For Quick Alerts
ALLOW NOTIFICATIONS  
For Daily Alerts

ಹಣ vs ಪ್ರೀತಿ- ಒಂದೇ ನಾಣ್ಯದ ಎರಡು ಮುಖವಿದ್ದಂತೆ....

By Manu
|

ಯಾವುದೇ ಸಿನಿಮಾ ವೀಕ್ಷಿಸಿದರೂ ನಿಮಗೆ ಎರಡು ವಿಷಯಗಳ ಬಗ್ಗೆ ಹೆಚ್ಚಾಗಿ ಜಗಳವಾಗುವುದನ್ನು ನೋಡಿರುತ್ತೀರಿ. ಅದೆಂದರೆ ಒಂದು ಹಣ, ಮತ್ತೊಂದು ಪ್ರೀತಿ. ಈ ಎರಡು ವಿಷಯಗಳನ್ನು ಇಟ್ಟುಕೊಂಡು ಸಾವಿರಾರು ಸಿನಿಮಾಗಳು ಬಂದಿವೆ. ಆದರೆ ಇಂದು ಹೇಳಲು ಹೊರಟಿರುವುದು ಸಿನಿಮಾದ ಬಗ್ಗೆ ಅಲ್ಲ. ಜೀವನದಲ್ಲಿ ನಿಮಗೆ ಹಣ ಮುಖ್ಯವೇ ಅಥವಾ ಪ್ರೀತಿ ಮುಖ್ಯವೇ ಎನ್ನುವ ಬಗ್ಗೆ. ಕೆಲವರು ಹಣ ಮುಖ್ಯವೆಂದರೆ ಮತ್ತೆ ಕೆಲವರು ಪ್ರೀತಿಯೇ ನನ್ನ ಉಸಿರು ಎನ್ನಬಹುದು. ಹಣದ ಮುಂದೆ ಪ್ರೀತಿ, ವಿಶ್ವಾಸಕ್ಕೆ ಬೆಲೆಯೇ ಇಲ್ಲವೇ?

ಹೆಚ್ಚು ಪ್ರೀತಿ ಬೇಕು ಎಂದು ಹಂಬಲಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಅದೇ ರೀತಿ ಇನ್ನು ಹೆಚ್ಚು ಹೆಚ್ಚು ಹಣ ಬೇಕು ಎಂದು ಹಂಬಲಿಸಿದರೆ ಅದರಲ್ಲಿ ತಪ್ಪೇನೂ ಇಲ್ಲ ಬಿಡಿ. ಆದರೆ ಹಣ ಹಾಗೂ ಪ್ರೀತಿ ಮಧ್ಯೆ ಎಲ್ಲರೂ ಗೊಂದಲಕ್ಕೆ ಒಳಗಾಗಿರುವುದು ಮಾತ್ರ ನಿಜ. ಯಾಕೆಂದರೆ ಪ್ರೀತಿಯಲ್ಲೇ ತೇಲುತ್ತಿದ್ದವರು ಸಮಸ್ಯೆಯಾದಾಗ ಹಣದ ಮಹತ್ವ ತಿಳಿದಿದೆ. ಅದೇ ಹಣದ ಹಿಂದೆಯೇ ಓಡುತ್ತಿದ್ದವರಿಗೆ ಅಂತಿವಾಗಿ ಪ್ರೀತಿಯನ್ನು ಕಳಕೊಂಡಿದ್ದೇವೆ ಎನ್ನುವುದು ಅರ್ಥವಾಗಿದೆ. ಜೀವನವೆಂದರೆ ಹಣ ಹಾಗೂ ಪ್ರೀತಿ ಎರಡನ್ನು ಹೊಂದಿರಬೇಕು ಅಲ್ಲವೇ? ಇದರ ಬಗ್ಗೆ ಮುಂದಕ್ಕೆ ಓದಿಕೊಳ್ಳಿ... ಪತ್ನಿ ಐಷಾರಾಮಿ ಜೀವನ ಬಯಸಿದರೆ ಗಂಡನ ಪಾಡೇನು?

ವಾಸ್ತವಾಂಶ #1

ವಾಸ್ತವಾಂಶ #1

ಜೀವನದಲ್ಲಿ ಎಲ್ಲಾ ಐಷಾರಾಮವನ್ನು ಪಡೆದುಕೊಂಡು ಬಳಿಕ ವ್ಯಕ್ತಿಯೊಬ್ಬ ಏನನ್ನು ಯೋಚಿಸಲು ಸಾಧ್ಯ? ತನ್ನ ಭಾವನೆಗಳನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ಮುಂದುವರಿಯುವ ಜೀವವೊಂದು ಬೇಕಿತ್ತು ಎಂದಲ್ಲವೇ?

ವಾಸ್ತವಾಂಶ #2

ವಾಸ್ತವಾಂಶ #2

ನಿಮ್ಮನ್ನು ಅತಿಯಾಗಿ ಪ್ರೀತಿಸುವ ಸಂಗಾತಿಯಿದ್ದರೂ ಐಷಾರಾಮಿ ಜೀವನ ಮಾಡಲು ಕೈಯಲ್ಲಿ ಹಣವಿಲ್ಲದಿದ್ದರೆ ನಿಮ್ಮ ಭಾವನೆ ಹೇಗಿರುತ್ತದೆ? ನಿಮ್ಮ ಆಸೆಗಳನ್ನು ಈಡೇರಿಸುವಂತಹ ಮಾರ್ಗಗಳು ಇಲ್ಲವಲ್ಲಾ ಎನ್ನುವ ಬೇಸರ ನಿಮ್ಮಲ್ಲಿ ಮೂಡುತ್ತದೆ.

ವಾಸ್ತವಾಂಶ #3

ವಾಸ್ತವಾಂಶ #3

ಕೈತುಂಬಾ ಸಂಬಳ ಕೊಡುವಂತಹ ಕೆಲಸವಿದ್ದರೂ ಪ್ರೀತಿಸುವ ಜೀವಗಳೊಂದಿಗೆ ಇರಲು ನಿಮ್ಮಲ್ಲಿ ಸಮಯವಿಲ್ಲದಿದ್ದರೆ ಆಗ ನೀವು ಏನು ಕಳೆದುಕೊಳ್ಳುತ್ತೀರಿ? ಜೀವನದ ಸಂತೋಷ ಅಲ್ಲವೇ? ನೋಟುಗಳಿಂದ ಯಾವಾಗಲೂ ಪ್ರೀತಿ ಕೊಂಡುಕೊಳ್ಳಲು ಆಗಲ್ಲ.

ವಾಸ್ತವಾಂಶ #4

ವಾಸ್ತವಾಂಶ #4

ನಿಮ್ಮ ತೋಳಿನಲ್ಲಿ ಪ್ರೀತಿಸುವವರು ಮಲಗಿರುವಾಗ ಹೊಟ್ಟೆ ಚುರುಚುರು ಎನ್ನುತ್ತಿದ್ದರೆ ಆಗ ನಿಮಗೆ ಹಣದ ಮಹತ್ವ ಅರ್ಥವಾಗುತ್ತದೆ ಅಲ್ಲವೇ?

ವಾಸ್ತವಾಂಶ #5

ವಾಸ್ತವಾಂಶ #5

ನಿಮ್ಮ ಬಾಲ್ಯದ ಗೆಳೆಯರೆಲ್ಲರೂ ಕೋಟ್ಯಾಧಿಪತಿಗಳಾಗಿದ್ದಾರೆ. ಆದರೆ ಪ್ರೀತಿಯ ಕೊರತೆಯಿಂದ ಖಿನ್ನತೆಯಿಂದ ಬಳಲುತ್ತಿದ್ದಾರೆ. ಆದರೆ ನಿಮಗೆ ಪ್ರೀತಿಸುವ ಜೀವಗಳು ಸಿಕ್ಕಿದೆ ಎಂದಾಗ ನೀವು ತುಂಬಾ ಅದೃಷ್ಟವಂತರೆಂದು ಅನಿಸುವುದಿಲ್ಲವೇ?

ವಾಸ್ತವಾಂಶ #6

ವಾಸ್ತವಾಂಶ #6

ನಿಮ್ಮಲ್ಲಿ ಪ್ರೀತಿಸುವ ಕುಟುಂಬವಿದೆ. ಆದರೆ ಮಾಡಲು ಕೆಲಸವಿಲ್ಲ ಮತ್ತು ಕುಟುಂಬದವರು ಪ್ರತಿಯೊಂದಕ್ಕೂ ಕಷ್ಟಪಡುತ್ತಿದ್ದಾರೆ. ಈ ವೇಳೆ ಬಾಲ್ಯದ ಗೆಳೆಯನೊಬ್ಬ ದುಬಾರಿ ಕಾರಿನಲ್ಲಿ ಪ್ರಯಾಣಿಸುವಾಗ ನಿಮಗೆ ಹೇಗನಿಸಬಹುದು? ಇನ್ನಷ್ಟು ಹಣ ಜೀವನ ಸುಧಾರಿಸಬಹುದು ಎಂದನಿಸುತ್ತದೆ ಅಲ್ಲವೇ?

English summary

Love Vs. Money

It is very important to be very clear about what you want from life and your relationships. There is nothing wrong in craving for more and more love and at the same time, there is nothing wrong in craving for more and more money. The only thing that counts is whether you are happy in your pursuits whether it is love or money you run after. Life should be a fine balance between both, right? Now, here are some facts....
Story first published: Wednesday, June 29, 2016, 13:50 [IST]
X
Desktop Bottom Promotion