For Quick Alerts
ALLOW NOTIFICATIONS  
For Daily Alerts

ದಂಪತಿಗಳ ಸುಖ ಸಂಸಾರಕ್ಕೆ ಇಲ್ಲಿದೆ ಸುಲಭ ಸಲಹೆಗಳು!

By Goutham Kumar
|

ದಾಂಪತ್ಯ ಜೀವನ ಸುಗಮವಾಗಿರಬೇಕೆಂದರೆ ದಂಪತಿಗಳ ಪೈಕಿ ಗಂಡನಾದವನು ಪತ್ನಿಯೊಂದಿಗೆ ಪ್ರಣಯ ಸಲ್ಲಾಪ ಮಾಡಬೇಕೆಂಬ ಹಳೆಯ ಮಾತೊಂದಿದೆ. ಆದರೆ ದಾಂಪತ್ಯದಲ್ಲಿ ಪ್ರೀತಿ, ವಿಶ್ವಾಸ ನಂಬಿಕೆ ಉಳಿದು, ದಾಂಪತ್ಯದ ಸವಿ ಇನ್ನಷ್ಟು ವೃದ್ಧಿಯಾಗಬೇಕೆಂದರೆ ಪತಿಯ ಜೊತೆಗೆ ಪತ್ನಿಯ ಪಾತ್ರ ಕೂಡಾ ಅಷ್ಟೇ ಮಹತ್ವದ್ದು.

ಪತಿಯ ಜೊತೆಗೆ ಪತ್ನಿ ಕೂಡಾ ಪ್ರಣಯದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳೋದು ಅಷ್ಟೇ ಮುಖ್ಯ. ಪತಿ-ಪತ್ನಿಯರ ನಡುವೆ ಒಂದು ಗಟ್ಟಿ ಬಂಧವನ್ನು ಬೆಸೆದು, ಪರಸ್ಪರ ಪ್ರೀತಿ, ವಿಶ್ವಾಸ, ಗೌರವವನ್ನು ಹೆಚ್ಚಿಸಲು ಪ್ರಣಯ ಅತ್ಯಂತ ಸಹಕಾರಿ ಎಂಬುದು ಹಿರಿಯರ ಅಭಿಪ್ರಾಯ. ತಮ್ಮ ಸಂಸಾರ ಸುಖಮಯವಾಗಿ ಸಾಗಬೇಕೆಂಬುದು ಬಹುತೇಕ ಎಲ್ಲಾ ದಂಪತಿಗಳ ಬಯಕೆ. ದಂಪತಿಗಳ ಸುಖ ಸಂಸಾರಕ್ಕೆ ಕೆಲ ಸೂತ್ರಗಳು ಇಲ್ಲಿವೆ

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಈ 6 ಅಂಶಗಳು ನಿಮ್ಮ ಗೆಳೆಯನನ್ನು ಆಕರ್ಷಿಸಲು ಸಹಾಯಕ!

How can a wife be more romantic?

ಪತಿಯ ಬಗ್ಗೆ ಕಾಳಜಿ:
ಪತಿಯರು ತಮ್ಮ ಸಂಗಾತಿಗಳೊಂದಿಗೆ ಹೊರಗಡೆ ಸುತ್ತಾಡುವ ಯೋಜನೆ ಹಾಕಿಕೊಂಡಾಗ ಉತ್ತಮವಾಗಿ ಸಮಯವನ್ನು ಕಳೆಯಬಹುದು. ತಮ್ಮ ಅಚ್ಚುಮೆಚ್ಚಿನ ಚಟುವಟಿಕೆಗಳನ್ನು ತಮ್ಮ ಡೇಟಿಂಗ್ ಸಮಯದಲ್ಲಿ ಅಳವಡಿಸಿಕೊಂಡರೆ ಇನ್ನಷ್ಟು ಮಜಾ ಬರುತ್ತದೆ. ಹಾಕಿ ಆಟ, ರಸ್ಲಿಂಗ್ ಮ್ಯಾಚ್, ಕುಸ್ತಿ, ಸ್ವಿಮ್ಮಿಂಗ್ ಪೂಲ್ ಬದಿಯಲ್ಲಿ ರಾತ್ರಿ ಏಕಾಂತ ಕಳೆಯುವುದು ಹೀಗೆ ಹತ್ತು ಹಲವು ಚಟುವಟಿಕೆಗಳ ಮೂಲಕ ತಮ್ಮ ಸಂಗಾತಿಯನ್ನು ಪತ್ನಿಯರು ಖುಷಿಪಡಿಸಬಹುದು. ಇದರಿಂದ ಗಂಡಂದಿರಿಗೆ ತಮ್ಮ ಬಗ್ಗೆ ಗೌರವದ ಜೊತೆಗೆ ತಮ್ಮ ಹವ್ಯಾಸಗಳಿಗೆ ಪ್ರೋತ್ಸಾಹ ನೀಡುವ ಪತ್ನಿಯ ಬಗ್ಗೆಯೂ ಗೌರವ ಮೂಡುವ ಜೊತೆಗೆ ವಿಶೇಷ ಕಾಳಜಿ ಮೂಡುತ್ತದೆ.

ಪರಸ್ಪರ ಮೆಚ್ಚುಗೆ ಮಾತುಗಳು:
ಸಾಮಾನ್ಯವಾಗಿ ಮದುವೆಯಾದ ಹೊಸತರಲ್ಲಿ ಬಹುತೇಕ ದಂಪತಿಗಳು ಪರಸ್ಪರ ತಪ್ಪುಗಳ ಬಗ್ಗೆ ಮಾತನಾಡುತ್ತಾರೆಯೇ ಹೊರತು, ಸರಿಯಾದ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ಬಹುತೇಕ ಪತ್ನಿಯರು ತಮ್ಮ ಗಂಡಂದಿರನ್ನು ಸ್ವಚ್ಛಗೊಳಿಸುವ ಕೆಲಸ, ಅಡುಗೆ ಕೆಲಸ ಇತ್ಯಾದಿ ಕೆಲಸಗಳನ್ನು ಮಾಡುವಂತೆ ಒತ್ತಾಯಿಸುತ್ತಾರೆ. ಇಂತಹ ಸಂದರ್ಭದಲ್ಲಿ ದಂಪತಿಗಳ ಮಧ್ಯೆ ಮನಸ್ತಾಪ ಬೆಳೆದು ದಾಂಪತ್ಯದಲ್ಲಿ ಬಿರುಕು ಮೂಡಬಹುದು. ಇದನ್ನು ತಡೆಗಟ್ಟಲು ತಮ್ಮ ಪತಿಯು ಮಾಡಿದ ಉತ್ತಮ ಕೆಲಸಗಳ ಬಗ್ಗೆ ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಉತ್ತಮ ಬಾಂಧವ್ಯವನ್ನು ಉಳಿಸಿಕೊಳ್ಳಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಪುರುಷರು ಲಿವ್ ಇನ್ ರಿಲೇಶನ್ ಶಿಪ್ ದ್ವೇಷಿಸಲು ಕಾರಣಗಳು

ಸಾಮಾನ್ಯ ಅಂಶಗಳು:
ಇನ್ನು ಪತ್ನಿಯರು ತಮ್ಮ ಹವ್ಯಾಸಗಳ ಪೈಕಿ ತಮ್ಮ ಜೊತೆಗೆ ತಮ್ಮ ಪತಿಯರೊಂದಿಗೆ ಯಾವ ಹವ್ಯಾಸದಲ್ಲಿ ಹೆಚ್ಚು ಮಜಾ ಅನುಭವಿಸಬಹುದು ಅನ್ನೋ ಕಡೆ ಗಮನ ನೀಡಬೇಕು. ಹವ್ಯಾಸಗಳು ಯಾವುದೇ ಆಗಿರಬಹುದು, ಅಡುಗೆ, ಸ್ಕೈಯಿಂಗ್, ವಿವಿಧ ಮಾದರಿಗಳ ರಚನೆಗಳು, ಸ್ಕೈಡೈವಿಂಗ್ ಹೀಗೆ ಯಾವುದೇ ಆಗಿರಬಹುದು ಇವುಗಳನ್ನು ಜೊತೆಯಾಗಿ ಮಾಡಲು ಸಾಧ್ಯವೇ ಎಂಬುದನ್ನು ಆಲೋಚಿಸಬೇಕು. ಇಂತಹ ಸಾಮಾನ್ಯ ಆಸಕ್ತಿಗಳು ಸಂಗಾತಿಗಳನ್ನು ಇನ್ನಷ್ಟು ಹತ್ತಿರ ತರುವ ಜೊತೆಗೆ ಪರಸ್ಪರರನ್ನು ಇನ್ನಷ್ಟು ಅರ್ಥಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತವೆ.

ಕೇಳುವ ಮನೋಭಾವ:
ಸುಗಮ ದಾಂಪತ್ಯಕ್ಕೆ ಪರಸ್ಪರ ಮಾತುಗಳನ್ನು ಕೇಳುವ, ಅರ್ಥಮಾಡಿಕೊಳ್ಳುವ ಮನೋಭಾವ ಅತ್ಯಂತ ಅವಶ್ಯಕ ಅಂಶ. ಪತಿಯ ಮಾತುಗಳನ್ನು ಕೇಳುವ ಮೂಲಕ ಪತ್ನಿಯಾದವಳಿಗೆ ತನ್ನ ಪತಿಯ ಬೇಕು ಬೇಡಗಳ ಬಗ್ಗೆ ಇನ್ನಷ್ಟು ತಿಳಿಯುವ ಅವಕಾಶ ಸಿಗುತ್ತದೆ. ತಮ್ಮ ಮಾತುಗಳನ್ನು ಹೆಚ್ಚುವರಿಯಾಗಿ ಕೇಳುವ ಪತ್ನಿಯನ್ನು ಪತಿಯರು ಖಂಡಿತವಾಗಿಯೂ ಗೌರವಿಸುತ್ತಾರೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಪರಿಪೂರ್ಣ ಮಗನಾಗಲು ಹತ್ತು ಹೆಜ್ಜೆಗಳು

ಪತಿಯ ಪರ ನಿಲ್ಲುವುದು:
ಸಾಮಾನ್ಯವಾಗಿ ಪತ್ನಿಗೆ ಪತಿಯೇ ರಕ್ಷಕ. ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲ ಸಾಮಥ್ರ್ಯ ಪ್ರತಿಯೊಬ್ಬ ಗಂಡನಿಗೂ ಇದೆ. ಆದರೆ ಕೆಲ ಸಂದರ್ಭದಲ್ಲಿ ಆತನಿಗೆ ರಕ್ಷಣೆ ಬೇಕೆನಿಸಿದಾಗ, ಅಸುರಕ್ಷತೆಯ ಭಯ ಕಾಡಿದಾಗ ಅವನ ಜೊತೆಗೆ ನಿಂತು, ಧೈರ್ಯ ತುಂಬಬೇಕಾದ ಕರ್ತವ್ಯ ಪತ್ನಿಯದು. ಯಾರಾದರೂ ತಮ್ಮ ಪತಿಯ ಬಗ್ಗೆ ಅವಹೇಳನ ಮಾಡಿದಾಗ, ನಿಂದಿಸಿದಾಗ, ಎರಡನೇ ಮಾತಿಗೆ ಅವಕಾಶ ನೀಡದಂತೆ ಪತಿಯ ಪರ ವಹಿಸಿ ಮಾತನಾಡಬೇಕು. ತನ್ನ ಗೌರವಕ್ಕೆ ಚ್ಯುತಿ ಬರುವುದನ್ನು ತನ್ನ ಪತ್ನಿ ಎಂದಿಗೂ ಸಹಿಸಲ್ಲ ಅನ್ನುವ ಅಂಶ ಈ ಮೂಲಕ ಪತಿಗೆ ಮನದಟ್ಟಾಗುವ ಮೂಲಕ ಪತ್ನಿಯ ಬಗ್ಗೆ ಹೆಮ್ಮೆಯ ಭಾವನೆ ಮೂಡುತ್ತದೆ. ಪ್ರತಿಯೊಬ್ಬ ದಂಪತಿಗಳು ಈ ಕೆಲ ಸೂತ್ರಗಳನ್ನು ತಮ್ಮ ಸಂಸಾರದಲ್ಲಿ ಅಳವಡಿಸೋ ಮೂಲಕ ತಮ್ಮ ದಾಂಪತ್ಯವನ್ನು ಇನ್ನಷ್ಟು ಸುಖಮಯವಾಗಿಸಿಕೊಳ್ಳಬಹುದು.

English summary

How can a wife be more romantic?

The cliche that husbands need to constantly romance their wives is beginning to fall to the wayside. In order for a relationship to remain healthy and for love to continue to grow, wives also need to put effort into maintaining the romance.
Story first published: Wednesday, April 16, 2014, 15:12 [IST]
X
Desktop Bottom Promotion