For Quick Alerts
ALLOW NOTIFICATIONS  
For Daily Alerts

ಸಂಗಾತಿಗಳ ನಡುವಿನ ಆ ಆತ್ಮೀಯ ಸ್ಪರ್ಶದ ಹಿಂದಿನ ರಹಸ್ಯ!

ಅತ್ಯಂತ ಖಾಸಗಿಯಾದ, ಮನದಾಳದಲ್ಲಿ ಹುಟ್ಟುವ ಈ ಅನುಬಂಧವನ್ನು ಮಾತುಗಳು ಹೇಳದೇ ಇದ್ದರೂ ನಿಮ್ಮ ಸಂಗಾತಿಯ ಆತ್ಮೀಯ ಸ್ಪರ್ಶ ತಿಳಿಸಬಲ್ಲುದು....

By Manu
|

ದಂಪತಿಗಳ ನಡುವಣ ಆತ್ಮೀಯತೆ ಹೆಚ್ಚಲು ಶಾರೀರಿಕ ಸಂಪರ್ಕವೂ ಅಗತ್ಯವಾಗಿದೆ. ವಿಶೇಷವಾಗಿ ಸಮಾಗಮದ ಸಮಯದಲ್ಲಿ ಇಬ್ಬರೂ ತಮ್ಮ ಸಂಗಾತಿಯ ಮೆಚ್ಚುಗೆ ಪಡೆಯಲು ತಮ್ಮ ಅತ್ಯುತ್ತಮವಾದ ಪ್ರಯತ್ನವನ್ನು ಮಾಡಬೇಕು.

ಕೆಲವು ಸಂಬಂಧಗಳಲ್ಲಿ ಇಬ್ಬರಲ್ಲೊಬ್ಬರಿಗೆ ತಮ್ಮ ಸಂಗಾತಿಯಲ್ಲಿ ಸಂಪೂರ್ಣವಾದ ಪ್ರೀತಿ ವಿಶ್ವಾಸ ಹುಟ್ಟಿರುವುದಿಲ್ಲ, ಅಥವಾ ಅನುಮಾನ, ಒತ್ತಡ, ಬಲವಂತ ಮೊದಲಾದ ಕಾರಣಗಳಿಂದ ಶಾರೀರಿಕ ಬಂಧವನ್ನು ಅನಿವಾರ್ಯವಾಗಿ ಒಪ್ಪಿರಬಹುದು. ಆಗ ಒಬ್ಬರ ಸ್ಪರ್ಶ ಇನ್ನೊಬ್ಬರಿಗೆ ಕೇವಲ ಯಾಂತ್ರಿಕವಾಗಿರುತ್ತದೆಯೇ ಹೊರತು ಆತ್ಮೀಯವಾಗಿರುವುದಿಲ್ಲ. ಆದರೆ ಅವರು ಇದನ್ನು ತೋರ್ಪಡಿಸಿಕೊಳ್ಳದೇ ಕೇವಲ ನಾಟಕವಾಡುತ್ತಿದ್ದಿರಬಹುದು. ಮನೆ ಜವಾಬ್ದಾರಿ, ಪತಿ-ಪತ್ನಿ ಇಬ್ಬರೂ ಸಮನಾಗಿ ಹಂಚಿಕೊಳ್ಳಿ

ಎಷ್ಟೋ ಸಂಬಂಧಗಳಲ್ಲಿ ಸ್ಪರ್ಶ, ಸಮಾಗಮ ಮೊದಲಾದವು ಕೇವಲ ಯಾಂತ್ರಿಕ ಅಥವಾ ಸಮಾಜದ ಕಟ್ಟುಪಾಡುಗಳಿಗೆ ಹೆದರಿ ಅಥವಾ ಆ ಕ್ಷಣದ ದೈಹಿಕ ಅಗತ್ಯಗಳನ್ನು ಪೂರೈಸುವಂತಿರುತ್ತವೆಯೇ ಹೊರತು ಪರಸ್ಪರ ವಿಶ್ವಾಸದ ಹೊರತಾಗಿರುತ್ತದೆ. ಅತ್ಯಂತ ಖಾಸಗಿಯಾದ, ಮನದಾಳದಲ್ಲಿ ಹುಟ್ಟುವ ಈ ಅನುಬಂಧವನ್ನು ಮಾತುಗಳು ಹೇಳದೇ ಇದ್ದರೂ ನಿಮ್ಮ ಸಂಗಾತಿಯ ಆತ್ಮೀಯ ಸ್ಪರ್ಶ ತಿಳಿಸಬಲ್ಲುದು. ದಾಂಪತ್ಯದಲ್ಲಿ ಅರಿತು ಬಾಳಿದರೆ, ಖಂಡಿತ ಬಾಳು ಬಂಗಾರ

ಬನ್ನಿ, ಈ ಸೂಚನೆಗಳನ್ನು ಅರಿತುಕೊಳ್ಳುವ ಮೂಲಕ ನಿಮ್ಮ ಪ್ರೀತಿ ನಿಜವಾಗಿ ಹೃದಯಾಂತರಾಳದ್ದೇ ಅಥವಾ ಕೇವಲ ತೋರ್ಪಡಿಕೆಯದ್ದೇ ಎಂಬುದನ್ನು ಅರಿತು ನಿಮ್ಮನ್ನು ನೀವೇ ಕೊಂಚ ಬದಲಿಸಿಕೊಳ್ಳುವ ಮೂಲಕ ಸಂಗಾತಿಯ ಮನ, ಹೃದಯವನ್ನು ಗೆಲ್ಲಬಹುದು.


ಸೂಚನೆ #1

ಸೂಚನೆ #1

ನಿಮ್ಮ ಸಂಗಾತಿಯ ದೈಹಿಕ ಚಲನೆಗಳನ್ನು ಗಮನಿಸಿ. ಸ್ಪರ್ಶಕ್ಕೆ ಮಾನವರ ದೇಹ ಭಿನ್ನ ರೀತಿಯಲ್ಲಿ ಸ್ಪಂದಿಸುತ್ತವೆ. ಉದಾಹರಣೆಗೆ ಇಷ್ಟವಿದ್ದವರು ಚುಂಬಿಸಲು ಮುಂದೆ ಬಂದಾಗ ಕೆನ್ನೆ ಮುಂದೆ ತರುವುದು ಇಷ್ಟವಾದ ಕ್ರಿಯೆಯಾಗಿದ್ದರೆ ಹಿಂದೆ ವಾಲುವುದು ಇಷ್ಟವಿಲ್ಲದ ಕ್ರಿಯೆಯಾಗಿದೆ. ನಿಮ್ಮ ಸಂಗಾತಿ ನಿಮ್ಮ ಸ್ಪರ್ಶಕ್ಕೆ ಹೇಗೆ ಸ್ಪಂದಿಸುತ್ತಿದ್ದಾರೆ ಎಂಬುದನ್ನು ಗಮನಿಸಿ. ಅವರ ಚಲನೆ ಹಿಮ್ಮುಖವಾಗಿದ್ದರೆ ಇದು ಆತನಿಗೆ/ಆಕೆಗೆ ಇಷ್ಟವಿಲ್ಲದಿರುವುದನ್ನು ಸೂಚಿಸುತ್ತದೆ.

ಸೂಚನೆ #2

ಸೂಚನೆ #2

ಕೆಲವು ಸೂಕ್ಷ್ಮ ಬದಲಾವಣೆಗಳನ್ನು ಗಮನಿಸಿ. ಆತನ/ಆಕೆಯ ಮೈಬಿಸಿ ಹೆಚ್ಚಿತೇ? ಬೆವರು ಪ್ರಾರಂಭವಾಯಿತೇ? ಉಸಿರಾಟ ಕೊಂಚ ತೀವ್ರವಾಯಿತೇ ಗಮನಿಸಿ. ಇವೆಲ್ಲವೂ ಇಷ್ಟವಿಲ್ಲದ ಸ್ಪರ್ಶದ ಸೂಚನೆಗಳು.

ಸೂಚನೆ #3

ಸೂಚನೆ #3

ಪುರುಷರ ವಿಷಯಕ್ಕೆ ಬಂದಾಗ ಪುರುಷರ ಗುಪ್ತಾಂಗ ಅತ್ಯಂತ ಸೂಕ್ಷ್ಮ ಯೋಚನೆಗೂ ತೀವ್ರವಾಗಿ ಸ್ಪಂದಿಸುವ ಗುಣ ಹೊಂದಿದ್ದು ಮಹಿಳೆಯ ಬಗೆಯ ಯೋಚನೆಯಿಂದಲೇ ಉದ್ರೇಕಗೊಂಡಿರುತ್ತದೆ. ಆದರೆ ಸಂಗಾತಿಯ ಸ್ಪರ್ಶಕ್ಕೂ ಉದ್ರೇಕಗೊಳ್ಳದಿರುವುದು ಆತನಿಗೆ ಈ ಸ್ಪರ್ಶ ಇಷ್ಟವಿಲ್ಲವೆಂಬುದನ್ನು ಸೂಚಿಸುತ್ತದೆ.

ಸೂಚನೆ #4

ಸೂಚನೆ #4

ಹಿಡಿತದ ಒತ್ತಡವನ್ನು ಗಮನಿಸಿ. ತನ್ನ ಸಂಗಾತಿಯ ಸ್ಪರ್ಶ ಆತನಿಗೆ/ಆಕೆಗೆ ಇಷ್ಟವಾದರೆ ಆತ/ಆಕೆ ತನ್ನ ಸಂಗಾತಿಯ ಬಾಹುಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾನೆ/ಳೆ. ಈ ಬಿಗಿತವಿಲ್ಲದೇ ಇರುವುದು ಇಷ್ಟವಿಲ್ಲದ ಕ್ರಿಯೆಯ ಸಂಕೇತವಾಗಿದೆ.

ಸೂಚನೆ #5

ಸೂಚನೆ #5

ಪರಾಕಾಷ್ಠೆಯ ಸಂದರ್ಭದಲ್ಲಿ ಸಂಗಾತಿ ತನ್ನ ಕಣ್ಣುಗಳನ್ನು ಮುಚ್ಚಿಕೊಂಡು ಆತ್ಮೀಯ ಸ್ಪರ್ಶವನ್ನು ಪೂರ್ಣವಾಗಿ ಅನುಭವಿಸುತ್ತಾರೆ. ಕಣ್ಣುಗಳು ತೆರೆದೇ ಇರುವುದು ಇಷ್ಟವಿಲ್ಲದ ಕ್ರಿಯೆಯ ಸಂಕೇತವಾಗಿದೆ.

ಸೂಚನೆ #6

ಸೂಚನೆ #6

ಧಾರಾಕಾರವಾಗಿ ಬೆವರುವುದು ತನ್ನ ಸಂಗಾತಿಯನ್ನು ಮೆಚ್ಚಿಸಲು ನಡೆಸುವ ಪ್ರಯತ್ನವಾಗಿದೆ.

ಸೂಚನೆ #7

ಸೂಚನೆ #7

ಮಹಿಳೆ ತನ್ನ ಸಂಗಾತಿಯ ಸ್ಪರ್ಶ ಇಷ್ಟವಾದರೆ ಆತನನ್ನು ಆದಷ್ಟು ತನ್ನೆಡೆಗೆ ಸೆಳೆದುಕೊಳ್ಳುತ್ತಾಳೆ. ಇದು ಆಕೆಗೆ ಸಂಗಾತಿಯ ಸ್ಪರ್ಶ ಇಷ್ಟವಾಗುತ್ತಿದೆ ಎಂಬುದನ್ನು ಸೂಚಿಸುತ್ತಿದೆ.

ಸೂಚನೆ #8

ಸೂಚನೆ #8

ಆಕೆಗೆ ನಿಮ್ಮ ಸ್ಪರ್ಶ ಇಷ್ಟವಾಗಿದೆ ಎಂದು ಸೂಚಿಸುವ ಸ್ಪಷ್ಟ ಸಂಕೇತವೆಂದರೆ ತನ್ನೆಲ್ಲಾ ನಾಚಿಕೆ, ದುಗುಡ, ದುಮ್ಮಾನ, ಹಿಂಜರಿಕೆ, ಸಂಕೋಚ ಎಲ್ಲವನ್ನೂ ಬಿಟ್ಟು ಬಂಧಮುಕ್ತಳಾದಂತೆ ಸಹಕರಿಸತೊಡಗುತ್ತಾಳೆ.

English summary

Signs Your Partner Enjoys Your Touch

Whether you are a man or a woman, you would surely like to be at your best when you are in the bed with your loved one. You would like to give your best of the efforts to offer pleasure. But sometimes, you might wonder whether your partner is really enjoying your touch or is just acting in order to make you feel good.
Story first published: Monday, January 30, 2017, 19:29 [IST]
X
Desktop Bottom Promotion