For Quick Alerts
ALLOW NOTIFICATIONS  
For Daily Alerts

ವೃತ್ತಿಯಲ್ಲಿರುವ ಸಂಗಾತಿಗಳಿಗೆ ಕೆಲವೊಂದು ಸಲಹೆಗಳು

By Hemanth P
|

ಇಂದಿನ ಜಗತ್ತಿನಲ್ಲಿ ಸಂವಹನ ಕಲೆ ಚೆನ್ನಾಗಿ ತಿಳಿದಿದ್ದರೆ ಏನೂ ಮಾಡಬಹುದು. ಅದು ಗೊತ್ತಿಲ್ಲದೆ ಇರುವವರಿಗೆ ಬೆಲೆಯೇ ಇಲ್ಲ ಎನ್ನುವಂತಾಗಿದೆ. ಈ ಕಲೆ ಗೊತ್ತಿಲ್ಲದ ವ್ಯಕ್ತಿ ಸಂಬಂಧದಲ್ಲಿ ವಿಕಲಾಂಗನಾಗುತ್ತಾನೆ. ತಮ್ಮ ಭಾವನೆ ವ್ಯಕ್ತಪಡಿಸಲು ಸಾಧ್ಯವಾಗದ ಮತ್ತು ಇನ್ನೊಬ್ಬರ ಮಾತನ್ನು ಕೇಳಲು ಗೊತ್ತಿಲ್ಲದ ಸಂಗಾತಿಗಳಿಗೆ ಅನ್ಯೋನ್ಯತೆಯಿಂದ ಇರಲು ಸಾಧ್ಯವಿಲ್ಲ.

ನಿಮ್ಮ ಸಂವಹನ ಕಲೆಯನ್ನು ಸುಧಾರಿಸುವ ಮೂಲಕ ನೀವು ಹಾಗೂ ನಿಮ್ಮ ಸಂಗಾತಿ ಪ್ರೀತಿಯ ಗೌರವಪೂರ್ವ ಸಂಬಂಧ ಬೆಳೆಸಬಹುದು ಮತ್ತು ಅದನ್ನು ಮುಂದುವರಿಸಬಹುದು. ಸಂಗಾತಿಗಳಿಬ್ಬರ ವೃತ್ತಿಯಿಂದಾಗಿ ಇಂದಿನ ದಿನಗಳಲ್ಲಿ ಸಂಗಾತಿಗಳಿಬ್ಬರ ಗೌರವಪೂರ್ವ ಸಂಬಂಧಕ್ಕೆ ಹೆಚ್ಚಿನ ಸಮಯವೇ ಸಿಗುವುದಿಲ್ಲ.

ಮುಕ್ತ, ಪ್ರಾಮಾಣಿಕ ಮತ್ತು ಧನಾತ್ಮಕ ಸಂವಹನವು ಆರೋಗ್ಯಕರ ಹಾಗೂ ಸಂತಸದ ಸಂಬಂಧ ಬೆಳೆಸಲು ಪ್ರಮುಖವಾಗಿರುವ ಮೂಲಕ ತತ್ವ. ಅಂತಿಮವಾಗಿ ಸಂಗಾತಿಗಳಿಬ್ಬರ ನಡುವಿನ ಜಗಳ ಮತ್ತು ಭಿನ್ನಾಭಿಪ್ರಾಯವು ಸಂವಹನದ ಕೊರತೆಯಿಂದ ಉಂಟಾಗುತ್ತದೆ.

Ways to improve communication for working couples

ಸಂಗಾತಿಗಳು ಯಾವಾಗಲೂ ವಾಗ್ವಾದ ಮತ್ತು ಜಗಳದಲ್ಲಿ ತೊಡಗಿರುವ ಕಾರಣ ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲ, ಇದರಿಂದ ಯಾರಿಗೂ ಸಂತೃಪ್ತಿಯಿಲ್ಲ. ಯಾರಾದರೂ ಒಬ್ಬರು ಸರಿಯಾಗಿ ಪರಿಸ್ಥಿತಿಯ ಅರ್ಥ ಮಾಡಿಕೊಂಡು ಸಮಸ್ಯೆಯನ್ನು ಧನಾತ್ಮಕ ರೀತಿಯಿಂದ ಬಗೆಹರಿಸಲು ಪ್ರಯತ್ನಿಸುವುದು ತುಂಬಾ ಮುಖ್ಯ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಂಬಂಧಗಳಲ್ಲಿ ವಂಚನೆಯಾದರೆ ನಿಭಾಯಿಸುವುದು ಹೇಗೆ?

ನಿಮ್ಮಿಬ್ಬರ ವೈಯಕ್ತಿಕ ಹಾಗೂ ಗೌರವಪೂರ್ವ ವೃತ್ತಿಯು ನೀವಿಬ್ಬರು ಜತೆಯಾಗಿರುವ ಸಮಯ ತಿನ್ನುತ್ತದೆ. ಇದರ ಮೂಲ ಕಾರಣವೆಂದರೆ ಅದು ಸಂವಹನ. ನೀವಿಬ್ಬರು ಹೆಚ್ಚು ಸಮಯ ದೂರವಿದ್ದಾಗ ನಿಮ್ಮಿಬ್ಬರ ನಡುವಿನ ಸಂವಹನದ ಅಂತರ ಹೆಚ್ಚಾಗಿ ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರಬಹುದು.

ಇಂತಹ ಸಂದರ್ಭದಲ್ಲಿ ಪ್ರೌಢತೆ ತೋರಿಸಿ, ಹದಗೆಟ್ಟಿರುವ ಪರಿಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿ ಅನ್ಯೋನ್ಯ ಹಾಗೂ ಗುಣಮಟ್ಟದ ಸಮಯವನ್ನು ಜತೆಯಾಗಿ ಕಳೆಯುವುದರಿಂದ ಸಂಬಂಧವು ಬಲಗೊಳ್ಳುತ್ತದೆ.

1.ಕೇಳಿ
ಒಳ್ಳೆಯ ಸಂಬಂಧವು ಸಂವಹನ ಮೇಲೆ ನಿಂತಿದ್ದು, ಕೇಳುವುದು ಇದರಲ್ಲಿ ಪ್ರಮುಖ ಅಂಶ. ಸಂಗಾತಿಗಳಿಬ್ಬರು ಮಾತನಾಡಲು ಸಾಧ್ಯವಿಲ್ಲ. ಒಬ್ಬರು ಮಾತನಾಡುವಾಗ ಮತ್ತೊಬ್ಬರು ಕೇಳಬೇಕು. ಆದರೆ ಒಬ್ಬನೇ ವ್ಯಕ್ತಿ ಯಾವಾಗಲೂ ಮಾತನಾಡುತ್ತಿದ್ದರೆ ಆಗ ಅದು ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡಬಹುದು. ನೀವು ಸಂಗಾತಿ ಮಾತನಾಡುವಾಗ ಕೇಳಬೇಕು ಮತ್ತು ಅವರ ಬಗ್ಗೆ ನಿಮಗೆ ಎಷ್ಟು ಕಾಳಜಿ ಇದೆ ಎಂದು ತೋರಿಸಬೇಕು.

2.ವ್ಯಕ್ತಪಡಿಸಿ
ಸಂಗಾತಿಗೆ ತಮ್ಮ ಭಾವನೆ, ಆಲೋಚನೆಗಳನ್ನು ಹೇಳುವುದು ಪ್ರತಿಯೊಬ್ಬರಿಗೆ ಸ್ವಾಭಾವಿಕವಾಗಿ ಬರುವುದಿಲ್ಲ. ಆರಂಭದಲ್ಲಿ ಸ್ವಲ್ಪ ಪ್ರಯತ್ನಸಿದರೆ ಬಳಿಕ ಇದು ಸುಲಭ ಹಾಗೂ ಸ್ವಾಭಾವಿಕವಾಗುತ್ತದೆ. ನೀವು ಕೇಳಿದಷ್ಟು ಮಾತನಾಡುವ ಸಮಯವು ಇದೆ. ಮಾತುಕತೆ ಆರಂಭಿಸಲು ನಿಮ್ಮ ದಿನ ಅಥವಾ ಕಚೇರಿಯಲ್ಲಿ ನಡೆದಿರುವ ಯಾವುದಾದರೂ ಘಟನೆ ಇತ್ಯಾದಿ ಬಗ್ಗೆ ಮಾತನಾಡಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪುರುಷರು ಮಹಿಳೆಯರಲ್ಲಿ ಹೇಳಲು ಹಿಂಜರಿಯುವ 10 ವಿಷಯಗಳು

3.ಪ್ರಾಮಾಣಿಕತೆ
ನಿಮ್ಮ ಭಾವನೆ ಹಾಗೂ ಆಲೋಚನೆಗಳನ್ನು ವ್ಯಕ್ತಪಡಿಸುವಲ್ಲಿ ಯಾವುದೇ ಪ್ರಾಮಾಣಿಕತೆ ಇಲ್ಲವೆಂದಾದರೆ ಆಗ ಸಂಗಾತಿ ಜತೆಗಿನ ನಿಮ್ಮ ಸಂವಹನಕ್ಕೆ ಯಾವುದೇ ರೀತಿಯ ಮೌಲ್ಯ ಅಥವಾ ಪ್ರಾಮುಖ್ಯತೆ ಇರುವುದಿಲ್ಲ. ನೀವು ಪ್ರಾಮಾಣಿಕವಾಗಿರಬೇಕು ಮತ್ತು ಎಷ್ಟು ಕಹಿಯಾಗಿದ್ದರೂ ಸತ್ಯವನ್ನೇ ಹೇಳಬೇಕು. ಸಂಬಂಧದಲ್ಲಿ ಯಾವುದೇ ಗೌಪ್ಯತೆ ಮತ್ತು ಸುಳ್ಳು ಇಲ್ಲವೆಂದಾದರೆ ಆಗ ಎಲ್ಲವೂ ಸರಳ ಮತ್ತು ಯಾವುದೇ ತೊಡಕಿಲ್ಲದೆ ನಡೆಯುತ್ತದೆ. ಕೊನೆಯದಾಗಿ ಈ ಮೊದಲು ನಾವು ಚರ್ಚಿಸಿದಂತೆ ನಿಮಗೆ ಅನಿರೀಕ್ಷಿತ ಸಪ್ರೈಸ್ ಗಳು ಬೇಕಾಗುತ್ತದೆ.

4.ಗಮನಕೇಂದ್ರೀಕರಿಸಿ
ಕೆಲವೊಮ್ಮೆ ಸಣ್ಣ ಚರ್ಚೆ ದೊಡ್ಡ ಮಟ್ಟಕ್ಕೆ ಹೋಗಿ ಅದು ಜಗಳಕ್ಕೆ ಕಾರಣವಾಗಬಹುದು. ಪ್ರತಿಯೊಬ್ಬರು ಸಂಗಾತಿಯು ಮಾತನಾಡುವಾಗ ಅದನ್ನು ಹೆಚ್ಚು ಗಮನ ಕೇಂದ್ರೀಕರಿಸಿ ಕೇಳಬೇಕಾಗುತ್ತದೆ. ಇದು ನಿಮಗೆ ಬೋರ್ ಅಥವಾ ನಿಮ್ಮ ಅಭಿರುಚಿಗೆ ವಿರುದ್ಧವಾಗಿದ್ದರೆ ಆಗ ನೀವು ಸಂಗಾತಿಗೆ ಬೇರೆ ವಿಷಯದ ಬಗ್ಗೆ ಮಾತನಾಡುವಂತೆ ವಿನಮ್ರತೆಯಿಂದ ಮನವಿ ಮಾಡಬಹುದು.

5.ಗೌರವಿಸಿ ಹಾಗೂ ಪ್ರೋತ್ಸಾಹಿಸಿ
ಗೌರವದ ಕೊರತೆಯಿಂದಾಗಿ ಸಂಬಂಧದಲ್ಲಿ ಹೆಚ್ಚಿನ ವಾಗ್ವಾದ ಮತ್ತು ಜಗಳಗಳಾಗುತ್ತದೆ. ಕೆಲವೊಮ್ಮೆ ಮಂದಗತಿಯ ವೃತ್ತಿಜೀವನದಿಂದಾಗಿ ಹೆದರಿಕೆ ಹಾಗೂ ಕೀಳು ಭಾವನೆಯಾಗುತ್ತದೆ.

English summary

Ways to improve communication for working couples

Most people have never learned how to communicate. Without this skill, a person is handicapped in an intimate relationship. Without being able to express themselves and listen to another,
X
Desktop Bottom Promotion