ಹುಡುಗಿ ಸಿಕ್ಕಾಪಟ್ಟೆ ಸ್ಫುರದ್ರೂಪಿ, ಆದರೆ ಈತ ಕುರೂಪಿ!

ಉದ್ಯಾನವನದಲ್ಲಿಯೋ, ಸಮುದ್ರತೀರದಲ್ಲಿಯೋ ಸುಮ್ಮನೇ ಕುಳಿತು ಅಲ್ಲಿಗೆ ಆಗಮಿಸುವ ಜೋಡಿಗಳತ್ತ ನೋಡಿದರೆ ಸುಂದರಾಂಗನಿಗೆ ಸಾಧಾರಣ ಮೈಕಟ್ಟಿನ ಯುವತಿಯೂ, ಸುರಸುಂದರಿಗೆ ಗೂಬೆಮೋರೆಯ ಯುವಕನೂ ಜೋಡಿಯಾಗಿರುವುದು ಮಾತ್ರ ಅಚ್ಚರಿ ತರಿಸುತ್ತದೆ...!

By: manu
Subscribe to Boldsky

ಸಾಮಾನ್ಯವಾಗಿ ಪುರುಷರ ನೋಟ ಸುತ್ತಮುತ್ತಲ ಯುವತಿಯರತ್ತಲೇ ನೆಟ್ಟಿದ್ದು ಇವರ ಪ್ರಿಯಕರರನ್ನೂ ಗಮನಿಸುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ಯುವತಿಯರು ತಮ್ಮನ್ನು ಅಲಂಕರಿಸಿಕೊಂಡು ಸ್ವರ್ಗದ ಅಪ್ಸರೆಯಂತೆ ಕಂಗೊಳಿಸಿದರೆ ಇವರೊಂದಿಗಿರುವ ಪ್ರಿಯಕರರು ಮಾತ್ರ ಅಷ್ಟಾವಕ್ರನ ಕಲಿಯುಗದ ಅವತಾರನಂತಿರುತ್ತಾರೆ....!   ಕೆಲವು ಪುರುಷರಿಗೆ, ಮಹಿಳೆಯರೆಂದರೆ ಸಿಕ್ಕಾಪಟ್ಟೆ ಭಯವಂತೆ!

ಸಾಮಾನ್ಯ ರೂಪಿನ ಯುವಕರೂ ತಾವು ಸಾಕಷ್ಟು ಸುಂದರರಾಗಿ ಕಾಣಬೇಕೆಂದು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರೂ ಗೂಬೆಮೋರೆಯ ಸಾಮಾನ್ಯ ಮೈಕಟ್ಟಿನ ಯುವಕರು ಮಾತ್ರ ಯಾವುದೇ ಶ್ರಮವಿಲ್ಲದೇ ಸೌಂದರ್ಯದ ಗಣಿಗಳ ಮಾಲಿಕರಾಗಿರುವ ಬಗ್ಗೆ ಅಸೂಯೆ ತಾಳುತ್ತಾರೆ. ಹೆಣ್ಣಿನವರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ನೀರಿನಲ್ಲಿ ಮೀನಿನ ಹೆಜ್ಜೆಯನ್ನು ಗುರುತಿಸಿದಷ್ಟೇ ಸುಲಭವಾಗಿರುವುದರಿಂದ ಇವರ ಆಯ್ಕೆ ಹೇಗೆ ಎಂಬುದನ್ನು ಯಾರೂ ಖಚಿತವಾಗಿ ತಿಳಿಸಲು ಸಾಧ್ಯವೇ ಇಲ್ಲ.   ಹೆಣ್ಣಿನ ಮನಸ್ಸು, ಗಾಳಿಯಲ್ಲಿ ತೇಲುತ್ತಿರುವ ಗಾಳಿಪಟದಂತೆ!

ಆದರೂ ಉದ್ಯಾನವನದಲ್ಲಿಯೋ, ಸಮುದ್ರತೀರದಲ್ಲಿಯೋ ಸುಮ್ಮನೇ ಕುಳಿತು ಅಲ್ಲಿಗೆ ಆಗಮಿಸುವ ಜೋಡಿಗಳತ್ತ ನೋಡಿದರೆ ಸುಂದರಾಂಗನಿಗೆ ಸಾಧಾರಣ ಮೈಕಟ್ಟಿನ ಯುವತಿಯೂ, ಸುರಸುಂದರಿಗೆ ಗೂಬೆಮೋರೆಯ ಬಿದಿರಿನ ಮೈಕಟ್ಟಿನ ಯುವಕನೂ ಜೋಡಿಯಾಗಿರುವುದು ಮಾತ್ರ ಅಚ್ಚರಿ ತರಿಸುತ್ತದೆ...! ಇದೇನೂ ಕಾಕತಾಳೀಯವಲ್ಲ, ಬದಲಿಕೆ ಕೆಲವು ಅಚ್ಚರಿಯ ವಾಸ್ತವಗಳಾಗಿವೆ. ಬನ್ನಿ, ಈ ಅಚ್ಚರಿಗಳಾವುವು ಎಂಬುದನ್ನು ನೋಡೋಣ.....


ಗುಣಕ್ಕೂ ಸೌಂದರ್ಯಕ್ಕೂ ತಾಳಮೇಳವಿಲ್ಲ!

ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ಹೆಚ್ಚಿನ ಮಹಿಳೆಯರು ಹದಿಹರೆಯ ದಾಟುತ್ತಿದ್ದಂತೆಯೇ, ಅಂದರೆ ಮಾನಸಿಕವಾಗಿ ಪ್ರಬುದ್ಧತೆ ಪಡೆಯುತ್ತಿದ್ದಂತೆಯೇ ತಮ್ಮ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡುವುದನ್ನು ಕಡಿಮೆ ಮಾಡುತ್ತಾರೆ.

ಗುಣಕ್ಕೂ ಸೌಂದರ್ಯಕ್ಕೂ ತಾಳಮೇಳವಿಲ್ಲ!

ಬದಲಿಗೆ ತಮ್ಮ ಜೀವನಸಂಗಾತಿಯಲ್ಲಿನ ಇತರ ಗುಣಗಳನ್ನು ಮೆಚ್ಚಿಕೊಳ್ಳಲು ಪ್ರಾರಂಭಿಸುತ್ತಾರೆ. ಗುಣಕ್ಕೂ ಸೌಂದರ್ಯಕ್ಕೂ ಯಾವುದೇ ತಾಳಮೇಳವಿಲ್ಲ ಎಂಬುದನ್ನು ವಿಶ್ವದ ಪ್ರಮುಖ ವ್ಯಕ್ತಿಗಳು ಈಗಾಗಲೇ ಸಾಬೀತುಪಡಿಸಿದ್ದಾರೆ.

ಗುಣಕ್ಕೂ ಸೌಂದರ್ಯಕ್ಕೂ ತಾಳಮೇಳವಿಲ್ಲ!

ಪುರುಷರ ವಿಷಯ ಬಂದಾಗ, ಪುರುಷರಿಗೆ ಮಹಿಳೆಯ ಮೈಮಾಟವೇ ಅತ್ಯಂತ ಆಕರ್ಷಕವಾಗಿದ್ದು ಹೆಚ್ಚು ಹೆಚ್ಚು ನೋಡಲು ಇಚ್ಛಿಸುತ್ತಾರೆಯೇ ವಿನಃ ಅವರ ವ್ಯಕ್ತಿತ್ವವನ್ನು ತಿಳಿದುಕೊಳ್ಳುವಲ್ಲಿ ಹೆಚ್ಚಿನ ಅಸ್ಥೆ ವಹಿಸುವುದಿಲ್ಲ. ಇದೇ ಕಾರಣಕ್ಕೆ ಅಂತರ್ಜಾಲದಲ್ಲಿ ಯುವತಿಯರ ನಗ್ನ ಚಿತ್ರಗಳ ಮಹಾಪೂರವೇ ಇದೆ.

ಮಹಿಳೆಯರ ಪಕ್ಕಾ ಉಲ್ಟಾ ಸ್ಟೋರಿ!

ಮಹಿಳೆಯರಿಗೆ ಪುರುಷನ ಮೈಮಾಟ ಒಂದು ಆಕರ್ಷಣೆಯ ಅಂಶವೇ ಹೊರತು ಎಲ್ಲವೂ ಅಲ್ಲ. ಇವರಿಗೆ ಕೇವಲ ಪುರುಷರ ಚಿತ್ರದಿಂದ ಯಾವುದೇ ಆಕರ್ಷಣೆ ಉಂಟಾಗುವುದಿಲ್ಲ. ಬದಲಿಗೆ ಇವರು ಆ ವ್ಯಕ್ತಿಯ ಇತರ ಗುಣಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ. ಒಂದು ಅಂಶದ ಪ್ರಕಾರ ಪುರುಷನ ಯಾವ ಬಣ್ಣ ನಿಮಗೆ ಇಷ್ಟ ಎಂಬ ಪ್ರಶ್ನೆಗೆ ಸುಮಾರು ಐವತ್ತು ವರ್ಣಗಳು ಉತ್ತರವಾಗಿ ಸಿಕ್ಕಿವೆ.

ಆತನ ಸ್ಥಾನಮಾನಕ್ಕೆಯೇ ಹೆಚ್ಚಿನ ಬೆಲೆ!

ಇನ್ನೊಂದು ಸಮೀಕ್ಷೆಯ ಪ್ರಕಾರ, ಪುರುಷರ ಮೈಕಟ್ಟಿಗಿಂತಲೂ ಅವರ ಸಾಮಾಜಿಕ ಸ್ಥಾನಮಾನವೇ ಹೆಚ್ಚು ಮಹಿಳೆಯರಿಗೆ ಆಕರ್ಷಕವಾಗಿವೆ.

ಆಯ್ಕೆಯ ವಿಷಯ ಬಂದಾಗ....

ಎತ್ತರ, ವಿಶಾಲ ಎದೆ, ಸುಂದರ ಕೂದಲ ವಿನ್ಯಾಸ ಎಲ್ಲವೂ ಚೆನ್ನಾಗಿದ್ದರೂ ಕೇವಲ ಬಾಹ್ಯ ಸೌಂದರ್ಯವನ್ನು ಮಾತ್ರವೇ ಮಹಿಳೆಯರು ಪರಿಗಣಿಸಲಾರರು. ಆಯ್ಕೆಯ ವಿಷಯ ಬಂದಾಗ ಮಾತ್ರ ತಾವು ವರಿಸುವ ವ್ಯಕ್ತಿಯ ಗುಣ, ಜಾಣ್ಮೆ, ಕೌಶಲ್ಯ, ಸಮಾಜದಲ್ಲಿ ಜನರೊಂದಿಗೆ ವ್ಯವಹರಿಸುವ ಗುಣ ಮೊದಲಾದವೇ ಇವರಿಗೆ ಹೆಚ್ಚು ಇಷ್ಟವಾಗುತ್ತದೆ.

ಆತ ಪುಕ್ಕಲನಾಗಿರಬಾರದು....

ತಾವು ವರಿಸುವ ವ್ಯಕ್ತಿ ಪ್ರಬಲ ವ್ಯಕ್ತಿತ್ವವುಳ್ಳವನಾಗಿರವೇಕು, ಪುಕ್ಕಲನಾಗಿರಬಾರದು, ಪರಿಸ್ಥಿತಿಯನ್ನು ಎದುರಿಸುವವನಾಗಿರಬೇಕು, ನಾಲ್ಕು ಜನರನ್ನು ತನ್ನ ಮಾತುಗಳಿಂದ ಒಪ್ಪಿಸುವವನಾಗಿರಬೇಕು ಎಂಬ ಇರಾದೆಯನ್ನು ಹೆಚ್ಚಿನ ಮಹಿಳೆಯರು ಹೊಂದಿರುತ್ತಾರೆ.

ಆತ ಪುಕ್ಕಲನಾಗಿರಬಾರದು....

ಈ ಗುಣಗಳಿರುವ ವ್ಯಕ್ತಿ ಸೌಂದರ್ಯದಲ್ಲಿ ಹಿಂದಿದ್ದರೂ ಪರವಾಗಿಲ್ಲ, ಇತರ ಗುಣಗಳನ್ನು ಹೊಂದಿದ್ದರೆ ಇವರನ್ನು ವರಿಸಲು ಯಾವುದೇ ಯುವತಿ ಹಿಂದೆ ಮುಂದೆ ನೋಡುವುದಿಲ್ಲ. ಅಷ್ಟಲ್ಲಿದೇ ನಮ್ಮ ಹಿರಿಯರು 'ಗುಣ ನೋಡಿ ಹೆಣ್ಣು ಕೊಡು' ಎಂದು ಹೇಳಿಲ್ಲವೇ!

 

Story first published: Wednesday, November 16, 2016, 15:26 [IST]
English summary

Why Beautiful Women Have Ugly Boyfriends

Yes, men wonder why some beautiful women end up with guys with average looks. Generally, men during their younger years, do a lot to look attractive. And when they see some beautiful women falling for average guys, they wonder what women want. Yes, it isn't easy to understand what women want. And we can never generalise what all women want. But if you sit at the beach and watch every couple that comes there, you may realise that not all beautiful women are paired with handsome men. If you are wondering why, read on to know a few facts....
Please Wait while comments are loading...
Subscribe Newsletter