For Quick Alerts
ALLOW NOTIFICATIONS  
For Daily Alerts

ಪುರುಷರ ಸ್ನೇಹ ಆತ್ಮೀಯತೆಗೆ ನಾಂದಿ ಹೇಗೆ?

|

ಸ್ನೇಹ ಎಂದರೆ ಅದೊಂದು ಸುಂದರ ಅನುಬಂಧ. ಜಾತಿ, ಲಿಂಗವನ್ನು ಮರೆತು ಅದು ನಿರ್ಮಿಸುವ ಆತ್ಮೀಯತೆ ಅಷ್ಟೊಂದು ಬಲಯುತವಾಗಿರುತ್ತದೆ. ಸ್ನೇಹವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಮೊದಲೇ ಹೇಳಿದಂತೆ ಸ್ನೇಹಕ್ಕೆ ಲಿಂಗ ತಾರತಮ್ಯವಿಲ್ಲ.

ಪ್ರೇಮಿಗಳೇ, ಫ್ರೆಂಡ್ಸ್ ಎದುರು ಹೀಗೆ ವರ್ತಿಸದಿರಿ

ಪುರುಷ ಮಹಿಳೆ ಸ್ನೇಹಿತರಾಗಿರುವುದೂ ಕೂಡ ಈ ಜಮಾನಾದಲ್ಲಿ ಸ್ನೇಹಕ್ಕಿರುವ ಗೌರವವನ್ನು ತೋರಿಸುತ್ತದೆ. ಆದರೆ ಮಹಿಳಾ ಪುರುಷ ಸ್ನೇಹವು ಹೆಚ್ಚಾಗಿ ಕೊನೆಗೊಳ್ಳುವುದು ವಿವಾಹದಲ್ಲಿ. ಆದರೂ ಈ ಪ್ರೀತಿಯನ್ನು ಮೀರಿ ಸ್ನೇಹವು ಮಿಗಿಲಾದ ಬಾಂಧವ್ಯವನ್ನು ನಿರ್ಮಿಸುತ್ತದೆ.

ನಿಮಗೆ ಪುರುಷ ಸ್ನೇಹಿತರಿದ್ದು ಅವರ ಸ್ನೇಹ ಮಹಿಳಾ ಸ್ನೇಹಿತೆಯರಿಗಿಂತ ಹೆಚ್ಚಿನ ಆರಾಮವನ್ನೂ ತೃಪ್ತಿಯನ್ನೂ ನೀಡಿದೆಯೆಂದರೆ ಅದು ಏಕೆಂಬುದನ್ನು ಆಲೋಚಿಸಿದ್ದೀರಾ? ಹಾಗಿದ್ದರೆ ಪುರುಷ ಸ್ನೇಹದ ವಿಶಿಷ್ಟತೆ ಏನೆಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ....

ಕಚೇರಿಯಲ್ಲಿ ಪುರುಷ ಸ್ನೇಹಿತರು: ಒಳಿತು-ಕೆಡುಕು

ನಿಮ್ಮ ಹೃದಯವನ್ನು ತೆರೆಯುವುದು:

ನಿಮ್ಮ ಹೃದಯವನ್ನು ತೆರೆಯುವುದು:

ನಿಮ್ಮ ಪುರುಷ ಸ್ನೇಹಿತನ ಎದುರಿಗೆ ನಿಮ್ಮ ಮನದಾಳದ ಎಲ್ಲಾ ದುಃಖವನ್ನೂ ಬಿಚ್ಚಿಡುತ್ತೀರಿ. ಮಹಿಳಾ ಸ್ನೇಹಿತೆಯರ ಎದುರು ಹೇಳಿಕೊಳ್ಳದ್ದನ್ನೂ ಅವರಲ್ಲಿ ವ್ಯಕ್ತಪಡಿಸುತ್ತೀರಿ. ಇದರಿಂದ ನಿಮಗೆ ಸಿಗುವ ಸಾಂತ್ವಾನ ಮನದಾಳದ್ದಾಗಿರುತ್ತದೆ.

ಆ ಕ್ಷಣವನ್ನು ಅನುಭವಿಸುವುದು:

ಆ ಕ್ಷಣವನ್ನು ಅನುಭವಿಸುವುದು:

ಪುರುಷ ಸ್ನೇಹಿತರು ತಾವು ಇರುವಂತಹ ಕ್ಷಣವನ್ನು ಅನುಭವಿಸುವಲ್ಲಿ ನಿಷ್ಣಾತರು. ಯಾರು ಇರಲಿ ಇಲ್ಲದೇ ಇರಲಿ ಹೆಚ್ಚು ಚಿಂತಿಸದೇ ತಮ್ಮ ಕ್ಷಣವನ್ನು ಸುಂದರಗೊಳಿಸುತ್ತಾರೆ. ಸಂತೋಷದಿಂದ ಕಳೆಯುತ್ತಾರೆ.

ನಿಮಗೆ ಬೆಲೆ ನೀಡುವುದು:

ನಿಮಗೆ ಬೆಲೆ ನೀಡುವುದು:

ಪುರುಷ ಸ್ನೇಹಿತರಿಗೆ ನಿಮ್ಮ ಕುಟುಂಬದ ಬಗ್ಗೆ ಅಥವಾ ನಿಮ್ಮ ವೈಯಕ್ತಿಕವಾದುದರ ಬಗ್ಗೆ ಪೂರ್ಣವಾದ ಮಾಹಿತಿ ಬೇಕೆಂದೇನಿಲ್ಲ. ಆದರೂ ನೀವು ಅವರೊಂದಿಗೆ ಹೇಗೆ ಇರುತ್ತೀರಿ ಎಂಬುದಕ್ಕೆ ಮಾತ್ರವೇ ಅವರು ಬೆಲೆ ನೀಡುತ್ತಾರೆ.

ನಿಮ್ಮೊಂದಿಗೆ ಸದಾ ಇರುವುದು:

ನಿಮ್ಮೊಂದಿಗೆ ಸದಾ ಇರುವುದು:

ಅವರಿಗೆ ಕೆಡುಕು, ದ್ವೇಷ ಇರುವುದಿಲ್ಲ. ನಿಮ್ಮೊಂದಿಗಿದ್ದು ನಿಮ್ಮೆಲ್ಲಾ ನಿರ್ಧಾರಗಳಿಗೆ ಬೆಂಬಲವನ್ನು ನೀಡುತ್ತಾರೆ. ನಿಮ್ಮ ಹಿತವನ್ನೇ ಬಯಸುತ್ತಾರೆ.

ನಾಟಕೀಯತೆ ಇರುವುದಿಲ್ಲ:

ನಾಟಕೀಯತೆ ಇರುವುದಿಲ್ಲ:

ಮಹಿಳಾ ಸ್ನೇಹಿತೆರಂತೆ ಪುರುಷರು ಸ್ನೇಹದಲ್ಲಿ ಪ್ರೀತಿಯ ನಾಟಕೀಯತೆಯನ್ನು ತೋರಿಸುವುದಿಲ್ಲ. ಅವರ ಸ್ನೇಹ ನಿಷ್ಕಲ್ಮಶವಾಗಿರುತ್ತದೆ. ಮಾದರಿಯಾಗಿರುತ್ತದೆ. ಸಂತೋಷದಿಂದ ಕೂಡಿರುತ್ತದೆ.

ಸ್ನೇಹದಲ್ಲಿ ಅರಿತುಕೊಳ್ಳುವಿಕೆ:

ಸ್ನೇಹದಲ್ಲಿ ಅರಿತುಕೊಳ್ಳುವಿಕೆ:

ಒಬ್ಬರನ್ನೊಬ್ಬರು ಅರಿತುಕೊಳ್ಳುವುದನ್ನು ಪುರುಷ ಸ್ನೇಹಿತರು ಚೆನ್ನಾಗಿ ನಿರ್ವಹಿಸುತ್ತಾರೆ. ತಮ್ಮೆಲ್ಲಾ ದುಃಖಗಳನ್ನು ಪರಸ್ಪರ ಹಂಚಿಕೊಂಡು ಅಲ್ಲಿಗೆ ಮುಗಿಸುತ್ತಾರೆ ಮತ್ತು ಅದರ ಬಗ್ಗೆ ಹೆಚ್ಚು ಚಿಂತಿಸದೇ ಬೇರೆಯದಕ್ಕೆ ಗಮನ ಕೊಡುತ್ತಾರೆ.

ಕಡಿಮೆ ಮಾತು ಹೆಚ್ಚು ಕ್ರಿಯೆ:

ಕಡಿಮೆ ಮಾತು ಹೆಚ್ಚು ಕ್ರಿಯೆ:

ಪುರುಷ ಸ್ನೇಹಿತರು ಬಾಯಲ್ಲಿ ಹೇಳುವುದಕ್ಕಿಂತ ಕ್ರಿಯೆಯಲ್ಲಿ ಮಾಡುವುದು ಹೆಚ್ಚು. ತಮ್ಮ ನೆಲೆಗಟ್ಟಿಗೆ ಸಮನಾಗಿ ಅವರು ಚಿಂತನೆ ಮಾಡಿ ಕಾರ್ಯಪ್ರವೃತ್ತರಾಗುತ್ತಾರೆ. ಇದಕ್ಕಾಗಿಯೇ ಅವರು ಮಹಿಳಾ ಸ್ನೇಹಿತರಿಗಿಂತ ಬೆರೆಯಾಗಿಯೇ ನಿಲ್ಲುತ್ತಾರೆ.


Story first published: Thursday, May 8, 2014, 13:54 [IST]
X
Desktop Bottom Promotion