For Quick Alerts
ALLOW NOTIFICATIONS  
For Daily Alerts

ಕೌಟುಂಬಿಕ ಕಲಹಗಳನ್ನು ತಪ್ಪಿಸಲು ಅತ್ಯುತ್ತಮ ಮಾರ್ಗಗಳು

By Super
|

ದಂಪತಿಗಳು ಬಹಳಷ್ಟು ವಿಷಯಗಳಲ್ಲಿ ಕಲಹ ಮಾಡುತ್ತಾರೆ. ಹೆಚ್ಚಿನ ಸಂಬಂಧಗಳಲ್ಲಿ ಇದು ಒಂದು ಸಾಮಾನ್ಯ ಸಂಗತಿ. ಯಾವ ವಾದಗಳು ವಿವೇಚನಾಶೀಲ ವರ್ಗದಲ್ಲಿ ಬರುತ್ತವೆ ಮತ್ತು ಯಾವ ವಾದಗಳು ವಿವೇಚನಾರಹಿತ ವರ್ಗದಲ್ಲಿ ಬರುತ್ತವೆ ಎಂಬುದನ್ನು ನಿಖರವಾಗಿ ಹೇಳಲಾಗದಿದ್ದರೂ ಸಹಾ ಇಂತಹ ವಾದಗಳನ್ನು ಯಶಸ್ವಿಯಾಗಿ ಸಂಬಂಧಗಳಲ್ಲಿ ತಡೆಯಲು ಒಂದು ರೀತಿಯ ವಿವೇಚನೆಯನ್ನು ಕಾರ್ಯರೂಪದಲ್ಲಿಯಾದರೂ ಮತ್ತು ಮಾತುಕತೆಗಳ ಮೂಲಕವಾಗಿಯೂ ಇಬ್ಬರ ಮಧ್ಯೆ ತರಲು ಸಾಧ್ಯವಾಗುತ್ತದೆ.

ಈ ಲೇಖನದಲ್ಲಿ, ಸಂಬಂಧಗಳಲ್ಲಿ ಇಂತಹ ಕಲಹಗಳನ್ನು ತಡೆಯಲು ಕೆಲವು ಮಾರ್ಗಗಳನ್ನು ಕಾಣುತ್ತೇವೆ. ನಾವು ಸಂಬಂಧಗಳ ಮಧ್ಯೆ ನಡೆಯುವ ಕಲಹಗಳನ್ನು ಕೆಲವು ಅದ್ಭುತ ಮಾರ್ಗಗಳಲ್ಲಿ ತಡೆಯಲು ಮತ್ತು ಅವರ ಮಧ್ಯೆ ಸಂತೋಷದ ಮತ್ತು ಶಾಶ್ವತ ಸಂಬಂಧವನ್ನು ಖಚಿತಪಡಿಸಿಕೊಳ್ಳಲು ದೀರ್ಘಕಾಲೀನ ಮಾರ್ಗಗಳನ್ನು ಚರ್ಚಿಸುತ್ತೇವೆ. ಸಂತೋಷಕರವಾದ ವೈವಾಹಿಕ ಜೀವನಕ್ಕೆ ಪ್ರೀತಿಯ ಸಲಹೆಗಳು!

ಹಾಗೆ ನೋಡಿದರೆ ಸಂಬಂಧಗಳ ಮಧ್ಯೆ ನಡೆಯುವ ಕಲಹಗಳನ್ನು ತಡೆಯಲು ಅನೇಕ ಮಾರ್ಗಗಳಿವೆ ಮತ್ತು ಸಂಬಂಧಗಳನ್ನು ಹೆಚ್ಚು ಉಲ್ಲಾಸಕರ ಮತ್ತು ಸಂಪೂರ್ಣ ಸಂತೋಷದಿಂದ ನಡೆದುಕೊಳ್ಳುವಹಾಗೆ ಆ ಮಾರ್ಗಗಳನ್ನು ನಾವು ಗಮನವಿಟ್ಟು ಅನುಸರಿಸಿದರೆ ಮಾತ್ರ. ಸಂಬಂಧಗಳ ಕಲಹಗಳನ್ನು ತಡೆಯುವ ಮಾರ್ಗಗಳನ್ನು ಮುಂದೆ ನೋಡೋಣ ಬನ್ನಿ. ಕೆಲವು ನಿಜಕ್ಕೂ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಕಲಹಗಳನ್ನು ತಡೆಯುವ ಮಾರ್ಗಗಳು ಇಲ್ಲಿವೆ ಓದಿ:

ಹಿಂದೆ ನಡೆದುಹೋದ ಸಂಗತಿಗಳನ್ನು ತರಬೇಡಿ:
ಹಿಂದೆ ನಡೆದುಹೋದ ಸಂಗತಿಗಳನ್ನು ಮತ್ತೆ ಚರ್ಚಿಸಿದರೆ ಅನಗತ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬಹಳ ದಿನಗಳ ಅಥವ ವಾರಗಳ ಅಥವ ತಿಂಗಳಗಳ ಹಿಂದೆ ಜರುಗಿದ ಕಲಹಗಳ ಬಗ್ಗೆ ಹೊಡೆದಾಡುವುದು ಖಂಡಿತವಾಗಿಯೂ ಒಂದು ಅನಗತ್ಯ ಕಲ್ಪನೆ. ಹಾಗೆ ಮಾಡಿದಾಗ ಅದು ಸಂಬಂಧಗಳನ್ನು ನಾಶಮಾಡುತ್ತದೆ ಮತ್ತು ಒಳ್ಳೆಯ ಸಂಬಂಧಗಳನ್ನು ಮುಂದುವರಿಸಲು ಅಡ್ಡಬರುತ್ತದೆ.

ನಿಮ್ಮ ಸಂಗಾತಿಯನ್ನು ಒಪ್ಪಿಕೊಳ್ಳುವುದನ್ನು ಅಭ್ಯಾಸಮಾಡಿ
ನೀವು ನಿಮ್ಮ ಸಂಗಾತಿಯು, ಅವನಾಗಲೀ ಅವಳಾಗಲೀ, ಹೇಳುವುದನ್ನು ಒಪ್ಪಿಕೊಳ್ಳುವುದನ್ನು ಕಲಿಯಿರಿ. ಒಬ್ಬರೊನ್ನೊಬ್ಬರು ಅರ್ಥಮಾಡಿಕೊಂಡು ಸ್ವೀಕರಿಸುವುದು ಸಂಬಂಧಗಳಲ್ಲಿ ಒಂದು ಪ್ರಮುಖ ಅಂಶವಾಗಿದೆ. ಇದು ಪ್ರಭಲ ಮತ್ತು ಶಾಶ್ವತ ಬಂಧನದ ಲಕ್ಷಣ, ಸ್ನೇಹ, ಪ್ರೀತಿ ಮತ್ತು ಸಂತೋಷಗಳನ್ನು ಭದ್ರ ಪಡಿಸಲು ಸಹಕಾರಿಯಾಗುತ್ತವೆ. ಸಂಗಾತಿ ನಿಮ್ಮನ್ನು ವಿವಾಹವಾಗುವುದಿಲ್ಲ ಎಂಬುದರ ಸೂಚನೆಗಳಿವು

ಸಮಸ್ಯೆಗಳನ್ನು ಬಗೆಹರಿಸದೆ ಬಿಡಬೇಡಿ
ಸಮಸ್ಯೆಗಳನ್ನು ಹಾಗೆಯೇ ಬಿಟ್ಟುಬಿಡುವುದರ ಬದಲು ಸಕಾಲಿಕವಾಗಿ ಬಗೆಹರಸಿದರೆ ಸಂಬಂಧಗಳಲ್ಲಿ ಬಹಳಷ್ಟು ಸಮಸ್ಯೆಗಳು ಪರಿಹರಿಸಿದಂತಾಗುತ್ತವೆ. ಎಂತಹ ಸಮಸ್ಯೆ ಬಂದರೂ ಅದನ್ನು ಪರಿಹರಿಸದೆ ಹಾಗೆಯೇ ಬಿಟ್ಟುಬಿಡಬೇಡಿ. ಹಾಗೆ ಮಾಡಿದರೆ ಅದು ನಂತರ ಬಹಳ ದುಬಾರಿಯ ಸಮಸ್ಯೆಯಾಗಿಬಿಡುತ್ತದೆ.

ನಿಮ್ಮ ತಪ್ಪನ್ನು ಒಪ್ಪಿಕೊಳ್ಳಿ
ಅನೇಕ ದಂಪತಿಗಳು ಈ ತಪ್ಪನ್ನು ಸಾಮಾನ್ಯವಾಗಿ ಮಾಡುತ್ತಾರೆ. ಆಗಿರುವ ತಪ್ಪನ್ನು ಒಂದು ಪ್ರತಿಷ್ಠೆಯ ಸಮಸ್ಯೆಯೆಂದು, ವಿಶೇಷವಾಗಿ ಪುರುಷರು ಕಡೆಗಣಿಸಬೇಡಿ. ಇದು ಸಂತೋಷದ ಮತ್ತು ಶಾಶ್ವತ ಸಂಬಂಧಗಳಿಗೆ ಒಂದು ಗಂಭೀರ ತಡೆಯಾಗುತ್ತದೆ. ಕಲಹಗಳನ್ನು ಮತ್ತು ತಕರಾರುಗಳನ್ನು ತಡೆಯಲು ತಪ್ಪುಗಳನ್ನು ಒಪ್ಪಿಕೊಳ್ಳುವುದು ಬಹಳ ಮುಖ್ಯ ಕ್ರಮ.

ನಿಂದನಾ ಭಾಷೆಯನ್ನು ಬಳಸಬೇಡಿ
ಸಂಬಂಧಗಳಲ್ಲಿ ಕಲಹಗಳು ಸಾಮಾನ್ಯವಾಗಿ ಒಂದು ಭಾಗ. ನೀವು ನಿಮ್ಮ ಸಂಗಾತಿಯೊಡನೆ ಕಲಹಮಾಡುವ ಸಮಯದಲ್ಲಿ ನಿಂದನಾ ಭಾಷೆಯನ್ನು ಬಳಸದಿರುವುದನ್ನು ಖಚಿತಪಡಿಸಿಕೊಳ್ಳಿ. ಹೀಗೆ ಮಾಡಿದಲ್ಲಿ ಮುಂದಿನ ದಿನಗಳಲ್ಲಿ ಅದು ನಿಮಗೇ ಮರುಕಳಿಸುತ್ತಿರುತ್ತದೆ. ಯೋಗ್ಯವಲ್ಲದ ಭಾಷೆಯನ್ನು ಉಪಯೋಗಿಸಬೇಡಿ. ಶಾಂತ ರೀತಿಯಲ್ಲಿ ಸ್ಥೀಮಿತದಲ್ಲಿರಿ ಮತ್ತು ಸಣ್ಣ ಕ್ಷುಲ್ಲಕ ವಿಷಯಗಳಿಗೆ ನಿಮ್ಮ ಸಹನೆಯನ್ನು ಕಳೆದುಕೊಳ್ಳಬೇಡಿ.

English summary

Best Ways To Avoid Constant Fights In Relationships

In this aticle, we look at some ways to stop fights in relationships. We look at some brilliant ways to prevent fighting in relationships and ensure a happy and lasting relationship.
X
Desktop Bottom Promotion