For Quick Alerts
ALLOW NOTIFICATIONS  
For Daily Alerts

ಸಂಬಂಧಗಳಲ್ಲಿ ವಿಶ್ವಾಸ ಉಳಿಸಿಕೊಳ್ಳಲು ಆರು ಸಲಹೆಗಳು

By Super
|

ವಿಶ್ವಾಸ ಎನ್ನುವುದು ಒಂದು ರಾತ್ರಿಯಲ್ಲಿ ಹುಟ್ಟಿಬಿಡುವುದಿಲ್ಲ.ಅದನ್ನು ಗಳಿಸಲು ಸಾಕಷ್ಟು ದಿನಗಳು ಬೇಕಾಗುತ್ತದೆ.ಒಮ್ಮೆ ವಿಶ್ವಾಸ ಹುಟ್ಟಿದ ನಂತರ ಅದನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಂಡು ಬರಬೇಕು,ಇಲ್ಲದಿದ್ದಲ್ಲಿ ಒಮ್ಮೆ ಕಷ್ಟಪಟ್ಟು ಗಳಿಸಿದ ವಿಶ್ವಾಸ,ನಂಬಿಕೆ ಒಂದು ಕ್ಷಣದಲ್ಲಿ ಮುರಿದು ಬೀಳಬಹುದು.

ಗೆಳತಿಯ ಅಸೂಯೆ ಗುಣವನ್ನು ಪರೀಕ್ಷಿಸುವುದು ಹೇಗೆ?

ಸಾಕಷ್ಟು ಬಾರಿ ಸರಿಯಾದ ಸಮಯವನ್ನು ನೀಡಿದರೆ ಮತ್ತು ನೀವು ಮನಸ್ಸು ಮಾಡಿದರೆ ವಿಶ್ವಾಸವನ್ನು ಪುನಃ ಗಳಿಸಲು ಸಾಧ್ಯವಿದೆ.ಆದರೆ ನಿಮ್ಮ ಮನಸ್ಸಿನಲ್ಲಿ ಒಂದು ಅನುಮಾನ ಇದ್ದೇ ಇರುತ್ತದೆ.ಅದರ ಜೊತೆಗೆ ನೀವು ಇತರರನ್ನೂ ಕೂಡ ನಂಬುವುದು ಕಷ್ಟವಾಗಿಬಿಡುತ್ತದೆ.

ಬಹಳ ಹತ್ತಿರದ ಸ್ನೇಹಿತರಿಂದ ಮೋಸ ಹೋದವರಿದ್ದಾರೆ.ವೈಯಕ್ತಿಕ ವಿಷಯವನ್ನು ಯಾರೊಂದಿಗೂ ಹೇಳುವುದಿಲ್ಲ ಎಂದು ಎಲ್ಲವನ್ನೂ ಖಾಸಗಿ ಮಾಡಿ ಬಿಡುವವರೂ ಇರುತ್ತಾರೆ.ಸಾಕಷ್ಟು ಬಾರಿ ಇದು ತಿಳಿದು ಮನ್ನಿಸಿದರೂ ಕೂಡ ಇದು ಮುಂದುವರೆದಾಗ ಅಂತವರಲ್ಲಿ ವಿಶ್ವಾಸ ಹೊಂದುವುದು ಕಷ್ಟವಾಗಿಬಿಡುತ್ತದೆ.

6 ways to build trust in your relationships

ಈ ರೀತಿಯ ಸಮಸ್ಯೆಗಳು ಕುಟುಂಬದಲ್ಲಿ ಕೂಡ ಕಾಣಿಸಿಕೊಳ್ಳಬಹುದು.ನಾವು ಹಂಚಿಕೊಂಡ ಮಾಹಿತಿಯನ್ನು ಅವರು ತಿರುಚಿ ಬೇರೆ ರೀತಿಯಲ್ಲಿ ಚುಚ್ಚಿಕೊಟ್ಟು ಬಿಡುತ್ತಾರೆ.ಆದರೆ ಯಾವಾಗ ನಮಗೆ ಅವರು ನಮ್ಮ ವಿಶ್ವಾಸವನ್ನು ದುರುಪಯೋಗ ಮಾಡಿಕೊಳ್ಳುವುದು ತಿಳಿಯುತ್ತದೆಯೋ ಆಗ ಅವರಿಂದ ದೂರ ಇರುವುದು ಸೂಕ್ತ.ಮತ್ತೊಂದು ಅವಕಾಶ ಕೊಡಬೇಕು ಎನಿಸಿದರೂ ಕೂಡ ಹೇಗೆ ಕೊಡಬೇಕು ಎಂಬುದು ಕಾಡುವ ಪ್ರಶ್ನೆ.

ಅಂತಹ ಸಂದರ್ಭದಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡಿ ಸಮಾಧಾನ ಮಾಡಿಕೊಳ್ಳಿ.ಆದರೆ ಪುನಃ ನಂಬಿಕೆ ಇಡಬೇಕು ಎಂದರೆ ಅದು ಸಾಕಷ್ಟು ಜನರನ್ನು ನಂಬಬೇಕು.ಏಕೆಂದರೆ ವಿಶ್ವಾಸಘಾತುಕರು ಹಲವರಿರುತ್ತಾರೆ.ನಂಬಿಕೆ,ವಿಶ್ವಾಸ ಪುನಃ ಪಡೆದುಕೊಳ್ಳಲು ಮತ್ತೆ ಸಾಕಷ್ಟು ಸಮಯ ಬೇಕು ಎಂಬುದನ್ನು ನೀವು ನೆನಪಿಡಬೇಕು.

ಸಂಬಂಧಗಳು ಕುಟುಂಬ, ಸ್ನೇಹಿತರು, ಸಹೋದ್ಯೋಗಿಗಳು,ಸಂಗಾತಿ ಮತ್ತು ಮಗು ಇವುಗಳಲ್ಲಿ ಎಂದಿಗೂ ಒಂದೇ ಕಡೆಯ ವಿಶ್ವಾಸ ಅಥವಾ ನಂಬಿಕೆ ಇರಬಾರದು.ಆ ರೀತಿಯ ಒಂದು ಕಡೆಯ ನಂಬಿಕೆ ಸಾಕಷ್ಟು ದಿನ ಉಳಿಯುವುದಿಲ್ಲ. ಆದ್ದರಿಂದ ನಂಬಿಕೆಯನ್ನು ಹೆಚ್ಚಿಸಿಕೊಳ್ಳಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿ ನೋಡಿ.

ನೇರ ಸಂಪರ್ಕ(ಕಣ್ಣಿನ ನೇರ ನೋಟ):
ನೀವು ನಾಚಿಕೆ ಸ್ವಭಾವದವರಾಗಿದ್ದರೆ ಇದು ಸ್ವಲ್ಪ ಕಷ್ಟ ಎನಿಸಬಹುದು.ಆದರೆ ಮಾತನಾಡುವಾಗ ಏನನ್ನೋ ಮುಚ್ಚಿಡುವ ಪ್ರಯತ್ನವಿದ್ದರೆ ಬೇರೆಡೆ ನೋಡುತ್ತಾ ಮಾತನಾಡುವವರಿರುತ್ತಾರೆ.ಆದ್ದರಿಂದ ನೀವು ಯಾರನ್ನಾದರೂ ಎರಡನೇ ಬಾರಿ ನಂಬುವ ಪ್ರಯತ್ನ ಮಾಡುತ್ತಿದ್ದೀರಿ ಎಂದಾಗ ನೇರ ನೋಟದಿಂದ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.ಆ ವ್ಯಕ್ತಿಯೂ ಕೂಡ ನಿಮ್ಮೊಂದಿಗೆ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಸಮಸ್ಯೆ ಬಗೆಹರಿಸಿಕೊಳ್ಳಲು ತಯಾರಿದ್ದರೆ ಅಂತಹ ಸಂಬಂಧವನ್ನು ನಂಬಬಹುದು ಎಂದರ್ಥ.

ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಿ:
ಸಾಕಷ್ಟು ಬಾರಿ ಟೀನೇಜ್ ಮಕ್ಕಳು ತಮ್ಮ ಪೋಷಕರು ತಮ್ಮನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದೇ ತಿಳಿಯುತ್ತಾರೆ.ಫ್ಯಾಮಿಲಿ ಡೇ ಮಾಡಿ ಕುಟುಂಬದವರೆಲ್ಲ ಒಟ್ಟಿಗೆ ಕಳೆಯುವುದು ರೂಡಿಸಿಕೊಳ್ಳಿ.ಈ ಸಮಯದಲ್ಲಿ ಅವರವರ ಇಚ್ಛೆ,ಇತರ ವಿಷಯಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳಿ.ಈ ರೀತಿ ಪೋಷಕರು ಮತ್ತು ಮಕ್ಕಳು ಒಬ್ಬರಿಗೊಬ್ಬರು ತಮ್ಮ ಅನಿಸಿಕೆ,ಇಚ್ಛೆಗಳನ್ನು ಹಂಚಿಕೊಳ್ಳುವುದರಿಂದ ವಿಶ್ವಾಸ,ನಂಬಿಕೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು.

ವಿವಾಹಿತ ಪುರುಷನ ಪ್ರೀತಿಸುವ ಮಹಿಳೆಯರಿಗೆ ಟಿಪ್ಸ್‌ಗಳು

ಘಟನೆಯನ್ನು ತಿಳಿದುಕೊಳ್ಳಿ:
ಪ್ರತಿಯೊಬ್ಬರೂ ಬೇಕೆಂದು ಮೋಸ ಮಾಡುವುದಿಲ್ಲ.ಕೆಲವೊಮ್ಮೆ ತಿಳಿಯದೆಯೇ ವಿಶ್ವಾಸ ಅಥವಾ ನಂಬಿಕೆ ಕಳೆದುಕೊಳ್ಳುವಂತಾಗುತ್ತದೆ.ತಕ್ಷಣ ಸಂಬಂಧ ಕಡಿದುಕೊಳ್ಳುವುದಕ್ಕಿಂತ ಘಟನೆ ತಣ್ಣಗಾಗಲು ಸ್ವಲ್ಪ ಸಮಯ ಕೊಟ್ಟು ನಂತರ ಅದರ ಬಗ್ಗೆ ಮಾತನಾಡಿ ಬಗೆಹರಿಸಿಕೊಳ್ಳಿ.ಆಗ ವ್ಯಕ್ತಿ ಹೇಗೆ ಘಟನೆಯನ್ನು ವ್ಯಕ್ತಪಡಿಸುತ್ತಾನೆ ಎಂಬುದರ ಮೇಲೆ ನಿಮಗೆ ಅರ್ಥವಾಗುತ್ತದೆ.ಆತ ಕಪಟ ಕ್ಷಮೆ ವ್ಯಕ್ತಪಡಿಸುತ್ತಿರುವುದು ನಿಮಗೆ ತಿಳಿದಲ್ಲಿ ಆ ಸಂಬಂಧ ಮುಂದುವರೆಸುವುದರಲ್ಲಿ ಅರ್ಥವಿಲ್ಲ.

ನಿಮ್ಮ ಮಾತು ಕಾಪಾಡಿಕೊಳ್ಳಿ:
ನಾವು ಸಂಬಂಧಗಳಲ್ಲಿ ಮಾತು ಕೊಟ್ಟು ಅದರಂತೆ ನಡೆದುಕೊಳ್ಳದೇ ಇರುವವರನ್ನು ನೋಡಿದ್ದೇವೆ.ನಾವು ಅದನ್ನು ಅವರ ಬಳಿ ಕೇಳಿದರೆ ಅವರು ಅದಕ್ಕೊಂದು ಸುಳ್ಳು ಉತ್ತರ ನೀಡಿ ತಪ್ಪಿಸಿಕೊಳ್ಳಲು ನೋಡುತ್ತಾರೆ.ಆದರೆ ನಿಜವಾಗಿಯೂ ನಿಮ್ಮ ಸಂಬಂಧ ಇಚ್ಚಿಸುವವರು ನಂಬಿಕೆಯನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ.

ಮನದಾಳದ ಮಾತು:
ಕುಟುಂಬ ಮತ್ತು ಸ್ನೇಹಿತರ ಸಲಹೆಗಳು ಒಳ್ಳೆಯ ರೀತಿಯಲ್ಲಿರಬೇಕು.ಅಂತವರಿಂದ ಮಾತ್ರ ನಿಮಗೆ ಒಳ್ಳೆಯ ಕಾಳಜಿ,ಸಲಹೆಗಳು ದೊರೆಯುತ್ತವೆ.ನಿಮ್ಮ ಭಾವನೆಗಳ ಬಗ್ಗೆ ಅವರಿಗೆ ಕಾಳಜಿ ಇರುತ್ತದೆ.

ಸುಧಾರಣೆಯ ಚಿಹ್ನೆಗಳು:
ಜನರು ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಂಡು ನಿಮ್ಮ ವಿಶ್ವಾಸಗಳಿಸಬೇಕು ಎಂದಿದ್ದಲ್ಲಿ,ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳುವ ಕುರುಹುಗಳು ನಿಮ್ಮ ಗಮನಕ್ಕೆ ಬರುತ್ತದೆ.ನಿಮ್ಮ ಅವಶ್ಯಕತೆಗೆ ಅವರು ಸದಾ ಸಿದ್ಧರಿರುತ್ತಾರೆ.ಜೊತೆಗೆ ಅವರು ಮೊದಲು ಮಾಡಿದಂತೆ ನಂಬಿಕೆ ಕಳೆದುಕೊಳ್ಳುವ ತಪ್ಪು ಮಾಡುವುದಿಲ್ಲ ಮತ್ತು ಪ್ರಾಮಾಣಿಕರಾಗಿರುತ್ತಾರೆ.

ಮಾತಿಲ್ಲದೆ ಐ ಲವ್ ಯೂ ಹೇಳುವ ವಿಧಾನಗಳು

ಒಮ್ಮೆ ನೀವು ಯಾರದ್ದಾದರೂ ನಂಬಿಕೆ ಕಳೆದುಕೊಂಡರೆ ಅದನ್ನು ಪುನಃ ಸಂಪಾದಿಸಲು ಸಾಕಷ್ಟು ಸಮಯ ಹಿಡಿಯಬಹುದು.ಇನ್ನೂ ಕೆಲವು ಸಂದರ್ಭದಲ್ಲಿ ಅದು ಸಾಧ್ಯವಾಗದೇ ಇರಬಹುದು ಕೂಡ. ಯಾವುದೇ ಸಂಬಂಧದಲ್ಲಿ ನಂಬಿಕೆ ಎಂಬುದು ಬಹಳ ಮುಖ್ಯವಾದುದು.ಇದನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ.

English summary

6 ways to build trust in your relationships

Trusting in people does not happen overnight. Putting your trust in someone takes a while to build. Once the trust is established, it’s important to respect it.
X
Desktop Bottom Promotion