ಪ್ರೀತಿ ಮುರಿದು ಬಿತ್ತು, ಜೀವನ ಏನೆಂಬುದು ಅರ್ಥವಾಯಿತು

ಪ್ರೀತಿ ಮುರಿದು ಬಿದ್ದಾಗ ಆಗುವಂತಹ ನೋವು ಸಹಿಸಲು ಅಸಾಧ್ಯ. ಕೆಲವೊಮ್ಮೆ ನೋವಿನಿಂದಾಗಿ ಖಿನ್ನತೆ ಕೂಡ ಕಾಡುವುದಿದೆ. ಆದರೆ ಒಂದು ಹಂತವನ್ನು ದಾಟಿದ ಬಳಿಕ ನಡೆದಿರುವುದು ಎಲ್ಲವೂ ಒಳ್ಳೆಯದೇ ಎನ್ನುವ ಭಾವನೆ ಮೂಡುತ್ತದೆ.

By: Hemanth
Subscribe to Boldsky

ಯೌವನದಲ್ಲಿ ಕೆಲವೊಮ್ಮೆ ನಾವು ನಮ್ಮದೇ ಆದ ಲೋಕದಲ್ಲಿರುತ್ತೇವೆ. ಜೀವನ ಹಾಗೂ ವೃತ್ತಿಯನ್ನು ಕಟ್ಟಿಕೊಳ್ಳುವಂತಹ ಸಂದರ್ಭದಲ್ಲಿ ಪ್ರೀತಿ ಪ್ರೇಮ ಎನ್ನುವ ಪಾಶಕ್ಕೆ ಸಿಲುಕಿ ಅದೇ ಲೋಕದಲ್ಲಿ ತೇಲುತ್ತಾ ಇರುತ್ತೇವೆ. ಕಾಲೇಜು ಹಾಗೂ ಕಚೇರಿಗಳಲ್ಲಿ ಮೂಡುವಂತಹ ಇಂತಹ ಪ್ರೇಮ ಸಂಬಂಧಗಳು ಮುರಿದು ಬೀಳುವುದೇ ಹೆಚ್ಚು.

Pain Of Heartbreak
 

ಸಂಬಂಧ ಮುರಿದು ಬಿದ್ದಾಗ ಆಗುವಂತಹ ನೋವು ಸಹಿಸಲು ಅಸಾಧ್ಯ. ಕೆಲವೊಮ್ಮೆ ನೋವಿನಿಂದಾಗಿ ಖಿನ್ನತೆ ಕೂಡ ಕಾಡುವುದಿದೆ. ಆದರೆ ಒಂದು ಹಂತವನ್ನು ದಾಟಿದ ಬಳಿಕ ನಡೆದಿರುವುದು ಎಲ್ಲವೂ ಒಳ್ಳೆಯದಕ್ಕೆ ಮತ್ತು ಇನ್ನು ನಡೆಯುವುದು ಎಲ್ಲವೂ ಒಳ್ಳೆಯದೇ ಎನ್ನುವ ಭಾವನೆ ಮೂಡುತ್ತದೆ.   ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ..!

ಪ್ರೀತಿಯ ಸಂಬಂಧ ಮುರಿದು ಬೀಳುವುದರಿಂದ ಜೀವನದಲ್ಲಿ ಹಲವಾರು ಪಾಠಗಳನ್ನು ಕಲಿತುಕೊಳ್ಳುತ್ತೇವೆ. ಇಂತಹ ಕೆಲವು ಘಟನೆಗಳೇ ವ್ಯಕ್ತಿಯನ್ನು ಜೀವನದಲ್ಲಿ ಉನ್ನತಿಗೇರಿಸುತ್ತದೆ. ಪ್ರೀತಿಯ ಸಂಬಂಧ ಮುರಿದು ಹೃದಯ ಒಡೆಯುವುದರಿಂದ ಯಾವ ಪಾಠಗಳನ್ನು ಕಲಿತುಕೊಳ್ಳಬಹುದು ಎಂದು ತಿಳಿಯುವ. 

Pain Of Heartbreak
 

*ಜೀವನದಲ್ಲಿ ವ್ಯಕ್ತಿಯೊಬ್ಬ ನಿಮ್ಮಿಂದ ದೂರವಾದಾಗ ಅಲ್ಲಿಗೆ ಜೀವನ ಅಂತ್ಯವಾಯಿತೆಂದು ನೀವು ಭಾವಿಸಬಾರದು. ನೀವು ಇನ್ನು ಜೀವನ ಸಾಗಿಸಬಹುದಾಗಿದೆ. ಹೃದಯ ಒಡೆದು ಹೋಗುವುದರಿಂದ ವಾಸ್ತವವನ್ನು ಅರಿತುಕೊಳ್ಳಲು ನಿಮಗೆ ನೆರವಾಗುತ್ತದೆ ಮತ್ತು ನೀವು ವಿಶೇಷವಾದವರಲ್ಲ ಎನ್ನುವುದನ್ನು ಅರಿತುಕೊಳ್ಳುವಂತೆ ಮಾಡುವುದು.   ಅಷ್ಟಕ್ಕೂ ಪ್ರೀತಿ ಎಂದರೇನು, ಇದರ ಹಿಂದಿರುವ ರಹಸ್ಯವೇನು?    

Pain Of Heartbreak
 

*ಹೃದಯ ಒಡೆದು ಹೋಗುವುದರಿಂದ ನಿಮ್ಮ ಬಗ್ಗೆ ಅರಿತುಕೊಳ್ಳಲು ಸಹಕಾರಿಯಾಗುತ್ತದೆ. ಯಾವುದೇ ವ್ಯಕ್ತಿ ನಮಗೆ ಆಘಾತ ನೀಡುವ ತನಕ ನಾವು ನಮ್ಮೊಳಗೆ ನೋಡುವುದೇ ಇಲ್ಲ ಮತ್ತು ಹಲವಾರು ಬದಲಾವಣೆ ಮಾಡಿಕೊಳ್ಳುತ್ತೇವೆ. ಹೃದಯ ಒಡೆಯುವುದರಿಂದ ನಾವು ಪ್ರೌಢ ಹಾಗೂ ಬುದ್ಧಿವಂತರಾಗುತ್ತೇವೆ. ಇದು ನಿಮ್ಮನ್ನು ಭಿನ್ನ ವ್ಯಕ್ತಿಯನ್ನಾಗಿ ಮಾಡುತ್ತದೆ.  

Pain Of Heartbreak

*ಘಟನೆ ಬಳಿಕ ನೀವು ಸಮಾಜವನ್ನು ಬೇರೆ ದೃಷ್ಟಿಯಿಂದ ನೋಡುವಂತೆ ಮಾಡುತ್ತದೆ. ಪ್ರೀತಿಯಲ್ಲಿ ಮುಳುಗಿದ್ದಾಗ ನಿಮಗೆ ಅದರ ಅನುಭವವೇ ಶ್ರೇಷ್ಠ ಎಂದೆನಿಸುತ್ತದೆ. ಆದರೆ ಹೃದಯ ಒಡೆದ ಬಳಿಕ ನೈಜ ಸಂತೋಷ ಎಲ್ಲಿದೆಯೆಂದು ನಿಮಗೆ ತಿಳಿಯುತ್ತದೆ. ಸುಳ್ಳು ಅಭಿಲಾಷೆ ಹಾಗೂ ನಿರೀಕ್ಷೆಗಳನ್ನು ನೀವು ನಿಲ್ಲಿಸುತ್ತೀರಿ.   ಪ್ರೀತಿ-ಕಾಮ, ಒಂದೇ ನಾಣ್ಯದ ಎರಡು ಮುಖವಿದ್ದಂತೆ... 

Pain Of Heartbreak
 

*ಯಾರನ್ನೂ ಕೂಡ ಹೆಚ್ಚಾಗಿ ಹಚ್ಚಿಕೊಳ್ಳಬಾರದು ಎಂದು ಹೃದಯ ಒಡೆದು ಹೋಗುವುದರಿಂದ ತಿಳಿಯುತ್ತದೆ. ಪ್ರೀತಿ ಮತ್ತು ಒಬ್ಬರನ್ನು ಹಚ್ಚಿಕೊಳ್ಳುವುದು ತುಂಬಾ ಭಿನ್ನ. ನಿಮ್ಮ ಎಲ್ಲಾ ಕಲ್ಪನೆಗಳನ್ನು ಇದು ಬುಡಮೇಲು ಮಾಡುತ್ತದೆ.

Pain Of Heartbreak
 

*ನಿಮ್ಮ ಜತೆಗಾರ/ಜತೆಗಾರ್ತಿ ನಿಮ್ಮನ್ನು ಬಿಟ್ಟು ಬದುಕಲ್ಲ ಎಂದು ಭಾವಿಸಿ ಇರುತ್ತೀರಿ. ನಿಮ್ಮನ್ನು ಬಿಟ್ಟ ಬಳಿಕ ಯಾವುದೇ ಸಮಸ್ಯೆಯಿಲ್ಲದೆ ಜೀವಿಸಲು ಆರಂಭಿಸಿದಾಗ ಎಲ್ಲಾ ಸತ್ಯ ನಿಮಗೆ ಅರ್ಥವಾಗುತ್ತದೆ.

Story first published: Friday, November 18, 2016, 15:56 [IST]
English summary

Valuable Lessons That The Pain Of Heartbreak Will Teach You

We hate heartbreaks as they cause lots of pain. They could also cause depression and frustration when we don't handle them carefully. When a relationship ends, it shatters anyone. The pain inside seems to cut your soul into pieces. But those who endure that dark phase and gather strength to move on would again feel that life is beautiful and whatever has happened, happened for the good.
Please Wait while comments are loading...
Subscribe Newsletter