For Quick Alerts
ALLOW NOTIFICATIONS  
For Daily Alerts

ವಯಸ್ಸು ಮೂವತ್ತೈದು ದಾಟಿದರೂ ಇನ್ನೂ ಮದುವೆ ಆಗಿಲ್ಲವೇ?

ಇತ್ತೀಚೆಗೆ ನಡೆಸಿದ ಒಂದು ಸಮೀಕ್ಷೆಯಲ್ಲಿ 35-40 ರ ನಡುವಣ ವಯಸ್ಸಿನ ನಗರವಾಸಿ ಅವಿವಾಹಿತ ಪುರುಷರು ಮತ್ತು ಮಹಿಳೆಯರನ್ನು ಈ ಬಗ್ಗೆ ವಿಚಾರಿಸಿದಾಗ ಈಗ ತಮಗೆ ಮದುವೆಯಲ್ಲಿ ಯಾವುದೇ ಆಸಕ್ತಿ ಉಳಿದಿಲ್ಲ ಎಂಬ ಉತ್ತರವೇ ಹೆಚ್ಚಾಗಿ ಸಿಕ್ಕಿದೆ.

By Manu
|

ಕೆಲವು ಕುಟುಂಬಗಳಲ್ಲಿ ಬೇಗನೇ ಮದುವೆ ಮಾಡಿಸಿದರೂ ಕೆಲವರು ಮದುವೆಯಾಗಲು ತೀರಾ ಹಿಂದೇಟು ಹಾಕುತ್ತಾರೆ. ಆದರೆ ವಯೋಸಹಜವಾಗಿ ಮೂವತ್ತರ ಒಳಗೆ ಮದುವೆಯಾದರೆ ಮುಂದಿನ ಜೀವನ ಸುಗಮವಾಗುತ್ತದೆ. ಒಂದು ವೇಳೆ ಮೂವತ್ತೈದು ದಾಟಿದರೂ ಮದುವೆಯನ್ನೇ ಆಗದಿದ್ದರೆ ಮಾತ್ರ ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಒಂಟಿಜೀವನವನ್ನೇ ಪ್ರೀತಿಸಿ ಮುಂದಿನ ಜೀವನವನ್ನೂ ಒಂಟಿಯಾಗಿಯೇ ಕಳೆಯುವ ಮಾನಸಿಕ ಸ್ಥಿತಿ ದೃಢವಾಗುತ್ತಾ ಹೋಗುತ್ತದೆ.

ಇತ್ತೀಚೆಗೆ ನಡೆಸಿದ ಒಂದು ಸಮೀಕ್ಷೆಯಲ್ಲಿ 35-40 ರ ನಡುವಣ ವಯಸ್ಸಿನ ನಗರವಾಸಿ ಅವಿವಾಹಿತ ಪುರುಷರು ಮತ್ತು ಮಹಿಳೆಯರನ್ನು ಈ ಬಗ್ಗೆ ವಿಚಾರಿಸಿದಾಗ ಈಗ ತಮಗೆ ಮದುವೆಯಲ್ಲಿ ಯಾವುದೇ ಆಸಕ್ತಿ ಉಳಿದಿಲ್ಲ ಎಂಬ ಉತ್ತರವೇ ಹೆಚ್ಚಾಗಿ ಸಿಕ್ಕಿದೆ. ಮದುವೆ ಬಳಿಕ ಎಲ್ಲಾ ಮೋಜು ಮಸ್ತಿಗಳಿಗೆ ಬ್ರೇಕ್! ಹೌದೇ?

ಇಂದು ಸಮಾಜ ಬದಲಾಗುತ್ತಿದೆ. ಹಿಂದಿನ ದಿನಗಳಲ್ಲಿ ಮಹಿಳೆಯರಿಗೆ ಅಪರೂಪವಾಗಿದ್ದ ಅವಕಾಶಗಳೆಲ್ಲಾ ಇಂದು ಮುಕ್ತವಾಗಿ ಸಿಗುತ್ತಿದ್ದು ಈ ಅವಕಾಶಗಳನ್ನು ಬಳಸಿಕೊಂಡು ಜೀವನದಲ್ಲಿ ಹೆಚ್ಚಿನದನ್ನು ಸಾಧಿಸುವ ಇರಾದೆ ಹೊಂದುವವರು ಮದುವೆಗೆ ಎರಡನೆಯ ಆದ್ಯತೆ ನೀಡುವುದು ಇಂದು ಸಾಮಾನ್ಯವಾಗಿದೆ. ಅಲ್ಲದೆ ಇನ್ನೂ ಕೆಲವು ಮಹಿಳೆಯರು ಪುರುಷನ ಸಾಂಗತ್ಯದ ಅಗತ್ಯವೇ ಇಲ್ಲದೇ ತಾವು ಪರಿಪೂರ್ಣತೆಯನ್ನು ಪಡೆಯಲು ಸಕ್ಷಮರು ಎಂಬ ಅಭಿಪ್ರಾಯವನ್ನು ಹೊಂದಿದ್ದಾರೆ. ಮದುವೆಯ ಬಗ್ಗೆ ಸಾಮಾನ್ಯರಲ್ಲಿ ಮನೆಮಾಡಿರುವ ತಪ್ಪುಕಲ್ಪನೆಗಳು

ಮನಃಶಾಸ್ತ್ರಜ್ಞರ ಪ್ರಕಾರ ಯಾವಾಗ ಓರ್ವ ವ್ಯಕ್ತಿಗೆ ತನ್ನ ಜೀವನ ತಮಗೆ ಚೇತೋಹಾರಿಯಾದ ನೆಮ್ಮದಿಯ ಮಟ್ಟ (comfort level) ವನ್ನು ಪಡೆಯುತ್ತಾರೋ, ಅಲ್ಲಿಂದ ಮುಂದೆ ಹೋಗಲು ಅಥವಾ ಬದಲಾಗಲು ಇಚ್ಛಿಸುವುದಿಲ್ಲ. ಆದರೂ, ಮೂವತ್ತೈದಾದರೂ ಇನ್ನೂ ಅವಿವಾಹಿತರಾಗಿಯೇ ಉಳಿದಿರುವ ವ್ಯಕ್ತಿಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಅರಿಯೋಣ...

ವಾಸ್ತವಾಂಶ #1

ವಾಸ್ತವಾಂಶ #1

ಯಾವುದೇ ಸಂಬಂಧಕ್ಕೆ ತನ್ನದೇ ಆದ ಮಿತಿಗಳಿರುತ್ತವೆ. ಈ ಮಿತಿಗಳು ವ್ಯಕ್ತಿಯ ಮುನ್ನಡೆಗೆ ಅಡ್ಡಗಾಲು ಹಾಕುತ್ತವೆ. ಮೂವತ್ತೈದರವರೆಗೆ ಯಾವುದೇ ಅಡ್ಡಗಾಲು ಇಲ್ಲದೇ ಸ್ವಾತಂತ್ರ್ಯವನ್ನು ಅನುಭವಿಸಿದರಿಗೆ ಮದುವೆ ಎಂದರೆ ದೊಡ್ಡ ಅಡ್ಡಗಾಲು ಎಂದೇ ಅನ್ನಿಸುತ್ತದೆ. ಇವರು ಮದುವೆಯನ್ನು ಪ್ರಮುಖ ಅಡ್ಡಗಾಲು ಎಂದೇ ಪರಿಗಣಿಸಿ ಮುಂದಿನ ಜೀವನವನ್ನು ಈ ಅಡ್ಡಗಾಲಿಲ್ಲದೇ ಸವೆಸಲು ಸಿದ್ಧರಿರುತ್ತಾರೆ. ಹೀಗಿರುವಾಗ ಮದುವೆಯಾವುದು ಮಾತ್ರ ತುಂಬಾ ಅನುಮಾನ.

ವಾಸ್ತವಾಂಶ #2

ವಾಸ್ತವಾಂಶ #2

ಯಾವುದೇ ಮದುವೆಯಲ್ಲಿ ಮೊದಲ ಕೆಲದಿನಗಳು ಸಂತೋಷವಾಗಿಯೇ ಕಳೆದರೂ ಕಾಲಕ್ರಮೇಣ ಸಂಸಾರದ ಜಂಜಡಗಳಲ್ಲಿ ಒತ್ತಡ, ಭಾರ, ಸುಖ ದುಃಖ, ಖರ್ಚುಗಳು ಮೊದಲಾದವು ಕಿರಿಕಿರಿ ಎನಿಸಿಯೇ ಎನಿಸುತ್ತವೆ. ಆದರೆ ಒಂದು ವೇಳೆ ಮದುವೆಯಾಗದೇ ಇದ್ದರೆ? ಈ ಕಿರಿಕಿರಿಗಳು ಇರುವುದೇ ಇಲ್ಲ. ಮದುವೆಯಾಗಿ ಕಿರಿಕಿರಿಗಳನ್ನು ಆಹ್ವಾನಿಸುವುದು ಇವರಿಗೆ ಬೇಕಾಗಿಲ್ಲ. ಅದೂ ಕಳೆದ ಮೂವತ್ತೈದು ವರ್ಷಗಳನ್ನು ಸುಖವಾಗಿ ಯಾವುದೇ ಹಂಗಿಲ್ಲದೇ ಆರಾಮವಾಗಿ ಕಳೆದ ಬಳಿಕ?

ವಾಸ್ತವಾಂಶ #3

ವಾಸ್ತವಾಂಶ #3

ಒಂಟಿಜೀವನದಲ್ಲಿ ಏನನ್ನೂ ಸಾಧಿಸಬಹುದು. ಎಲ್ಲಿ ಬೇಕಾದರೂ ಹೋಗಬಹುದು, ಎಷ್ಟು ಬೇಕಾದರೂ ಮೋಜು ಮಸ್ತಿ ಮಾಡಬಹುದು. ಒಂದು ವೇಳೆ ಸಾಕಷ್ಟು ಧನ ಹೊಂದಿದ್ದರೆ ಇರುವ ಕೆಲಸ ಬಿಟ್ಟು ಮನೆಯಲ್ಲಿಯೇ ಹಾಯಾಗಿರಬಹುದು. ಒಟ್ಟಾರೆ ನಿಮಗಿಷ್ಟ ಬಂದಂತೆ ಜೀವನ ಸಾಗಿಸಲು ಒಂಟಿಜೀವನದಲ್ಲಿ ಮಾತ್ರ ಸಾಧ್ಯ.

ವಾಸ್ತವಾಂಶ #4

ವಾಸ್ತವಾಂಶ #4

ಒಂದು ವೇಳೆ ನೀವು ಒಂಟಿಯಾಗಿದ್ದರೆ ನಿಮ್ಮ ಎಲ್ಲಾ ಗಮನವನ್ನು ಒಂದೇ ವಿಷಯದ ಮೇಲೆ ಕೇಂದ್ರೀಕರಿಸಿ ನಿಮ್ಮ ಜೀವನದ ಗುರಿಯನ್ನು ಸಾಧಿಸಬಹುದು. ಆದರೆ ಮೂವತ್ತೈದಾದ ಬಳಿಕ ಈ ಸಾಧನೆಗೆ ಅಡ್ಡಗಾಲು ಹಾಕುವ ಮದುವೆಯನ್ನು ಮಾಡಿಕೊಳ್ಳಲು ನಿಮ್ಮಿಂದ ಸಾಧ್ಯವೇ?

ವಾಸ್ತವಾಂಶ #5

ವಾಸ್ತವಾಂಶ #5

ಒಂದು ವೇಳೆ ನೀವು ತುಂಬಾ ವರ್ಷಗಳಿಂದ ಒಂಟಿಯಾಗಿಯೇ ಇದ್ದರೆ, ಅಂದರೆ ನಿಮ್ಮನ್ನು ನಿಯಂತ್ರಿಸಲು ಹಿರಿಯರು ಇಲ್ಲದಿದ್ದರೆ, ನಿಮ್ಮ ಜೀವನವನ್ನು ಇದುವರೆಗೆ ನಿಮಗೆ ಬೇಕಾದಂತೆ ಸಾಗಿಸಿ ಈಗ ಮದುವೆಯಾಗಿ ಈ ನಿಯಂತ್ರಣವನ್ನು ಪತ್ನಿಯ ಕೈಗೆ ನೀಡಲು ನೀವು ಸಿದ್ಧರಾಗುವುದಿಲ್ಲ.

ವಾಸ್ತವಾಂಶ #6

ವಾಸ್ತವಾಂಶ #6

ಕಳೆದ ಮೂವತ್ತೈದು ವರ್ಷಗಳ ಕಾಲ ಸುಖವಾಗಿ, ಯಾರ ಹಂಗಿಲ್ಲದೇ, ಮೂಗುದಾರವಿಲ್ಲದ ಎತ್ತಿನಂತೆ ಹೂಂಕರಿಸುತ್ತಾ ಅಡ್ಡಾಡಿಕೊಂಡಿದ್ದ ನೀವು ಸಾಮಾನ್ಯವಾಗಿ ಮೂಗುದಾರ ಹಾಕಿಸಿಕೊಂಡ ಇತರರ ಜೀವನವನ್ನು ದ್ವೇಶಿಸುತ್ತೀರಿ. ವಿಶೇಷವಾಗಿ ನಿಮ್ಮ ಪರಿಚಯದ ದಂಪತಿಗಳು ನಿಮ್ಮೆದುರಿಗೇ ಕೋಳಿ ಜಗಳವಾಡುವಾಗ, ಜೀವನದ ಜಂಜಡಗಳ ಬಗ್ಗೆ ಹೇಳಿಕೊಳ್ಳುವಾಗ, ಇನ್ನೂ ಮುಂದಕ್ಕೆ ಹೋಗಿ ಕೆಲವರು ಅನೈತಿಕ ಸಂಬಂಧಗಳಲ್ಲಿ ತೊಡಕಿಕೊಂಡಾಗ ನಿಮ್ಮ ನಿರ್ಧಾರವೇ ಸರಿ ಎಂದೆನಿಸಿರುವಾಗ ಈಗ ಮದುವೆಯ ಮಾತು ಎತ್ತಿದರೆ ಒಪ್ಪುವ ಪ್ರಶ್ನೆಯೇ ಬರುವುದಿಲ್ಲ.

English summary

What Happens If You Don't Marry Till 35?

Do you know what happens if you don't marry and remain single till the age of 35? Well, you may fall in love with single life and may never feel like marrying. In a new survey, many unmarried men and women in the age group of 35-40 coming from an urban background admitted that they almost lost the desire to marry anymore. Also, things are beginning to change. Today's women are giving marriage second priority. Their first priority is education and career.
X
Desktop Bottom Promotion