For Quick Alerts
ALLOW NOTIFICATIONS  
For Daily Alerts

ಬಾಲ್ಯದ ಗೆಳತಿಯನ್ನು ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳಬಹುದೇ?

By Deepak
|

ಬಹುತೇಕರ ಪ್ರಕಾರ ಬಾಲ್ಯದ ಗೆಳೆಯರನ್ನು ಮದುವೆ ಮಾಡಿಕೊಂಡರೆ, ಅವರ ಜೊತೆ ರೊಮ್ಯಾನ್ಸ್ ನೀರಸವಾಗಿರುತ್ತದೆ ಎಂಬ ಅಭಿಪ್ರಾಯ ನೆಲೆಗೊಂಡಿದೆ. ಏಕೆಂದರೆ ತುಂಬಾ ಕಾಲದಿಂದ ಅವರು ಒಬ್ಬರನ್ನೊಬ್ಬರು ನೋಡಿಕೊಂಡು ಬೆಳೆದಿರುವುದರಿಂದ, ಇದು ಸಹಜವಾಗಿರುತ್ತದೆ.

ಆದರೆ ಸಂಬಂಧವು ಸ್ಥಿರತೆಯನ್ನು ಕೇಳುವುದರಿಂದ, ಬಾಲ್ಯ ಸ್ನೇಹಿತರನ್ನು ಮದುವೆಯಾದಾಗ ಈ ಸ್ಥಿರತೆ ಖಚಿತವಾಗಿ ದೊರೆಯುತ್ತದೆ. ಈ ಸ್ಥಿರತೆಯು ನಿಮ್ಮ ಸಂಬಂಧವನ್ನು ಚಿರಕಾಲ ಕಾಪಾಡುತ್ತದೆ.

ಸರಿ ನೀವು ಯಾವಾಗ ನಿಮ್ಮ ಬಾಲ್ಯದ ಸ್ನೇಹಿತರನ್ನು (ಗೆಳೆಯ/ಗೆಳತಿ) ಮದುವೆಯಾಗಲು ಹೋದಾಗ ಮೊದಲು ನಿಮಗೆ ಗೋಚರವಾಗುವುದು, ಸಂಬಂಧದ ಸ್ಥಿರತೆಯ ವಿಚಾರವೇ, ಏಕೆಂದರೆ ಸಂಬಂಧದಲ್ಲಿ ಹೂಂದಿಕೊಂಡು ಹೋಗುವ ಮತ್ತು ಇಷ್ಟಾನಿಷ್ಟಗಳನ್ನು ಅರಿತುಕೊಂಡು ಹೋಗುವ ವ್ಯಕ್ತಿಯನ್ನೆ ನಾವು ಬಾಳ ಸಂಗಾತಿಯಾಗಿ ಆರಿಸಿಕೊಳ್ಳಲು ಬಯಸುತ್ತೇವೆ.

Is Marrying Your Childhood Friend Good?

ಈಗಾಗಲೆ ನಿಮ್ಮ ನಡುವೆ ಒಂದು ಅವಿನಾಭಾವ ಭಾವನೆ ಬೆಳೆದಿರುವುದರಿಂದ, ಮದುವೆ ಎಂಬ ಶಾಸ್ತ್ರ ಕೇವಲ ಒಂದು ಹಂತದಷ್ಟು ಹಿಂದುಳಿದಿರುತ್ತದೆ. ಬನ್ನಿ ಬಾಲ್ಯದ ಗೆಳೆಯ/ಗೆಳತಿಯನ್ನು ಮದುವೆಯಾಗುವುದರಿಂದ ದೊರೆಯುವ ಪ್ರಯೋಜನಗಳ ಕುರಿತು ತಿಳಿದುಕೊಳ್ಳೋಣ. ನಿಮ್ಮ ಹೊಗಳಿಕೆಯ ಮಾತು ಆಕೆಯ ಕೆನ್ನೆಯನ್ನು ಕೆಂಪಾಗಿಸಬೇಕು!

ಆ ವ್ಯಕ್ತಿಯ ಪೂರ್ವಾಪರ ನಿಮಗೆ ತಿಳಿದಿರುತ್ತದೆ
ನಿಮ್ಮ ಬಾಲ್ಯದ ಗೆಳೆಯರ ಪೂರ್ವಾಪರ ನಿಮಗೆ ತಿಳಿದಿರುವುದು, ಈ ಬಗೆಯ ಮದುವೆಯ ಮೊದಲ ಪ್ರಯೋಜನವಾಗಿರುತ್ತದೆ. ಅವರ ಬಗ್ಗೆ ನಿಮಗೆ ಯಾವುದೇ ಅನುಮಾನಗಳು ಇರುವುದಿಲ್ಲ. ಜೊತೆಗೆ ಅವರ ಇಷ್ಟಾನಿಷ್ಟಗಳು ಮತ್ತು ಅವರ ಅಭಿಪ್ರಾಯಗಳು ಸಹ ನಿಮಗೆ ಬಹುತೇಕ ನಿಖರವಾಗಿ ತಿಳಿದಿರುತ್ತವೆ.

ನೀವಿಬ್ಬರು ಬಹುತೇಕ ಪರಿಸ್ಥಿತಿಗಳನ್ನು ಒಟ್ಟಿಗೆ ಎದುರಿಸಿರುತ್ತೀರಿ
ಬಾಲ್ಯ ಸ್ನೇಹಿತರನ್ನು ಮದುವೆಯಾದರೆ ಇಡೀ ಬಾಳಿನ ಬಹುತೇಕ ಎಲ್ಲಾ ಹಂತಗಳನ್ನು ನೀವು ಒಟ್ಟಿಗೆ ನೋಡಿದ ಪ್ರತ್ಯಕ್ಷ ಸಾಕ್ಷಿಯನ್ನು ಪಡೆಯುತ್ತೀರಿ. ನಿಜಕ್ಕು ಇದು ಉತ್ತಮವಾದ ವಿಚಾರವಲ್ಲವೇ? ನಿಮ್ಮ ಸಂಗಾತಿಯಾಗುವವರು ನಿಮ್ಮ ಬಾಲ್ಯ, ಯೌವನ, ಮತ್ತು ವಯಸ್ಕ ಜೀವನದ ಬಹು ಪಾಲು ಭಾಗವನ್ನು ನಿಮ್ಮೊಂದಿಗೆ ಕಳೆಯುತ್ತಾರೆ. ಈ ಎಲ್ಲಾ ಹಂತಗಳ ಮಧುರ ಕ್ಷಣಗಳಲ್ಲಿ ಅವರು ಭಾಗಿಯಾಗಿರುತ್ತಾರೆ. ಇದು ನಿಮಗೆ ನೆನಪುಗಳನ್ನು ಹಂಚಿಕೊಳ್ಳಲು ಒಬ್ಬ ಉತ್ತಮ ಪಾಲುದಾರರನ್ನು ಒದಗಿಸುತ್ತದೆ. ವೈವಾಹಿಕ ಜೀವನಕ್ಕೆ ಕಾಲಿರಿಸಲು ಸೂಕ್ತವಾದ ವಯಸ್ಸು ಯಾವುದು?

ನಿಮ್ಮಿಬ್ಬರ ಸ್ನೇಹಿತರು ಒಬ್ಬರೇ ಆಗಿರುತ್ತಾರೆ
ನೀವಿಬ್ಬರು ಒಟ್ಟಿಗೆ ಬೆಳೆದಾಗ, ಇಬ್ಬರ ಸ್ನೇಹಿತರು ಒಬ್ಬರೇ ಆಗಿರುವುದು ಸಹಜವಲ್ಲವೇನು. ನಿಮ್ಮ ಸಹಪಾಠಿಗಳು ಮತ್ತು ಓರಗೆಯವರು ನಿಮ್ಮ ಸ್ನೇಹಿತರಾಗಿರುತ್ತಾರೆ. ಇದು ನಿಮಗೆ ಮತ್ತಷ್ಟು ಪ್ರಯೋಜನಕಾರಿಯಾಗಿರುತ್ತದೆ.

ನಿಮ್ಮ ಸಂಗಾತಿಯ ದೌರ್ಬಲ್ಯಗಳು ನಿಮಗೆ ತಿಳಿದಿರುತ್ತವೆ
ಇದು ಯಾವುದೇ ಸಂಬಂಧದ ಅತ್ಯುತ್ತಮವಾದ ಅಂಶವಾಗಿರುತ್ತದೆ. ನಿಮ್ಮ ಸಂಗಾತಿಯ ಶಕ್ತಿಯನ್ನು ನೀವು ತಿಳಿದಿರುವಂತೆ, ಅವರ ದೌರ್ಬಲ್ಯಗಳನ್ನು ಸಹ ತಿಳಿದುಕೊಂಡಿರಬೇಕು. ಆಗ ಈ ಸಂಬಂಧ ಮತ್ತಷ್ಟು ಸದೃಢವಾಗಿ ಬೆಳೆಯುತ್ತದೆ. ನಿಮ್ಮ ಸಂಗಾತಿಯ ದೌರ್ಬಲ್ಯಗಳನ್ನು ನೀವು ತಿಳಿದಾಗ ಅವರನ್ನು ಹೇಗೆ ನಿಭಾಯಿಸಬೇಕೆಂಬ ಜ್ಞಾನ ನಿಮ್ಮದಾಗಿರುತ್ತದೆ. ಇದೇ ವಿಚಾರ ಅವರಿಗು ಸಹ ತಿಳಿದಿರಬೇಕು.

English summary

Is Marrying Your Childhood Friend Good?

There are so many advantages if you are marrying a childhood friend. Of course, there are some people who opine that romance with childhood friend could get boring because of monotony over a long period of time.
X
Desktop Bottom Promotion