For Quick Alerts
ALLOW NOTIFICATIONS  
For Daily Alerts

ಸಂಗಾತಿಯೊಂದಿಗೆ ಅಪ್ಪಿ ತಪ್ಪಿಯೂ ಇಂತಹ ವಿಷಯಗಳನ್ನು ಚರ್ಚಿಸಬೇಡಿ!

By Super
|

ಬಹುಶಃ ನೀವಂದುಕೊಂಡಿರಬಹುದು, ನಿಮ್ಮ ಸಂಬಂಧಗಳು ಎಷ್ಟು ಸುಂದರವಾಗಿವೆ ಎಂದರೆ ನೀವು ನಿಮ್ಮ ಸಂಗಾತಿಯೊಂದಿಗೆ ಏನನ್ನಾದರೂ ಹಂಚಿಕೊಳ್ಳಬಹುದು ನಿಮಗೆ ತೋಚಿದ್ದನ್ನು ಹೇಳಬಹುದು,ಹೇಳಬೇಕು ಎನಿಸಿದ್ದನ್ನು ಮುಚ್ಚು ಮರೆಯಿಲ್ಲದೆ ಹೇಳಬಹುದು ಎಂದು. ಆದರೂ ಕೂಡ ಕೆಲವು ಸಂಗತಿಗಳಿವೆ ಅವುಗಳನ್ನು ನಿಮ್ಮ ಸಂಗಾತಿ ಸುಲಭವಾಗಿ ತೆಗೆದುಕೊಳ್ಳದೇ ಇರಬಹುದು ಇದರಿಂದ ನಿಮ್ಮಿಬ್ಬರ ನಡುವೆ ತೊಂದರೆಗಳು ಅಥವಾ ಭಿನ್ನಾಭಿಪ್ರಾಯಗಳು ಪ್ರಾರಂಭವಾಗಬಹುದು. ನೀವು ನಿಮ್ಮ ಸಂಗಾತಿಯೊಂದಿಗೆ ಮಾತನಾಡಬಾರದ ಕೆಲವು ವಿಷಯಗಳ ಬಗ್ಗೆ ಈ ಕೆಳಗೆ ಮಾಹಿತಿ ನೀಡಲಾಗಿದೆ.

ತಾಯಿಯ ಬಗ್ಗೆ ದೂರು: ತನ್ನ ಸಂಗಾತಿಯ ತಾಯಿಯೊಂದಿಗೆ ಹೊಂದಿಕೊಂಡು ಹೋಗುವುದು ಕಷ್ಟವಾಗುವುದು ಸಹಜ ಆದರೆ ಅವರ ಬಗ್ಗೆ ದೂರನ್ನು ಗಂಡನೊಂದಿಗೆ ಹೇಳಬೇಡಿ. ಇದರಿಂದ ಸಂಸಾರದಲ್ಲಿ ಬಿರುಕು ಉಂಟಾಗಬಹುದು.

Things you shouldn't talk to him about

ಆತನ ಸ್ನೇಹಿತರು: ನಿಮ್ಮ ಸಂಗಾತಿಯ ಒಬ್ಬ ಸ್ನೇಹಿತನ ಬಗ್ಗೆ ನಿಮಗೆ ಒಳ್ಳೆಯ ಅಭಿಪ್ರಾಯವಿರಬಹುದು ಅಥವಾ ಆತ ಸುಂದರವಾಗಿದ್ದಾನೆ ಎನಿಸಬಹುದು ಆದರೆ ಅದನ್ನು ಗಂಡನೊಂದಿಗೆ ಹೇಳಬೇಡಿ. ಇದನ್ನು ಆತ ಬೇರೆ ರೀತಿ ತೆಗೆದುಕೊಂಡು ಸಮಸ್ಯೆಗಳು ಉಂಟಾಗಬಹುದು.

ಆತನ ಕನಸುಗಳ ಬಗ್ಗೆ ಅನುಮಾನ ವ್ಯಕ್ತಪಡಿಸುವುದು: ಸಂಗಾತಿಯಾಗಿರುವುದು ಎಂದರೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ಮತ್ತು ಅವಕಾಶ ಸಿಕ್ಕಾಗಲೆಲ್ಲ ಒಬ್ಬರಿಗೊಬ್ಬರು ಬೆಂಬಲ ನೀಡುವುದು.ಆತನ ಕನಸುಗಳಿಗೆ ಬೆಂಬಲ ನೀಡಲು ಸಾಧ್ಯವಾಗದಿದ್ದರೂ ಕೂಡ ಆತನನ್ನು ಹೀಯಾಳಿಸಿ ನಿರಾಶೆಗೊಳಿಸಬೇಡಿ. ಅಪ್ಪಿ ತಪ್ಪಿಯೂ ಹೆಂಡತಿ ಬಳಿ ಆಡಬಾರದ ಮಾತುಗಳಿವು!

ಬಿಟ್ಟುಬಿಡುತ್ತೇನೆ ಎನ್ನುವುದು: ಗಂಡ ಹೆಂಡತಿ ಮಧ್ಯೆ ಜಗಳಗಳು ಸರ್ವೇ ಸಾಮಾನ್ಯ. ಆದರೆ ಪ್ರತಿ ಬಾರಿ ಜಗಳವಾಡಿದಾಗ ನಾನು ನಿನ್ನನ್ನು ಬಿಟ್ಟು ಹೋಗುತ್ತೇನೆ ಎಂದು ಹೇಳಬೇಡಿ. ಇದು ನಿಜಕ್ಕೂ ಸಮಸ್ಯೆ ತರಬಹುದು.

ನಿಮ್ಮ ಸಂಬಳ: ಬಹುಶಃ ನೀವಿಬ್ಬರೂ ಸಂಬಳ ಗಳಿಸುತ್ತಿರಬಹುದು. ಆದರೆ ಇದರ ಬಗ್ಗೆ ಮಾತನಾಡುವಾಗ ಎಚ್ಚರದಿಂದಿರಿ ಇಲ್ಲದಿದ್ದಲ್ಲಿ ಇದೇ ವಿಷಯ ಸಮಸ್ಯೆಗೆ ಕಾರಣವಾಗಬಹುದು.

English summary

Things you shouldn't talk to him about

You may think that you all fit perfectly and you don't need to avoid or accept stereotypical norms in your relationship, but there are a few things you should avoid saying.Because these things often hurt your good partner and may lead to problems between both of you. Here are that things you should avoid to talk about.
X
Desktop Bottom Promotion