For Quick Alerts
ALLOW NOTIFICATIONS  
For Daily Alerts

ವೈವಾಹಿಕ ಜೀವನದಲ್ಲಿ ಹುಳಿಹಿಂಡುವ ಅಹಂಗೆ ಮುಕ್ತಿ ಹೇಗೆ?

|

"ಅಹಂ" ಎಲ್ಲಾ ಕಡೆಯಲ್ಲಿಯೂ ತನ್ನ ಪ್ರತಾಪವನ್ನು ತೋರಿಸುವ ಕಾಲ ಇದು. ಅದರಲ್ಲೂ ದಾಂಪತ್ಯದಲ್ಲಿ ಈ ಅಹಂ ಗಂಡ ಹೆಂಡತಿಯನ್ನು ವಿಚ್ಛೇಧನದವರೆಗೆ ತೆಗೆದುಕೊಂಡು ಹೋಗಿ ನಿಲ್ಲಿಸುತ್ತದೆ. ಸ್ವಗೌರವ ಮತ್ತು ಅಹಂ ಇವೆರಡರ ನಡುವೆ ಒಂದು ತೆಳುವಾದ ಗೆರೆ ಮಾತ್ರ ಇದೆ. ಸ್ವಗೌರವ ಎಂದರೆ ನಿಮ್ಮ ಮೌಲ್ಯಗಳಿಗೆ ಬೆಲೆ ಕೊಡುವುದು. ಅಹಂ ಎಂದರೆ ಇತರರರಿಗೆ ಅಥವಾ ನಿಮ್ಮ ಸಂಗಾತಿಗೆ ಗೌರವ ನೀಡದಿರುವುದು ಎಂದರ್ಥ. ಯಾವಾಗ ದಾಂಪತ್ಯ ಜೀವನದಲ್ಲಿ ಅಹಂ ಅಡ್ಡ ಬರುತ್ತದೆಯೋ, ಆಗ ಅವರ ಬಾಳು ಹೋಳಾಗುವುದು ನಿಶ್ಚಿತ.

ಆದ್ದರಿಂದ ದಂಪತಿಗಳು ಸ್ವಗೌರವ ಮತ್ತು ಅಹಂ ನಡುವೆ ಒಂದು ಅಂತರವನ್ನು ಕಾಯ್ದುಕೊಳ್ಳುವುದು ಉತ್ತಮ. ಗಂಡ-ಹೆಂಡತಿಯರ ನಡುವೆ ಅಹಂ ಸಮಸ್ಯೆಯು ಉದ್ಭವಿಸಲು ಮುಖ್ಯ ಕಾರಣ ಪರಸ್ಪರರ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳುವ ಭೀತಿ ಅಥವಾ ನಿಮ್ಮ ಸಂಗಾತಿಯನ್ನು ಕಳೆದುಕೊಳ್ಳುವ ಭೀತಿ ಮತ್ತು ಸಂಬಂಧದಲ್ಲಿರುವ ಅಭದ್ರತೆಯಂತಹ ವಿಚಾರಗಳಾಗಿರುತ್ತವೆ. ಸಾಮಾನ್ಯವಾಗಿ ಜನರಿಗೆ ತಮ್ಮ ಅಹಂನಿಂದಾಗಿಯೇ ತಮ್ಮ ಸಂಬಂಧ ಹಾಳಾಗುತ್ತಿದೆ ಎಂದು ಅನಿಸುವುದಿಲ್ಲ.

How To Avoid Ego Clashes In Marriage

ಹಾಗಾದರೆ ಅಹಂನ ಸಮಸ್ಯೆಯನ್ನು ಹೇಗೆ ನಿಭಾಯಿಸುವುದು? ಬೋಲ್ಡ್‌ಸ್ಕೈ ನಿಮಗಾಗಿ ದಾಂಪತ್ಯದಲ್ಲಿ ಅಹಂನಿಂದ ಉಂಟಾಗುವ ಸಮಸ್ಯೆಗಳನ್ನು ನಿಭಾಯಿಸುವುದು ಹೇಗೆ ಎಂಬುದರ ಕುರಿತು ತಿಳಿಸಿಕೊಡುತ್ತಿದೆ. ಬನ್ನಿ ನಮ್ಮ ಸಲಹೆಗಳತ್ತ ಒಮ್ಮೆ ಗಮನಹರಿಸಿ ಸಂಬಂಧವನ್ನು ಕಾಪಾಡಿಕೊಳ್ಳಿ. ಹುಡುಗಿಯರು ಪ್ರೀತಿಸುವ ಹುಡುಗರನ್ನು ಹೇಗೆ ಸುಲಿಗೆ ಮಾಡುತ್ತಾರೆ?

ಹೆಮ್ಮೆಪಡುವುದನ್ನು ಕಡಿಮೆ ಮಾಡಿ
ಹೌದು, ಅಚ್ಚರಿಯಾದರು ಸತ್ಯ. ನೀವು ಹೆಮ್ಮೆ ಪಡಲು ಆರಂಭಿಸಿದರೆ ಅದು ಅಹಂಗೆ ದಾರಿ ಮಾಡಿಕೊಡುತ್ತದೆ. ನನಗೆ ಅದು ಗೊತ್ತು, ಇದು ಗೊತ್ತು, ಹಾಗೆ, ಹೀಗೆ ಎಂಬ ಅಹಂ ನಿಮ್ಮನ್ನು ನಿಮ್ಮ ಸಂಗಾತಿಗಿಂತ ಮೇಲೆ ನಿಲ್ಲಿಸಲು ಆರಂಭಿಸುತ್ತದೆ, ಆಗ ಶುರುವಾಗುತ್ತದೆ ನೋಡಿ ನಿಮ್ಮ ನಡುವೆ ಅಂತರ. ಪ್ರತಿಯೊಬ್ಬರಲ್ಲು ಒಂದು ಧನಾತ್ಮಕ ಮತ್ತು ಋಣಾತ್ಮಕ ಅಂಶಗಳು ಇರುತ್ತವೆ. ನಿಮ್ಮ ಸಂಗಾತಿಯು ಸಹ ನಿಮ್ಮಷ್ಟೇ ಬುದ್ಧಿವಂತ ಮತ್ತು ಜವಾಬ್ದಾರಿಯುತ ವ್ಯಕ್ತಿ ಎಂದು ಭಾವಿಸಿ. ಇಷ್ಟಕ್ಕು ಹೆಮ್ಮೆ ಎನ್ನುವುದು ನಿಮ್ಮ ಸಂಬಂಧದಲ್ಲಿರಬೇಕು, ವೈಯುಕ್ತಿಕವಾಗಬಾರದು.

ಸದಾ ನಿಮ್ಮನ್ನು ನೀವು ಹೊಗಳಿಕೊಳ್ಳಬೇಡಿ
ಸದಾ ನಿಮ್ಮನ್ನು ನೀವು ಇತರರ ಮುಂದೆ ಹೊಗಳಿಕೊಳ್ಳಬೇಡಿ. ಇದರಿಂದ ಇತರರು ನಿಮ್ಮನ್ನು ಮೆಚ್ಚುತ್ತಾರೆ ಎಂದುಕೊಳ್ಳುವುದು ಮೂರ್ಖತನ. ಇದು ನಿಮ್ಮ ಅಹಂ ಅನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮನ್ನು ಅತಿ ಆತ್ಮವಿಶ್ವಾಸಿಯನ್ನಾಗಿಸುತ್ತದೆ. ಕೊನೆಯದಾಗಿ ಇದು ನಿಮ್ಮ ದಾಂಪತ್ಯದಲ್ಲಿ ಅಹಂನ ಸಮಸ್ಯೆಯನ್ನು ತಂದಿಡುತ್ತದೆ. ನಿಮ್ಮ ಸಾಧನೆಗಳ ಅಥವಾ ಯಶಸ್ಸಿನ ಬಗ್ಗೆ ಯಾವಾಗಲು ಕಥೆಗಳನ್ನು ಹೇಳಬೇಡಿ. ಇದರಿಂದ ನಿಮ್ಮ ನಡುವೆ ಸಮಸ್ಯೆ ಬರುತ್ತದೆ. ಹೊಗಳಿಕೆಗು ಇತಿ ಮಿತಿಗಳಿರಲಿ.

ಯಾವಾಗಲು ಅಭಿನಂದಿಸಿ
ನಿಮ್ಮ ಸಂಗಾತಿ ನಿಮ್ಮ ಕುರಿತಾದ ಅತ್ಯುತ್ತಮ ವಿಮರ್ಶಕರು ಎಂಬುದನ್ನು ನೀವು ಮರೆಯಬಾರದು. ಹಾಗೆಂದು ನೀವು ಅವರ ಕುರಿತು ಒಂದು ಕೆಟ್ಟ ಮಾತನ್ನು ಹೇಳಿದರು ಅದು ನಿಮ್ಮ ಸಂಬಂಧವನ್ನು ನುಂಗಿ ಹಾಕುತ್ತದೆ. ಆದ್ದರಿಂದ ನಿಮ್ಮ ಸಂಬಂಧ ಗಟ್ಟಿಯಾಗಬೇಕೆಂದರೆ, ನಿಮ್ಮ ಸಂಗಾತಿಯನ್ನು ಅಭಿನಂದಿಸುವುದನ್ನು ಕಲಿಯಿರಿ. ಆಗಾಗ ಅವರನ್ನು ಅಭಿನಂದಿಸುತ್ತ ಇರಿ. ಇದರಿಂದ ನಿಮ್ಮ ಸಂಬಂಧದಲ್ಲಿ ಆರೋಗ್ಯಕರ ಬೆಳವಣಿಗೆಯಾಗುತ್ತದೆ ಮತ್ತು ಅಹಂ ದೂರ ಸರಿಯುತ್ತದೆ.

ಇಬ್ಬರು ಕೆಲ ಸಮಯ ಜೊತೆಯಾಗಿ ಕಳೆಯಿರಿ
ದಾಂಪತ್ಯದಲ್ಲಿ ಅಹಂನ ಸಮಸ್ಯೆಯನ್ನು ಹೇಗೆ ನಿಯಂತ್ರಿಸುವುದು? ಅದಕ್ಕೆ ಮುಖ್ಯ ಕಾರಣ ನೀವಿಬ್ಬರು ಜೊತೆಯಾಗಿ ಸಮಯವನ್ನು ಕಳೆಯುತ್ತಿಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಗಂಡ ಹೆಂಡತಿ ಇಬ್ಬರೂ ಜೊತೆಯಾಗಿ ಸಮಯವನ್ನು ಕಳೆಯುವುದರಿಂದ, ಹೊರಗೆ ಹೋಗಿ ಸುತ್ತಾಡಿಕೊಂಡು ಬರುವುದರಿಂದ ಪರಸ್ಪರರಲ್ಲಿ ಪ್ರೀತಿ ಮತ್ತು ಅನುರಾಗಗಳು ಹೆಚ್ಚುತ್ತವೆ. ಅಹಂ ನಿಮ್ಮ ಸಂಬಂಧವನ್ನು ಕೊಲ್ಲುವುದಕ್ಕೆ ಅವಕಾಶ ನೀಡದಂತೆ, ನಿಮ್ಮ ಸಂಗಾತಿಯನ್ನು ಪ್ರೀತಿಸಲು ಆರಂಭಿಸಿ. ನಿಮ್ಮ ಪ್ರಥಮ ರಾತ್ರಿಯನ್ನು ಮತ್ತಷ್ಟು ಮಧುರಗೊಳಿಸುವುದು ಹೇಗೆ?

ಇತರರ ದೌರ್ಬಲ್ಯಗಳನ್ನು ಅರ್ಥ ಮಾಡಿಕೊಳ್ಳಿ


ಅಹಂ ಅನ್ನು ನಿಭಾಯಿಸುವುದು ಹೇಗೆ? ಇತರರ ಅಭಿಪ್ರಾಯಗಳಿಗೆ ಬೆಲೆ ನೀಡುವುದರ ಮೂಲಕ ನಿಭಾಯಿಸಬಹುದು. ಇತರರ ದೌರ್ಬಲ್ಯಗಳನ್ನು ಅರಿತುಕೊಳ್ಳುವುದರ ಮೂಲಕ ಇದನ್ನು ನಿಯಂತ್ರಿಸಬಹುದು. ಏಕೆಂದರೆ ದೌರ್ಬಲ್ಯಗಳು ನಮ್ಮ ಜೀವನದ ಅವಿಭಾಜ್ಯ ಅಂಗ. ಈ ದೌರ್ಬಲ್ಯಗಳನ್ನು ಅರಿತುಕೊಂಡು ಅವುಗಳನ್ನು ಸಹಿಸಿಕೊಳ್ಳುವ ಮೂಲಕ ಮತ್ತು ಅದನ್ನು ಸಂಬಂಧದ ಒಂದು ಭಾಗವೆಂದು ಭಾವಿಸುವ ಮೂಲಕ ಅಹಂ ಸಮಸ್ಯೆಯನ್ನು ನಿಭಾಯಿಸಬಹುದು.
English summary

How To Avoid Ego Clashes In Marriage

Ego clashes in marriage is one of the main reasons for divorces. There is a thin line between ego and self-respect. Self-respect means to respect your values, while ego means to show disrespect to others or your partner. Have a look at some tips to solve ego problems between husband and wife.
Story first published: Friday, January 30, 2015, 13:06 [IST]
X
Desktop Bottom Promotion