ಹಿರಿಯರೇ ನಿಶ್ಚಯಿಸಿದ ಮದುವೆ, ಆದರೆ ಆ ಮೊದಲ ರಾತ್ರಿ....

ಹಿರಿಯರು ನಿಶ್ಚಯಿಸಿದ್ದು ಎಂಬ ಒಂದೇ ಕಾರಣಕ್ಕೆ ಒಪ್ಪಿಕೊಂಡ ನವವಿವಾಹಿತರು ಪ್ರಥಮ ರಾತ್ರಿಯಂದು ಹೇಗೆ ನಡೆದುಕೊಳ್ಳಬೇಕೆಂಬ ಗೊಂದಲದಲ್ಲಿರುತ್ತಾರೆ. ಬನ್ನಿ, ಇಲ್ಲಿ ನೀಡಲಾಗಿರುವ ಮಾಹಿತಿಗಳು ನವದಂಪತಿಗಳ ದುಗುಡವನ್ನು ಹೋಗಲಾಡಿಸಲಿದೆ....

By: Arshad
Subscribe to Boldsky

ಇಂದಿನ ಯುವಜನಾಂಗ ಹೆಚ್ಚಾಗಿ ನಗರಜೀವನದತ್ತ ಆಕರ್ಷಿತವಾಗುತ್ತಿದೆ. ಅಂತೆಯೇ ಅವರ ಆದ್ಯತೆಗಳು ಸಹಾ. ಇಂದಿನವರು ಹೆಚ್ಚಾಗಿ ತಮ್ಮ ಬಾಳಸಂಗಾತಿಯನ್ನು ತಾವೇ ಆಯ್ದುಕೊಳ್ಳಲು ಬಯಸುತ್ತಾರೆ. ಪರಿಣಾಮವಾಗಿ ಪ್ರೇಮವಿವಾಹಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚು. ಆದರೂ ಉಳಿದವರು ಹಿಂದಿನಂತೆ ನಡೆದುಕೊಂಡು ಬಂದ ಸಾಂಪ್ರಾದಾಯಿಕ ಹಿರಿಯರು ನಿಶ್ಚಯಿಸಿದ ಸಂಗಾತಿಯನ್ನೇ ಒಪ್ಪಿಕೊಳ್ಳುತ್ತಾರೆ. ಮೊದಲ ರಾತ್ರಿಯ-ವಿಚಿತ್ರ ಸಂಪ್ರದಾಯ! ಹೀಗೂ ಉಂಟೇ?

ಇತ್ತೀಚಿನ ದಿನಗಳಲ್ಲಿ ವಿಫಲವಾಗುತ್ತಿರುವ ವಿವಾಹಗಳ ಸಂಖ್ಯೆಗಳನ್ನು ಪರಿಗಣಿಸಿದಾಗ ಇದರಲ್ಲಿ ಪ್ರೇಮವಿವಾಹಗಳದ್ದೇ ಸಿಂಹಪಾಲು ಇರುವ ಅಂಕಿ ಅಂಶಗಳು ಮಾತ್ರ ದಿಗ್ಬ್ರಮೆಯುಂಟುಮಾಡುತ್ತವೆ. ಪ್ರೇಮವಿವಾಹಗಳೇ ಹೆಚ್ಚು ಏಕೆ ವಿಫಲವಾಗುತ್ತವೆ ಎಂಬುದು ಮನಃಶಾಸ್ತ್ರಜ್ಞರಿಗೂ ಅರ್ಥವಾಗದ ವಿಷಯವಾಗಿದೆ.   ಪ್ರೇಮ ವಿವಾಹ V/S ವ್ಯವಸ್ಥಿತ ವಿವಾಹ-ನಿಮ್ಮ ಅನಿಸಿಕೆ ಏನು?

ಯಾವುದೇ ದಂಪತಿಗಳಲ್ಲಿ ಚಿಕ್ಕ ಪುಟ್ಟ ಭಿನ್ನತೆ, ಭಿನ್ನಾಭಿಪ್ರಾಯವಿದ್ದೇ ಇರುತ್ತದೆ. ಇವುಗಳನ್ನು ದೊಡ್ಡದಾಗದಂತೆ ಬಿಡಲು ಹಿರಿಯರು ನಿಶ್ಚಯಿಸಿದ ಮದುವೆಯಲ್ಲಿ ಹಿರಿಯರು ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ ಪ್ರೇಮವಿವಾಹದಲ್ಲಿ ಸಾಮಾನ್ಯವಾಗಿ ಹಿರಿಯರು ಮಧ್ಯೆ ಪ್ರವೇಶಿಸದ ಕಾರಣ ಚಿಕ್ಕಪುಟ್ಟ ಕಲಹಗಳು ಉಲ್ಬಣಗೊಂಡು ಗೊಂದಲವೇರ್ಪಟ್ಟು ಇಬ್ಬರೂ ಪಟ್ಟುಬಿಡದೇ ಹಮ್ಮು ಸಾಧಿಸಿ ಮತ್ತೆ ಸರಿಪಡಿಸಲಾಗದ ಹಂತಕ್ಕೆ ಬೆಳೆದು ವಿಚ್ಚೇದನಕ್ಕೆ ಕಾರಣವಾಗಿರುವುದು ಮನಃಶಾಸ್ತ್ರಜ್ಞರು ಕಂಡುಕೊಂಡ ಸತ್ಯವಾಗಿದೆ.

ಆದರೂ ಕೇವಲ ಹಿರಿಯರು ನಿಶ್ಚಯಿಸಿದ್ದು ಎಂಬ ಒಂದೇ ಕಾರಣಕ್ಕೆ ಒಪ್ಪಿಕೊಂಡ ನವವಿವಾಹಿತರು ಪ್ರಥಮ ರಾತ್ರಿಯಂದು ಹೇಗೆ ನಡೆದುಕೊಳ್ಳಬೇಕೆಂಬ ಗೊಂದಲದಲ್ಲಿರುತ್ತಾರೆ. ಬನ್ನಿ, ಇಲ್ಲಿ ನೀಡಲಾಗಿರುವ ಮಾಹಿತಿಗಳು ನವದಂಪತಿಗಳ ದುಗುಡವನ್ನು ಹೋಗಲಾಡಿಸಲಿದೆ....


ಅವಸರಿಸಬೇಡಿ

ಸಾಮಾನ್ಯವಾಗಿ ಪ್ರಥಮ ರಾತ್ರಿ ಎಂದ ತಕ್ಷಣ ಹೆಚ್ಚಿನವರು ದೈಹಿಕ ಸಂಪರ್ಕಕ್ಕೇ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಾರೆ. ವಾಸ್ತವವಾಗಿ ಪ್ರಥಮ ರಾತ್ರಿ ದಂಪತಿಗಳ ಪಾಲಿಗೆ ಅತ್ಯಂತ ಪವಿತ್ರವಾಗಿದ್ದು ಹೃದಯಗಳ ಬೆಸುಗೆಯೇ ಪ್ರಮುಖವಾಗಿದೆ. ಹಿರಿಯರು ನಿಶ್ಚಯಿಸಿದ ಮದುವೆಯಲ್ಲಿ ದಂಪತಿಗಳು ಪರಸ್ಪರ ಅಪರಿಚಿತರಾಗಿರುವ ಕಾರಣ ಹೃದಯಗಳು ಅಷ್ಟು ಸುಲಭವಾಗಿ ಬೆರೆಯಲಾರದು......

ಅವಸರಿಸಬೇಡಿ

ಆದ್ದರಿಂದ ಇಬ್ಬರೂ ತಮಗೆ ದೊರೆತ ಸಮಯವನ್ನು ಸಾವಕಾಶವಾಗಿ ಬಳಸಿಕೊಳ್ಳಬೇಕು. ಒಬ್ಬರ ಹೃದಯನ್ನೊಬ್ಬರು ಅರಿತುಕೊಳ್ಳಲು ಯತ್ನಿಸಬೇಕು. ಪರಸ್ಪರರ ಒಲುಮೆ, ಜೀವನದ ಗುರಿ, ಆದ್ಯತೆಗಳು, ಇಷ್ಟವಾಗುವ, ಇಷ್ಟವಾಗದ ಸಂಗತಿಗಳನ್ನು ಕ್ಲುಪ್ತವಾಗಿ ಹಂಚಿಕೊಳ್ಳಬೇಕು. ನಿಧಾನವಾಗಿ ಒಬ್ಬರ ಮನಸ್ಸಿನಲ್ಲೊಬ್ಬರು ಬೆರೆತುಕೊಳ್ಳಲು ಯತ್ನಿಸಬೇಕು.

ಮುಂದುವರೆಯಬಾರದೆಂಬ ನಿಯಮವೇನೂ ಇಲ್ಲ

ಸಾಮಾನ್ಯವಾಗಿ ಮೊದಲ ರಾತ್ರಿಯೇ ಸಮಾಗಮವೂ ಆಗಬೇಕು ಎಂಬ ನಿಯಮವೇನೂ ಇಲ್ಲ. ಆದರೂ ಇಂದಿಗೂ ಎಷ್ಟೋ ಕುಟುಂಬಗಳಲ್ಲಿ ಈ ಕ್ರಿಯೆ ನಡೆಯಲೇಬೇಕು ಎಂಬ ಅಲಿಖಿತ ಕ್ರಮವನ್ನು ಅನುಸರಿಸುತ್ತಿದೆ. ಆದರೆ ದಂಪತಿಗಳಲ್ಲಿ ಮನಸ್ಸುಗಳ ಮಿಲನಕ್ಕೂ ಮುನ್ನ ದೈಹಿಕ ಮಿಲನ ಕೇವಲ ಯಾಂತ್ರಿಕವಾಗಿರುತ್ತದೆಯೇ ಹೊರತು ದಾಂಪತ್ಯದ ಸವಿಯನ್ನು ಸವಿಯಲು ಸಾಧ್ಯವಿಲ್ಲ.

ಮುಂದುವರೆಯಬಾರದೆಂಬ ನಿಯಮವೇನೂ ಇಲ್ಲ

ಆದ್ದರಿಂದ ವಿವಾಹದ ವಿಧಿಗಳನ್ನು ಅನುಸರಿಸುತ್ತಾ ಸುಸ್ತಾಗಿರುವ ಇಬ್ಬರೂ ಪರಸ್ಪರ ತೆಕ್ಕೆಯಲ್ಲಿ ಆತ್ಮೀಯತೆಯನ್ನು ಹಂಚಿಕೊಂಡು ಸುಖವಾಗಿ ಪವಡಿಸಿದರೂ ಸರಿ. ಒಟ್ಟಾರೆ ಇಬ್ಬರಿಗೂ ಹಿತವೆನ್ನಿಸುವ, ಪರಸ್ಪರ ಒಪ್ಪಿಗೆಯದ್ದಾಗಿರಬೇಕು ಅಷ್ಟೇ

ವಿಶ್ರಾಂತಿಗೆ ಹೆಚ್ಚು ಆದ್ಯತೆ ನೀಡಿ

ಎಷ್ಟೋ ವಿವಾಹ ಸಂಪ್ರದಾಯಗಳಲ್ಲಿ ವಧೂವರರು ಒಂದೆಡೆ ಕುಳಿತುಕೊಂಡೇ ಇದ್ದು ಅಥವಾ ನಿಂತೇ ಇದ್ದು ದಿನದ ಸಂಪ್ರದಾಯಗಳೆಲ್ಲಾ ಮುಗಿಯುವವರೆಗೆ ಹೈರಾಣಾಗಿರುತ್ತಾರೆ. ಕೆಲವೊಮ್ಮೆ ಉಪಚಾರ, ಕುಂದುಕೊರತೆ, ವಿವಾಹದ ವ್ಯವಸ್ಥೆ, ಹಣಕಾಸಿನ ವ್ಯವಸ್ಥೆ ಮೊದಲಾದ ಕೆಲವಾರು ಕಾರಣಗಳಿಂದ ವಧೂವರರಿಗೆ ಮಾನಸಿಕವಾಗಿಯೂ ಬಳಲಿಕೆ ಯುಂಟಾಗಿದ್ದಿರಬಹುದು.

ವಿಶ್ರಾಂತಿಗೆ ಹೆಚ್ಚು ಆದ್ಯತೆ ನೀಡಿ

ಅಲ್ಲದೇ ತಮ್ಮ ಸಂಗಾತಿಯ ಬಗ್ಗೆ ಗೊತ್ತಿಲ್ಲದ ಸಂಗತಿಗಳ ಬಗ್ಗೆ ಆತಂಕವೂ ಇರಬಹುದು ಅಥವಾ ಲೈಂಗಿಕ ಕ್ರಿಯೆಯ ಬಗ್ಗೆ ಹೆದರಿಕೆಭರಿತ ಕುತೂಹಲವೂ ಇರಬಹುದು. ಯಾವುದೇ ಆದರೂ ಪ್ರಥಮ ರಾತ್ರಿಯಂದು ಇಬ್ಬರ ನಡುವೆ ದುಗುಡ ಉಂಟಾಗದಂತೆ ನೋಡಿಕೊಳ್ಳುವುದು ದಂಪತಿಗಳು ಅನುಸರಿಸಬೇಕಾಗಿದೆ. ಇದಕ್ಕೆ ಸಾಕಷ್ಟು ವಿಶ್ರಾಂತಿ ಅಗತ್ಯ.

ಪ್ರಶ್ನೆಗಳನ್ನು ಕೇಳಬೇಡಿ

ಸಾಮಾನ್ಯವಾಗಿ ನಮ್ಮೆಲ್ಲದ ಸಂಭಾಶಣೆಗಳು ಪ್ರಶ್ನೆಯಿಂದಲೇ ಪ್ರಾರಂಭಗೊಳ್ಳುತ್ತವೆ. ಪ್ರಥಮ ರಾತ್ರಿ ಅತ್ಯಂತ ಪವಿತ್ರ ಹಾಗೂ ಅಮೂಲ್ಯವಾಗಿದ್ದು ಈ ಸಮಯದಲ್ಲಿ ನಿಮ್ಮ ಸಂಗಾತಿಯ ಬಳಿ ಅನಗತ್ಯವಾದ ಪ್ರಶ್ನೆಗಳನ್ನು ಕೇಳಲೇಬೇಡಿ. ಅದರಲ್ಲಿಯೂ ಹಿಂದಿನ ಸಂಗಾತಿಯ ಬಗ್ಗೆ, ಹಿಂದಿನ ಲೈಂಗಿಕ ಅನುಭವದ ಬಗ್ಗೆ ಸರ್ವಥಾ ಪ್ರಶ್ನೆಗಳನ್ನು ಕೇಳಕೂಡದು. ಇದರಿಂದ ಮನಸ್ತಾಪವುಂಟಾದರೆ ಜೀವನವಿಡೀ ಕಹಿ ಅನುಭವಿಸಬೇಕಾಗಿ ಬಂದೀತು.

ಸಂಗಾತಿಯ ಬಗ್ಗೆ ಅರಿಯಲು ಯತ್ನಿಸಿ

ಸಾಮಾನ್ಯವಾಗಿ ಪರಸ್ಪರರ ಸ್ಪರ್ಶದ ಬಳಿಕ ಲೈಂಗಿಕ ಉತ್ಕಟತೆಗೆ ತಲುಪಲು ಹೆಚ್ಚು ಸಮಯವೇನೂ ಬೇಕಾಗಿಲ್ಲದಿದ್ದರೂ ಒಂದೇ ಸಮನೆ ಮುಂದುವರೆಯಕೂಡದು. ಸ್ಪರ್ಶಕ್ಕೂ ಮಿಗಿಲಾಗಿ ನಿಮ್ಮ ಸಂಗಾತಿಯ ವ್ಯಕ್ತಿತ್ವಕ್ಕೆ ಹೆಚ್ಚಿನ ಮಹತ್ವ ನೀಡಿ ಅವರ ಬಗ್ಗೆ ತಿಳಿದುಕೊಳ್ಳಲು ಯತ್ನಿಸುವುದೇ ಜಾಣತನದ ಕ್ರಮ. ನಿಮ್ಮ ಸಂಗಾತಿಗೆ ಏನು ಪ್ರಿಯ, ಏನು ಪ್ರಿಯವಲ್ಲ, ಜೀವನದ ಮುಂದಿನ ದಿನಗಳಲ್ಲಿ ಹೇಗಿರಬೇಕು, ಹೇಗಿರಬಾರದು ಎಂಬುದನ್ನು ವಿಮರ್ಶಿಸುತ್ತಾ ಸುಂದರ ಭವಿಷ್ಯವನ್ನು ಕಲ್ಪಿಸಿಕೊಳ್ಳುತ್ತಾ ಒಬ್ಬರಲ್ಲೊಬ್ಬರು ಲೀನವಾಗುವುದು ಸ್ವರ್ಗಕ್ಕೆ ಸಮಾನ.

ಅತಿರೇಕದ ಕಲ್ಪನೆಗಳನ್ನು ಹೇರಬೇಡಿ

ಹೆಚ್ಚಿನ ಪುರುಷರಲ್ಲಿ ತಮ್ಮ ಸಾಮರ್ಥ್ಯದ ಬಗ್ಗೆ ಸ್ವಘೋಷಿತ ಕಲ್ಪನೆ ಮನೆಮಾಡಿರುತ್ತದೆ. ಭ್ರಮಾಲೋಕದಲ್ಲಿ ಎಲ್ಲರೂ ಈ ಸಾಮರ್ಥ್ಯವನ್ನು ಒರೆಹಚ್ಚಿಕೊಂಡಿದ್ದವರೇ ಆಗಿದ್ದಾರೆ. ಆದರೆ ವಾಸ್ತವಕ್ಕೆ ಬಂದಾಗ ಈ ಕಲ್ಪನೆಗಳನ್ನೆಲ್ಲಾ ಇಂದೇ ಸಕಾರಗೊಳಿಸಲು ಯತ್ನಿಸಲು ಇದು ಸರ್ವಥಾ ಸೂಕ್ತ ಸಮಯವಲ್ಲ. ಇದು ನಿಮ್ಮ ಸಂಗಾತಿಯನ್ನು ಭಯಭೀತಗೊಳಿಸಬಹುದು. ಯಾವುದೇ ದಂಪತಿಗಳಲ್ಲಿ ಮೊದಲು ಮನಸ್ಸಿನ ಮಿಲನವಾದ ಬಳಿಕವೇ ದೈಹಿಕ ಮಿಲನದತ್ತ ಸಾಗಿದರೆ ಉತ್ತಮ.

ಉತ್ಪ್ರೇಕ್ಷೆಯನ್ನು ನಂಬಬೇಡಿ

ಸಾಮಾನ್ಯವಾಗಿ ಪ್ರಥಮ ಮಿಲನದ ಬಗ್ಗೆ ವಾಸ್ತವಕ್ಕಿಂತಲೂ ಉತ್ಪ್ರೇಕ್ಷೆಯೇ ಹೆಚ್ಚು ಜನಜನಿತವಾಗಿದೆ. ಅದರಲ್ಲೂ ಸ್ನೇಹಿತರ ಗುಂಪಿನಲ್ಲಿ ತಮ್ಮ ಅಹಮ್ಮಿಕೆ ಹೆಚ್ಚಿಸಿಕೊಳ್ಳುವ ಹಿಂದಿನ ವಿವಾಹಿತರು ಇಲ್ಲದಿದ್ದುದನ್ನೆಲ್ಲಾ ಉಪ್ಪೂ ಕಾರ ಸೇರಿಸಿ ಉತ್ಪ್ರೇಕ್ಷಿಸಿ ಹೇಳಿರುವುದೇ ಹೆಚ್ಚು. ಪ್ರತಿ ವ್ಯಕ್ತಿಯಲ್ಲಿಯೂ ನಿಸರ್ಗ ಕೆಲವೊಂದು ಶಕ್ತಿಗಳನ್ನು ನೀಡಿದೆ.

ಉತ್ಪ್ರೇಕ್ಷೆಯನ್ನು ನಂಬಬೇಡಿ

ನಿಸರ್ಗಕ್ಕೆ ತಲೆಬಾಗಿದರೆ ಸಾಕು. ನಿಮ್ಮ ಸ್ನೇಹಿತರ ಉತ್ಪ್ರೇಕ್ಷೆಗಳಿಗೆ ತಲೆಗೊಡಬೇಡಿ. ಅಷ್ಟಿಲ್ಲದೇ "ಗುಣ ನೋಡಿ ಹೆಣ್ಣು ಕೊಡ" ಎಂದೇಕೆ ಹಿರಿಯರು ಹೇಳಿದ್ದಾರೆ? ವಿವಾಹಕ್ಕೂ ಮುನ್ನ ಅಂಗಾಗಗಳ ಅಳತೆಯನ್ನೇಕೆ ನೋಡುವುದಿಲ್ಲ? ಇದು ಅರ್ಥವಾದರೆ ಸಾಕು, ನಿಮ್ಮ ಪ್ರಥಮರಾತ್ರಿ ಜೀವನಪರ್ಯಂತ ನೆನಪಿಡುವ ರಾತ್ರಿಯಾಗುವುದು ಖಂಡಿತ.

 

Story first published: Tuesday, November 8, 2016, 23:14 [IST]
English summary

Tips For First Night After Arranged Marriage

Arranged marriages aren't extinct yet and yes, some do believe that the success rate and stability that arranged marriages offer is higher compared to love marriages. If you are planning to get into an arranged marriage, you would surely wonder what happens on the first night. Frankly speaking, it is better to take things as slow as possible on the first night and here are some tips to help you. Tips For First Night After Arranged Marriage
Please Wait while comments are loading...
Subscribe Newsletter