ಗಂಡ ಹೆಂಡತಿಯ ಬಾಂಧವ್ಯ ಹಾವು-ಏಣಿ ಆಟದ ಹಾಗೆ....

By: Hemanth
Subscribe to Boldsky

ಯಾವುದೇ ಸಂಬಂಧಗಳು ಪರಿಪೂರ್ಣವಾಗಿರಲ್ಲ ಎನ್ನುವ ಮಾತಿದೆ. ಯಾಕೆಂದರೆ ಪ್ರತಿಯೊಂದು ಸಂಬಂಧದಲ್ಲೂ ಏನಾದರೊಂದು ಕುಂದುಕೊರತೆಗಳು ಇದ್ದೇ ಇರುತ್ತದೆ. ಆದರೆ ವಿಭಿನ್ನವಾಗಿರುವ ಎರಡು ಕೌಟುಂಬಿಕ ಹಿನ್ನಲೆ, ಸಾಮಾಜಿಕ ಹಿನ್ನೆಲೆಯಿಂದ ಬಂದಿರುವಂತವರು ಜತೆಯಾಗಿ ಜೀವನ ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ. ಹೊಂದಾಣಿಕೆ ಮಾಡಿಕೊಳ್ಳಲು ಇಬ್ಬರು ಕಲಿತಿರಬೇಕು.

ಯಾವುದೇ ಸಮಸ್ಯೆಯಿಲ್ಲದೆ ನಿಮ್ಮ ಸಂಬಂಧ ಮುಂದುವರಿಯುತ್ತಿದೆ ಎಂದರೆ ಅದು ಪವಾಡವೇ ಸರಿ. ನಿಮ್ಮಿಬ್ಬರನ್ನು ಜನುಮದ ಜೋಡಿ ಎನ್ನಬಹುದು. ಪರಸ್ಪರರ ಕಷ್ಟ ಸುಖ ಹಾಗೂ ಸಮಸ್ಯೆಗಳನ್ನು ಅರಿತುಕೊಂಡು ಸಂಬಂಧವನ್ನು ಒಳ್ಳೆಯ ರೀತಿಯಲ್ಲಿ ಮುಂದುವರಿಸಿಕೊಂಡು ಹೋದರೆ ಆಗ ನೀವಿಬ್ಬರು ಒಳ್ಳೆಯ ಜೀವನ ನಡೆಸಬಹುದು ಎಂದು ತಿಳಿದುಕೊಳ್ಳಬಹುದು. ನೀವಿಬ್ಬರು ಜೀವನ ಆರಂಭಿಸಬಹುದು ಎನ್ನುವುದಕ್ಕೆ ಕೆಲವೊಂದು ಸುಳಿವುಗಳನ್ನು ಇಲ್ಲಿ ನೀಡಲಾಗಿದೆ. ಇದನ್ನು ತಿಳಿಯಿರಿ. ಪದಗಳಲ್ಲಿ ಬಣ್ಣಿಸದೆ ಒಮ್ಮೆ ಪ್ರೀತಿಯನ್ನು ವ್ಯಕ್ತಪಡಿಸಿ ನೋಡಿ!   

Are You Made For Each Other?
 

1. ನೀವು ಅವನಿಗೆ ನಿಮ್ಮ ಅತ್ಯಂತ ಗೌಪ್ಯವಾಗಿರುವ ಎಲ್ಲಾ ವಿಷಯವನ್ನು ಹೇಳಿದ್ದೀರಿ. ಹೀಗಿದ್ದರೆ ನೀವು ಪರಸ್ಪರರಿಗಾಗಿ ಹುಟ್ಟಿದವರೆಂದು ಅರ್ಥ. ನೀವು ಯಾವುದಾದರೂ ಗೌಪ್ಯ ವಿಚಾರವನ್ನು ಮುಚ್ಚಿಡುತ್ತಾ ಇದ್ದರೆ ನೀವು ಪರಸ್ಪರರಿಗಾಗಿ ಹುಟ್ಟಿದವರಲ್ಲ ಎಂದರ್ಥ.

Are You Made For Each Other?
 

2. ಆತ/ಆಕೆಯನ್ನು ಮದುವೆಯಾಗಲು ನೀವು ಯಾರೊಂದಿಗೆ ಬೇಕಾದರೂ ಹೋರಾಡಲು ಸಿದ್ಧವಾಗಿದ್ದೀರಿ. ನೀವು ಅಡೆತಡೆಗಳನ್ನು ನಿವಾರಿಸಿ ಮದುವೆ ಆಗಬೇಕೆಂದು ಯೋಚಿಸಿದ್ದರೆ ನಿಮ್ಮಿಬ್ಬರಲ್ಲಿ ಪ್ರೀತಿ ಇಲ್ಲವೆಂದರ್ಥ.

Are You Made For Each Other?
 

3. ಆತನ ಕುಟುಂಬದವರನ್ನು ಭೇಟಿಯಾಗಲು ಸೂಚಿಸಿದಾಗ ನಿಮಗೆ ಗೌರವಯುತ ಭಾವನೆಯಾಗುತ್ತದೆ. ನೀವು ಕೂಡ ಆತನನ್ನು ಮನೆಯವರಿಗೆ ಭೇಟಿ ಮಾಡಿಸಿ. ಆತ ಭೇಟಿಗೆ ನಿರಾಕರಿಸಿದರೆ ಆಗ ನೀವು ಮರುಚಿಂತನೆ ಮಾಡಿ.     ಹೆಂಡತಿ ಹೀಗೆಲ್ಲಾ ವರ್ತಿಸಿದರೆ, ಗಂಡನಿಗೆ ಇಷ್ಟವಾಗುವುದಿಲ್ಲವಂತೆ!  

Are You Made For Each Other?
 

4. ನಿಮಗೆ ಯಾವತ್ತೂ ಪರಸ್ಪರರ ಸಂಗದಲ್ಲಿ ಬೇಸರ ಅನಿಸಬಾರದು. ನೀವು ಏನಾದರೂ ಮಾತನಾಡುತ್ತಾ, ನಗುತ್ತಾ ಇರಬೇಕು. ನೀವು ಮೌನವಾಗಿರಬಹುದು. ಆದರೆ ನಿಮ್ಮಿಬ್ಬರ ಸಂಗದಲ್ಲಿ ಜಿಗುಪ್ಸೆ ಮೂಡಬಾರದು.

Are You Made For Each Other?
 

5. ದಿನದಲ್ಲಿ ಹೆಚ್ಚಿನ ಕಾಲ ಆತನೊಂದಿಗೆ ಕಳೆಯುವ ಭವಿಷ್ಯದ ಬಗ್ಗೆ ಯೋಚಿಸುತ್ತಾ ಇದ್ದರೆ ನೀವು ಪರಸ್ಪರರಿಗಾಗಿ ಹುಟ್ಟಿದವರು ಎಂದರ್ಥ. ಆತನೊಂದಿಗೆ ಭವಿಷ್ಯದ ಕಲ್ಪನೆಯೇ ಬರದಿದ್ದರೆ ಆತ ಈ ಸಂಬಂಧವನ್ನು ಬಿಟ್ಟುಬಿಡಿ. ಇದು ಕೇವಲ ತಾತ್ಕಾಲಿಕ.

Story first published: Wednesday, September 14, 2016, 14:53 [IST]
English summary

Are You Made For Each Other?

It isn't easy! Yes, when two different people from different backgrounds and places come together, they tend to have different lifestyles, habits, ideas and thoughts. Living harmoniously isn't so easy.
Please Wait while comments are loading...
Subscribe Newsletter