For Quick Alerts
ALLOW NOTIFICATIONS  
For Daily Alerts

ಮದುವೆ ಹಣಕ್ಕಾಗಿಯೇ ಅಥವಾ ಪ್ರೀತಿಗಾಗಿಯೇ?

By Hemanth P
|

ಮದುವೆಗಳು ಸ್ವರ್ಗದಲ್ಲಿ ನಿರ್ಧಾರವಾಗುತ್ತದೆ ಎನ್ನುವ ನಂಬಿಕೆಯಿದೆ. ಇದು ಲವ್ ಮ್ಯಾರೇಜ್ ಅಥವಾ ಅರೇಂಜ್ಡ್ ಮ್ಯಾರೇಜ್ ಆಗಿರಲಿ. ಜೀವಮಾನವಿಡಿ ತಮ್ಮನ್ನು ಪ್ರೀತಿಸುವ, ಆರೈಕೆ ಮತ್ತು ಸುಖದುಃಖ ಹಂಚಿಕೊಳ್ಳುವ ಸಂಗಾತಿಗಾಗಿ ಜನರು ಮದುವೆಯಾಗುತ್ತಾರೆ. ಆದರೆ ಕೆಲವರು ಮದುವೆಯನ್ನು ಕೂಡ ವ್ಯಾಪಾರವಾಗಿ ನೋಡುತ್ತಾರೆ ಮತ್ತು ಹೆಚ್ಚಿನ ಲಾಭ ಇರುವುದನ್ನು ಪರಿಗಣಿಸಿಯೇ ಮದುವೆಯಾಗುತ್ತಾರೆ. ಇದು ಸ್ವಲ್ಪ ವಿಚಿತ್ರವೆನಿಸಿದರೂ ಸತ್ಯ. ಅತಿಯಾದ ಹಣದ ವ್ಯಾಮೋಹ ಹೊಂದಿರುವವರು ಹಣಕ್ಕಾಗಿಯೇ ಮದುವೆಯಾಗುತ್ತಾರೆ.

ವ್ಯಾಪಾರ ದೃಷ್ಟಿಯಿಂದ ಆಗುವ ಮದುವೆಗಳು ಕೂಡ ಯಶಸ್ವಿಯಾಗುತ್ತದೆ. ಮದುವೆ ಹಣಕ್ಕಾಗಿಯೇ ಅಥವಾ ಪ್ರೀತಿಗಾಗಿಯಾ ಎನ್ನುವ ದೊಡ್ಡ ಪ್ರಶ್ನೆ ಈಗಲೂ ಹಾಗೆ ಉಳಿದುಕೊಂಡಿದೆ. ಜೀವನದಲ್ಲಿ ಪ್ರೀತಿ ತುಂಬಾ ಮುಖ್ಯ. ಆದರೆ ಅದಕ್ಕಾಗಿ ಹಣವನ್ನು ನಿರ್ಲಕ್ಷಿಸಲು ಸಾಧ್ಯವೇ? ಬೆಳೆಯುತ್ತಿರುವ ಬೇಡಿಕೆ ಮತ್ತು ಹೆಚ್ಚುತ್ತಿರುವ ಆರ್ಥಿಕತೆಯಿಂದಾಗಿ ಇಂದು ಪ್ರತಿಯೊಬ್ಬರು ಪ್ರಾಯೋಗಿಕವಾಗಿ ಯೋಚಿಸಬೇಕಾಗುತ್ತದೆ. ಜೀವಮಾನವಿಡಿ ಕೇವಲ ಪ್ರೀತಿಯಿಂದ ಮಾತ್ರ ಬದಕಲು ಸಾಧ್ಯವಿಲ್ಲ ಎನ್ನುವುದು ಕಟು ಸತ್ಯ. ಕೈಯಲ್ಲಿ ಹಣವಿಲ್ಲವೆಂದಾದರೆ ಆಗ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಹಣವಿಲ್ಲದಾಗ ಎಷ್ಟೇ ಪ್ರೀತಿಯಿದ್ದರೂ ಅದು ಸಮಸ್ಯೆಗಳನ್ನ ನಿವಾರಿಸಲು ನೆರವಾಗದು.

ಪ್ರೀತಿಗಾಗಿ ಮದುವೆಯಾಗುವುದಕ್ಕಿಂತ ಹಣಕ್ಕಾಗಿ ಮದುವೆಯಾಗುವುದು ಒಳ್ಳೆಯದು ಎಂದು ಕೆಲವೊಂದು ಕಾರಣಗಳು ಹಾಗೂ ಉದಾಹರಣೆಗಳು ಹೇಳುತ್ತವೆ. ಜನರು ಇಂದು ಪ್ರಾಯೋಗಿಕವಾಗಿ ಯೋಚಿಸಲು ಆರಂಭಿಸಿದ್ದು, ಹಣದ ಹೆಚ್ಚುತ್ತಿರುವ ಮೌಲ್ಯ ಮತ್ತು ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಹಣ ಅಥವಾ ಪ್ರೀತಿಗಾಗಿ ಮದುವೆಯಾಗಲು ಬಯಸುವವರಿಗೆ ಕೆಲವೊಂದು ಸಂಬಂಧಿ ಟಿಪ್ಸ್ ಗಳಿವೆ.

Marrying For Wealth Or Love: Which Is More Important

ಭದ್ರತೆ
ಸಂಪತ್ತು ಅಥವಾ ಪ್ರೀತಿಗಾಗಿ ಮದುವೆಯಾಗುದಿದ್ದರೆ ಆಗ ಭವಿಷ್ಯದ ಭದ್ರತೆ ನೋಡಿಕೊಳ್ಳಬೇಕು. ಆರ್ಥಿಕ ಸ್ಥಿರತೆಗೆ ಭದ್ರತೆ ತುಂಬಾ ಮುಖ್ಯ. ಉತ್ತಮ ಆರ್ಥಿಕ ಭದ್ರತೆ ಹಾಗೂ ಸ್ಥಿರತೆ ಒದಗಿಸುವಂತಹವರನ್ನು ಮದುವೆಯಾಗಿ ಎನ್ನುವುದು ಸಂಬಂಧದ ಟಿಪ್ಸ್. ಪ್ರೀತಿ ತುಂಬಾ ಮುಖ್ಯ. ಅದೇ ರೀತಿ ಭದ್ರತೆ ಕೂಡ. ಭವಿಷ್ಯಕ್ಕಾಗಿ ಏನಾದರೂ ಭರವಸೆ ಬೇಕಾಗುತ್ತದೆ. ಹಣಕ್ಕಾಗಿ ಹಪಹಪಿಸಬೇಡಿ, ಆದರೆ ಮದುವೆ ಬಳಿಕ ಭವಿಷ್ಯ ಮತ್ತು ಭದ್ರತೆ ಬಗ್ಗೆ ನೋಡಿಕೊಳ್ಳಿ.

ನೆಮ್ಮದಿ
ನೆಮ್ಮದಿಯೆಂದರೆ ಜೀವನದ ಎಲ್ಲಾ ಐಷಾರಾಮಗಳು ಎಂದರ್ಥವಲ್ಲ. ಮದುವೆ ಬಳಿಕ ಕೆಲವೊಂದು ಮೂಲಕ ಅಗತ್ಯತೆಗಳು ಹಾಗೂ ಸೌಕರ್ಯಗಳು ಸಿಗಬೇಕು. ಕೇವಲ ಪ್ರೀತಿಗಾಗಿ ಮದುವೆಯಾಗುವುದರಿಂದ ನಿಮಗೆ ಜೀವನದಲ್ಲಿ ಬೇಕಾಗುವ ನೆಮ್ಮದಿ ಸಿಗದು. ನೀವು ಪ್ರೀತಿಸುವ ವ್ಯಕ್ತಿಯನ್ನು ಮದುವೆಯಾದರೂ ಆ ವ್ಯಕ್ತಿಯಿಂದ ನಿಮ್ಮ ಮೂಲ ಬೇಡಿಕೆಗಳು ಈಡೇರುತ್ತವೆಯಾ ಎಂದು ನೋಡಿಕೊಳ್ಳಿ.

ತೃಪ್ತಿ
ನಿಸ್ಸಂಶಯವಾಗಿಯೂ ಸಂಬಂಧ ಉಳಿಯಲು ಪ್ರೀತಿ ತುಂಬಾ ಮುಖ್ಯ. ಆದರೆ ಕುಟುಂಬ ಉಳಿಯಲು ಹಣ ಮತ್ತು ಸಂಪತ್ತು ಅಷ್ಟೇ ಮುಖ್ಯ. ಸಂಪತ್ತು ಅಥವಾ ಪ್ರೀತಿಯನ್ನು ಕಡೆಗಣಿಸುವಂತಿಲ್ಲ. ಕುಟುಂಬಕ್ಕೆ ಒಂದು ತೃಪ್ತಿದಾಯಕ ಹಣ ಅತ್ಯಗತ್ಯ. ತನ್ನ ಕುಟುಂಬ ಹಾಗೂ ತನ್ನ ಬೇಡಿಕೆಗಳು ಈಡೇರಬೇಕೆಂದು ಮಹಿಳೆಯೊಬ್ಬಳು ಬಯಸುತ್ತಾಳೆ. ಅದೇ ರೀತಿ ಪುರುಷರು ತಮ್ಮ ಪತ್ನಿ ಮನೆಯ ಜವಾಬ್ದಾರಿ ಪಡೆದು ತನ್ನನ್ನು ತೃಪ್ತಿಗೊಳಿಸಬೇಕೆಂದು ಬಯಸುತ್ತಾರೆ. ಸಂಪತ್ತು ಅಥವಾ ಪ್ರೀತಿಗಾಗಿ ಮದುವೆಯಾದರೂ ತೃಪ್ತಿ ಬೇಕೇಬೇಕು. ಪ್ರೀತಿಗಾಗಿ ಮದುವೆಯಾಗುವುದಕ್ಕಿಂತ ಹಣಕ್ಕಾಗಿ ಮದುವೆಯಾಗುವುದು ತುಂಬಾ ತೃಪ್ತಿಕರವೆಂದು ಭಾವಿಸಲಾಗಿದೆ.

ಕೌಟುಂಬಿಕ ಹಿನ್ನೆಲೆ
ಹಿಂದಿನ ಕಾಲದಿಂದಲೂ ನಮ್ಮ ಸಮಾಜದಲ್ಲಿ ಕಂಡುಬರುತ್ತಿರುವ ಅರೇಂಜ್ಡ್ ಮ್ಯಾರೇಜ್ ಗಳು ಹಣದ ಹಿನ್ನೆಲೆಯಿಂದಲೇ ನಡೆಯುತ್ತದೆ. ಕುಟುಂಬಗಳು ಯಾವಾಗಲೂ ವರ ಅಥವಾ ವಧುವನ್ನು ಹುಡುಕುವಾಗ ಸಮಾಜ ಜಾತಿ, ಸಮಾಜ ಮತ್ತು ಸಂಪತ್ತನ್ನು ನೋಡಿಯೇ ಮದುವೆ ನಿಶ್ಚಯ ಮಾಡುತ್ತಾರೆ. ನಮ್ಮ ಹೆತ್ತವರು ಮತ್ತು ಅಜ್ಜಂದಿರುವ ಹಣಕ್ಕಾಗಿಯೇ ಮದುವೆಯಾಗಿರುವ ಕಾರಣ ಹಣಕ್ಕಾಗಿ ಮದುವೆಯಾಗುವುದು ವಿಚಿತ್ರವೆಂದೆನಿಸದು. ಮದುವೆ ಬಳಿಕ ಅವರಲ್ಲಿ ಪ್ರೀತಿ ಬೆಸೆದಿದೆ. ಸಂಪತ್ತಿಗಾಗಿ ಅಥವಾ ಅರೇಂಜ್ಡ್ ಮ್ಯಾರೇಜ್ ಗಳು ತಮ್ಮದೇ ಘನತೆ ಮತ್ತು ಅಂತಸ್ತಿನ ಸಂಗಾತಿಯನ್ನು ಆಯ್ಕೆ ಮಾಡಲಾಗುತ್ತದೆ. ಪ್ರೀತಿಗಾಗಿ ಮದುವೆಯು ಕೆಲವೊಂದು ಕಟ್ಟುಪಾಡುಗಳನ್ನು ಮೀರಿ ನಿಲ್ಲುತ್ತದೆ.

ದೀರ್ಘಬಾಳಿಕೆ
ಇದು ಸ್ವಲ್ಪ ವಿಚಿತ್ರವೆನಿಸಿದರೂ ಪ್ರೀತಿಗಾಗಿ ಮದುವೆಯಾಗುವುದಕ್ಕಿಂತ ಹಣಕ್ಕಾಗಿ ಆಗುವ ಮದುವೆಯು ಹೆಚ್ಚು ಕಾಲ ಬಾಳುತ್ತದೆ. ಯಾಕೆಂದರೆ ಮದುವೆಯ ಸ್ವಲ್ಪ ಸಮಯದ ಬಳಿಕ ಪ್ರೀತಿ ಎನ್ನುವುದು ಮಾಯವಾಗುತ್ತದೆ. ದೈನಂದಿನ ಸಮಸ್ಯೆ, ಕುಟುಂಬದ ಅಗತ್ಯತೆಗಳು ಮತ್ತು ಕೆಲಸದ ಒತ್ತಡ ಇತ್ಯಾದಿಗಳು ಪ್ರೀತಿಯನ್ನು ಹಿಂದಿಕ್ಕುತ್ತದೆ. ಇಂತಹ ಮದುವೆಗಳಲ್ಲಿ ಜಗಳ ಮತ್ತು ಮಾತಿನ ಚಕಮಕಿ ಆಗುತ್ತಿರುತ್ತದೆ. ಇದು ಸಂಪತ್ತಿಗಾಗಿ ಆದ ಮದುವೆಯಲ್ಲೂ ನಡೆಯುತ್ತದೆ. ಆದರೆ ಬಿಎಂಡಬ್ಲ್ಯೂನಲ್ಲಿ ಕುಳಿತು ಅಳುವುದು ಒಳ್ಳೆಯದೇ ಅಥವಾ ಸೈಕಲ್ ನಲ್ಲೇ ಎಂದು ನೀವೇ ಯೋಚಿಸಿ.

English summary

Marrying For Wealth Or Love: Which Is More Important

Marriages are pious relationships bound between two people. There are either arranged marriages or love marriages. People marry because they want somebody to love, care and cherish them all life.
Story first published: Thursday, December 19, 2013, 17:04 [IST]
X
Desktop Bottom Promotion