ಆ ಮಧುರ ಕ್ಷಣಗಳು, ನೆನೆಸಿಕೊಂಡರೇ ಮೈ ಜುಂ ಎನ್ನುತ್ತದೆ!

ಜೀವನದಲ್ಲಿ ಹಲವಾರು ಸಲ ನಮಗೆ ಸಂತೋಷದ ಕ್ಷಣಗಳು ಬರುತ್ತದೆ. ಇದನ್ನು ನಾವು ಮನಸ್ಸಿನ ಆಳದಿಂದ ಆನಂದಿಸುತ್ತೇವೆ....ಅದೇ ರೀತಿ ಸಂಬಂಧದಲ್ಲೂ ಕೆಲವೊಂದು ಸಂತೋಷದ ಕ್ಷಣಗಳು ಇರುತ್ತದೆ..ಬನ್ನಿ ಅದು ಯಾವುದು ಎಂಬುದನ್ನು ಮೆಲುಕುಹಾಕುವ...

By: Hemanth
Subscribe to Boldsky

ಜೀವನದಲ್ಲಿ ಸುಖ ದುಃಖವೆನ್ನುವುದು ಸಮಾನವಾಗಿರುತ್ತದೆ ಎನ್ನುವ ಮಾತಿದೆ. ಆದರೆ ಅದೆರಡನ್ನು ಯಾವ ರೀತಿಯಲ್ಲಿ ನಾವು ಸ್ವೀಕರಿಸುತ್ತೇವೆ ಎನ್ನುವುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಜೀವನದಲ್ಲಿ ಹಲವಾರು ಸಲ ನಮಗೆ ಸಂತೋಷದ ಕ್ಷಣಗಳು ಬರುತ್ತದೆ. ಇದನ್ನು ನಾವು ಮನಸ್ಸಿನ ಆಳದಿಂದ ಆನಂದಿಸುತ್ತೇವೆ.  ಗರ್ಲ್ ಫ್ರೆಂಡ್‍ ಹತ್ತಿರ ಹೀಗೆಲ್ಲಾ ಹೇಳಬೇಡಿ, ಆಕೆಗೆ ಆಗ್ಬರಲ್ಲ!

ಯಾವುದೇ ಗುರಿಯನ್ನು ತಲುಪಿದಾಗ ಅಥವಾ ಇನ್ನಿತರ ಯಾವುದೇ ಸಾಧನೆ ಮಾಡಿದಾಗ ಇದು ಸಹಜ. ಅದೇ ರೀತಿ ಸಂಬಂಧದಲ್ಲೂ ಕೆಲವೊಂದು ಸಂತೋಷದ ಕ್ಷಣಗಳು ಇರುತ್ತದೆ. ಸಂಬಂಧದಲ್ಲಿ ಎಲ್ಲವೂ ಸರಿಯಾಗಿ ಸಾಗುತ್ತಾ ಇದ್ದರೆ ಆಗ ಪ್ರತಿಯೊಂದು ಕ್ಷಣವೂ ಸಂತೋಷದಾಯಕವಾಗಿರುತ್ತದೆ. ಸಂಬಂಧದಲ್ಲಿ ಅತೀ ಹೆಚ್ಚು ಆಚರಿಸಲ್ಪಡುವಂತಹ ಕೆಲವೊಂದು ಕ್ಷಣಗಳ ಬಗ್ಗೆ ಈ ಲೇಖನದಲ್ಲಿ ನಾವು ತಿಳಿಯುವ.....  


ಮೊದಲ ಡೇಟ್

ಯಾವುದೇ ವ್ಯಕ್ತಿಯ ಕಡೆ ಆಕರ್ಷಣೆ ಇರುವುದು ಸಹಜ. ಅದೇ ವ್ಯಕ್ತಿ ಡೇಟಿಂಗ್ ಗೆ ಒಪ್ಪಿಕೊಂಡಾಗ ಆಗುವಂತಹ ಸಂತೋಷ ಅಷ್ಟಿಷ್ಟಲ್ಲ. ಇದು ಜೀವನದ ವಿಶೇಷ ಕ್ಷಣವಾಗಿರಬಹುದು.

ಪ್ರೀತಿಯ ಪ್ರಸ್ತಾವ ಮಾಡಿದಾಗ

ಕೆಲವು ತಿಂಗಳುಗಳ ಕಾಲ ನೀವು ಡೇಟಿಂಗ್ ಮಾಡಿದ ಬಳಿಕ ಆತ ಅಥವಾ ಆಕೆ ನಿಮ್ಮೊಂದಿಗೆ ಜೀವನ ಸಾಗಿಸಲು ಸೂಕ್ತವೆಂದು ತಿಳಿಯುತ್ತದೆ. ಈ ವೇಳೆ ನೀವು ಪ್ರೀತಿಯ ಪ್ರಸ್ತಾಪವನ್ನಿಡುತ್ತೀರಿ. ಅದನ್ನು ಎದುರಿನ ವ್ಯಕ್ತಿ ಸ್ವೀಕರಿಸಿದಾಗ ಅದು ಜೀವನದ ಮತ್ತೊಂದು ಸಂತೋಷದ ಕ್ಷಣವಾಗಿರುತ್ತದೆ.  ಅಷ್ಟಕ್ಕೂ ಪ್ರೀತಿ ಎಂದರೇನು, ಇದರ ಹಿಂದಿರುವ ರಹಸ್ಯವೇನು?

ಮೊದಲ ಕಿಸ್

ಯಾವುದೇ ಸಂಬಂಧದ ಅತೀ ಪ್ರಮುಖ ಘಟ್ಟವೆಂದರೆ ಮೊದಲ ಸಲ ತುಟಿಗಳು ಸಂಗಾತಿಯ ತುಟಿಗಳನ್ನು ಸೇರಿಕೊಳ್ಳುವುದು. ಆ ಕ್ಷಣದಲ್ಲಿ ಸಿಗುವಂತಹ ನಶೆಯು ಯಾವುದೇ ಮಾದಕ ದ್ರವ್ಯ ಕೂಡ ನೀಡಲು ಸಾಧ್ಯವಿಲ್ಲ.... ಚುಂಬಿಸುವಾಗ ಕಣ್ಣುಗಳನ್ನು ಮುಚ್ಚುವುದು ಯಾಕೆ?

ಮದುವೆ ದಿನ

ಮದುವೆ ದಿನದಂದು ನಿಮ್ಮ ಸಂಬಂಧವು ಸುರಕ್ಷಿತವೆಂದು ನಿಮಗೆ ಅನಿಸುತ್ತದೆ. ಈ ಕ್ಷಣ ಆನಂದಬಾಷ್ಪವು ಕಣ್ಣುಗಳಿಂದ ಬರಬಹುದು.

ಮಗುವಿನ ಜನನ

ನಿಮ್ಮ ಮಗುವಿನ ಜನನವು ಜೀವನದ ಅತ್ಯಂತ ಸಂತೋಷದ ಕ್ಷಣವಾಗಿರುತ್ತದೆ. ಆ ದಿನದಿಂದಲೇ ನಿಮ್ಮ ಜೀವನವು ಸಂಪೂರ್ಣ ಬದಲಾಗಿ ಹೋಗುತ್ತದೆ.

 

Story first published: Friday, November 25, 2016, 13:06 [IST]
English summary

Special Moments In Any Relationship

There are certain things that make you feel happy. And you cherish those moments as sweet memories. Just like the way you feel good when you achieve something, there some other moments in your life which will stay with you forever. They are the moments in your relationship. When everything goes well, every moment in your relationship will be very special. Now, let us discuss about the most celebrated moments in the life cycle of any relationship.
Please Wait while comments are loading...
Subscribe Newsletter