For Quick Alerts
ALLOW NOTIFICATIONS  
For Daily Alerts

ಪರಿಪೂರ್ಣ ಮಗನಾಗಲು ಹತ್ತು ಹೆಜ್ಜೆಗಳು

By Hemanth P
|

ಒಳ್ಳೆಯ ಮಗನನ್ನು ಪಡೆಯುವುದು ಪ್ರತಿಯೊಬ್ಬ ಹೆತ್ತವರ ಕನಸು. ಪರಿಪೂರ್ಣ ಮಗನಾಗಿ ಹೆತ್ತವರ ಋಣ ಸ್ವಲ್ಪವಾದರೂ ತೀರಿಸಬಹುದು. ತಾಯಿಯ ಗರ್ಭದಲ್ಲಿರುವಾಗಿನಿಂದ ನಿಮಗೆ ನೀಡಿದಂತಹ ಸ್ವಾರ್ಥರಹಿತ ಪ್ರೀತಿಗೆ ಪ್ರತಿಯಾಗಿ ನೀವು ಒಳ್ಳೆಯ ಮಗನಾಗಿ ಋಣ ಸಂದಾಯ ಮಾಡಬಹುದು. ನಿಮ್ಮ ನಿರೀಕ್ಷೆಯಲ್ಲಿದ್ದ ದಿನದಿಂದ ಹೆತ್ತವರು ನಿಮ್ಮ ಬಗ್ಗೆ ಕಾಳಜಿ ವಹಿಸಲು ಆರಂಭಿಸಿದ್ದಾರೆ. ಇದಕ್ಕಾಗಿ ಅವರು ತಮ್ಮ ಆರಾಮ ಹಾಗೂ ಸಂತೋಷವನ್ನೇ ತ್ಯಾಗ ಮಾಡಿರಬಹುದು.

ಒಳ್ಳೆಯ ಮಗನಾಗಲು ಬಯಸಿದರೆ ಇದು ಒಂದು ಕರ್ತವ್ಯ ಅಥವಾ ಸಮತೋಲನದ ಕ್ರಮವೆಂದು ಭಾವಿಸಬೇಡಿ. ಒಳ್ಳೆಯ ಹೆತ್ತವರು ಯಾವತ್ತೂ ತಮ್ಮ ಮಕ್ಕಳಿಂದ ಪ್ರೀತಿ ಹೊರತುಪಡಿಸಿ ಬೇರೆ ಏನನ್ನೂ ಬಯಸುವುದಿಲ್ಲ. ಒಳ್ಳೆಯ ಮಗನಾಗುವುದು ಒಂದು ಸಂಗತಿಯಲ್ಲ. ಆದರೆ ಮುಂದೆ ನೀವು ಕೂಡ ಒಳ್ಳೆಯ ಮಕ್ಕಳಿಗೆ ಪೋಷಕರಾಗಲು ಇದು ಒಂದು ದಾರಿ. ಮಕ್ಕಳು ತಮ್ಮ ಹೆತ್ತವರ ಪ್ರತಿರೂಪದಂತಿರುತ್ತಾರೆ.

ಪರಿಪೂರ್ಣ ಮಗನಾಗಲು ನಿಮ್ಮನ್ನು ಹೆತ್ತವರು ಪ್ರೀತಿಸಿದಂತೆ ಸ್ವಾರ್ಥರಹಿತವಾಗಿ ಪ್ರೀತಿಸಬೇಕು. ನಿಜವಾದ ಪ್ರೀತಿಯಿದ್ದರೆ ಗೌರವ ಮತ್ತು ನಿಸ್ವಾರ್ಥವೆನ್ನುವುದು ತಾನಾಗಿಯೇ ಬರುತ್ತದೆ. ಹೆತ್ತವರಿಗೆ ಅಗತ್ಯವಿದ್ದಾಗ ನೀವು ಅವರ ಜತೆಗಿರುವುದು ಅವರ ಬಗ್ಗೆ ನಿಮ್ಮ ಕಾಳಜಿ ತೋರಿಸುತ್ತದೆ. ನೀವು ಪ್ರಾಪಂಚಿಕವಾಗಿ ಆಲೋಚಿಸಿ ಲೆಕ್ಕವಿಲ್ಲದಷ್ಟು ಉಡುಗೊರೆಗಳನ್ನು ನಿಮ್ಮ ಪೋಷಕರಿಗೆ ನೀಡಬಹುದು. ಆದರೆ ಇದೆಲ್ಲಕ್ಕಿಂತವೂ ಡಿನ್ನರ್ ಗೆ ಆಹ್ವಾನಿಸುವುದು ನೀವು ಯೋಚಿಸುವುದಕ್ಕಿಂತ ಎಷ್ಟೋ ಮೇಲು.

ಪರಿಪೂರ್ಣ ಮಗನಾಗುವ ದಾರಿಗಳು

1. ಪ್ರೀತಿ

1. ಪ್ರೀತಿ

ಪರಿಪೂರ್ಣ ಮಗನಾಗಲು ನೀವು ಅವರನ್ನು ಎಷ್ಟು ಪ್ರೀತಿಸುತ್ತಿದ್ದೀರಿ ಎಂದು ತೋರಿಸಬೇಕು. ಪರಿಪೂರ್ಣ ಮಗನಾಗಲು ಇದು ಮೂಲ ಮತ್ತು ಮುಖ್ಯ ಹೆಜ್ಜೆ. ಇದನ್ನು ಮಾಡಲು ನಾಚಿಕೆ ಪಡಬೇಕಾಗಿಲ್ಲ.

2. ಜವಾಬ್ದಾರಿಯುತ ವ್ಯಕ್ತಿಯಾಗಿ

2. ಜವಾಬ್ದಾರಿಯುತ ವ್ಯಕ್ತಿಯಾಗಿ

ಪರಿಪೂರ್ಣ ಮಗನೆಂದರೆ ಆತ ಜವಾಬ್ದಾರಿ ತೆಗೆದುಕೊಂಡು ತನ್ನ ಮತ್ತು ಕುಟುಂಬದ ಆರೈಕೆ ಮಾಡುತ್ತಾನೆ. ಇದರಿಂದ ನೀವು ನಿಮ್ಮ ಕಾಲಮೇಲೆ ನಿಂತಿದ್ದೀರಿ ಮತ್ತು ಅವರ ಅನುಪಸ್ಥಿತಿಯಲ್ಲಿ ನಿಮ್ಮ ಆರೈಕೆ ಮಾಡಿಕೊಳ್ಳಬಲ್ಲೀರಿ ಎಂದು ಹೆತ್ತವರಿಗೆ ಮನವರಿಕೆ ಆಗುತ್ತದೆ.

3. ಗೌರವ ಸೂಚಿಸುವುದು

3. ಗೌರವ ಸೂಚಿಸುವುದು

ಒಳ್ಳೆಯ ಮಗನವಾಗುವುದಕ್ಕೆ ಇದು ತುಂಬಾ ಮುಖ್ಯ ಅಂಶ. ಒಳ್ಳೆಯ ಮಗನಾಗಲು ನೀವು ಕೇವಲ ಹೆತ್ತವರನ್ನು ಗೌರವಿಸಿದರೆ ಸಾಲದು, ನಿಮ್ಮ ಶಿಕ್ಷಕರು, ಸೋದರರು ಮತ್ತು ಸ್ನೇಹಿತರನ್ನು ಗೌರವಿಸಬೇಕು.

4. ಒಳ್ಳೆಯ ವಿದ್ಯಾಭ್ಯಾಸ

4. ಒಳ್ಳೆಯ ವಿದ್ಯಾಭ್ಯಾಸ

ಹದಿಹರೆಯದಿಂದಲೇ ನೀವು ಒಳ್ಳೆಯ ರೀತಿಯಲ್ಲಿ ಕಲಿಯಬೇಕು. ಜೀವನದಲ್ಲಿ ಶಿಕ್ಷಣವು ಅತೀ ಪ್ರಾಮುಖ್ಯವಾಗಿರುತ್ತದೆ. ಒಳ್ಳೆಯ ನೈತಿಕತೆಯೊಂದಿಗೆ ಉತ್ತಮ ಶಿಕ್ಷಣ ಹೊಂದಿರುವ ನಿಮ್ಮನ್ನು ಪರಿಪೂರ್ಣ ಮಗನನ್ನಾಗಿಸಬಹುದು.

5. ಪ್ರಾಮಾಣಿಕತೆ

5. ಪ್ರಾಮಾಣಿಕತೆ

ಹೆತ್ತವರೊಂದಿಗೆ ಪ್ರಾಮಾಣಿಕವಾಗಿರುವುದು ತುಂಬಾ ಮುಖ್ಯ. ನಾವೆಲ್ಲರೂ ತಪ್ಪು ಮಾಡುತ್ತೇವೆ. ಆದರೆ ಪ್ರಾಮಾಣಿಕವಾಗಿ ಇದನ್ನು ಒಪ್ಪಿಕೊಂಡು ಜವಾಬ್ದಾರಿ ಪಡೆದರೆ ಅದು ನಿಜವಾದ ಜಂಟಲ್ ಮೆನ್ ನ ಮತ್ತು ಪರಿಪೂರ್ಣ ಮಗನ ಲಕ್ಷಣ.

6. ಒಡಹುಟ್ಟಿದವರ ಬಗ್ಗೆ ಪ್ರೀತಿ ಮತ್ತು ಕಾಳಜಿ

6. ಒಡಹುಟ್ಟಿದವರ ಬಗ್ಗೆ ಪ್ರೀತಿ ಮತ್ತು ಕಾಳಜಿ

ಒಳ್ಳೆಯ ಮಗನಾಗುವುದು ಕೇವಲ ನಿಮ್ಮ ಮತ್ತು ಹೆತ್ತವರ ನಡುವಿನ ವಿಷಯವಲ್ಲ. ಒಳ್ಳೆಯ ಮಗನಾಗಿ ನೀವು ನಿಮ್ಮ ಒಡಹುಟ್ಟಿದವರನ್ನು ಗೌರವಿಸಬೇಕು, ಪ್ರೀತಿಸಬೇಕು ಮತ್ತು ಅವರ ಬಗ್ಗೆ ಕಾಳಜಿ ವಹಿಸಬೇಕು.

7. ದಾರಿ ತಪ್ಪದಿರಿ

7. ದಾರಿ ತಪ್ಪದಿರಿ

ನಾವು ಬೆಳೆಯುತ್ತಿರುವಂತೆ ಕೆಲವೊಂದು ಸಲ ದಾರಿ ತಪ್ಪುತ್ತೇವೆ. ಅಪರಾಧ, ಜೂಜು ಮತ್ತಿತರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೇವೆ. ಇಂತಹ ಕೆಟ್ಟ ಹವ್ಯಾಸಗಳಿಂದ ದೂರ ಉಳಿಯಬೇಕು.

8. ವ್ಯಸನಿಗಳಾಗುವುದು

8. ವ್ಯಸನಿಗಳಾಗುವುದು

ಸ್ನೇಹಿತರು ಅಥವಾ ಕುಟುಂಬದೊಂದಿಗೆ ಯಾವಾಗಲೊಮ್ಮೆ ಕುಡಿಯುವುದು ಓಕೆ. ಆದರೆ ಕೆಟ್ಟ ಹವ್ಯಾಸಗಳ ವ್ಯಸನಿಗಳಾಬಾರದು. ಮಾದಕ ವ್ಯಸನಗಳಾಗಿರುವ ಡ್ರಗ್ಸ್ ನಂತಹ ಚಟಕ್ಕೆ ಬೀಳದಿರಿ. ಇದರಿಂದ ಹೊರಬರುವುದು ತುಂಬಾ ಕಷ್ಟ.

9. ಹೆತ್ತವರೊಂದಿಗಿರಿ

9. ಹೆತ್ತವರೊಂದಿಗಿರಿ

ಅಗತ್ಯವಿಲ್ಲದಿದ್ದರೆ ನೀವು ಜತೆಗಿರಬೇಕೆಂದು ಹೆತ್ತವರು ಬಯಸುವುದಿಲ್ಲ. ಆದರೆ ಅವರಿಗೆ ಅಗತ್ಯಬಿದ್ದಾಗ ಅವರೊಂದಿಗೆ ಇರುವುದು ಒಬ್ಬ ಪರಿಪೂರ್ಣ ಮಗನ ಕರ್ತವ್ಯ. ನಿಮ್ಮ ಉಪಸ್ಥಿತಿ ಅವರಿಗೆ ಎಲ್ಲವನ್ನು ತಂದುಕೊಡಬಲ್ಲದು.

10. ಒಳ್ಳೆಯ ವ್ಯಕ್ತಿಯಾಗಿ

10. ಒಳ್ಳೆಯ ವ್ಯಕ್ತಿಯಾಗಿ

ಒಳ್ಳೆಯ ಮಗನಾಗಲು ನೀವು ಒಳ್ಳೆಯ ವ್ಯಕ್ತಿಯಾಗುವುದು ಮುಖ್ಯ. ಮಕ್ಕಳಲ್ಲಿ ಹೆತ್ತವರ ಪ್ರತಿರೂಪ ಕಂಡುಬರುತ್ತದೆ. ನಿಮ್ಮ ಹೆತ್ತವರು ಹೆಮ್ಮೆ ಪಡುವಂತಾಗಲು ನೀವು ಒಳ್ಳೆಯ ವ್ಯಕ್ತಿಯಾಗಬೇಕು. ಅವರ ಸ್ನೇಹಿತರಿಂದ ನಿಮ್ಮ ಬಗ್ಗೆ ಒಂದು ಒಳ್ಳೆಯ ಶಬ್ದ ಕೇಳಿದರೆ ಅವರಿಗೆ ಕೋಟಿ ರೂ. ಕೊಟ್ಟಂತೆ.

English summary

10 Steps to become the perfect son

Having a good son is any parents dream and vision. To be a perfect son is an opportunity to give back.
Story first published: Wednesday, December 11, 2013, 9:43 [IST]
X
Desktop Bottom Promotion