For Quick Alerts
ALLOW NOTIFICATIONS  
For Daily Alerts

ಮನ ಮೆಚ್ಚಿದವರಲ್ಲಿ ನೀವು ಬಯಸಬೇಕಾದ ಗುಣಗಳಿವು

|

ಇಂದು ಬಹುತೇಕ ಭಾರತೀಯರು ಹಿರಿಯರು ನೋಡಿ ವ್ಯವಸ್ಥೆ ಮಾಡಿದ ಮದುವೆಗಳನ್ನೇ ಮಾಡಿಕೊಳ್ಳುತ್ತಿದ್ದಾರೆ. ಕನ್ಯೆಗಾಗಲಿ ಅಥವಾ ಹುಡುಗನಿಗಾಗಲಿ ವರ ಮತ್ತು ವಧುವನ್ನು ಹುಡುಕುವಾಗ ಪೋಷಕರು ಹೇಳುವುದು ಒಂದೇ ವಾಕ್ಯ " ವಿದ್ಯಾವಂತ, ಸ್ವಂತಂತ್ರ, ನೋಡಲು ಸುಂದರವಾಗಿರುವ, ಗುಣವಂತ ಮತ್ತು ಪ್ರಬುದ್ಧಳಾದ/ನಾದ ವರ ಅಥವಾ ವಧು ಬೇಕು ಎಂದು. ಇದರ ಅರ್ಥ ಅವರು ಬಯಸುವ ವಧು ಮತ್ತು ವರ ತಮ್ಮ ಮಗ/ಮಗಳಿಗೆ ಆದರ್ಶ ಪ್ರಾಯವಾಗಿರಬೇಕು ಎಂದರ್ಥ. ಈ ಮಾನದಂಡವನ್ನು ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ.

ಮದುವೆಯೆಂಬುದು ಸರಳವಾದ ಅಂಶವಲ್ಲ. ಅದಕ್ಕಾಗಿ ನಿಮ್ಮ ಸಂಗಾತಿಯು ಜೀವನವನ್ನು ಹಗುರವಾಗಿ ತೆಗೆದುಕೊಳ್ಳುವ ಗುಣವನ್ನು ಹೊಂದಿರಬಾರದು ಎಂಬುದನ್ನು ಮೊದಲು ಖಾತ್ರಿ ಪಡಿಸಿಕೊಳ್ಳಬೇಕಾದುದು ಮುಖ್ಯ. ಆತ/ಆಕೆಯಲ್ಲಿರುವ ಪ್ರಬುದ್ಧತೆಯು ಆತನು ನೀವು ಮುಂದೆ ಮದುವೆಯಾಗಿ ಬಾಳು ಸಾಗಿಸಲು ಯೋಗ್ಯನಾದ ಸಂಗಾತಿಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ. ಅದಕ್ಕಾಗಿ ಇಲ್ಲಿ ನಾವು ಕೆಲವೊಂದು ಆದರ್ಶ ಸಂಗಾತಿಯ ಲಕ್ಷಣಗಳನ್ನು ನೀಡಿದ್ದೇವೆ ಓದಿಕೊಳ್ಳಿ. ನಿಮ್ಮ ಗಂಡನಿಗಾಗಿ ಕೆಲವು ಮುದ್ದು ಹೆಸರುಗಳು

ಪ್ರಾಮಾಣಿಕತೆ

ಪ್ರಾಮಾಣಿಕತೆ

"ಸತ್ಯ ಮತ್ತು ಪ್ರಾಮಾಣಿಕತೆಯನ್ನು ಹೊಂದಿರುವವನಿಗೆ ಹೇಳಬೇಕಾದುದು ಏನೂ ಇಲ್ಲ" ಎಂದು ಹೇಳುತ್ತಾರೆ ಕನ್‍ಫ್ಯೂಶಿಯಸ್, ಹಾಗೆಯೇ ಸಂಬಂಧದಲ್ಲಿ ಪ್ರಾಮಾಣಿಕತೆಯನ್ನು ಹೊಂದಿರುವ ನಿಮ್ಮ ಸಂಗಾತಿಯ ಬಗ್ಗೆ ಇನ್ನೇನು ತಾನೇ ಹೇಳಲಾದೀತು. ಸಂಬಂಧದ ಬುನಾದಿಯೇ ಪ್ರಾಮಾಣಿಕತೆ. ನಿಮ್ಮ ಸಂಬಂಧವನ್ನು ಶಾಶ್ವತಗೊಳಿಸುವ ಮೊದಲು ಆತ ಅಥವಾ ಆಕೆಯು ನಿಮ್ಮೆಡೆಗೆ ಪ್ರಾಮಾಣಿಕತೆಯನ್ನು ಹೊಂದಿದ್ದಾರೆಯೇ ಎಂಬುದನ್ನು ಅರಿತುಕೊಳ್ಳಿ.

ಸಾಧನೆಯನ್ನು ಮಾಡುವ ಹಂಬಲ

ಸಾಧನೆಯನ್ನು ಮಾಡುವ ಹಂಬಲ

ನಿಮ್ಮ ಸಂಗಾತಿಯಲ್ಲಿ ಏನಾದರು ಸಾಧಿಸುವ ಹಂಬಲ ಇರಬೇಕು. ಏನಾದರು ಗುರಿಯನ್ನು ನಿರ್ಧರಿಸಿಕೊಂಡು, ಆ ಗುರಿಯನ್ನು ತಲುಪುವ ಛಲ ಮತ್ತು ತುಡಿತವನ್ನು ಹೊಂದಿರುವ ಗುಣ ನಿಮ್ಮ ಸಂಗಾತಿಯಲ್ಲಿರಬೇಕು. ಅಂತಹ ಕನಸನ್ನು ಹೊಂದಿರುವ ಸಂಗಾತಿಯ ಬಾಳ ಸಂಗಾತಿ ನೀವು ಆಗಬೇಕು.

ಹಾಸ್ಯ ಪ್ರವೃತ್ತಿ

ಹಾಸ್ಯ ಪ್ರವೃತ್ತಿ

ನೀವು ಸುಮ್ಮನೆ ಬೇಸರಗೊಂಡು ಕುಳಿತಾಗ ನಿಮ್ಮನ್ನು ನಕ್ಕುನಗಿಸುವ ಗುಣವನ್ನು ತನ್ನಲ್ಲಿ ಹೊಂದಿರುವ ಮತ್ತು ನಿಮ್ಮಲ್ಲಿ ಮತ್ತೆ ಮಂದಹಾಸವನ್ನು ತುಂಬುವ ವ್ಯಕ್ತಿಯಾಗಿರಬೇಕು ನಿಮ್ಮ ಸಂಗಾತಿ. ಯಾವುದೇ ಬೇಸರವನ್ನು ಮರೆಸುವಂತಹ ಮುಗುಳು ನಗೆ ಮತ್ತು ಮಂದಹಾಸ ನಿಮ್ಮ ಸಂಗಾತಿಯ ಮುಖದಲ್ಲಿ ಸದಾ ನಗುತ್ತಿರಬೇಕು. ಅಂತಹ ಶಕ್ತಿಯನ್ನು ಹೊಂದಿರುವ ಸಂಗಾತಿ ಜೀವನದ ಎಂತಹ ಕಷ್ಟದಲ್ಲಿಯೂ ನಿಮ್ಮನ್ನು ಮುಂದೆ ಸಾಗಲು ನೆರವಾಗಬಲ್ಲರು.

ನೇರ ನಡೆ- ನುಡಿ

ನೇರ ನಡೆ- ನುಡಿ

ನಿಮ್ಮ ಸಂಗಾತಿಯಲ್ಲಿ ನೇರ ನಡೆ- ನುಡಿಯನ್ನು ಹೊಂದಿರುವ ಗುಣವಿದೆಯೇ ನೋಡಿ. ಏಕೆಂದರೆ ಈ ನೇರ ನಡೆ- ನುಡಿಯನ್ನು ಹೊಂದಿರುವ ವ್ಯಕ್ತಿಯು ಸಂಬಂಧವನ್ನು ಜೀವನ ಪರ್ಯಂತ ಕಾಪಾಡಿಕೊಂಡು ಹೋಗುವ ಗುಣವನ್ನು ಹೊಂದಿರುತ್ತಾನೆ. ನೀವು ಡೇಟಿಂಗ್ ಮಾಡುವಾಗ ಈ ಗುಣವನ್ನು ಸುಲಭವಾಗಿ ಗ್ರಹಿಸಬಹುದು. ಇದರಿಂದ ನಿಮ್ಮ ಸಂಗಾತಿಯ ಬೇಕು, ಬೇಡಗಳ ಪರಿಚಯ ನಿಮಗೆ ಸಂಪೂರ್ಣವಾಗಿ ಸಿಗುತ್ತದೆ.

ತಾಳ್ಮೆ

ತಾಳ್ಮೆ

"ತಾಳಿದವನು ಬಾಳಿಯಾನು" ಎಂಬ ಗಾದೆಯೇ ಇದೆ. ಯಾರ ಬಳಿ ತಾಳ್ಮೆ ಇರುತ್ತದೆಯೋ, ಅವರ ಬಳಿಗೆ ಜೀವನದ ಸುಖ ಸಂತೋಷಗಳೆಲ್ಲವು ಬರುತ್ತದೆ. ನಿಮ್ಮ ಸಂಗಾತಿಯಲ್ಲಿ ಈ ಗುಣವಿದ್ದಲ್ಲಿ, ಆತ/ಆಕೆ ನಿಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಅವರ ಜೊತೆಯಲ್ಲಿ ನೀವು ಕಾಲ ಕಳೆಯಲು ಆಸೆ ಪಡುತ್ತೀರಿ. ಅಂತಹವರು ನಿಮ್ಮ ಸಂಗಾತಿಯಾಗಿದ್ದರೆ ನೀವೇ ಅದೃಷ್ಟಶಾಲಿಗಳು.

English summary

Qualities You Need To Find In A Partner Before You Commit To Them

Finding your soul mate is basically finding that one person (arguably one of several) who has the right traits – traits that are relevant to you as ... here we looking Qualities You Need To Find In A Partner Before You Commit To Them have a look
Story first published: Thursday, November 27, 2014, 17:59 [IST]
X
Desktop Bottom Promotion