For Quick Alerts
ALLOW NOTIFICATIONS  
For Daily Alerts

ಮಕ್ಕಳೊಂದಿಗೆ ಬಾಂಧವ್ಯ ಬೆಳೆಸಲು ತಂತ್ರಜ್ಞಾನದ ವಿಧಾನ

By Hemanth P
|

ಇಂದಿನ ದಿನಗಳಲ್ಲಿ ನಗರ ಪ್ರದೇಶದ ಅಪ್ಪಂದಿರು ಮಕ್ಕಳೊಂದಿಗೆ ತಮ್ಮ ಬಾಂಧವ್ಯ ಬೆಳೆಸಿಕೊಳ್ಳಲು ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ಆನ್ ಲೈನ್ ಗೇಮ್ ಆಗಿರುವ ಫಾರ್ಮ್ ವಿಲ್ಲಾದಲ್ಲಿ ಮಗನಿಗೆ ಹೊಡೆಯುವ ತಂದೆ ನೀವಾಗಿದ್ದೀರಾ? ಡಿನ್ನರ್ ಟೇಬಲ್ ನಲ್ಲಿ ಕುಳಿತುಕೊಂಡು ನಿಮ್ಮ ಮಗನೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗಿರುವ ಅತ್ಯಾಧುನಿಕ ಸ್ಮಾರ್ಟ್ ಫೋನ್ ನ ಫೀಚರ್ ಬಗ್ಗೆ ಚರ್ಚಿಸುತ್ತಿದ್ದೀರಾ? ಹಾಗಿದ್ದರೆ ನಿಮಗೆ ಗೀಕ್ ತಂದೆಯ ಬಿರುದು ಸಿಗುತ್ತದೆ. ಗೀಕ್ ಸಾಮಾನ್ಯ ಗ್ರಹಿಕೆ ಭಿನ್ನವಾಗಿ, ಈ ಹೊಸ ಅಲೆಯ ಅಪ್ಪಂದಿರು ಸಂಪರ್ಕಿತ, ಸಮಾಧಾನ ಮತ್ತು ಹೆಚ್ಚು ತೊಡಗಿರುವ ತಂದೆಯಾಗಿರುತ್ತಾರೆ.

ಹೆತ್ತವರಿಂದ ಸಂಪರ್ಕ ಕಳಕೊಳ್ಳುವ ಮಕ್ಕಳು ಶಾಲೆ ಹಾಗೂ ಇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಆದಾಗ್ಯೂ ಸಾಮಾನ್ಯ ಜ್ಞಾನ ಮತ್ತು ಆಸಕ್ತಿ ಪರಿಣಾಮಕಾರಿ ಸಂಬಂಧಕ್ಕೆ ನೆರವಾಗಬಲ್ಲದು. ಇದು ಖಂಡಿತವಾಗಿಯೂ ಹೆಚ್ಚಿನ ಮಾಹಿತಿಗಾಗಿ ಮಗುವನ್ನು ತನ್ನ ತಂತ್ರಜ್ಞಾನ ಒದಗಿಸುವವರೊಂದಿಗೆ ಬಂಧಿಸಲ್ಪಡುವಂತೆ ಪ್ರೋತ್ಸಾಹಿಸುತ್ತದೆ.

Ways to use technology to bond with kids


ಹೊಸ ತಂತ್ರಜ್ಞಾನದ ಬಗ್ಗೆ ಕಲಿಯಲು ಆಸಕ್ತರಾಗಿ

ಪುರುಷರು ಹೊಸ ತಂತ್ರಜ್ಞಾನವನ್ನು ಬೇಗನೆ ಕಲಿಯುವ ಸಾಮರ್ಥ್ಯ ಹೊಂದಿದ್ದರೂ ಹೆಚ್ಚಿನವರಿಗೆ ಇದರಲ್ಲಿ ಆಸಕ್ತಿ ಇರುವುದಿಲ್ಲ. ಆದಾಗ್ಯೂ ನೀವು ಪೋಷಕರಾಗಿ ಹೊಸ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯ.

ಸಾಮಾಜಿಕ ಜಾಲತಾಣಗಳಲ್ಲಿ
ಇಂಗ್ಲೆಂಡಿನಲ್ಲಿ ನಡೆಸಿದ ಅಧ್ಯಯನದ ಪ್ರಕಾರ ತಮ್ಮ ಮಕ್ಕಳೊಂದಿಗೆ ಸಂವಹನ ನಡೆಸಲು ಹತ್ತರಲ್ಲಿ ಏಳು ಮಂದಿ ಪೋಷಕರು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಾರಂತೆ. ಆದರೆ ಭಾರತದಲ್ಲಿ ಈ ಸಂಖ್ಯೆಯು ಒಂದೇ ರೀತಿಯಾಗಿರಲು ಸಾಧ್ಯವಿಲ್ಲ. ಆದರೆ ನಗರ ಪ್ರದೇಶಗಳಲ್ಲಿ ಮಕ್ಕಳು ಬಳಸುವಂತಹ ಜಾಲತಾಣಗಳನ್ನು ಪೋಷಕರು ಕೂಡ ಬಳಸಿಕೊಳ್ಳುತ್ತಿರುವ ಸಂಖ್ಯೆ ಮಾತ್ರ ಹೆಚ್ಚುತ್ತಿದೆ. ಹೆಚ್ಚಿನ ನಗರ ಪ್ರದೇಶಗಳಲ್ಲಿ ಹದಿಹರೆಯದ ಮಕ್ಕಳು ತಮ್ಮ ಪೋಷಕರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹಿತರಾಗಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳೊಂದಿಗೆ ವ್ಯವಹರಿಸುವಾಗ ಎಲ್ಲಿ ಗಡಿಹಾಕಿಕೊಳ್ಳಬೇಕು ಎಂದು ಪೋಷಕರು ತಿಳಿದುಕೊಳ್ಳಬೇಕು.

ತಂತ್ರಜ್ಞಾನ ಪ್ರಿಯ ಅಪ್ಪನಾಗಲು ಸಲಹೆಗಳು

ಹೊಸ ತಂತ್ರಜ್ಞಾನ ಮತ್ತು ಗ್ಯಾಜೆಟ್ ಗಳ ಬಗ್ಗೆ ತಿಳಿಯಲು ನೀವು ವಾರಕ್ಕೆ ಅಥವಾ ತಿಂಗಳಿಗೊಮ್ಮೆ ವೆಬ್ ಸೈಟ್ ಗಳಲ್ಲಿ ಸರ್ಚ್ ಮಾಡುವುದು ತುಂಬಾ ಮುಖ್ಯ.

ನಿಮಗೆ ಯಾವುದೇ ತಾಂತ್ರಿಕ ಶಬ್ದ ಅರ್ಥವಾಗಿಲ್ಲವೆಂದಾರೆ ಆಗ ನಿಮ್ಮ ಮಕ್ಕಳನ್ನು ಕೇಳಲು ಹಿಂಜರಿಯಬೇಡಿ.

ಯಾವುದೇ ವೀಡಿಯೋ ಗೇಮ್ ಅಥವಾ ಮೊಬೈಲ್ ಪೋನ್ ಖರೀದಿಸಲು ನಿಮ್ಮ ಮಗ ಅಥವಾ ಮಗಳು ಹೋಗುವಾಗ ಅವರೊಂದಿಗೆ ಹೋಗಿ.

ನಿಮ್ಮ ಮಕ್ಕಳೊಂದಿಗೆ ಸಂವಹನ ಮಾಡಲು ನೀವು ಸಾಮಾಜಿಕ ಜಾಲತಾಣದೊಂದಿಗೆ ಸೈನ್ ಇನ್ ಆಗಿ. ನಿಮ್ಮ ಮಕ್ಕಳ ಆನ್ ಲೈನ್ ಚಟುವಟಿಕೆ ಬಗ್ಗೆ ತಿಳಿದುಕೊಳ್ಳುವಾಗ ಅದಕ್ಕೊಂದು ಮಿತಿ ಇರಲಿ.

English summary

Ways to use technology to bond with kids

Are you the kind of father who beats his son to an online game of Farmville? Do the dinner table conversations with your son revolve around discussing features of the latest smartphone available in the market? Then you might just have earned the title of a geek dad. Unlike the common perception of a geek, these new wave dads are cooler,
Story first published: Thursday, January 2, 2014, 12:45 [IST]
X
Desktop Bottom Promotion