್ಕೆ ಬರಲಾರರು. ನೆನಪಿರಲಿ, ಸ್ಥೈರ್ಯವೇ ನಿಜವಾದ ಶಕ್ತಿ.

ನಿನ್ನ ದೇಹ ಕೇವಲ ಭೋಗದ ವಸ್ತುವಲ್ಲ

ನಿನ್ನ ದೇಹ ಕೇವಲ ಭೋಗದ ವಸ್ತುವಲ್ಲ

ಪತಿ ಪತ್ನಿಯರ ನಡುವೆ ದೈಹಿಕ ಸಂಬಂಧಕ್ಕಾಗಿಯೇ ಮದುವೆ ಎಂಬ ಸಂದರ್ಭ ಬಂದರೆ ಆ ಮದುವೆಯೇ ಬೇಡ. ನಿನ್ನ ದೈಹಿಕ ಅಳತೆಗಳನ್ನು ಮೀರಿ ನಿನ್ನ ಆತ್ಮಾಭಿಮಾನವನ್ನು ಗೌರವಿಸುವ ಮನೆ ನಿನಗೆ ಅಗತ್ಯವಾಗಿದೆ. ನಿಸರ್ಗ ಪುರುಷ ಮತ್ತು ಪ್ರಕೃತಿಯ ಮಿಲನದ ಮೂಲಕವೇ ಸಂತಾನ ಮುಂದುವರೆಯಲು ನಿಯಮ ಮಾಡಿರುವಾಗ ನೀನು ನಿನ್ನ ಪುರುಷನಿಗೆ ಪೂರ್ಣವಾಗಿ ಅರ್ಪಿಸಿಕೊಳ್ಳುವುದು ಅಗತ್ಯವಾಗಿದೆ. ಆದರೆ ಪುರುಷನಿಗೆ ನಿನ್ನ ದೇಹದ ಅಳತೆಗಳಿಗಿಂತಲೂ ನಿನ್ನ ವ್ಯಕ್ತಿತ್ವವೇ ಮುಖ್ಯವಾಗಬೇಕು. ಅಲ್ಲದೇ ನಿನ್ನ ದೈಹಿಕ ಅಗತ್ಯಗಳನ್ನು ಪೂರೈಸುವಂತಹರೂ ಆಗಬೇಕು.

ಮದುವೆ ಎಂದರೆ ಹೊಸ ಜೀವನದ ಹೆಬ್ಬಾಗಿಲಾಗಬೇಕು

ಮದುವೆ ಎಂದರೆ ಹೊಸ ಜೀವನದ ಹೆಬ್ಬಾಗಿಲಾಗಬೇಕು

ಮದುವೆಯಾದ ಪ್ರಥಮ ತಿಂಗಳುಗಳು ನಿನ್ನ ಪಾಲಿಗೆ ಹಲವು ಪರೀಕ್ಷೆಗಳನ್ನು ಒಡ್ಡುತ್ತವೆ. ಇದನ್ನು ಸಮರ್ಥವಾಗಿ ಎದುರಿಸಲು ಕಲಿಯಬೇಕು. ಅದರಲ್ಲೂ ವಿಶೇಷವಾಗಿ ಪಾಲಕರು ಏರ್ಪಡಿಸಿದ ಮದುವೆಯಲ್ಲಿ ಮದುವೆಗೂ ಮುನ್ನ ನಿನ್ನ ಗಂಡನ ಬಗ್ಗೆ ಏನೂ ತಿಳಿದಿಲ್ಲದ ಕಾರಣ ಆತನನ್ನು ಅರಿಯಲು ಕೊಂಚ ಸಮಯ ಬೇಕಾಗುತ್ತದೆ. ಪ್ರತಿ ವ್ಯಕ್ತಿಯಲ್ಲಿಯೂ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳಿರುತ್ತವೆ. ಕಾಲ ಕಳೆದಂತೆ ಪತಿ ಪತ್ನಿಯರಿಬ್ಬರಿಗೂ ಪರಸ್ಪರರ ಒಳ್ಳೆಯ ಮತ್ತು ಕೆಟ್ಟ ಗುಣಗಳ ಅರಿವಾಗುತ್ತದೆ.

ಮದುವೆ ಎಂದರೆ ಹೊಸ ಜೀವನದ ಹೆಬ್ಬಾಗಿಲಾಗಬೇಕು

ಮದುವೆ ಎಂದರೆ ಹೊಸ ಜೀವನದ ಹೆಬ್ಬಾಗಿಲಾಗಬೇಕು

ಈ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿ ಕೆಟ್ಟ ಗುಣಗಳನ್ನು ಬದಲಿಸಿಕೊಳ್ಳುವ ಮತ್ತು ಪತಿ ಪತ್ನಿಯರ ನಡುವೆ ಈ ಗುಣಗಳು ಬಿರುಕು ಬೀರದಂತೆ ತಡೆಯಲು ಇಬ್ಬರೂ ಯತ್ನಿಸಬೇಕು. ಆದಷ್ಟು ಪರಸ್ಪರರ ಗುಣಗಳೊಂದಿಗೆ ಹೊಂದಿಕೊಳ್ಳಲು ಯತ್ನಿಸಬೇಕು. ಉದಾಹರಣೆಗೆ ನಿನ್ನ ಪತಿ ಬೆಳಿಗ್ಗೆ ಬೇಗನೇ ಏಳಲು ಸೋಮಾರಿತನ ಪ್ರಕಟಿಸುತ್ತಿದ್ದಲ್ಲಿ ಅದನ್ನು ಬಲವಂತದಿಂದ ಬದಲಿಸಲು ಖಂಡಿತಾ ಯತ್ನಿಸಬೇಡ, ಬದಲಿಗೆ ಸೂರ್ಯೋದಯದ ಸಂತೋಷವನ್ನು ಹಂಚಿಕೊಳ್ಳಲು ನನ್ನೊಂದಿಗೆ ಬರುವಿರಾ ಎಂದು ನವಿರಾಗಿ ಕೇಳಿ ಮನವೊಲಿಸು.

ನಿನ್ನ ಸುಖಮಯ ಜೀವನಕ್ಕಾಗಿ ಈ ತಪ್ಪುಗಳನ್ನು ಮಾಡದಿರು

ನಿನ್ನ ಸುಖಮಯ ಜೀವನಕ್ಕಾಗಿ ಈ ತಪ್ಪುಗಳನ್ನು ಮಾಡದಿರು

ಬಳಿಕ ಅವರು ಮದುವೆಯಾಗಿ ಸುಖವಾಗಿದ್ದರು - ಮಕ್ಕಳಿಗೆ ಹೇಳುವ ರಾಜರಾಣಿಯರ ಕಥೆ ಹೀಗೆ ಮುಗಿಯುತ್ತದೆ. ಆದರೆ ನಿಜಜೀವನದಲ್ಲಿ ಮದುವೆಯಾದ ಬಳಿಕವೇ ಹಲವು ಸಮಸ್ಯೆಗಳು ಎದುರಾಗುತ್ತವೆ. ತಾಯಿ ತನ್ನ ಜೀವನದಲ್ಲಿ ಹಲವು ಕಹಿ ಅನುಭವಗಳನ್ನು ಗಳಿಸಿರುತ್ತಾಳೆ. ಈ ಅನುಭವಗಳನ್ನು ಮನನ ಮಾಡಿ ಅದರಲ್ಲಿರುವ ತಪ್ಪುಗಳನ್ನು ಗುರುತಿಸಿ ತನ್ನ ಮಗಳು ಆ ತಪ್ಪುಗಳನ್ನು ಎಸಗುವುದರಿಂದ ತಡೆಯುವುದು ತಾಯಿಯ ಪ್ರಮುಖ ಕರ್ತ್ಯವ್ಯವಾಗಿದೆ. ಇದು ಗಂಡನ ಮನೆಯಲ್ಲಿ ನಡೆದುಕೊಳ್ಳುವ ರೀತಿ ಮಾತ್ರವಲ್ಲ, ಆ ಮನೆಯ ಆರ್ಥಿಕ ಮತ್ತು ಇತರ ಪರಿಸ್ಥಿತಿಗಳನ್ನು ಪರಿಗಣಿಸಿ ವಿವರಿಸಬೇಕು. ಉದಾಹರಣೆಗೆ ಬಟ್ಟೆಒಗೆಯುವ ಯಂತ್ರ ಇಲ್ಲದ ಮನೆಯಿಂದ ಮದುವೆಯಾಗಿ ಹೋದ ಮಗಳು ಗಂಡನ ಮನೆಯಲ್ಲಿ ಬಟ್ಟೆ ಒಗೆಯುವ ಯಂತ್ರವನ್ನು ಉಪಯೋಗಿಸುವ ಮೊದಲು ಬಳಸಲು ಬಲ್ಲವರಿಂದ ಕಲಿತ ಬಳಿಕವೇ ಉಪಯೋಗಿಸಲು ತೊಡಗಬೇಕು. ಅರಿವಿಲ್ಲದೇ ತಪ್ಪು ಬಟನ್ ಒತ್ತಿ ಯಂತ್ರ ಹಾಳಾದರೆ ಮಾತುಗಳ ವಿನಿಮಯದಿಂದ ಮನಸ್ಸೂ ಹಾಳಾಗುತ್ತದೆ. ಆದುದರಿಂದ ನೀನು ಗಂಡನ ಮನೆಯಲ್ಲಿ ಎಲ್ಲವನ್ನೂ ಕಲಿಯುವವರೆಗೂ ಯಾವುದೇ ತಪ್ಪುಗಳನ್ನು ಮಾಡದಿರುವಂತೆ ನೋಡಿಕೋ. ಎಂದಿಗೂ ನಿನ್ನ ತೌರುಮನೆಯ ವಿಷಯಗಳನ್ನು ಅಥವಾ ವ್ಯಕ್ತಿಗಳನ್ನು ಗಂಡನ ಮನೆಯಲ್ಲಿ ಹೋಲಿಕೆ ಮಾಡದಿರು. ಇಲ್ಲಿಯ ವಿಷಯ ಅಲ್ಲಿ, ಅಲ್ಲಿಯ ವಿಷಯ ಇಲ್ಲಿ ತಲುಪಿಸದಿರು. ನೆನಪಿರಲಿ, ನಿನ್ನ ಗಂಡನ ಮನೆಯೇ ನಿನಗೆ ಶಾಶ್ವತವಾದ ಮನೆ. ಅಲ್ಲಿ ಸುಖವಾಗಿರು.ಸುಖಮಯ ದಾಂಪತ್ಯಕ್ಕಾಗಿ ನಿಮ್ಮ ಅನುಭವದಿಂದ ಹೆಕ್ಕಿ ತೆಗೆದ ಅಮೂಲ್ಯ ಮಾಹಿತಿಗಳನ್ನು ನಿಮ್ಮ ಮಗಳಿಗೆ ನೀಡುವ ಮೂಲಕ ಆಕೆಯ ಸಂತೋಷಕರ ಜೀವನಕ್ಕಾಗಿ ನೀವು ನೀಡುವ ಅತ್ಯಮೂಲ್ಯ ಕಾಣಿಕೆಯಾಗಿದೆ.

English summary

Marriage Secrets Every Mother Must Tell Her Daughter

What can be a better gift on your wedding than your mother giving some dropping pearls of wisdom on the lap of her daughter who stands on the threshold of holy matrimony? Love or arranged, matches are made in heaven, and if it is mommy dear who is guiding you through, the new phase in your life
X
Desktop Bottom Promotion