ಗರ್ಲ್ ಫ್ರೆಂಡ್‍ ಹತ್ತಿರ ಹೀಗೆಲ್ಲಾ ಹೇಳಬೇಡಿ, ಆಕೆಗೆ ಆಗ್ಬರಲ್ಲ!

ಕೆಲವೊಂದು ಸಲ ಮಾತಿನಿಂದಲೇ ಸಂಬಂಧಗಳು ದೂರವಾಗುತ್ತದೆ. ಮಾತನಾಡುವಾಗ ಎಚ್ಚರವಿದ್ದರೆ ಎಂತಹ ಅನಾಹುತವನ್ನು ಬೇಕಾದರೂ ತಪ್ಪಿಸಬಹುದು. ಎಷ್ಟೇ ಒಳ್ಳೆಯ ಸಂಬಂಧವಾದರೂ ಕೆಲವೊಮ್ಮೆ ಒಂದು ಶಬ್ದವೂ ಎಲ್ಲವನ್ನು ಕೆಡಿಸಿಬಿಡುತ್ತದೆ.

By: manu
Subscribe to Boldsky

ಬಾಯಿಯ ಒಳಗೆ ಹೋಗುತ್ತಿರುವುದರ ಬಗ್ಗೆ ಹೆಚ್ಚು ಗಮನಹರಿಸಬೇಕಿಲ್ಲ. ಆದರೆ ಬಾಯಿಯಿಂದ ಹೊರಗೆ ಬರುವುದರ ಬಗ್ಗೆ ಹೆಚ್ಚು ಎಚ್ಚರಿಕೆ ಅಗತ್ಯ. ಇದು ಹಳೆಯ ಮಾತು. ನಾವು ಮಾತನಾಡುವಾಗ ತುಂಬಾ ಎಚ್ಚರಿಕೆ ವಹಿಸಬೇಕು ಮತ್ತು ಅದರ ಬಗ್ಗೆ ಗಮನಹರಿಸಬೇಕು ಎನ್ನುವುದು ಇದರ ಅರ್ಥವಾಗಿದೆ.   ಮಾತು ಆಡಿದರೆ ಹೋಯ್ತು ಮುತ್ತು ಹೊಡೆದರೆ ಹೋಯ್ತು

ಕೆಲವೊಂದು ಸಲ ಮಾತಿನಿಂದಲೇ ಸಂಬಂಧಗಳು ದೂರವಾಗುತ್ತದೆ. ಮಾತನಾಡುವಾಗ ಎಚ್ಚರವಿದ್ದರೆ ಎಂತಹ ಅನಾಹುತವನ್ನು ಬೇಕಾದರೂ ತಪ್ಪಿಸಬಹುದು. ಎಷ್ಟೇ ಒಳ್ಳೆಯ ಸಂಬಂಧವಾದರೂ ಕೆಲವೊಮ್ಮೆ ಒಂದು ಶಬ್ದವೂ ಎಲ್ಲವನ್ನು ಕೆಡಿಸಿಬಿಡುತ್ತದೆ.  ಬ್ಯಾಚುಲರ್‌ನಲ್ಲಿ ಮಾಡುತ್ತಿದ್ದ ಚೇಷ್ಟೆ, ಮದುವೆ ಬಳಿಕ ನಡೆಯಲ್ಲ!

ಇದರಿಂದ ಪ್ರೀತಿಸುವಾಗ ಪ್ರಿಯತಮೆಯೊಂದಿಗೆ ಮಾತನಾಡುವಾಗ ಎಚ್ಚರದಿಂದ ಇರಬೇಕು. ಪ್ರಿಯತಮೆ ಮುಂದೆ ಹೇಳಲೇಬಾರದ ಕೆಲವೊಂದು ಶಬ್ದಗಳನ್ನು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಲಿದ್ದೇವೆ. ಇದನ್ನು ಓದಿಕೊಂಡು ಮುಂದಿನ ಸಲ ಇಂತಹ ಪದಗಳನ್ನು ಕಡೆಗಣಿಸಿ.....     

ನನಗೆ ತುಂಬಾ ಮಂದಿ ಗೆಳತಿಯರು ಇದ್ದಾರೆ!

ಇಂತಹ ವಿಷಯವನ್ನು ಪ್ರಿಯತಮೆ ಮುಂದೆ ಹೇಳುವ ಅಗತ್ಯವೇ ಇಲ್ಲ. ಗೆಳತಿಯರಿದ್ದಾರೆಂದು ಹೇಳಿದಾಗ ಸುರಕ್ಷಿತ ಮಹಿಳೆ ಕೂಡ ಅಸುರಕ್ಷಿತ ಭಾವನೆಗೊಳಗಾಗುತ್ತಾಳೆ.

ಅತಿಯಾಗಿ ಯೋಚಿಸುತ್ತಿ!

ಮಹಿಳೆಯರಿಗೆ ಯಾವತ್ತೂ ಇದನ್ನು ಹೇಳಬೇಡಿ. ಚಿಂತಿತರಾದಾಗ ಮಹಿಳೆಯರಲ್ಲಿ ಹಲವಾರು ರೀತಿಯ ಯೋಚನೆಗಳು ಸಾಗುತ್ತಾ ಇರಬಹುದು. ಆದರೆ ನಿಮ್ಮ ಮಾತು ಅವರ ಪರಿಸ್ಥಿತಿ ಕೆಡಿಸಬಹುದು.

ಪುರುಷ ಸಹೋದ್ಯೋಗಿಗಳೊಂದಿಗೆ ಮಾತನಾಡಬೇಡ

ಹೀಗೆ ಹೇಳಿದರೆ ಖಂಡಿತವಾಗಿಯೂ ಆಕೆಗೆ ನೋವಾಗಲಿದೆ. ಆಕೆಯ ಬಗ್ಗೆ ನಿಮಗೆ ಸಂಶಯವಿದೆಯೆಂದು ಭಾವಿಸುತ್ತಾಳೆ. ನೀವು ಆಕೆಯ ಪ್ರಿಯತಮನಾಗಿದ್ದರೂ ಇಂತಹ ವಿಷಯಗಳಲ್ಲಿ ಮಧ್ಯಪ್ರವೇಶಿಸಬಾರದು ಎಂದು ಆಕೆ ಬಯಸುತ್ತಾಳೆ.

ನಿನ್ನ ಮೊಬೈಲ್ ನೋಡುವ

ಆಕೆಯ ಜಗತ್ತಿನ ಎಲ್ಲಾ ಗೌಪ್ಯತೆಗಳು ಮೊಬೈಲ್‌ನಲ್ಲಿ ಅಡಗಿರುತ್ತದೆ. ಮೊಬೈಲ್ ಅನ್ನು ಕೇಳುವ ಮೊದಲು ಅಪಾಯವನ್ನು ಎದುರಿಸಲು ಸಿದ್ಧರಾಗಿ. ಯಾಕೆಂದರೆ ಆಕೆಯ ಮೊಬೈಲ್ ಕೇಳಿದರೆ ಆಕೆಗೆ ತುಂಬಾ ವಿಚಿತ್ರವೆನಿಸಬಹುದು.

ಪಾಸ್ ವರ್ಡ್ ಏನು?

ಹಿಂದೆಲ್ಲಾ ಪ್ರೀತಿಸುವವರು ಹಾಗೂ ಮದುವೆಯಾದ ಪತಿ-ಪತ್ನಿ ಪಾಸ್ ವರ್ಡ್ ಸಹಿತ ಪ್ರತಿಯೊಂದನ್ನು ಹಂಚಿಕೊಳ್ಳುತ್ತಾ ಇದ್ದರು. ಆದರೆ ಆ ಕಾಲ ಈಗಿಲ್ಲ. ಮದುವೆಯಾಗುವ ತನಕವಾದರೂ ಆಕೆಯ ಮೊಬೈಲ್ ಪಾಸ್ ವರ್ಡ್ ಕೇಳಲು ಹೋಗಬೇಡಿ. ಮದುವೆ ಬಳಿಕವೂ ಆಕೆ ನಿಮಗೆ ಪಾಸ್ ವರ್ಡ್ ನೀಡುತ್ತಾಳೆಂದು ಹೇಳಲು ಸಾಧ್ಯವಿಲ್ಲ.

 

Story first published: Thursday, November 24, 2016, 12:21 [IST]
English summary

What You Should Never Say To Your Girlfriend

It just means that you should choose your words carefully. When you are comfortable in a relationship, you tend to be a bit careless about your choice of words. That might burn your bridges. So, here are some words you should never utter in front of your girlfriend.
Please Wait while comments are loading...
Subscribe Newsletter