For Quick Alerts
ALLOW NOTIFICATIONS  
For Daily Alerts

ಮಗಳೊಂದಿಗಿನ ಸಂಬಂಧ ಹೀಗೆ ಬಲಪಡಿಸಿ

By Hemanth P
|

ತಮ್ಮಲ್ಲಿರುವ ಕೆಲವೊಂದು ಸಾಮಾನ್ಯ ಗುಣಲಕ್ಷಣಗಳಿಂದಾಗಿ ಮಗನೊಂದಿಗೆ ಹೊಂದಿಕೊಳ್ಳುವುದು ಸುಲಭವೆಂದು ಕೆಲವು ಪುರುಷರು ಭಾವಿಸುತ್ತಾರೆ. ಅದೇ ರೀತಿ ಮಗಳು ಯಾವಾಗಲೂ ತಾಯಿಯೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಾಳೆ ಎಂದು ಭಾವಿಸುತ್ತಾರೆ. ಆದರೆ ಇದು ನಿಜವಲ್ಲ. ಹುಡುಗಿಯರು ತಾಯಿ ಜತೆಗೆ ಸುಲಭವಾಗಿ ಹೊಂದಿಕೊಳ್ಳಬಹುದು. ಆದರೆ ಅವರು ಮಾರ್ಗದರ್ಶನ ಮತ್ತು ಬೆಂಬಲಕ್ಕೆ ತಂದೆಯತ್ತ ನೋಡಬಹುದು. ತಂದೆ ಮತ್ತು ಮಗಳ ನಡುವಿನ ಬಲವಾದ ಸಂಬಂಧವು ಆಕೆಯಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮೂಡಿಸಿ, ಸ್ವಾವಲಂಬನೆ ಮತ್ತು ಜೀವನವನ್ನು ಧನಾತ್ಮಕವಾಗಿ ಸ್ವೀಕರಿಸುವಂತಾಗಬಹುದು.

ಮಗಳ ಭಾವನೆ ಮತ್ತು ಅಗತ್ಯತೆಗಳನ್ನು ತಿಳಿದುಕೊಳ್ಳಲು ತಂದೆಯಾಗಿ ನೀವು ತುಂಬಾ ಶ್ರಮ, ಸಂಬಂಧದ ಬೆಸುಗೆಗೆ ಸಮಯ ಮತ್ತು ತಿಳುವಳಿಕೆ ಬೇಕಾಗುತ್ತದೆ. ಹೆಚ್ಚಿನ ಹುಡುಗಿಯರು ತಮ್ಮ ತಂದೆಯನ್ನೇ ಅನುಸರಿಸುತ್ತಾರೆ ಮತ್ತು ತಮ್ಮ ತಂದೆ ತಮಗೆ ಪ್ರೇರಣೆಯಾಗಬೇಕೆಂಬ ಜವಾಬ್ದಾರಿ ತಂದೆಯ ಮೇಲೆ ಹಾಕುತ್ತಾರೆ.

Building a strong relationship with daughter

ಮಗಳೊಂದಿಗೆ ಬಲವಾದ ಸಂಬಂಧ ಬೆಳೆಸಲು ನೀವು ಸಣ್ಣ ಹಜ್ಜೆಯನ್ನಿಡುವ ಮೂಲಕ ಆರಂಭ ಮಾಡಬೇಕು. ನೀವು ಮಗಳ ಭಾವನೆ ಮತ್ತು ಅಗತ್ಯತೆಯನ್ನು ಅರ್ಥ ಮಾಡಿಕೊಳ್ಳುವುದು ಮಗನನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ತುಂಬಾ ಭಿನ್ನವಾಗಿರುತ್ತದೆ. ನೀವು ಮಗಳ ಟೀ ಪಾರ್ಟಿಯಲ್ಲಿ ಭಾಗವಹಿಸಲು ಬಯಸದೇ ಇರಬಹುದು. ಆದರೆ ಅಲ್ಲಿ ನಿಮ್ಮ ಉಪಸ್ಥಿತಿ ಆಕೆಯ ಸಂಭ್ರಮ ಹೆಚ್ಚಿಸಿ, ನಿಮ್ಮೊಂದಿಗಿನ ಸಂಬಂಧ ಬಲಪಡಿಸಲು ನೆರವಾಗಬಹುದು.

1. ಹುಟ್ಟುಹಬ್ಬ
ಆಕೆಯ ಹುಟ್ಟುಹಬ್ಬದಂದು ನೀವು ಜತೆಗಿರುವುದು ಮಗಳೊಂದಿಗಿನ ಸಂಬಂಧ ಬಲಪಡಿಸುತ್ತದೆ. ತಮ್ಮ ವಿಶೇಷ ಸಂಭ್ರಮದಲ್ಲಿ ತಮ್ಮ ಪ್ರೀತಿಪಾತ್ರರು ಜತೆಗಿರುವುದು ಹೆಚ್ಚಿನ ಹುಡುಗಿಯರಿಗೆ ವಿಶ್ವವೇ ಗೆದ್ದಂತೆ

2. ಆಕೆ ಉಡುಗೊರೆ ಬಗ್ಗೆ ತಿಳಿಯಿರಿ
ನಿಮ್ಮ ಮಗನಿಗಿಂತ ತುಂಬಾ ಭಿನ್ನವಾದ ಉಡುಗೊರೆಯನ್ನು ಮಗಳು ಬಯಸುತ್ತಾಳೆ. ಆಕೆಯ ಇಷ್ಟದ ಬಗ್ಗೆ ನೀವು ಹೆಚ್ಚಿನ ಸಂಶೋಧನೆ ಮಾಡಿ. ಆಕೆಗೆ ಇಷ್ಟವಾಗುವ ಉಡುಗೊರೆಗಳ ಬಗ್ಗೆ ಆಕೆಯೊಂದಿಗೆ ಚರ್ಚಿಸಿ ಸಲಹೆ ಪಡೆಯಿರಿ. ಆಕೆಯ ಬಗ್ಗೆ ನೀವು ಎಷ್ಟು ಕಾಳಜಿ ವಹಿಸಿದ್ದೀರಿ ಎಂದು ಇದು ತಿಳಿಸುತ್ತದೆ.

3. ಸೌಮ್ಯ ಮಾತು
ನೀವು ಮಗಳೊಂದಿಗೆ ಮಾತನಾಡುವಾಗ ಸೌಮ್ಯ ಮತ್ತು ಕಾಳಜಿಯಿರಲಿ. ಹುಡುಗಿಯರು ತುಂಬಾ ಸೂಕ್ಷ್ಮ ಮತ್ತು ಬೇಗನೆ ಭಾವೋದ್ವೇಗಕ್ಕೆ ಒಳಗಾಗುತ್ತಾರೆ. ತುಂಬಾ ಸೌಮ್ಯವಾಗಿ ಮಾತನಾಡಿ, ನಿಮ್ಮ ಮಾತಿನಲ್ಲಿ ಪ್ರೀತಿಯಿರಲಿ.

4. ಆಕೆಯ ಆಟವನ್ನಾಡಿ
ನೀವು ಕಠಿಣ ಆಟವನ್ನು ಆಡುತ್ತಿರುವವರು ಆಗಿರಬಹುದು. ಆದರೆ ಮಗಳೊಂದಿಗೆ ಆಡುವಂತಹ ಸನ್ನಿವೇಶ ಬಂದಾಗ ನೀವು ಆಕೆಯ ನಿಯಮ ಮತ್ತು ಆಟಗಳನ್ನು ಆಡಿ. ಮಕ್ಕಳ ಆಟಿಕೆಯ ಕುರ್ಚಿಯಲ್ಲಿ ಕುಳಿತುಕೊಂಡು ಟೀ ಕುಡಿಯುವುದು ತುಂಬಾ ಒರಟಾಗಿ ಕಾಣಿಸಬಹುದು. ಆದರೆ ಆಕೆಗೆ ತನ್ನ ತಂದೆಯ ಜತೆ ಟೀ ಕುಡಿದಿರುವುದು ಎಲ್ಲವನ್ನು ಗೆದ್ದಂತೆ.

5. ಜತೆಯಾಗಿ ಸಮಯ ಕಳೆಯಿರಿ
ನೀವು ನಿಯಮಿತವಾಗಿ ಮಗಳೊಂದಿಗೆ ಸಮಯ ಕಳೆಯಿರಿ. ಆಕೆಯೊಂದಿಗೆ ಕಳೆಯುವ ಅಮೂಲ್ಯ ಸಮಯವು ನಿಮ್ಮಿಬ್ಬರ ನಡುವಿನ ಸಂಬಂಧ ಬಲಗೊಳ್ಳಲು ನೆರವಾಗುತ್ತದೆ. ಆಕೆಯ ಜೀವನದ ಬಗ್ಗೆ ನಿಮಗೆ ಗಮನಹರಿಸಲು ಸಾಧ್ಯವಾಗುತ್ತದೆ.

6. ಹೊರಗಡೆ ಹೋಗುವುದು
ಪುರುಷರು ತಮ್ಮ ಮಗನೊಂದಿಗೆ ಹೊರಗಡೆ ಸುತ್ತಾಡಲು ಹೋಗಲು ಬಯಸುತ್ತಾರೆ. ಮಗಳೊಂದಿಗೆ ಹೊರಗಡೆ ಸುತ್ತಾಡಲು ಹೋದರೆ ಹೆಚ್ಚಿನ ಆನಂದ ಪಡೆಯಬಹುದು. ಆಕೆ ಹೋಗಲು ಬಯಸುವ ಜಾಗಗಳು ಭಿನ್ನವಾಗಿರಬಹುದು. ಆದರೆ ಮಗಳೊಂದಿಗೆ ಪಾರ್ಕ್ ಗೆ ಹೋಗುವುದು ನಿಮ್ಮಿಬ್ಬರ ಸಂಬಂಧ ಬಲಪಡಿಸುತ್ತದೆ.

7. ಶಾಪಿಂಗ್
ಎಲ್ಲಾ ಹುಡುಗಿಯರು ಶಾಪಿಂಗ್ ಇಷ್ಟಪಡುತ್ತಾರೆ. ಒಂದು ಹಂತದ ತನಕ ಹುಡುಗಿಯರು ತಮ್ಮ ತಂದೆ ಶಾಪಿಂಗ್ ಗೆ ಕರೆದುಕೊಂಡು ಹೋಗಬೇಕೆಂದು ಬಯಸುತ್ತಾರೆ. ನಿಮಗೆ ಭಡ್ತಿ ಸಿಕ್ಕಿದಾಗ ಆಕೆಯನ್ನು ಶಾಪಿಂಗ್ ಗೆ ಕರೆದುಕೊಂಡು ಹೋಗಿ ಸಪ್ರೈಸ್ ನೀಡಬಹುದು.

8. ಆಕೆಗೆ ಕಥೆಗಳನ್ನು ಹೇಳಿ
ಮಗಳನ್ನು ಮಲಗಿಸಲು ಕಥೆ ಹೇಳುವ ಮೂಲಕ ನಿಮ್ಮ ಮಗಳೊಂದಿಗಿನ ಸಂಬಂಧ ಬಲವಾಗಬಹುದು. ಕೆಲವೊಂದು ಸರಳ ಕಥೆಗಳ ಪುಸ್ತಕಗಳನ್ನು ಖರೀದಿಸಿ ಮತ್ತು ಆಕೆಯನ್ನು ಮಲಗಿಸಲು ಈ ಕಥೆ ಹೇಳಿ ನಿಮ್ಮ ಪ್ರೀತಿ ತೋರಿಸಿ

9. ರಜಾ ದಿನಗಳು
ನಿಮ್ಮ ಮಗಳನ್ನು ಗಮನದಲ್ಲಿಟ್ಟುಕೊಂಡು ನಿಯಮಿತವಾಗಿ ರಜಾದಿನಗಳ ಯೋಜನೆ ಹಾಕಿಕೊಳ್ಳಿ. ಆಕೆ ಹೊರಗಡೆ ಹೋದಾಗ ಅಥವಾ ರಜಾದಿನಗಳಲ್ಲಿ ಏನು ಬಯಸುತ್ತಾಳೆ ಎಂದು ತಿಳಿದುಕೊಳ್ಳಿ ಮತ್ತು ಇದನ್ನು ನಿಮ್ಮ ವೇಳಾಪಟ್ಟಿಗೆ ಸೇರಿಸಿ ಆಕೆ ಸಂತಸದಿಂದ ಇರುವಂತೆ ಮಾಡಿ.

English summary

Building a strong relationship with daughter

Men don’t think their sons are easier to connect with and will have things in common that will make each other bond naturally. Similarly men also think that their daughters are more easily connected to their mothers than with them.
Story first published: Monday, December 16, 2013, 14:18 [IST]
X
Desktop Bottom Promotion