For Quick Alerts
ALLOW NOTIFICATIONS  
For Daily Alerts

ಸಂಬಂಧದಲ್ಲಿ ಅಸೂಯೆ ನಿವಾರಣೆಗೆ ಮಾರ್ಗಗಳು

By Hemanth P
|

ಅಸೂಯೆ ಎನ್ನುವುದು ಸಂಬಂಧವನ್ನು ಹಾಳು ಮಾಡುವ ಅತ್ಯಂತ ಕೆಟ್ಟ ಲಕ್ಷಣ. ಸಂಬಂಧದಲ್ಲಿ ಮಹಿಳೆಯರಿಗೆ ತುಂಬಾ ಅಸೂಯೆ ಮತ್ತು ಅಸುರಕ್ಷಿತ ಭಾವನೆ ಕಾಡುತ್ತದೆ. ನಿಮ್ಮ ಬಾಯ್ ಫ್ರೆಂಡ್ ಜತೆ ಬೇರೆ ಹುಡುಗಿ ಫ್ಲರ್ಟ್ ಮಾಡುತ್ತಿದ್ದರೆ ಆಗ ಅಸೂಯೆ ಉಂಟಾಗುವುದು ಸಾಮಾನ್ಯ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಲು ಆರಂಭಿಸಿದಾಗ ಸಮಸ್ಯೆ ಉದ್ಭವವಾಗುತ್ತದೆ. ನಿಮ್ಮ ಬಾಯ್ ಫ್ರೆಂಡ್ ತುಂಬಾ ಧನಾತ್ಮಕವಾಗಿ ಪ್ರತಿಕ್ರಿಯಿಸಿದರೆ ಮಾತ್ರ ನಿಮ್ಮ ಪ್ರತಿಕ್ರಿಯೆ ಬೇಕಾಗುತ್ತದೆ. ಪ್ರತಿಯೊಬ್ಬ ಹುಡುಗಿಯೊಂದಿಗೆ ನಿಮ್ಮ ಬಾಯ್ ಫ್ರೆಂಡ್ ತುಂಬಾ ಸ್ನೇಹಪರವಾಗಿ ಮಾತನಾಡುತ್ತಿದ್ದರೆ ಆಗ ಸ್ವಲ್ಪ ಎಚ್ಚರಿಕೆ ವಹಿಸಬೇಕಾಗುತ್ತದೆ.

ಕಾರಣವಿಲ್ಲದೆ ಅಸೂಯೆ ಉಂಟಾದರೆ ಆಗ ಸಂಬಂಧವು ಕೆಟ್ಟು ಉಸಿರುಗಟ್ಟಿಸಿದಂತಾಗುತ್ತದೆ. ಅವಿಶ್ವಾಸಕ್ಕೆ ಯಾವುದೇ ಸಂಬಂಧ ಅಥವಾ ಪ್ರೇಮ ಪ್ರಕರಣದಲ್ಲಿ ಜಾಗವಿರುವುದಿಲ್ಲ. ನಿಮ್ಮ ಸಂಗಾತಿ ನಿಮ್ಮ ಜತೆಗಿದ್ದಾನೆ ಎಂದಾದರೆ ಅದು ನಿಮ್ಮಿಬ್ಬರ ನಡುವಿನ ಪ್ರೀತಿ ಮತ್ತು ವಿಶ್ವಾಸದಿಂದ ಎನ್ನುವುದನ್ನು ಚೆನ್ನಾಗಿ ತಿಳಿದುಕೊಳ್ಳಿ. ಅಸಮಾಧಾನ ಮತ್ತು ಅಸೂಯೆ ನೀವಿಬ್ಬರು ಕಳೆದಿರುವ ಒಳ್ಳೆಯ ಸಮಯವನ್ನು ಕೊನೆಗೊಳಿಸಬಹುದು.

ನಿಮ್ಮ ಸಂಬಂಧದಲ್ಲಿ ಉಂಟಾಗುವ ಅಸೂಯೆ ಕಡೆಗಣಿಸಲು ಹಲವಾರು ಮಾರ್ಗಗಳಿವೆ. ಇಂತಹ ಕೆಲವೊಂದು ಟಿಪ್ಸ್ ಗಳನ್ನು ಇಲ್ಲಿ ಚರ್ಚಿಸಲಾಗಿದೆ.

1. ವಿಶ್ವಾಸ

1. ವಿಶ್ವಾಸ

ಯಾವುದೇ ಸಂಬಂಧದ ಮೂಲವೆಂದರೆ ವಿಶ್ವಾಸ. ವಿಶ್ವಾಸವಿಲ್ಲದೆ ಯಾವುದೇ ಸಂಬಂಧವೂ ಉಳಿಯಲ್ಲ. ಹೃದಯಪೂರ್ವಕವಾಗಿ ನಿಮ್ಮ ಸಂಗಾತಿಯ ಮೇಲೆ ಯಾವಾಗಲೂ ವಿಶ್ವಾಸವಿಡಿ. ನೀವು ಸಂಗಾತಿಯನ್ನು ಕಣ್ಣುಮುಚ್ಚಿ ನಂಬಬೇಕೆಂದಲ್ಲ, ಅವರು ನಿಮ್ಮ ವಿಶ್ವಾಸಗಳಿಸಬೇಕು. ವಿಶ್ವಾಸವು ಗಳಿಸಬೇಕಾಗಿರುವ ವಿಷಯ. ಒಮ್ಮೆ ವಿಶ್ವಾಸ ಕಳೆದುಹೋದರೆ ಅದನ್ನು ಮರಳಿ ಪಡೆಯುವುದು ತುಂಬಾ ಕಷ್ಟ. ಅಸೂಯೆ ಕಡೆಗಣಿಸಲು ನಿಮ್ಮ ಸಂಗಾತಿಯ ಬಗ್ಗೆ ವಿಶ್ವಾಸವನ್ನಿಡಿ ಮತ್ತು ಅವರ ವಿಶ್ವಾಸಗಳಿಸಿ.

2. ಸಂವಹನ

2. ಸಂವಹನ

ಸಂಬಂಧದಲ್ಲಿ ಸಂವಹನವು ಸೇತುವೆಯಿದ್ದಂತೆ. ಸಂಗಾತಿಗಳ ಮಧ್ಯೆ ಯಾವುದೇ ರೀತಿಯ ಸಂವಹನ ಇಲ್ಲವೆಂದಾದರೆ ಆಗ ಆ ಸಂಬಂಧದಲ್ಲಿ ಏನೋ ಸಮಸ್ಯೆಯಿದೆ ಎಂದರ್ಥ. ಇಬ್ಬರು ವ್ಯಕ್ತಿಗಳು ಜತೆಯಾಗಿ ಬರುವ ಉದ್ದೇಶವೆಂದರೆ ಜತೆಯಾಗಿ ಬದುಕುವುದು. ಕೇವಲ ಲೈಂಗಿಕ ಆಕರ್ಷಣೆ ಮಾತ್ರ ಜೀವಮಾನವಿಡಿ ನಿಮ್ಮನ್ನು ಜತೆಯಾಗಿಡುವುದಿಲ್ಲ. ಸಂಬಂಧದಲ್ಲಿ ಅಸೂಯೆ ದೂರವಿರಿಸಲು ಸಂವಹನ ಅತ್ಯಂತ ಪರಿಣಾಮಕಾರಿ ವಿಧಾನ.

3. ವೈಯಕ್ತಿಕತೆಗೆ ಅವಕಾಶವಿರಲಿ

3. ವೈಯಕ್ತಿಕತೆಗೆ ಅವಕಾಶವಿರಲಿ

ಯಾವುದೇ ಯಶಸ್ವಿ ಸಂಬಂಧಕ್ಕೆ ಸಂಗಾತಿಗಳು ಪರಸ್ಪರ ವೈಯಕ್ತಿಕತೆ ಕಾಯ್ದುಕೊಳ್ಳಬೇಕು. ವೈಯಕ್ತಿಕ ಜಾಗವನ್ನು ಯಾರು ಕೂಡ ಆಕ್ರಮಿಸಬಾರದು. ಸಂಬಂಧದಲ್ಲಿ ವೈಯಕ್ತಿಕತೆಗೆ ಅವಕಾಶವಿಲ್ಲವೆಂದರೆ ಆಗ ಅಭದ್ರತೆ ಮತ್ತು ಅಸೂಯೆ ಆರಂಭವಾಗುತ್ತದೆ. ನಿಮ್ಮ ಸಂಗಾತಿಯ ಜೀವನದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂದು ನೀವು ಅರಿತುಕೊಳ್ಳಬೇಕು. ಆದರೆ ಅತಿಯಾದ ಹಸ್ತಕ್ಷೇಪ ಒಳ್ಳೆಯದಲ್ಲ. ಯಾವಾಗಲೂ ನಿಮ್ಮ ಸಂಗಾತಿಗೆ ವೈಯಕ್ತಿಕ ಅವಕಾಶ ನೀಡಿ. ನೀವು ಅವರನ್ನು ಹೆಚ್ಚು ಉಸಿರುಗಟ್ಟಿಸಿದರೆ ಆಗ ಪ್ರೀತಿ ಕೊನೆಯಾಗುವ ಅವಕಾಶ ಹೆಚ್ಚು.

4. ಅರ್ಥಮಾಡಿಕೊಳ್ಳುವುದು

4. ಅರ್ಥಮಾಡಿಕೊಳ್ಳುವುದು

ಯಾವುದೇ ಸಂಬಂಧದಲ್ಲಿ ಅಸೂಯೆ ಕಡೆಗಣಿಸುವ ಒಳ್ಳೆಯ ಮಾರ್ಗವೆಂದರೆ ಸಂಗಾತಿಯನ್ನು ಅರ್ಥಮಾಡಿಕೊಳ್ಳುವುದು. ಆರೋಗ್ಯಕರ ಸಂಬಂಧಕ್ಕೆ ಅರ್ಥಮಾಡಿಕೊಳ್ಳುವುದು ಅತೀ ಅಗತ್ಯ. ನಿಮ್ಮ ಸಂಗಾತಿಯ ಬೇಡಿಕೆ ಮತ್ತು ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳಿ. ವಿಶ್ವಾಸ ಮತ್ತು ಅರ್ಥಮಾಡಿಕೊಳ್ಳುವುದರಲ್ಲಿ ವ್ಯತ್ಯಾಸವಿದೆ. ಇದು ಎರಡು ಭಿನ್ನ ವಿಷಯಗಳು. ಆದರೆ ಸಂಬಂಧದ ಉಳಿವಿಗೆ ಎರಡೂ ತುಂಬಾ ಮುಖ್ಯ.

5. ಪ್ರೀತಿ ಹಾಗೆ ಮುಂದುವರಿಯಲಿ

5. ಪ್ರೀತಿ ಹಾಗೆ ಮುಂದುವರಿಯಲಿ

ಏನೇ ಆದರೂ ನಿಮ್ಮ ಹೃದಯದಲ್ಲಿನ ಪ್ರೀತಿ ಮಾತ್ರ ಕಡಿಮೆಯಾಗದಂತೆ ನೋಡಿಕೊಳ್ಳಿ. ನಿಮ್ಮ ಸಂಗಾತಿ ಬಗ್ಗೆ ಯಾವುದೇ ಭಾವನೆ ಇಲ್ಲವೆಂದು ನಿಮಗನಿಸಿದರೆ ಆಗ ಬೇರ್ಪಡಲು ಆರಂಭಿಸುತ್ತೀರಿ. ಯಾವುದೇ ಸಂಬಂಧದಲ್ಲೂ ಪ್ರೀತಿ ಕೊನೆಯಾಗಬಾರದು. ಸಂಬಂಧದಲ್ಲಿ ಬರುವಂತಹ ಯಾವುದೇ ಸಮಸ್ಯೆಗಳನ್ನು ಪ್ರೀತಿಯಿದ್ದರೆ ಎದುರಿಸಬಹುದು. ಸಂಗಾತಿ ನಿಮ್ಮನ್ನು ತುಂಬಾ ಪ್ರೀತಿಸುತ್ತಿದ್ದಾರೆಂದು ನಿಮ್ಮ ಮನಸ್ಸಿನಲ್ಲಿದ್ದರೆ ಆಗ ಅಸೂಯೆ ಅಥವಾ ಅಭದ್ರತೆ ದೂರ ಮಾಡಬಹುದು.

Story first published: Saturday, December 28, 2013, 15:24 [IST]
X
Desktop Bottom Promotion