For Quick Alerts
ALLOW NOTIFICATIONS  
For Daily Alerts

ಇದನ್ನೆಲ್ಲಾ ವಿವಾಹದ ಮೊದಲೇ ಇತ್ಯರ್ಥ ಮಾಡಿಕೊಳ್ಳಿ!

By Super
|

ಜೀವನ ಸಂಗಾತಿಯನ್ನು ಆಯ್ದುಕೊಳ್ಳುವುದು ಅಷ್ಟು ಸುಲಭವಲ್ಲ. ಜೀವನಪರ್ಯಂತ ಜೊತೆ ನೀಡಬೇಕಾದ ವ್ಯಕ್ತಿಯನ್ನು ಅರಿಯುವುದು, ಅವರ ವ್ಯಕ್ತಿತ್ವ, ಸ್ವಭಾವ, ಹವ್ಯಾಸ, ಇಷ್ಟವಾಗುವ, ಇಷ್ಟವಾಗದ ಸಂಗತಿಗಳನ್ನು ಅರಿಯುವುದು ಮೊದಲಾದವು ಎಷ್ಟು ಮುಖ್ಯವೋ ಅಷ್ಟೇ ಹಿಂದಿನ ನೆನಪುಗಳನ್ನು ಮತ್ತು ಮುಖ್ಯವಾದ ಹಿಂದಿನ ಘಟನೆಗಳ ಬಗ್ಗೆ ತಿಳಿಹೇಳುವುದೂ ಅಗತ್ಯ. ನಿಮ್ಮ ಜೀವನ ಸಂಗಾತಿಯಾಗುವವರಿಗೆ ನಿಮ್ಮ ಬಗ್ಗೆ ಅರಿತಿರುವುದು ಅವರ ಹಕ್ಕು ಸಹಾ.

ಒಂದು ವೇಳೆ ನೀವು ನಿಮ್ಮ ಹಿಂದಿನ ಗುಟ್ಟುಗಳನ್ನು ಹೇಳದೇ ಹೋದರೆ ಮುಂದೆಂದಾದರೂ ಮೂರನೆಯ ವ್ಯಕ್ತಿಯ ಮೂಲಕ ಈ ವಿಷಯ ತಿಳಿಯಲ್ಪಟ್ಟು ಗಂಡಹೆಂಡಿರ ನಡುವೆ ಹುಳಿ ಹಿಂಡುವ ಸಂಭವವಿದೆ. ಒಂದು ವೇಳೆ ನೀವಿಬ್ಬರೂ ಜೀವನಸಂಗಾತಿಗಳಾಗಲು ನಿರ್ಧರಿಸಿದ್ದರೆ ವಿವಾಹಕ್ಕೂ ಮುನ್ನ ಇಬ್ಬರ ನಡುವೆ ಯಾವುದೇ ಗುಟ್ಟು ಇರದಂತೆ ನೋಡಿಕೊಳ್ಳಿ. ತಜ್ಞರ ಪ್ರಕಾರ ತಮ್ಮ ಹಿಂದಿನ ಗುಟ್ಟುಗಳನ್ನು ಬಿಟ್ಟುಕೊಡದೇ ವಿವಾಹವಾದರೆ ಬಳಿಕ ರಟ್ಟಾಗುವ ಗುಟ್ಟುಗಳು ವಿವಾಹಬಂಧನವನ್ನೇ ಅಲ್ಲಾಡಿಸಬಹುದು.

ಆದ್ದರಿಂದ ಇಬ್ಬರೂ ತಮ್ಮ ಬಗ್ಗೆ ಪೂರ್ಣವಾದ ಪ್ರಾಮಾಣಿಕತೆಯಿಂದ ವಿವರಗಳನ್ನು ನೀಡುವುದೇ ಸುಖಕರ ದಾಂಪತ್ಯಕ್ಕೆ ಅಡಿಪಾಯವಾಗಿದೆ. ಒಂದು ವೇಳೆ ನೀವು ಶೀಘ್ರವೇ ವಿವಾಹವಾಗುವವರಿದ್ದರೆ ಮತ್ತು ಇನ್ನೂ ನಿಮ್ಮ ಹಿಂದಿನ ಗುಟ್ಟುಗಳ ಬಗ್ಗೆ ಹೇಳದೇ ಇದ್ದರೆ ಆದಷ್ಟು ಬೇಗನೇ ತಿಳಿಸಿ ಹೇಳುವುದು ಉತ್ತಮ. ಆದರೆ ಏನು ಹೇಳಬೇಕು ಎಂದು ಗೊತ್ತಾಗುತ್ತಿಲ್ಲವೇ? ಕೆಳಗಿನ ಸ್ಲೈಡ್ ಶೋ ನಿಮ್ಮ ನೆರವಿಗೆ ಬರಲಿದೆ....

ಪ್ರಾಣಿಗಳ ಕುರಿತಾದ ನಿಮ್ಮ ಪ್ರೀತಿ

ಪ್ರಾಣಿಗಳ ಕುರಿತಾದ ನಿಮ್ಮ ಪ್ರೀತಿ

ಒಂದು ವೇಳೆ ನೀವು ಯಾವುದಾದರೂ ಪಕ್ಷಿ ಅಥವಾ ಪ್ರಾಣಿಯನ್ನು ಅತೀವವಾಗಿ ಇಷ್ಟಪಡುತ್ತಿದ್ದರೆ ಅಥವಾ ದ್ವೇಷಿಸುತ್ತಿದ್ದರೆ ಇದನ್ನು ಸ್ಪಷ್ಟವಾಗಿ ತಿಳಿಸಿ. ಏಕೆಂದರೆ ವಿವಾಹದ ಬಳಿಕ ನಿಮಗೆ ಇಷ್ಟವಿಲ್ಲದ ಪ್ರಾಣಿ ನಿಮ್ಮ ಸಂಗಾತಿಯ ಅತಿ ಇಷ್ಟದ ಪ್ರಾಣಿಯಾಗಿದ್ದು ಇದು ನಿಮ್ಮ ದಾಂಪತ್ಯದಲ್ಲಿ ಬಿರುಕು ಮೂಡಿಸಲು ಕಾರಣವಾಗಬಹುದು.

ಜೀವನದ ಬಗ್ಗೆ ನಿಮ್ಮ ನಿಲುವು

ಜೀವನದ ಬಗ್ಗೆ ನಿಮ್ಮ ನಿಲುವು

ವಿವಾಹದ ಬಳಿಕ ನಿಮ್ಮ ಜೀವನ ಹೇಗಿರಬೇಕು ಎಂದು ನೀವು ಇಚ್ಛಿಸಿದ್ದೀರಿ ಎಂಬುದನ್ನು ಸ್ಪಷ್ಟವಾಗಿ ತಿಳಿಸಿ. ಉದಾಹರಣೆಗೆ ವಿವಾಹದ ಬಳಿಕವೂ ಕೆಲಸ ಮಾಡುವ, ಮಾಡದಿರುವ, ಸಮಾಜಸೇವೆ, ಉನ್ನತ ಶಿಕ್ಷಣ, ಮಹತ್ವಾಕಾಂಕ್ಷೆಯ ಬೆನ್ನು ಹತ್ತುವುದು ಮೊದಲಾದವುಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಿ. ಇಲ್ಲದಿದ್ದರೆ ಮುಂದಿನ ದಿನ ಮಹತ್ವಾಕಾಂಕ್ಷೆಯನ್ನು ಸಾಧಿಸಲು ನಿಮ್ಮ ಸಂಗಾತಿಯೇ ಅಡ್ಡಗಾಲು ಹಾಕಬಹುದು.

ತಿಂಗಳ ಕಂತಿನ ಸಾಲಗಳ ಬಗ್ಗೆ

ತಿಂಗಳ ಕಂತಿನ ಸಾಲಗಳ ಬಗ್ಗೆ

ಇಂದು ತಿಂಗಳ ಸಾಲದ ಮೂಲಕ ದುಬಾರಿ ವಸ್ತುಗಳು ಎಲ್ಲರ ಕೈ ಎಟಕುವಂತಿವೆ. ವಿವಾಹಕ್ಕೂ ಮುನ್ನ ಇಂತಹ ಯಾವುದಾದರೂ ಮಾಸಿಕ ಕಂತು ನಡೆಯುತ್ತಿದ್ದು ವಿವಾಹದ ಬಳಿಕವೂ ಹಲವಾರು ತಿಂಗಳು ನಡೆಯುವುದಿದ್ದರೆ ಈ ಬಗ್ಗೆ ಸ್ಪಷ್ಟವಾಗಿ ತಿಳಿಸಿ. ಅಗತ್ಯವಿಲ್ಲದಿದ್ದರೂ ದಾಖಲೆಗಳನ್ನು ತೋರಿಸಿ ಸ್ಪಷ್ಟಪಡಿಸಿ. ಇಲ್ಲದಿದ್ದರೆ ನಿಮ್ಮ ಮಾಸಿಕ ಕಂತಿನ ಬಗ್ಗೆ ನಿಮ್ಮ ಸಂಗಾತಿ ಅರಿವಿಲ್ಲದೇ ಅವರ ಮಾಸಿಕ ಕಂತಿನ ಬಗ್ಗೆ ನಿಮಗೆ ಅರಿವಿಲ್ಲದೇ ದಿಗಿಲಾಗುವ ಸಂಭವ ಹೆಚ್ಚು. ಅದೇ ವಿವಾಹಕ್ಕೂ ಮುನ್ನ ಖಚಿತ ಮಾಹಿತಿ ಇದ್ದರೆ ಮುಂದಿನ ಜೀವನವನ್ನು ಇನ್ನೂ ಸುಂದರವಾಗಿರುವಂತೆ ನಿರೂಪಿಸಲು ಸಾಧ್ಯ.

ನಿಮ್ಮ ನೈಜ ವ್ಯಕ್ತಿತ್ವವನ್ನು ತೋರಿಸಿ

ನಿಮ್ಮ ನೈಜ ವ್ಯಕ್ತಿತ್ವವನ್ನು ತೋರಿಸಿ

ಪ್ರೀತಿಯಲ್ಲಿರುವ ವ್ಯಕ್ತಿಗಾಗಿ ಎಲ್ಲರೂ ಸ್ವಲ್ಪವೇನು, ಪೂರ್ಣವಾಗಿ ಬದಲಾಗುತ್ತಾರೆ. ಹೆಚ್ಚಿನವರು ತಮ್ಮ ಸಂಗಾತಿಗಾಗಿ ತಮ್ಮ ಆಸೆ ಆಕಾಂಕ್ಷೆಗಳನ್ನೇ ಅದುಮಿಟ್ಟುಕೊಳ್ಳುತ್ತಾರೆ. ವಿವಾಹದ ಮೊದ ಮೊದಲು ಇದು ಒಂದು ಸುಂದರವಾದ ತ್ಯಾಗವಾಗಿ ಕಂಡುಬಂದರೂ ಜೀವನದ ನಂತರದ ವರ್ಷಗಳಲ್ಲಿ ಇದು ಕೊರಗಾಗಿ ಕಾಡತೊಡಗುತ್ತದೆ. ಈ ಪರಿಸ್ಥಿತಿ ಬರದೇ ಇರಲು ನಿಮ್ಮ ನೈಜ ವ್ಯಕ್ತಿತ್ವವನ್ನು ನಿಮ್ಮ ಸಂಗಾತಿಯೆದುರು ಪ್ರಕಟಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನಿಮ್ಮ ನೈಜ ವ್ಯಕ್ತಿತ್ವವನ್ನು ತೋರಿಸಿ

ನಿಮ್ಮ ನೈಜ ವ್ಯಕ್ತಿತ್ವವನ್ನು ತೋರಿಸಿ

ನೀವು ಮುಂದೆ ಏನಾಗಬೇಕು ಎಂದಿದ್ದೀರೋ ಅದಕ್ಕಾಗಿ ಹೇಗೆ ಜೀವಿಸಬೇಕೋ ಹಾಗೇ ಜೀವಿಸಿ. ನಿಮ್ಮ ಸಂಗಾತಿಗಾಗಿ ನಿಮ್ಮನ್ನು ಬದಲಿಸಿಕೊಳ್ಳುವ ಅಗತ್ಯವಿಲ್ಲ. ನಿಜವಾದ ಪ್ರೀತಿ ಇದ್ದರೆ ನಿಮ್ಮ ಆಕಾಂಕ್ಷೆಗೆ ನಿಮ್ಮ ಸಂಗಾತಿ ಸಂಪೂರ್ಣ ಸಹಕಾರ ನೀಡುತ್ತಾರೆ. ಇದು ನೀವು ಜೀವನದಲ್ಲಿ ಅತಿ ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ.

English summary

Things You Need To Confess To Your Partner

Planning a beautiful wedding with the one you love? Well, if you are, it is time to spill those secrets you have been hiding in that closet. If you want to spend the rest of your life with the one you are in love with, it is only right for him or her to know your deepest secrets. It is also important not to hide anything from your partner after marriage as well as it can cause a lot of misunder standings in the relationship.
X
Desktop Bottom Promotion