ಪ್ರೀತಿ ಎಂದರೆ ವ್ಯಾಪಾರವಲ್ಲ-ಎರಡು ಮನಸ್ಸುಗಳ ಬೆಸುಗೆ....

ಕೆಲವರು ಪ್ರೇಮದ ಬಂಧನಕ್ಕೆ ಒಳಗಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ತಮ್ಮ ಇಷ್ಟದ ವಿಷಯದ ಬಗ್ಗೆಯೇ ಯೋಚಿಸುತ್ತಾ ಇರುವ ಕಾರಣ ಪ್ರೇಮದ ಬಗ್ಗೆ ಚಿಂತಿಸಲು ಸಮಯಾವಕಾಶವಿಲ್ಲದೇ ಇದು ಸಾಧ್ಯವಾಗಿರಬಹುದು ಎಂದು ಸಂಶೋಧನೆಗಳು ತಿಳಿಸುತ್ತವೆ.

By: Arshad
Subscribe to Boldsky

ಪ್ರೇಮವೆಂಬುದು ಒಂದು ಅತ್ಯಂತ ಅಮೂಲ್ಯವಾದ ಸಂಪತ್ತಾಗಿದೆ. ನಿಷ್ಕಲ್ಮಶ ಪ್ರೇಮಕ್ಕೆ ಬೆಲೆಕಟ್ಟಲು ಸಾಧ್ಯವೇ ಇಲ್ಲ. ಆದರೆ ಕೆಲವರು ಪ್ರೇಮದ ಬಂಧನಕ್ಕೆ ಒಳಗಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ಬುದ್ಧಿ ಜೀವಿಗಳು ಹೆಚ್ಚಿನ ಸಮಯ ತೆಗೆದುಕೊಂಡಿರುವುದನ್ನು ಸಮೀಕ್ಷೆಗಳು ಸಾಬೀತುಪಡಿಸಿವೆ. ಇದಕ್ಕೆ ಕಾರಣವೂ ಇಲ್ಲದಿಲ್ಲ.   ಮದುವೆ ವಿಷಯದಲ್ಲಿ ಮಹಿಳೆಯರ ಡಿಮ್ಯಾಂಡ್ ಸಿಕ್ಕಾ ಪಟ್ಟೆ ಇರುತ್ತೆ!

ಸಾಮಾನ್ಯವಾಗಿ ಇವರು ತಮ್ಮ ಇಷ್ಟದ ವಿಷಯದ ಬಗ್ಗೆಯೇ ಹೆಚ್ಚು ಯೋಚಿಸುತ್ತಾ ಇರುವ ಕಾರಣ ಪ್ರೇಮದ ಬಗ್ಗೆ ಚಿಂತಿಸಲು ಸಮಯಾವಕಾಶವಿಲ್ಲದೇ ಇದು ಸಾಧ್ಯವಾಗಿರಬಹುದು ಎಂದು ಕೆಲವು ಸಂಶೋಧನೆಗಳು ತಿಳಿಸುತ್ತವೆ. ಸಾಮಾನ್ಯವಾಗಿ ಬುದ್ಧಿ ಜೀವಿಗಳು ಅಥವಾ ಐಕ್ಯೂ (intelligence quotient) ಹೆಚ್ಚಿರುವ ವ್ಯಕ್ತಿಗಳು ಸಾಮಾನ್ಯವಾಗಿ ತಮ್ಮ ಸ್ವಂತ ಜೀವನದ ಬಗ್ಗೆ ನಲವತ್ತರ ಆಸುಪಾಸಿನಲ್ಲಿಯೇ ಯೋಚಿಸಲು ಪ್ರಾರಂಭಿಸುತ್ತಾರೆ.   ಹುಡುಗಿಯರು ಮದುವೆಯ ವಿಷಯದಲ್ಲಿ ಏಕೆ ಹಿಂಜರಿಯುತ್ತಾರೆ?

ಪ್ರೇಮಬಂಧನಕ್ಕೆ ಒಳಗಾಗಲು ಹಿಂದೇಟು ಹಾಕುವ ವ್ಯಕ್ತಿಗಳು ಬುದ್ಧಿ ಜೀವಿಗಳೇ ಆಗಿರಬೇಕೆಂದೇನಿಲ್ಲ. ಜೀವನದಲ್ಲಿ ಮಹತ್ವದ್ದನ್ನು ಸಾಧಿಸುವ ಗುರಿ ಇಟ್ಟುಕೊಂಡಿದ್ದು ವಿವಾಹ ಅಥವಾ ಪ್ರೇಮ ಇದಕ್ಕೆ ಅಡ್ಡಿಯಾಗಬಹುದೆಂದು ಚಿಂತಿಸುವ ವ್ಯಕ್ತಿಗಳೂ ಈ ಪಟ್ಟಿಗೆ ಸೇರುತ್ತಾರೆ. ಇಂದಿನ ಲೇಖನದಲ್ಲಿ ಸಾಮಾನ್ಯವಾಗಿ ಇವರು ಪ್ರೇಮಬಂಧನಕ್ಕೆ ಒಳಗಾಗಲು ಏಕೆ ತಡ ಮಾಡುತ್ತಾರೆ ಎಂಬುದನ್ನು ನೋಡೋಣ ಬನ್ನಿ....   

ಇವರು ಎಲ್ಲವನ್ನೂ ಹೆಚ್ಚು ವಿಶ್ಲೇಷಿಸುತ್ತಾರೆ

ಇತರರು ಯೋಚಿಸದೇ ಇರುವುದನ್ನು ಯೋಚಿಸುವುದೇ ಇವರ ಪ್ರಮುಖ ಲಕ್ಷಣವಾಗಿದೆ. ಪ್ರೇಮದ ವಿಷಯದಲ್ಲಿಯೂ ಇವರ ಯೋಚನೆಯೂ ಹೀಗೇ ಇರುತ್ತದೆ. ಎದುರಿನ ವ್ಯಕ್ತಿಯ ಬಗ್ಗೆ ಆಳವಾಗಿ ಅಭ್ಯಸಿಸಿದಾಗ ಯಾವುದೇ ವ್ಯಕ್ತಿಯಲ್ಲಿರುವ ಉತ್ತಮ ಮತ್ತು ಇತರ ಗುಣಗಳೂ ಕಂಡುಬರುತ್ತವೆ. ಇವುಗಳನ್ನು ವಿಶ್ಲೇಷಿಸುವ ಇವರು ಉತ್ತಮ ಗುಣಗಳಿಗಿಂತ ಕೆಟ್ಟ ಗುಣದಿಂದ ತನಗೇನು ಹಾನಿಯಾಗಬಹುದು ಎಂಬ ಅಳುಕು ಮೂಡಿಸುವ ಮೂಲಕ ಪ್ರೇಮ ಮೂಡಲು ಅವಕಾಶವನ್ನೇ ನಿಡುವುದಿಲ್ಲ. ಇದು ಹಿನ್ನಡೆಗೆ ಪ್ರಥಮ ಕಾರಣವಾಗಿದೆ.

ಪ್ರೀತಿ ಹುಟ್ಟುವುದು ಹೃದಯದಿಂದ

ಕಪ್ಪಗಿದ್ದ ಲೈಲಾಳನ್ನು ಮನ್ಮಥನಂತಿದ್ದ ಮಜನೂ (ನಿಜವಾದ ಹೆಸರು ಖೈಸ್) ಹೇಗೆ ಪ್ರೇಮಿಸಿದ ಎಂಬುದನ್ನು ಅರ್ಥೈಸಿಕೊಳ್ಳಬೇಕಾದರೆ ಲೈಲಾಳನ್ನು ಮಜನೂ ಕಣ್ಣುಗಳಿಂದ ನೋಡಿ ಎಂಬುದೊಂದು ಸುಭಾಷಿತವಾಗಿದೆ. ಪ್ರೀತಿ ಎಂದರೆ ವ್ಯಾಪಾರವಲ್ಲ, ಇದು ಎರಡು ಮನಸ್ಸುಗಳು ನಡುವಣ ಬೆಸುಗೆ. ಇದಕ್ಕೆ ಯಾವುದೇ ತರ್ಕವಿಲ್ಲ. ಆದರೆ ಬುದ್ದಿಜೀವಿಗಳು ಮೆದುಳಿನಿಂದಲೇ ಎದುರಿನ ವ್ಯಕ್ತಿಯನ್ನು ಅಳೆಯುತ್ತಾರೆಯೇ ವಿನಃ ಹೃದಯದಿಂದಲ್ಲ. ಇದೇ ಕಾರಣಕ್ಕೆ ಇವರು ಸುಲಭವಾಗಿ ಪ್ರೇಮಕ್ಕೆ ಒಲಿಯುವುದಿಲ್ಲ.

ಹತ್ತಿರವಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ

ಒಂದು ವೇಳೆ ಇವರಿಗೆ ಯಾರಾದರೂ ಆತ್ಮೀಯರಾದರೂ ಇವರೊಂದಿಗೆ ತಮ್ಮ ಅತಿ ಖಾಸಗಿ ವಿಷಯಗಳನ್ನು ಹೇಳಿಕೊಳ್ಳಲು ಇವರು ಬಹಳ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ. ಎಲ್ಲಿಯವರೆಗೆ ಎದುರಿನ ವ್ಯಕ್ತಿ ತಮ್ಮ ವಿಶ್ವಾಸಕ್ಕೆ ಅರ್ಹ ಎಂದು ಖಚಿತವಾಗುವುದಿಲ್ಲವೋ ಅಲ್ಲಿಯವರೆಗೆ ಇವರು ಯಾರೊಂದಿಗೂ ಆತ್ಮೀಯರಾಗುವುದಿಲ್ಲ.

ಇವರು ಅತಿ ಎಚ್ಚರಿಕೆಯ ವ್ಯಕ್ತಿಗಳಾಗಿರುತ್ತಾರೆ

ಸಾಮಾನ್ಯವಾಗಿ ಎಲ್ಲರೂ ತಮ್ಮ ತಪ್ಪುಗಳಿಂದ ಕಲಿಯುತ್ತಾರೆ. ಆದರೆ ಇವರು ಮಾತ್ರ ಕೊಂಚ ಹೆಚ್ಚೇ ಕಲಿಯುತ್ತಾರೆ. ಒಂದು ವೇಳೆ ಹಿಂದಿನ ಸಂಬಂಧದಲ್ಲಿ ಯಾವುದಾದರೂ ಎಡವಟ್ಟಾಗಿದ್ದಿದ್ದರೆ ಇದು ಮತ್ತೊಮ್ಮೆ ಆಗದೇ ಇರದಂತೆ ಇವರು ಅತೀವ ಹೆಚ್ಚಿನ ಎಚ್ಚರಿಕೆ ವಹಿಸುತ್ತಾರೆ.

ಇವರಿಗೆ ಏಕಾಂತವೇ ಇಷ್ಟ

ಇವರು ಹೆಚ್ಚಾಗಿ ಏಕಾಂತವನ್ನು ಬಯಸುವವರಾಗಿರುತ್ತಾರೆ. ಏಕೆಂದರೆ ಇವರ ಯೋಚಿಸುವ ಧಾಟಿಯನ್ನು ಸಾಮಾನ್ಯ ಜನರು ಅನುಸರಿಸಲು ಸಾಧ್ಯವೇ ಇಲ್ಲ. ಆದ್ದರಿಂದ ಎಲ್ಲಿಯವರೆಗೆ ತಮ್ಮ ಯೋಚನಾಲಹರಿಯನ್ನು ಒಪ್ಪುವ ವ್ಯಕ್ತಿ ಸಿಗುವುದಿಲ್ಲವೋ ಅಲ್ಲಿಯವರೆಗೆ ಇವರು ಒಂಟಿಯಾಗಿಯೇ ಇರಲು ಬಯಸುತ್ತಾರೆ.

Story first published: Thursday, November 3, 2016, 13:19 [IST]
English summary

Why Some People Take Time To Fall In Love

A new study claims that highly intelligent people are among the ones who take a lot of time to fall in love. Of course, there are other categories of people who hesitate to fall in love but this post focuses mainly on the intelligent people who struggle to find true love. The study claims that most of the people whose IQ is above average tend to stay single till their mid thirties and even till they reach forty.
Please Wait while comments are loading...
Subscribe Newsletter