For Quick Alerts
ALLOW NOTIFICATIONS  
For Daily Alerts

ಮೊದಲ ಪ್ರೀತಿಯ ಸಿಹಿ-ಕಹಿ ನೆನಪು ಎಂದಿಗೂ ಶಾಶ್ವತ!

By Super
|

ಪ್ರಥಮ ಎನ್ನುವುದು ಯಾವಾಗಲೂ ನಮ್ಮನ್ನು ಹೆಚ್ಚು ಪ್ರೀತಿಸುವಂತೆ ಮಾಡುತ್ತದೆ. ಯಾವುದೇ ವಸ್ತುಗಳೇ ಆಗಿರಲಿ ನಮಗೆ ಮೊದಲ ಬಾರಿಗೆ ಸಿಕ್ಕಿದಾಗ ಅದರ ಆನಂದವೇ ಬೇರೆ. ಮೊದಲ ಪ್ರೀತಿಯು ಹಾಗೆ. ಅದು ಚಿರಾಯುವಾಗಿರುತ್ತದೆ. ಯಾವಾಗಲೂ ನಮ್ಮ ನೆನಪಿನಲ್ಲಿ ಉಳಿದಿರುತ್ತದೆ. ಮೊದಲ ಪ್ರೀತಿಯ ನೆನಪು ಯಾವಾಗಲೂ ನಮ್ಮನ್ನು ಕಾಡುತ್ತಾ ಇರುತ್ತದೆ. ಆ ಪ್ರೀತಿ ನಮಗೆ ದಕ್ಕಿದ್ದರೆ ಅದರ ಖುಷಿಯೇ ಬೇರೆ ಮತ್ತು ಅದು ಸಿಗದೆ ಅದರ ನೆನಪುಗಳನ್ನು ಮರುಕಳಿಸುವ ಖುಷಿಯೇ ಬೇರೆ. ಮೊದಲ ಪ್ರೀತಿಯ ನೆನಪನ್ನು ಎಷ್ಟೇ ಮರೆಯಲು ಪ್ರಯತ್ನಿಸಿದರೂ ಅದನ್ನು ಮರೆಯಲು ಸಾಧ್ಯವಿಲ್ಲ. ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ..!

ಮೊದಲ ಪ್ರೀತಿಯಲ್ಲಿ ಅಂತಹ ವಿಶೇಷವೇನಿದೆ ಎನ್ನುವ ಪ್ರಶ್ನೆ ಕಾಡಬಹುದು. ಮೊದಲ ಪ್ರೀತಿ ಯಾವಾಗಲೂ ನಿಷ್ಕಲ್ಮಶವಾಗಿರುತ್ತದೆ. ಇದರಲ್ಲಿ ಯಾವುದೇ ಮೋಸ ಎನ್ನುವುದು ಇರುವುದಿಲ್ಲ. ಮೊದಲ ಸಲ ಪ್ರೀತಿ ವಿಫಲವಾದರೆ ಅದು ತುಂಬಾ ನೋವನ್ನು ನೀಡುತ್ತದೆ. ಅದೇ ಮೊದಲ ಪ್ರೀತಿ ಮನಸ್ಸಿಗೆ ಸಂತೋಷವನ್ನು ನೀಡುವುದರಲ್ಲಿ ಸಂಶಯವೇ ಇಲ್ಲ.

ಮೊದಲ ಪ್ರೀತಿ ಹುಟ್ಟುವುದು ಶಾಲಾ ದಿನಗಳಲ್ಲಿ ಅಥವಾ ಕಾಲೇಜು ಅಥವಾ ಯಾವುದೇ ಮದುವೆ ಕಾರ್ಯಕ್ರಮಗಳಲ್ಲೂ ಆಗಿರಬಹುದು. ಆದರೆ ಅಂತಹ ಪ್ರೀತಿ ಮಾತ್ರ ಕೊನೆಯವರೆಗೂ ನಮ್ಮ ಮನಸ್ಸಿನಲ್ಲಿ ಉಳಿಯುತ್ತದೆ. ಹಾಡಿದ ಹಾಡು, ಸುಗಂಧ ದ್ರವ್ಯ ಹಾಗೂ ಭೇಟಿ ನೀಡಿದ ಸ್ಥಳ ಇವೆಲ್ಲವೂ ನಮಗೆ ನೆನಪಿನಲ್ಲಿ ಉಳಿಯುತ್ತದೆ. ಇಂತಹ ಕೆಲವೊಂದು ವಿಷಯಗಳು ನಮ್ಮ ಹೃದಯದಲ್ಲಿ ಬೇರೂರಿರುತ್ತದೆ. ಇದನ್ನು ತಿಳಿಯಲು ಲೇಖನವನ್ನು ಮುಂದಕ್ಕೆ ಓದಿ...

ನೀವಿಬ್ಬರೇ ಎನ್ನುವ ಭಾವನೆ ಮೂಡುತ್ತದೆ

ನೀವಿಬ್ಬರೇ ಎನ್ನುವ ಭಾವನೆ ಮೂಡುತ್ತದೆ

ಮೊದಲ ಪ್ರೀತಿ ಚಿರಾಯು. ಪ್ರೀತಿ ಏನು ಎನ್ನುವುದು ಮೊದಲ ಸಲ ನಿಮಗೆ ಅರ್ಥ ಮಾಡಿಸಿಕೊಡುವುದೇ ಮೊದಲ ಪ್ರೀತಿ. ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಮತ್ತು ಎಲ್ಲವನ್ನು ಸ್ವೀಕರಿಸಬೇಕಾಗುತ್ತದೆ. ಈ ಪ್ರೀತಿಯಲ್ಲಿ ಯಾವುದೇ ಒಪ್ಪಂದಗಳು ಇರುವುದಿಲ್ಲ. ಹೃದಯವು ಯಾವಾಗಲೂ ಪ್ರತಿಯೊಂದನ್ನು ಸ್ವೀಕರಿಸಲು ಎದುರುನೋಡುತ್ತದೆ.

ಇದು ಮೊದಲ ಪ್ರೀತಿ ಮಾತ್ರವಲ್ಲ, ಹಲವಾರು ಪ್ರಥಮಗಳಿಗೆ ಕಾರಣ!

ಇದು ಮೊದಲ ಪ್ರೀತಿ ಮಾತ್ರವಲ್ಲ, ಹಲವಾರು ಪ್ರಥಮಗಳಿಗೆ ಕಾರಣ!

ನೀವು ಮೊದಲ ಸಲ ಕೈ ಹಿಡಿಯುತ್ತೀರಿ, ಮೊದಲ ಡೇಟ್, ಮೊದಲ ಕಿಸ್, ಮೊದಲ ಜಗಳ ಹೀಗೆ ಪಟ್ಟಿ ಮುಂದುವರಿಯುತ್ತಾ ಇರುತ್ತದೆ. ಮೊದಲ ಪ್ರೀತಿಯೊಂದಿಗೆ ಹಲವಾರು ಪ್ರಥಮಗಳು ನಿಮ್ಮ ನೆನಪಿನಲ್ಲಿ ಉಳಿಯುತ್ತದೆ.

ಮೊದಲ ಸಲದ ಅಪ್ಪುಗೆ

ಮೊದಲ ಸಲದ ಅಪ್ಪುಗೆ

ಮೊದಲ ಕಿಸ್, ಅಪ್ಪುಗೆ ಮತ್ತು ಪ್ರೀತಿಸುವ ವಿಧಾನವನ್ನು ಮರೆಯಲು ಸಾಧ್ಯವಿಲ್ಲ. ಮೊದಲ ಸಲದ ಕೆಲವೊಂದನ್ನು ನೆನಪು ಮಾಡಿಕೊಂಡಾಗ ಅದು ನಿಮ್ಮ ಮುಖದಲ್ಲಿ ನಗುವನ್ನು ಮೂಡಿಸುವುದು. ಇದರಿಂದ ನೀವು ಮತ್ತೆ ಆ ದಿನಗಳಲ್ಲಿ ಇರುವಂತೆ ಭಾವನೆಯಾಗುತ್ತದೆ.

ಹದಿಹರೆಯ

ಹದಿಹರೆಯ

ಹೆಚ್ಚಾಗಿ ಮೊದಲ ಪ್ರೀತಿ ಮೂಡುವುದೇ ಹದಿಹರೆಯದಲ್ಲಿ. ಈ ಸಮಯದಲ್ಲಿ ಯಾವುದೇ ರೀತಿಯ ಜವಾಬ್ದಾರಿಗಳು ಹೆಗಲ ಮೇಲಿರುವುದಿಲ್ಲ. ಇತರ ಯಾವುದೇ ವಿಷಯಗಳ ಬಗ್ಗೆ ಯೋಚನೆ ಮಾಡದೆ ಸಂಪೂರ್ಣವಾಗಿ ಪ್ರೀತಿಯಲ್ಲೇ ಮುಳುಗಿರಬಹುದು.

ಅತಿಯಾದ ಭಾವನೆಗಳು

ಅತಿಯಾದ ಭಾವನೆಗಳು

ನೀವು ಮೊದಲ ಸಲ ಪ್ರೀತಿಯಲ್ಲಿ ಮುಳುಗಿದಾಗ ನಿಮ್ಮಲ್ಲಿ ಅತಿಯಾದ ಭಾವನೆಗಳು ಉಂಟಾಗುತ್ತದೆ. ಎಲ್ಲವೂ ಚೆನ್ನಾಗಿ ಇದ್ದಾಗ ನೀವು ಆಕಾಶದಲ್ಲಿ ತೇಲಾಡುತ್ತಾ ಇರುತ್ತೀರಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅತಿಯಾದ ಭಾವನೆಗಳು

ಅತಿಯಾದ ಭಾವನೆಗಳು

ಅದೇ ಪ್ರೀತಿಯಲ್ಲಿ ಯಾವುದೇ ತೊಂದರೆ ಆದಾಗ ಮಾತ್ರ ನೀವು ತುಂಬಾ

ದುಃಖಿತರಾಗುತ್ತೀರಿ. ಮೊದಲ ಪ್ರೀತಿ ಎನ್ನುವುದು ಸಮುದ್ರದ ಅಲೆಗಳಿದ್ದಂತೆ. ಅದು ಒಮ್ಮೆ ಸಂತೋಷ ನೀಡಿದರೆ, ಮತ್ತೆ ಕೆಲವು ಸಲ ನೋವನ್ನು ಉಂಟು ಮಾಡುತ್ತದೆ. ಆದರೆ ಪ್ರತಿಯೊಂದು ನಿಮ್ಮ ಜೀವಮಾನದುದ್ದಕ್ಕೂ ನೆನಪಿನಲ್ಲಿ ಉಳಿಯುತ್ತದೆ.

English summary

Why Is First Love Always Special?

People often wonder what is it that makes the feeling of first love so unforgettable and why is first love always so special? The impact that the first love leaves on a person’s mind and heart is massive. It makes an everlasting impression and changes the person forever.
X
Desktop Bottom Promotion