For Quick Alerts
ALLOW NOTIFICATIONS  
For Daily Alerts

ಬ್ರೇಕ್‌ಅಪ್ ನಂತರ ಸಾಮಾಜಿಕ ಜಾಲತಾಣಗಳಿಂದ ದೂರವಿರಿ!

ಪ್ರೀತಿ ಮುರಿದಾಗ ಅದು ನೀಡುವಂತಹ ನೋವು ಸಹಿಸಲು ಸಾಧ್ಯವಾಗಲ್ಲ. ಯಾಕೆಂದರೆ ಪ್ರೀತಿಸುವಾಗ ಸಿಗುತ್ತಿದ್ದ ಸುಖಕ್ಕಿಂತ ಪ್ರೀತಿ ಮುರಿದು ಬಿದ್ದಾಗ ಸಿಗುವ ನೋವು ಅಧಿಕವಾಗಿರುತ್ತದೆ. ಈ ನೋವನ್ನು ಹಂಚಿಕೊಳ್ಳಲು ಸಾಮಾಜಿಕ ಜಾಲತಾಣ ಬಳಸುವುದು ತಪ್ಪು...

By Hemanth
|

ಪ್ರೀತಿಸುವಾಗ ಸಿಗುವಂತಹ ಸಂತೋಷ ಮತ್ತೆ ಯಾವ ಸಂಬಂಧದಲ್ಲೂ ಸಿಗುವುದಿಲ್ಲವೆಂದರೆ ತಪ್ಪಾಗಲಾರದು. ಯಾಕೆಂದರೆ ಪ್ರೀತಿ ಮೋಹದಂತೆ ಅದು ಪ್ರೀತಿಸುವವರ ಸುತ್ತಲೂ ಸುತ್ತುತ್ತ ಇರುತ್ತದೆ. ಪ್ರೀತಿಯಲ್ಲಿ ಮುಳುಗಿದ್ದಾಗ ಜಗತ್ತೇ ಕಾಣುವುದಿಲ್ಲ. ಪ್ರೀತಿಸುವವರು ತಮ್ಮ ಪ್ರೀತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಳ್ಳುವುದು ಇಂದಿನ ದಿನಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ. ಇದು ಒಂದು ಫ್ಯಾಷನ್ ಕೂಡ! ಇದು ಪ್ರೀತಿ ಕಳೆದುಕೊಂಡವರ ನೋವು! ಇದಕ್ಕೆ ಮದ್ದೇ ಇಲ್ಲವೇ?

ಆದರೆ ಪ್ರೀತಿ ಮುರಿದಾಗ ಅದು ನೀಡುವಂತಹ ನೋವು ಸಹಿಸಲು ಸಾಧ್ಯವಾಗಲ್ಲ. ಯಾಕೆಂದರೆ ಪ್ರೀತಿಸುವಾಗ ಸಿಗುತ್ತಿದ್ದ ಸುಖಕ್ಕಿಂತ ಪ್ರೀತಿ ಮುರಿದು ಬಿದ್ದಾಗ ಸಿಗುವ ನೋವು ಅಧಿಕವಾಗಿರುತ್ತದೆ. ಈ ನೋವನ್ನು ಹಂಚಿಕೊಳ್ಳಲು ಸಾಮಾಜಿಕ ಜಾಲತಾಣವನ್ನು ಬಳಸಿದರೆ ಅದು ನೀವು ಮಾಡುವಂತಹ ದೊಡ್ಡ ತಪ್ಪು. ಯಾಕೆಂದರೆ ಪ್ರೀತಿ ಮುರಿದು ಬಿದ್ದಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಲೇಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಹೇಳಬಾರದ ಇನ್ನು ಹಲವಾರು ವಿಷಯಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ....

ಪ್ರೀತಿ ಮುರಿದ ಕಥೆ ಬರೆಯಬೇಡಿ

ಪ್ರೀತಿ ಮುರಿದ ಕಥೆ ಬರೆಯಬೇಡಿ

ಪ್ರೀತಿ ಮುರಿದ ಬಗ್ಗೆ ನೀವು ಕಥೆ ಬರೆಯುತ್ತಾ ಇದ್ದರೆ ಆಗ ನೀವು ತುಂಬಾ ಧೈರ್ಯವಾಗಿದ್ದೀರಿ ಮತ್ತು ಪ್ರೀತಿ ಮುರಿದರೂ ನಿಮಗೆ ಯಾವುದೇ ನೋವಾಗಿಲ್ಲವೆಂದು ಅರ್ಥವಾಗುತ್ತದೆ. ನಿಮಗೆ ನೋವಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಯಾವಾಗಲೂ ನಿಮ್ಮ ನೋವನ್ನು ಹೇಳುತ್ತಾ ಅಳುತ್ತಾ ಇರುವುದು ಎಲ್ಲರಿಗೆ ಕಿರಿಕಿರಿ.

ನೋವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಡಿ

ನೋವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಡಿ

ಪ್ರೀತಿ ಮುರಿದು ಬಿದ್ದ ಬಳಿಕ ಅದರಿಂದ ಮೇಲೆ ಬರುವುದು ತುಂಬಾ ಕಷ್ಟದ ಕೆಲಸ. ಆದರೆ ಕೆಲವೊಂದು ಸಂಬಂಧಗಳು ಮುರಿದು ಬೀಳಲೇಬೇಕು. ಅದಕ್ಕೊಂದು ಸಮಯವೆನ್ನುವುದು ಇದ್ದೇ ಇರುತ್ತದೆ. ನೋವನ್ನು ನೀವು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾ ಇದ್ದರೆ ಆಗ ಮತ್ತಷ್ಟು ನೋವಾಗುತ್ತದೆ ಮತ್ತು ಜೀವನದಲ್ಲಿ ಮುಂದೆ ಸಾಗಲು ನಿಮಗೆ ಸಾಧ್ಯವಾಗುವುದಿಲ್ಲ. ಇದರಿಂದ ಹಿಂದಿನ ನೆನಪುಗಳನ್ನು ಮರೆತು ನೀವಿಬ್ಬರು ಕಳೆದ ಒಳ್ಳೆಯ ಸಮಯದ ಬಗ್ಗೆ ನೆನಪಿಸಿಕೊಳ್ಳಿ.

ತಿರುಗಾಡಲು ಹೋಗಿರುವ ಬಗ್ಗೆ ಪೋಸ್ಟ್ ಮಾಡಬೇಡಿ

ತಿರುಗಾಡಲು ಹೋಗಿರುವ ಬಗ್ಗೆ ಪೋಸ್ಟ್ ಮಾಡಬೇಡಿ

ಪ್ರೀತಿ ಮುರಿದಿರುವ ನೋವನ್ನು ಮರೆಯಲು ನೀವು ಹೊರಗಡೆ ತಿರುಗಾಡಲು ಹೋಗುತ್ತಾ ಇದ್ದರೆ ಆಗ ನೀವು ಸಂಭ್ರಮಪಟ್ಟ ಕ್ಷಣಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಬೇಡಿ. ಇದರಿಂದ ಜನರಿಗೆ ನಿಮ್ಮ ಬಗ್ಗೆ ಬೇರೆ ಭಾವನೆ ಉಂಟಾಗಬಹುದು. ಇಂತಹ ಪೋಸ್ಟ್ ಬಗ್ಗೆ ನಕಾರಾತ್ಮಕ ಪ್ರತಿಕ್ರಿಯೆ ಕೂಡ ಬರಬಹುದು.

ಮಾಜಿ ಪ್ರೇಯಸಿ/ಪ್ರಿಯತಮನ ಪ್ರೊಫೈಲ್ ತಡಕಾಡಬೇಡಿ

ಮಾಜಿ ಪ್ರೇಯಸಿ/ಪ್ರಿಯತಮನ ಪ್ರೊಫೈಲ್ ತಡಕಾಡಬೇಡಿ

ಪ್ರೀತಿ ಮುರಿದು ಬಿದ್ದ ಬಳಿಕ ಅದನ್ನು ಅಲ್ಲಿಗೆ ಬಿಟ್ಟುಬಿಡಿ. ಮಾಜಿ ಪ್ರೇಯಸಿ/ ಪ್ರಿಯತಮನ ಪ್ರೊಫೈಲ್ ತಡಕಾಡಲು ಹೋಗಬೇಡಿ. ನಿಮ್ಮ ಮಾಜಿ ಬಗ್ಗೆ ಬಂದ ಲೈಕ್ ಮತ್ತು ಕಮೆಂಟ್ ನೋಡುತ್ತಾ ಇದ್ದರೆ ನೀವು ಅಸುರಕ್ಷತೆಯಿಂದ ಬಳಲುತ್ತಿದ್ದೀರಿ ಎಂದರ್ಥ. ಇಂತಹ ಕೆಲಸ ಮಾಡಲು ಹೋಗಬೇಡಿ.

English summary

Avoid Doing These Things On Social Sites After Breakup!

Going through a breakup is not easy and when it comes to revealing it on your social sites, it can get quite dicey, as you would get mixed reactions from people who do not even know the actual scene or reason! There are certain things that you need to avoid doing on a social site when you are going through a breakup.
X
Desktop Bottom Promotion