For Quick Alerts
ALLOW NOTIFICATIONS  
For Daily Alerts

ಸೋಮಾರಿ ಗಂಡನೊಂದಿಗೆ ಸಂಸಾರ ನಡೆಸುವುದು ಹೇಗಪ್ಪಾ?

By Deepak
|

ಕೆಲವೊಮ್ಮೆ ಗಂಡನ ಸಣ್ಣ ಪುಟ್ಟ ಹವ್ಯಾಸಗಳು ಹೆಂಡತಿಯ ಮನಸ್ಸಿನ ನೆಮ್ಮದಿಯನ್ನು ಕೆಡಿಸಿಬಿಡಬಹುದು. ಅದರಲ್ಲಿಯೂ ಗಂಡನ ಸೋಮಾರಿತನವನ್ನು ನಿಭಾಯಿಸುವುದೇ ದೊಡ್ಡ ಚಿಂತೆಯಾಗಿ ಬಿಡುತ್ತದೆ. ಇವೆಲ್ಲಾ ಸಮಸ್ಯೆಗೆ ಭಾರೀ ತಾಳ್ಮೆಯ ಅಗತ್ಯವಿರುತ್ತದೆ! ಹೌದು, ಸೋಮಾರಿ ಗಂಡಸರ ಜೊತೆಗೆ ಬದುಕಲು ಅತಿಯಾದ ತಾಳ್ಮೆ ಇಲ್ಲವಾದಲ್ಲಿ ಅವರ ಜೊತೆಗೆ ಬಾಳು ಸುಖಕರವಾಗಿರುವುದಿಲ್ಲ. ಹಾಗೆಂದು ಅವರನ್ನು ತೆಗಳುವುದರಿಂದ ಸಹ ನಿಮಗೆ ಯಾವುದೇ ಸಹಾಯವಾಗುವುದಿಲ್ಲ.

ಅವರು ತಮ್ಮ ಸೋಮಾರಿತನಕ್ಕೆ ಯಾವಾಗಲು ಒಂದಲ್ಲ ಒಂದು ನೆಪವನ್ನು ಹುಡುಕುತ್ತಲೆ ಇರುತ್ತಾರೆ. ಹಲವಾರು ಶತಮಾನಗಳಿಂದ, ಕೋಟ್ಯಾಂತರ ಹೆಂಗಸರು ಇಂತಹ ಸೋಮಾರಿ ಗಂಡಂದಿರ ಜೊತೆಗೆ ಸಂಸಾರ ನಡೆಸುತ್ತಲೇ ಇದ್ದಾರೆ. ಒಂದು ಮನೆಯನ್ನು ನಿಭಾಯಿಸಲು ಗಂಡಸರ ಸಹಕಾರವಿಲ್ಲದೆ, ಕೇವಲ ಒಂದು ಹೆಂಗಸಿನ ಕೈಯಿಂದ ಮಾತ್ರ ಎಂದಿಗೂ ಸಾಧ್ಯವಾಗುವುದಿಲ್ಲ.

ಈ ಸಂಕೀರ್ಣವಾದ ಮನೆಯ ನಿರ್ವಹಣೆಯನ್ನು ಹೆಂಗಸರು ಒಬ್ಬರೇ ನಿರ್ವಹಿಸಲು ಹೋದರೆ, ಅವರಿಗೆ ಅದರಿಂದ ಹತಾಶೆ ಮತ್ತು ಅಧಿಕ ಒತ್ತಡ ಕಾಡುವುದು ಸಹಜ. ಸೋಮಾರಿ ಗಂಡಸರಿಂದಾಗಿ ಹಲವಾರು ಮದುವೆಗಳು ಮುರಿದು ಬಿದ್ದಿವೆ. ಹೌದು, ಹೆಂಗಸರು ಸೋಮಾರಿ ಗಂಡಸರನ್ನು ತಿರಸ್ಕರಿಸುತ್ತಾರೆ. ಹಾಗಾದರೆ ಸೋಮಾರಿ ಗಂಡನನ್ನು ಹೇಗೆ ನಿಭಾಯಿಸುವುದು? ಎಂದು ನೀವು ಅಚ್ಚರಿಪಡುತ್ತಿದ್ದೀರಾ?

How To Deal With A Lazy Husband

ಅದಕ್ಕೆ ನಿಮಗೆ ಬೇಕಾಗಿರುವುದು ಕೆಲವು ಅಂಶಗಳು, ಹೌದು, ಸೋಮಾರಿ ಗಂಡನನ್ನು ಸಹ ಪ್ರೇರೇಪಣೆ ನೀಡಿ ಅವನನ್ನು ಮತ್ತೆ ಕೆಲಸ ಕಾರ್ಯಗಳಲ್ಲಿ ತೊಡಗಿಸಲು ನಿಮಗೆ ಕೆಲವು ಅಂಶಗಳು ತಿಳಿದಿರಬೇಕು. ಬನ್ನಿ ಆ ಅಂಶಗಳು ಯಾವುವು ಎಂಬುದನ್ನು ನಿಮಗೆ ತಿಳಿಸುತ್ತೇವೆ. ಮುಂದೆ ಓದಿ...

ಕಿರುಚಾಡ ಬೇಡಿ
ಸೋಮಾರಿ ಗಂಡನಿಂದ ನಿಮಗೆ ಸಿಕ್ಕಾಪಟ್ಟೆ ಹತಾಶೆ ಉಂಟಾಗುವುದು ಸಹಜ. ಅದಕ್ಕಾಗಿ ನಿಮ್ಮ ಗಂಡನ ಜೊತೆಯಲ್ಲಿ ರಂಪಾಟ ಮಾಡಬೇಡಿ. ಇದರಿಂದ ನಿಮ್ಮ ಪರಿಸ್ಥಿತಿ ಮತ್ತಷ್ಟು ಮಿತಿಮೀರುತ್ತದೆಯೇ ಹೊರತು ಸುಧರಿಸುವುದಿಲ್ಲ. ಮದುವೆಗೆ ಮುಂಚೆ ಮುಜುಗರ ತರುವ ಪ್ರಶ್ನೆಯನ್ನು ಕೇಳಬೇಡಿ

ಕ್ಷಮೆಗಳು
ಸೋಮಾರಿ ಗಂಡಂದಿರು ಸಾಮಾನ್ಯವಾಗಿ ತಮ್ಮ ಸೋಮಾರಿತನಕ್ಕೆ ಕ್ಷಮೆಗಳನ್ನು ನೀಡುತ್ತಾ ಇರುತ್ತಾರೆ. ಆದರೆ ಮುಂದಿನ ಬಾರಿಯಿಂದ ಆತ ಕ್ಷಮೆಗಳೊಂದಿಗೆ ನಿಮ್ಮ ಬಳಿ ಬಂದರೆ ಅದನ್ನು ಕೇಳಲು ಹೋಗಬೇಡಿ. ಇದನ್ನು ಕೇಳುವುದರಿಂದ ನಿಮ್ಮ ಸಮಯ ವ್ಯರ್ಥವಾಗುತ್ತದೆ ಅಷ್ಟೇ.

ಆತನಿಗೆ ಪ್ರೇರೇಪಣೆ ನೀಡಿ
ಒಂದು ವೇಳೆ ಆತನಿಗೆ ಕೆಲವೊಂದು ಕೆಲಸಗಳನ್ನು ಮಾಡಲು ಸಾಧ್ಯವಾಗಲಿಲ್ಲವಾದರೆ, ಯಾವ ಕೆಲಸಗಳನ್ನು ಆತ ಮಾಡಬಹುದು ಎಂಬುದನ್ನು ಒಮ್ಮೆ ಆತನನ್ನು ಕೇಳಿ, ಅದರ ಕುರಿತು ಚರ್ಚಿಸಿ. ಆತನಿಗೆ ಆಸಕ್ತಿ ಇರುವ ವಿಚಾರಗಳನ್ನು ಯಾವುದರಲ್ಲಾದರು ತೊಡಗಿಸಿಕೊಳ್ಳಲು ಆತ ಮನಸ್ಸು ಮಾಡಿದರೆ, ಅದಕ್ಕೆ ಅಗತ್ಯವಾದ ಪ್ರೋತ್ಸಾಹವನ್ನು ನೀವು ನೀಡಿ. ಯಾವುದೇ ಕಾರಣಕ್ಕು ಆತನಿಗೆ ಇಷ್ಟವಿಲ್ಲದ ಕೆಲಸವನ್ನು ಮಾಡಲು ಆತನಿಗೆ ತಿಳಿಸಬೇಡಿ. ಅಯ್ಯೋ ದೇವರೆ ನನಗೆ ಎಂತಹ ಗಂಡ ಸಿಕ್ಕಿ ಬಿಟ್ಟ!

ವಿವರಿಸಿ
ಒಂದು ವೇಳೆ ನಿಮಗೆ ಆತನ ಸೋಮಾರಿತನದಿಂದ ನಿಮ್ಮ ಜೀವನದ ಪ್ರಗತಿಯು ಕುಂಠಿತವಾಗುತ್ತದೆ ಎಂದರೆ ಅದನ್ನು ಆತನಿಗೆ ವಿವರಿಸಿ ಹೇಳಿ. ಹಾಗೆಂದು ಅದನ್ನು ಮಾಡದೆ ನೀವು ಮನೆ ಬಿಟ್ಟು ಹೋದರೂ ಪರಿಸ್ಥಿತಿಯು ಸುಧಾರಿಸುವುದಿಲ್ಲ. ಆತ ಹಾಗೆಯೇ ಇರುತ್ತಾನೆ.

English summary

How To Deal With A Lazy Husband

How to deal with a lazy husband? Well, it takes lots of patience! Yes, most of the men are lazy and it really takes patience to live with them.But of course, blaming them won't help. They might just find excuses for their laziness. Now, let us discuss several points about dealing with a lazy husband.
X
Desktop Bottom Promotion