ಈಗ ಬೊಕ್ಕತಲೆ ಪುರುಷರಿಗೂ ಫುಲ್ ಡಿಮ್ಯಾಂಡ್ ಕಣ್ರೀ!

By: manu
Subscribe to Boldsky

ಆಕರ್ಷಣೆ ಎಂಬುವುದು ಬಾಹ್ಯ ಸೌಂದರ್ಯಕ್ಕೆ ಮಿಗಿಲಾದ ವಿಷಯವಾಗಿದೆ. ಯಾವುದೋ ಒಂದು ಗುಣ ಒಬ್ಬರಿಗೆ ಇಷ್ಟವಾದರೆ ಇನ್ನೊಬ್ಬರಿಗೆ ಇಷ್ಟವಾಗಲಿಕ್ಕಿಲ್ಲ. ಅದರಲ್ಲೂ ಮಹಿಳೆಯರು ಪುರುಷರ ಯಾವ ಬಾಹ್ಯ ಲಕ್ಷಣಗಳನ್ನು ಇಷ್ಟಪಡುತ್ತಾರೆ ಎಂಬುದನ್ನು ಕಂಡುಕೊಳ್ಳಲು ಸಾಧ್ಯವೇ ಇಲ್ಲ.

ಕೆಲವರಿಗೆ ಕಳ್ಳನೇ ಇಷ್ಟವಾಗಬಹುದು! ಇನ್ನೂ ಕೆಲವರಿಗೆ ಮನ್ಮಥನೇ ಇಷ್ಟವಾಗದಿರಬಹುದು. ಬಾಹ್ಯ ಲಕ್ಷಣಗಳು ಹೇಗೇ ಇದ್ದರೂ ಪುರುಷರ ಗುಣಗಳೇ ಕಡೆಗೆ ಪರಿಗಣಿಸಲ್ಪಡುತ್ತವೆ. ಇದೇ ಕಾರಣಕ್ಕೆ ಹಿರಿಯರು 'ಗುಣ ನೋಡಿ ಹೆಣ್ಣು ಕೊಡು' ಎಂದು ಹೇಳಿದ್ದಾರೆ.

ಆದರೆ ಪುರುಷರ ಬಾಹ್ಯ ಲಕ್ಷಣಗಳಲ್ಲಿ ಅವಲಕ್ಷಣವೆಂದೇ ಪರಿಗಣಿಸಲ್ಪಡುವ ಬೊಕ್ಕತಲೆ ಹೆಚ್ಚಿನವರು ಇಷ್ಟಪಡುವುದಿಲ್ಲ, ಅಥವಾ ಹಾಗೆಂದು ಬಿಂಬಿಸಲಾಗುತ್ತದೆ. ಹಾಗಾಗಿ ವಯೋಸಹಜವಾಗಿ ಕೂದಲು ಉದುರುಗುತ್ತಾ ಬೊಕ್ಕತಲೆ ಆವರಿಸುತ್ತಾ ಹೋದಂತೆ ತಮ್ಮ ಆಕರ್ಷಣೆ ಕಡಿಮೆಯಾಗುತ್ತಿದೆ ಎಂದು ಪುರುಷರು ಚಿಂತಾಕ್ರಾಂತರಾಗುತ್ತಾರೆ.

ಆದರೆ ವಾಸ್ತವದಲ್ಲಿ ಬೊಕ್ಕ ತಲೆ ಆವರಿಸುತ್ತಿರುವ ಪುರುಷರೂ ಮಹಿಳೆಯರಿಗೆ ಇಷ್ಟವಾಗುತ್ತಾರೆ ಎಂದು ಒಂದು ಸಮೀಕ್ಷೆ ತಿಳಿಸಿದೆ. 
ಬೊಕ್ಕತಲೆ ಎಂದರೆ ತಾಮ್ರದ ಚೊಂಬೇ ಆಗಿರಬೇಕಾಗಿಲ್ಲ, ಪ್ರಾರಂಭದ ಹಂತದಿಂದ ಕೊನೆಯ ಹಂತದವರೆಗೆ ಕೆಲವಾರು ಹಂತಗಳಿವೆ. ಕೆಲವರಿಗೆ ಒಂದು ಭಾಗದಲ್ಲಿ ಮಾತ್ರ ಕೂದಲು ಹೋಗಿದ್ದರೆ ಕೆಲವರಿಗೆ ಇಂಗ್ಲಿಷಿನ ಎಂ ಅಕ್ಷರದ ರೀತಿಯಲ್ಲಿ ಹೋಗಲು ಪ್ರಾರಂಭವಾಗಿರುತ್ತದೆ.   ಬೊಕ್ಕ ತಲೆ ಸಮಸ್ಯೆಗೆ, ಇಲ್ಲಿದೆ ಪವರ್ ಫುಲ್ ಮನೆಮದ್ದು

ಈ ಭಾಗಗಳಿಗೆ ಪಕ್ಕದ ಮನೆಯ ಕೂದಲನ್ನು ಬಾಗಿಸಿ ಬಾಚಿಕೊಳ್ಳುವುದು ಹಳೆಯ ಸಂಪ್ರದಾಯವಾಗಿತ್ತು. ಈಗ ವಿಗ್ಗುಗಳು, ಕೃತಕ ಕೂದಲು, ಕೂದಲ ಕಸಿ ಮೊದಲಾದ ವಿಧಾನಗಳಿಂದ ಮತ್ತೆ ತಲೆ ತುಂಬಿಕೊಂಡಿರುವಂತೆ ಮಾಡಲಾಗುತ್ತದೆ. ಇಡಿಯ ತಲೆಯನ್ನು ಆಗಾಗ ಬೋಳಿಸುತ್ತಿರುವ ಮೂಲಕವೂ ಮತ್ತೊಮ್ಮೆ ಕೂದಲು ಚಿಗುರಿಸಲು ಕೊಂಚ ನೆರವು ನೀಡಬಹುದು. ಆದರೆ ಹೀಗೆಲ್ಲಾ ಮಾಡುವುದಕ್ಕೆ ಮುನ್ನ ಕೆಲವು ಅಚ್ಚರಿಯ ಸಂಗತಿಗಳನ್ನು ಕಂಡುಕೊಂಡಿವುದು ಉತ್ತಮ....   

ಮಾಹಿತಿ#1

25%ಕ್ಕೂ ಹೆಚ್ಚಿನ ಪುರುಷರು ಮೂವತ್ತನೇ ಪ್ರಾಯದಲ್ಲಿಯೇ ಕೂದಲು ಕಳೆದುಕೊಳ್ಳಲು ಆರಂಭಿಸುತ್ತಾರೆ. ಹೆಚ್ಚಿನವರಿಗೆ ಇದು ಅನುವಂಶೀಯವಾಗಿ ಬಂದಿರುತ್ತದೆ.

ಮಾಹಿತಿ #2

ಕೆಲವರಿಗೆ ಅನುವಂಶೀಯವಾಗಿ ಬರದೇ ಇದ್ದರೂ ಒತ್ತಡ, ಪೋಷಕಾಂಶಗಳ ಕೊರತೆ, ಚರ್ಮದ ಕಾಯಿಲೆ, ಔಷಧಿಗಳ ಅಡ್ಡಪರಿಣಾಮ ಮೊದಲಾದ ಕಾರಣಗಳಿಂದಲೂ ಕೂದಲು ಇಲ್ಲವಾಗಿರಬಹುದು.

ಮಾಹಿತಿ #3

ಇತ್ತೀಚಿನ ಸಂಶೋಧನೆಯಲ್ಲಿ ಸುಮಾರು ಸಾವಿರ ಮಹಿಳೆಯರಿಗೆ ಮೂರು ವಿಧದ ಪುರುಷರ ಚಿತ್ರಗಳನ್ನು ತೋರಿಸಿ ಇವರಲ್ಲಿ ಅತಿ ಹೆಚ್ಚು ಆಕರ್ಷಕರು ಯಾರು ಎಂದು ಕೇಳಲಾಗಿತ್ತು. ಒಂದರಲ್ಲಿ ಪೂರ್ಣ ಕೂದಲಿರುವವರೂ, ಎರಡನೆಯದರಲ್ಲಿ ಅರ್ಧಭಾಗ ಬೊಕ್ಕತಲೆ ಆವರಿಸಿದ್ದವರು ಮತ್ತು ಮೂರನೆಯದಾಗಿ ಪೂರ್ಣವಾಗಿ ತಲೆಯನ್ನು ಬೋಳಿಸಿದ್ದವರು.

ಮಾಹಿತಿ #3

ಆಶ್ಚರ್ಯಕರ ಸಂಗತಿ ಎಂದರೆ ಇದರಲ್ಲಿ ಹೆಚ್ಚಿನವರು ಬೋಳು ತಲೆಯ ಪುರುಷರನ್ನೇ ಆಯ್ದುಕೊಂಡಿದ್ದರೆ ಎರಡನೆಯ ಸ್ಥಾನ ಅರ್ಧ ಬಕ್ಕವಾಗಿರುವ ಮತ್ತು ಪೂರ್ಣ ಕೂದಲಿಗೆ ಮೂರನೆಯ ಸ್ಥಾನ ಸಿಕ್ಕಿತ್ತು.

ಮಾಹಿತಿ #4

ಕೆಲವು ಮಹಿಳೆಯರ ಪ್ರಕಾರ ಬೊಕ್ಕತಲೆಯ ಪುರುಷರು ಹೆಚ್ಚು ಬಲಶಾಲಿಗಳೂ, ಹೆಚ್ಚಿನ ಪುರುಷತ್ವ ಹೊಂದಿರುವವರೂ ನೀಳಕಾಯರೂ ಆಗಿರುತ್ತಾರೆ. ಅಲ್ಲದೇ ಗುಂಪಿನಲ್ಲಿದ್ದಾಗ ಇವರೇ ಹೆಚ್ಚಿನ ಕಣ್ಣುಗಳಿಗೆ ಆಹಾರವಾಗುತ್ತಾರೆ.

ಮಾಹಿತಿ #5

ಇನ್ನೂ ಕೆಲವು ಮಹಿಳೆಯರಿಗೆ ಅರ್ಧಂಬರ್ಧ ಕೂದಲು ಹೋಗಿರುವುದು ಇಷ್ಟವಾಗುವುದಿಲ್ಲ. ಒಂದೇ ಪೂರ್ಣ ಕೂದಲಿರಬೇಕು ಅಥವಾ ಪೂರ್ಣವಾಗಿ ಬೋಳಿಸಿಕೊಳ್ಳಬೇಕು. ಆದರೆ ಇವೆರಡರಲ್ಲಿ ಬೋಳು ತಲೆಯೇ ಹೆಚ್ಚು ಆಕರ್ಷಕ ಎಂದು ಕಂಡುಬಂದಿದೆ.

ಮಾಹಿತಿ #6

ಬಕ್ಕತಲೆಯನ್ನು ಸರಿಪಡಿಸಿಕೊಳ್ಳಲು ಗಡ್ಡ ಬಿಡುವುದು ಹೆಚ್ಚಿನ ಪುರುಷರ ಅಭ್ಯಾಸವಾಗಿದೆ. ಈ ಪರಿಯನ್ನೂ ಕೆಲವು ಮಹಿಳೆಯರು ಇಷ್ಟಪಡುತ್ತಾರೆ.

 

English summary

Do Women Like Bald Men?

Frankly speaking, attraction is purely a subjective issue. What one likes, the other may not. In fact, this is the reason why we need to rejoice. Every one will be liked by some or the other person. So, there are so many women out there who love bald guys. If you are losing hair off late, you don't need to worry much as many women find baldness hot.
Please Wait while comments are loading...
Subscribe Newsletter