ಕೆಲವರಿಗೆ ಸಾರ್ವಜನಿಕವಾಗಿಯೇ 'ಕಿಸ್' ಕೊಡುವ ಅಭ್ಯಾಸ!!

By: hemu
Subscribe to Boldsky

ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದಕ್ಕೂ ಅದರದ್ದೇ ಆದಂತಹ ಚೌಕಟ್ಟುಗಳು ಇರುತ್ತದೆ. ಸರಸ ಸಲ್ಲಾಪ ಕೂಡ ಇದರಲ್ಲಿ ಸೇರಿಕೊಂಡಿದೆ. ನಾವು ಎಲ್ಲಿ ಬೇಕೆಂದಲ್ಲಿ ಸರಸವಾಡುವಂತಿಲ್ಲ. ಅದರಲ್ಲೂ ಲೈಂಗಿಕ ಕ್ರಿಯೆಗಳು ನಾಲ್ಕು ಗೋಡೆಗಳ ಮಧ್ಯೆ ಕತ್ತಲಲ್ಲಿ ನಡೆಯಬೇಕೆಂದು ಹೇಳಲಾಗುತ್ತದೆ. ಕಾನೂನಿನಲ್ಲೂ ಸಾರ್ವಜನಿಕವಾಗಿ ಅಶ್ಲೀಲವಾಗಿ ವರ್ತಿಸಿದವರ ಮೇಲೆ ಕ್ರಮ ಕೈಗೊಳ್ಳಬಹುದು ಎನ್ನುವ ನಿಯಮವಿದೆ.  ಚುಂಬಿಸುವಾಗ ಕಣ್ಣುಗಳನ್ನು ಮುಚ್ಚುವುದು ಯಾಕೆ?

ಆದರೆ ಏನೇ ಇದ್ದರೂ ಕೆಲವರು ಮಾತ್ರ ಎಲ್ಲರ ಮುಂದೆ ಕಿಸ್ ನೀಡಲು ಮುಂದಾಗುತ್ತಾರೆ. ಇದು ತಪ್ಪೋ ಸರಿಯೋ ಎನ್ನುವ ಬಗ್ಗೆ ಚರ್ಚಿಸಲು ನಾವು ಹೋಗುತ್ತಿಲ್ಲ. ಆದರೆ ಇಂತಹ ನಡವಳಿಕೆ ಹಿಂದೆ ಇರುವ ಕಾರಣಗಳು ಏನು ಎಂದು ತಿಳಿದುಕೊಳ್ಳಲು ಈ ಲೇಖನದಲ್ಲಿ ಪ್ರಯತ್ನಿಸಲಾಗಿದೆ. ಇದನ್ನು ನೀವು ಓದಿ....

ವಾಸ್ತವ #1

ಕೆಲವು ಜೋಡಿ ಅಪಸಾಮಾನ್ಯ ಕಾಮೋದ್ದೀಪಕವನ್ನು ಹೊಂದಿರುತ್ತಾರೆ. ಕೆಲವರಲ್ಲಿ ಸಾರ್ವಜನಿಕವಾಗಿ ಹೀಗೆ ಮಾಡಬೇಕೆಂಬ ಅಪೇಕ್ಷೆಯಿರುತ್ತದೆ ಮತ್ತು ಇದು ಅವರಿಗೆ ಖುಷಿ ನೀಡುತ್ತದೆ. ಹೀಗಾಗಿ ಇದನ್ನು ಮಾಡಲು ಮೊದಲು ಅವರು ಮತ್ತೊಮ್ಮೆ ಚಿಂತಿಸುವುದಿಲ್ಲ.

ವಾಸ್ತವ #2

ಗುಪ್ತವಾದ ಜಾಗವನ್ನು ಸರಸಸಲ್ಲಾಪಕ್ಕಾಗಿ ಹುಡುಕುವುದು ಕೆಲವು ಜೋಡಿಗಳಿಗೆ ತುಂಬಾ ಕಷ್ಟವಾಗುತ್ತದೆ. ತಮ್ಮ ಕುಟುಂಬದವರ ವಿರೋಧವನ್ನು ಎದುರಿಸುವವರು ಇಂತಹ ಸಮಸ್ಯೆಯಲ್ಲಿರುತ್ತಾರೆ. ಇಂತಹವರು ಪಾರ್ಕ್ ಗಳನ್ನು ಹುಡುಕಿಕೊಂಡು ಅಲ್ಲಿ ತಮ್ಮ ಕಾರ್ಯ ಮುಂದುವರಿಸುತ್ತಾರೆ.

ವಾಸ್ತವ #3

ಸಾರ್ವಜನಿಕ ಸ್ಥಳಗಳಲ್ಲಿ, ರೈಲುಗಳಲ್ಲಿ, ಬಸ್ ಗಳಲ್ಲಿ ಮತ್ತು ವಿಮಾನದಲ್ಲಿ ಕಿಸ್ ನೀಡುವಾಗ ಕೆಲವರಿಗೆ ವಿಶೇಷವಾದ ನಶೆ ಬರುತ್ತದೆ. ಯಾಕೆಂದರೆ ಇಲ್ಲಿ ಭೀತಿ ಹೆಚ್ಚಾಗಿರುತ್ತದೆ. ಈ ನಶೆಗಾಗಿ ಅವರು ಸಾರ್ವಜನಿಕ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ವಾಸ್ತವ #4

ತಾವು ಪ್ರೀತಿಸುತ್ತಿದ್ದೇವೆ ಎಂದು ವಿಶ್ವಕ್ಕೆ ತೋರಿಸಿಕೊಡಲು ಕೆಲವು ಜೋಡಿಗಳು ಇಂತಹ ಕಾರ್ಯದಲ್ಲಿ ತೊಡಗಿಕೊಳ್ಳುತ್ತವೆ.

ವಾಸ್ತವ #5

ತಮ್ಮನ್ನು ಯಾರಾದರೂ ನೋಡುತ್ತಲಿದ್ದರೆ ಮಾತ್ರ ಕೆಲವರು ಪ್ರಚೋದನೆಗೊಳ್ಳುತ್ತಾರೆ. ಇದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಕೆಲವರು ಕಿಸ್ ಗೆ ಮುಂದಾಗುತ್ತಾರೆ.

ವಾಸ್ತವ #6

ತುಂಬಾ ಶಿಸ್ತುಬದ್ಧವಾಗಿರುವ ಕುಟುಂಬ ಅಥವಾ ಶಾಲಾಕಾಲೇಜಿನಲ್ಲಿದ್ದವರು ಬಂಡಾಯಗಾರರಾಗಿ ಇಂತಹ ಕೆಲಸಕ್ಕೆ ಕೈ ಹಾಕುತ್ತಾರೆ. ಇಂತವರು ಪ್ರತಿಯೊಂದು ಕಡೆಯು ನಿಯಮಗಳನ್ನು ಉಲ್ಲಂಘೀಸಲು ಬಯಸುತ್ತಾರೆ.

ವಾಸ್ತವ #7

ಕೆಲವರು ಡ್ರಗ್ಸ್ ಅಥವಾ ಮದ್ಯಪಾನದ ನಶೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಮಾಡುತ್ತಾರೆ. ಅವರು ಈ ನಶೆಯಲ್ಲಿ ಇಲ್ಲದಿರುವಾಗ ತುಂಬಾ ಸಭ್ಯರಾಗಿರುತ್ತಾರೆ.

ವಾಸ್ತವ #8

ಕೆಲವು ಪ್ರೇಮಿಗಳು ಪರಸ್ಪರರ ತೆಕ್ಕೆಯಲ್ಲಿ ಇದ್ದಾಗ ತಮ್ಮ ಸುತ್ತಮುತ್ತಲು ಏನು ಇದೆ ಎನ್ನುವುದನ್ನೇ ಮರೆತು ಬಿಡುತ್ತಾರೆ. ಇದು ಊಹಿಸಲ್ಪಟ್ಟಿರುವ ಕೆಲವೊಂದು ಕಾರಣಗಳಾಗಿವೆ. ನಿಮಗೆ ಯಾವುದೇ ಕಾರಣಗಳು ತಿಳಿದಿದ್ದರೆ ಅದನ್ನು ಕಮೆಂಟ್ ಸೆಕ್ಷನ್ ನಲ್ಲಿ ಬರೆದುಬಿಡಿ.

 

English summary

Why Some Couples Kiss In Public

Romance is an intimate affair. It feels good when it is done amidst closed doors. In fact, intercourse may feel good when it happens in a dark room. But often, we wonder why some people try to make out in public places. Putting aside the judgments, some of us wonder why some couples cross limits in public places. Of course, let us not talk about the rights and wrongs of this matter
Please Wait while comments are loading...
Subscribe Newsletter