For Quick Alerts
ALLOW NOTIFICATIONS  
For Daily Alerts

ಮಗಳಿಗೆ ಹೇಳಿಕೊಡಬೇಕಾದ ಪ್ರೇಮ ಪಾಠಗಳು ಯಾವುದು ಗೊತ್ತೇ?

By Hemanth P
|

ಮಕ್ಕಳನ್ನು ಪೋಷಿಸುವುದು ತುಂಬಾ ಕಠಿಣ ಕೆಲಸ, ಅದರಲ್ಲೂ ಬೆಳೆಯುತ್ತಿರುವ ಮಗಳಿದ್ದರಂತೂ ಅದು ಸವಾಲಿನ ಕೆಲಸ. ಮಗಳಿಗೆ ಹೊಸ ವಿಷಯಗಳನ್ನು ಕಲಿಯುವ ಮತ್ತು ಕಲಿಯದಿರುವ ಸಮಯವಿದು. ದೂರ ಮತ್ತು ಅತ್ಯಂತ ಕಠಿಣ ವಿಷಯಗಳನ್ನು ಆಕೆಗೆ ಹೇಳಿ ಮತ್ತು ಜೀವನದ ಪ್ರತಿಯೊಂದು ಅಧ್ಯಯದೊಂದಿಗೆ ಬೆಳೆಯುವಂತೆ ಮಾಡಿ. ಈ ಹಂತದಲ್ಲೇ ಆಕೆ ಪ್ರೀತಿಗೆ ಸಿಲುಕುತ್ತಾಳೆ. ವಿಭಿನ್ನ ಭಾವನೆಗಳೊಂದಿಗೆ ಹೊಸ ಜನರನ್ನು ಪರಿಚಯಿಸಿ ಮತ್ತು ಆಕೆಯ ಭಾವನೆಯೊಂದಿಗೆ ಹೋರಾಟ ಮಾಡಿ.

ನಿಮ್ಮವರಿಗೆ ನಿಮ್ಮ ಮನದ ಭಾವನೆಗಳನ್ನು ತಿಳಿಸುವ 10 ವಿಧಾನಗಳು

ಆಕೆ ತನ್ನ ಪ್ರೀತಿ ಹುಡುಕುವ ಹಾದಿಯಲ್ಲಿ ತಾಯಿಯಾಗಿ ನೀವು ಆಕೆಗೆ ನೆರವಾಗಬಹುದು. ಆಕೆಯ ಪ್ರೀತಿಯೊಂದಿಗೆ ನೀವು ಯಾವಾಗಲೂ ಇರಲು ಸಾಧ್ಯವಿಲ್ಲ. ಆದರೆ ಈ ಹಾದಿಯಲ್ಲಿ ಆಕೆಗೆ ಮಾರ್ಗದರ್ಶನ ನೀಡಬಹುದು. ಆಕೆಯ ಜೀವನಕ್ಕೆ ಅರ್ಥವಿಲ್ಲದ ವ್ಯಕ್ತಿಯನ್ನು ಮಗಳು ಪ್ರೀತಿಸುವುದನ್ನು ನೀವು ಇಷ್ಟಪಡುವುದಿಲ್ಲ. ನೀವು ಆಕೆಯನ್ನು ಶ್ರೇಷ್ಠ ವ್ಯಕ್ತಿಯಾಗಿ ಬೆಳೆಸಿದ್ದೀರಿ ಮತ್ತು ತನ್ನ ಆತ್ಮಸಾಕ್ಷಿಗೆ ಗೌರವ ಸಲ್ಲಿಸುವುದನ್ನು ಕಲಿಸಿಕೊಟ್ಟಿದ್ದೀರಿ. ಆಕೆಯನ್ನು ಬದಲಾಯಿಸುವುದು ಅಥವಾ ಮೌಲ್ಯಗಳನ್ನು ಬದಲಾಯಿಸುವುದನ್ನು ನೀವು ಬಯಸುವುದಿಲ್ಲ.

ಜೋಡಿಗಳು ಪರಸ್ಪರ ಹೇಳಿಕೊಳ್ಳುವ 15 ಸುಳ್ಳುಗಳ ಬಗ್ಗೆ ಗೊತ್ತೇ?

ಆಕೆಯ ಭಾವನೆಗಳೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿ ನೀವಾಗಿರುತ್ತೀರಿ ಮತ್ತು ಸರಿಯಾದ ಮಾರ್ಗದಲ್ಲಿ ಆಕೆಗೆ ಮಾರ್ಗದರ್ಶನ ನೀಡಿ. ಆಕೆಗೆ ಮಾರ್ಗದರ್ಶನ ನೀಡುವ ಮೊದಲು ನೀವು ಪ್ರೇಮಪಾಠದ ಕೆಲವೊಂದು ಮುಖ್ಯ ಅಂಶಗಳನ್ನು ಅರ್ಥಮಾಡಿಕೊಳ್ಳಬೇಕು.

ಗೌರವ ನೀಡುವುದನ್ನು ಕಲಿಸಿ

ಗೌರವ ನೀಡುವುದನ್ನು ಕಲಿಸಿ

ಇತರರಿಗೆ ಗೌರವ ಸೂಚಿಸುವುದು ಅಥವಾ ಕಾಳಜಿ ವಹಿಸುವುದು ಮಾತ್ರವಲ್ಲ, ಇದರಲ್ಲಿ ಸ್ವಯಂ ಕೂಡ ಒಳಗೊಂಡಿರುತ್ತದೆ. ಸ್ವಯಂ ಆಕೆಯನ್ನು ಪ್ರೀತಿಸಲು ನಿಮ್ಮ ಮಗಳಿಗೆ ಕಲಿಸಿ. ಸ್ವಯಂ ಆಕೆ ತನ್ನನ್ನು ಪ್ರೀತಿಸಿದರೆ ಆಗ ಇತರರು ಕೂಡ ಆಕೆಯನ್ನು ಪ್ರೀತಿಸಬಹುದು. ತನ್ನ ಅಗತ್ಯತೆ ಗೌರವಿಸಿ, ಸ್ವಯಂ ಪ್ರೀತಿಸಲು ಆಕೆಗೆ ಕಲಿಸಿ.

ನೀವು ಏನೋ ಅದೇ

ನೀವು ಏನೋ ಅದೇ

ನಿನ್ನಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಕೊಳ್ಳಬಾರದು ಎಂದು ಮಗಳಿಗೆ ತಾಯಿಯಾದವಳು ಕಲಿಸಬೇಕು. ಆಕೆ ಬದಲಾಗಬೇಕೆಂದು ಬೇಡಿಕೆಯನ್ನಿಡುವ ಅಥವಾ ಪ್ರೀತಿಗೆ ಬೆಲೆಯುಳ್ಳವಳು ಅಲ್ಲವೆಂದು ಪರಿಗಣಿಸುವವರು ಆಕೆಯ ಜೀವನದಲ್ಲಿ ಖಂಡಿತವಾಗಿಯೂ ಸ್ಥಾನ ಪಡೆಯಲು ಅರ್ಹರಲ್ಲ.

ಸಂತೋಷ ಮುಖ್ಯ

ಸಂತೋಷ ಮುಖ್ಯ

ಸೆಕ್ಸ್ ಬಗ್ಗೆ ಯಾವ ತಾಯಿ ಕೂಡ ತನ್ನ ಮಗಳ ಜತೆ ಚರ್ಚಿಸಲು ಇಷ್ಟಪಡುವುದಿಲ್ಲ. ಆದರೆ ವಯಸ್ಸಿಗೆ ಅನುಗುಣವಾಗಿ ದೇಹದಲ್ಲಿ ಆಗುವ ಬದಲಾವಣೆಯ ಅನುಭವ, ಆಕೆಗೆ ಬೇಕಾಗುವ ಸಂತೋಷ ಮತ್ತು ಸೆಕ್ಸ್ ನ್ನು ಧನಾತ್ಮಕವಾಗಿ ತೆಗೆದುಕೊಳ್ಳುವುದರಿಂದ ಆಕೆ ಪ್ರೌಢಳಾದಾಗ ಸಂತೋಷ ಪಡೆಯಬಹುದು ಎಂದು ಹೇಳಬಹುದು.

ಏನು ಪಡೆಯಲು ಬಯಸಿದ್ದೀರೆಂದು ತಿಳಿಯಿರಿ

ಏನು ಪಡೆಯಲು ಬಯಸಿದ್ದೀರೆಂದು ತಿಳಿಯಿರಿ

ತನ್ನ ಬಗ್ಗೆ ಬಲಿಷ್ಠ ಭಾವನೆ ಬೆಳೆಸಲು ಆಕೆಗೆ ಕಲಿಸಿ. ಕೆಲವೊಂದು ಅಂಶಗಳು ಕಳಕೊಂಡಿವೆ ಅಥವಾ ತನ್ನ ಮಾರ್ಗದಲ್ಲಿ ಸಾಗುತ್ತಿಲ್ಲ ಎಂದು ಆಕೆ ಭಾವಿಸುವಂತಹ ಸಣ್ಣ ವಿಷಯಗಳ ಬಗ್ಗೆ ಆಕೆ ಅರ್ಥ ಮಾಡಿಕೊಳ್ಳುವುದು ತುಂಬಾ ಮುಖ್ಯ. ಈ ಚಿಹ್ನೆಗಳನ್ನು ಕಡೆಗಣಿಸದಂತೆ ನಿಮ್ಮ ಮಗಳಿಗೆ ಹೇಳಿ. ಆದರೆ ಏನು ತಪ್ಪಾಗಿದೆ ಎಂದು ಆಕೆಗೆ ಅರ್ಥಮಾಡಿಕೊಡಿ. ಆಕೆಯೊಂದಿಗೆ ಈ ಬಗ್ಗೆ ಮಾತನಾಡಿ ಮತ್ತು ಇದನ್ನು ಬಗೆಹರಿಸಿ. ಕಡೆಗಣಿನೆ ಸಂಬಂಧವನ್ನು ಎಳೆಯುತ್ತಿದೆ ಎಂದರ್ಥ.

ಹಿಂದೆ ಬೀಳಬೇಡಿ, ಅದಾಗಿ ಬರಲಿ...

ಹಿಂದೆ ಬೀಳಬೇಡಿ, ಅದಾಗಿ ಬರಲಿ...

ಯಾವುದರಿಂದಲೂ ಓಡಿಹೋಗುವುದಕ್ಕಿಂತ ಹತಾಶವಾಗಿ ಅದನ್ನು ಹಿಂಬಾಲಿಸುವುದು ಗಮನಾರ್ಹವಲ್ಲವೆಂದು ನಿಮ್ಮ ಮಗಳಿಗೆ ಕಲಿಸಬೇಕು. ನಿಮ್ಮ ಬಾಗಿಲಿಗೆ ಬರಲು ತಯಾರಾದಾಗ ಪ್ರೀತಿ ಬರಲಿ. ಹೃದಯಭಗ್ನವಾಗುವುದರಿಂದ ಮಗಳನ್ನು ರಕ್ಷಿಸಲು ಇದು ಮುಖ್ಯ ಪಾಠ.

ಅಗ್ನಿ ಪರೀಕ್ಷೆ ತಡೆಯಿರಿ

ಅಗ್ನಿ ಪರೀಕ್ಷೆ ತಡೆಯಿರಿ

ನಂಬಿಕೆಯ ಮೇಲೆ ಸಂಬಂಧ ಬೆಳೆಸಬೇಕು ಎಂದು ನಿಮ್ಮ ಮಗಳಿಗೆ ಹೇಳಿಕೊಡಿ. ಆಕೆ ತನ್ನ ಬಗ್ಗೆ ನಂಬಿಕೆ ಬೆಳೆಸಿಕೊಳ್ಳಬೇಕು ಮತ್ತು ಇತರರ ಬಗ್ಗೆ ಗಮನ ನೀಡುವ ಮೂಲಕ ಸಂಬಂಧದ ಬಗ್ಗೆ ಕೂಡ. ಇನ್ನೊಬ್ಬರ ಪ್ರೀತಿಯನ್ನು ಪರೀಕ್ಷಿಸುವುದು ನಿಮ್ಮನ್ನು ಸಂಕಷ್ಟಕ್ಕೀಡುಮಾಡಬಹುದು. ಯಾವುದೇ ಸಂಬಂಧ ಆರಂಭವಾಗಬೇಕಾದರೆ ಅದಕ್ಕೆ ಮೂಲ ನಂಬಿಕೆ ಎಂದು ನೀವು ಆಕೆಗೆ ಮನವರಿಕೆ ಮಾಡಿಕೊಡಬೇಕು.

English summary

Love lessons to teach your daughter

Parenting can be tough spot especially when your daughter is growing older. It’s time for your daughter to learn and unlearn new things, explore the far and the wild and grow with each chapter of her life. It’s at this point that she will fall in love, explore new people with different feelings and combat with her emotions.
Story first published: Tuesday, June 17, 2014, 15:05 [IST]
X
Desktop Bottom Promotion