For Quick Alerts
ALLOW NOTIFICATIONS  
For Daily Alerts

ಎಚ್ಚರ: ಸುಳ್ಳು ಸಂಸಾರವನ್ನೇ ನುಚ್ಚು ನೂರು ಮಾಡಬಹುದು!

|

ಪ್ರತಿಯೊಂದು ಸಂಬಂಧದಲ್ಲಿ ಏರು-ಪೇರುಗಳು ಇರುವುದು ಸಹಜ. ಪರಿಸ್ಥಿತಿಯನ್ನು ನಿಭಾಯಿಸಲು ನೀವು ಸುಳ್ಳು ಹೇಳುತ್ತೀರಿ ಎಂಬುದಕ್ಕೆ ಅರ್ಥವೇ ಇರುವುದಿಲ್ಲ. ತಮ್ಮ ಕುತ್ತಿಗೆಗೆ ಬಂದಾಗ ಅಥವಾ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಹಲವರು ತಮ್ಮ ಸಂಗಾತಿಗೆ ಸುಳ್ಳು ಹೇಳಿ ಇದನ್ನು ನಿಭಾಯಿಸುತ್ತಾರೆ. ಆದರೆ ನಿಮ್ಮ ಪ್ರೀತಿ ಸದೃಢವಾಗಿ ಬೆಳೆಯಬೇಕು ಎಂದಾದಲ್ಲಿ, ನಿಮ್ಮ ಸಂಗಾತಿಗೆ ಇದರಿಂದ ನೋವುಂಟಾಗುತ್ತದೆ ಎಂದು ಗೊತ್ತಿದ್ದರು ಸಹ ಸುಳ್ಳನ್ನು ಹೇಳಲು ಹೋಗಬೇಡಿ. ಆ ಅಭ್ಯಾಸವನ್ನು ಅಪ್ಪಿ ತಪ್ಪಿ ಸಹ ಬಳಸಿಕೊಳ್ಳಲು ಹೋಗಬೇಡಿ.

ಯಾವುದೇ ಕಾರಣಕ್ಕು ನೀವು ಏಕೆ ಸುಳ್ಳು ಹೇಳಬಾರದು ಎಂಬುದಕ್ಕೆ ಇಲ್ಲಿ ಕಾರಣಗಳನ್ನು ನಾವು ನೀಡಿದ್ದೇವೆ. ಒಂದು ವಿಚಾರವನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಒಂದು ಸುಳ್ಳು ಹೇಳಿದರೆ, ಅದನ್ನು ಮುಚ್ಚಲು ಮತ್ತೊಂದು ಸುಳ್ಳು ನಿಮಗೆ ಬೇಕಾಗುತ್ತದೆ. ಇದು ನಿಮಗೆ ಅನುಕಂಪವನ್ನು ಗಿಟ್ಟಿಸುವ ಸಂದರ್ಭವಾಗಿ ತೋರಿಬಿಡುತ್ತದೆ. ಆದ್ದರಿಂದ ಮೊದಲು ಈ ಪರಿಸ್ಥಿತಿಯಿಂದ ಹೊರಬನ್ನಿ, ಕಹಿಯಾದರು ಪರವಾಗಿಲ್ಲ ಸತ್ಯವನ್ನೆ ಹೇಳಿ.

Why You Shouldn’t Lie In A Relationship!

ಮತ್ತಷ್ಟು ಸುಳ್ಳಿಗೆ ಆಹ್ವಾನ ನೀಡುತ್ತೀರಿ
ಸುಳ್ಳೆಂಬುದು ವಿಷದಂತೆ. ಒಂದು ಸುಳ್ಳು ಸಾವಿರ ಸುಳ್ಳಿಗೆ ಜನ್ಮ ನೀಡುತ್ತದೆ. ಅದನ್ನು ನೀವು ಮುಂದುವರಿಸಿಕೊಂಡು ಹೋಗುತ್ತಲೆ ಇರುತ್ತೀರಿ. ಈ ರೀತಿ ನೀವು ನಿಮ್ಮ ಸಂಬಂಧವನ್ನು ತುಂಡು ತುಂಡು ಮಾಡುತ್ತೀರಿ.

ನಿಮ್ಮ ಸಂಬಂಧವನ್ನು ನೀವು ದುರ್ಬಲಗೊಳಿಸುತ್ತೀರಿ
ಸುಳ್ಳುಗಳು ನಿಮ್ಮ ಸಂಬಂಧವನ್ನು ಒಡೆಯುತ್ತವೆ. ಆದ್ದರಿಂದಲೇ ನೀವು ನಿಮ್ಮ ಸಂಬಂಧದಲ್ಲಿ ಸುಳ್ಳನ್ನು ಹೇಳಬಾರದು. ಒಂದು ವೇಳೆ ನಿಮ್ಮ ಪ್ರೀತಿಯು ನಿಮಗೆ ಪ್ರಪಂಚದ ಅತ್ಯಂತ ಅಮೂಲ್ಯವಾದ ಅಂಶವಾಗಿದ್ದರೆ, ಸುಳ್ಳು ಹೇಳುವುದನ್ನು ಬಿಟ್ಟು ಬಿಡಿ. ಬೇರ್ಪಟ್ಟ ಸಂಬಂಧ ನೀಡುವುದೇ ಹೊಸ ತಿರುವು?

ನೀವು ನಿಮ್ಮ ಸಂಗಾತಿಯನ್ನು ಕಳೆದುಕೊಳ್ಳುವಿರಿ
ನೀವು ಸುಳ್ಳ್ಳು ಹೇಲುತ್ತಿದ್ದೀರಿ ಎಂಬ ವಿಚಾರ ನಿಮ್ಮ ಸಂಗಾತಿಗೆ ತಿಳಿಯಿತೋ, ಅವರು ಮತ್ತೆ ನಿಮ್ಮಲ್ಲಿ ನಂಬಿಕೆಯನ್ನು ಹೊಂದುವುದಿಲ್ಲ. ಆದ್ದರಿಂದ ನಿಮ್ಮ ಸಂಗಾತಿಯ ಬಳಿ ಸುಳ್ಳು ಹೇಳುವುದನ್ನು ಬಿಟ್ಟು ಬಿಡಿ.

ನೀವು ಸಂತೋಷವಾಗಿರುವುದಿಲ್ಲ
ಸಂಬಂಧದಲ್ಲಿ ಸುಳ್ಳನ್ನು ಹೇಳುವ ಅಭ್ಯಾಸ ನಿಮಗಿದ್ದಲ್ಲಿ ಖಂಡಿತ ನೀವು ಸಂತೋಷವಾಗಿರುವುದಿಲ್ಲ. ಈ ಸುಳ್ಳು ಹೇಳುವ ಅಂಶವು ನಿಮ್ಮ ಸಂಬಂಧದಲ್ಲಿರುವ ಸಂತೋಷವನ್ನು ಕಸಿದುಕೊಂಡು ಹೋಗಿ ಬಿಡುತ್ತದೆ. ಅವಿನಾಭಾವ ಸಂಬಂಧಕ್ಕೆ ಪ್ರೀತಿ, ವಿಶ್ವಾಸವೇ ರಹದಾರಿ

ನಿಮಗೆ ಸತ್ಯ ಮಾತನಾಡಲಾಗುವುದಿಲ್ಲ
ಒಂದೊಮ್ಮೆ ಸುಳ್ಳು ಹೇಳುವುದೇ ನಿಮ್ಮ ದೌರ್ಬಲ್ಯವಾಗಿ ಹೋದರೆ, ಮುಂದೆ ನಿಮ್ಮಿಂದ ಸತ್ಯವನ್ನು ಸಹ ಮಾತನಾಡಲಾಗುವುದಿಲ್ಲ. ಸುಳ್ಳುಗಳು ನಿಮ್ಮ ಜೀವನವನ್ನು ಕಸಿದುಕೊಂಡು ಬಿಡುತ್ತವೆ. ನೀವು ನಿಮ್ಮದು ಎನ್ನುವ ಪ್ರತಿಯೊಂದು ವಿಷಯವನ್ನು ಕಳೆದುಕೊಳ್ಳುವಿರಿ. ಈ ಒಂದು ಕಾರಣಕ್ಕಾಗಿಯಾದರು ನಿಮ್ಮ ಸಂಬಂಧದಲ್ಲಿ ನೀವು ಸುಳ್ಳು ಹೇಳಬೇಡಿ.

English summary

Why You Shouldn’t Lie In A Relationship!

In every relationship there are ups and downs, but that doesn't mean you have to lie to your partner to come out of a situation. There are many who pass their way through by lying to their loved one in a lot of ways. To make your love grow stronger telling the truth is the best way to improve your relationship although it may hurt a ton.
Story first published: Wednesday, March 18, 2015, 18:15 [IST]
X
Desktop Bottom Promotion