For Quick Alerts
ALLOW NOTIFICATIONS  
For Daily Alerts

ನಿಂದನೆ ಮಾತಿನಿಂದ ಸಂಸಾರವೇ ನುಚ್ಚುನೂರಾಗಬಹುದು

|

ನಿಂದನೆಯನ್ನು ಎಲ್ಲಾ ಧರ್ಮಗ್ರಂಥಗಳು ಖಂಡಿಸಿವೆ. ನಿಂದನೆಯಿಂದ ಮಾನವರ ನಡುವಣ ಸಂಬಂಧಗಳು ಕಡಿಯುವುದು ಮಾತ್ರವಲ್ಲ, ಕೆಲವೊಮ್ಮೆ ಅನಾಹುತಗಳೂ ಸಂಭವಿಸಬಹುದು. ಆರೋಗ್ಯವನ್ನೂ ಕೆಡಿಸಬಹುದು. ಅದರಲ್ಲೂ ಒಬ್ಬರನ್ನೊಬ್ಬರು ಪರಸ್ಪರ ನಿಂದಿಸಿಕೊಳ್ಳುವುದು ಇಬ್ಬರ ನಡುವಣ ಸಂಬಂಧಕ್ಕೆ ಹುಳಿ ಹಿಂಡಿದಂತಾಗುತ್ತದೆ.

ಸಾಮಾನ್ಯವಾಗಿ ಒಬ್ಬರ ತಪ್ಪನ್ನು ತೋರಿಸಿ ತಿದ್ದಲು ನಯವಾದ ಪದಗಳಲ್ಲಿ ತಿಳಿಹೇಳುವ ಮೂಲಕ ಸಾಧ್ಯವಿದೆ. ಆದರೆ ಆ ವ್ಯಕ್ತಿಯ ಬಗ್ಗೆ ಈಗಾಗಲೇ ದ್ವೇಶವಿದ್ದರೆ ನಯವಾದ ಪದಗಳ ಬಗ್ಗೆ ನಿಂದನೆಯ ಪದಗಳನ್ನು ಬಳಸಿದರೆ ಈಗಿರುವ ದ್ವೇಶ ಇನ್ನಷ್ಟು ಹೆಚ್ಚುತ್ತದೆ. ಎಷ್ಟೋ ಸಲ ಇದು ಸೇಡಿನಲ್ಲಿ ಪರ್ಯವಸಾನವಾಗುತ್ತದೆ.

ಕೆಲಸದ ಸ್ಥಳದಲ್ಲಂತೂ ಪರಸ್ಪರ ಸಹಕಾರ ಅತ್ಯಂತ ಅಗತ್ಯ. ಸಹಕಾರವಿಲ್ಲದೆ ಯಾವುದೇ ಕೆಲಸ ಮುಂದುವರೆಯುವುದೇ ಅಸಾಧ್ಯ. ಒಂದು ವೇಳೆ ಯಾವುದೋ ಹಂತದಲ್ಲಿ ತಪ್ಪಾದರೆ ಅದರ ಮುಂದಿನ ಹಂತಗಳೆಲ್ಲಾ ಬಾಧೆಗೊಳಗಾಗುವುದರಿಂದ ಆ ತಪ್ಪನ್ನು ಎಸಗಿದವರ ಮೇಲೆ ನಿಂದನೆ ಪ್ರಾರಂಭವಾಗುತ್ತದೆ. ಇದು ಆ ಕೆಲಸವನ್ನು ಹಾಳು ಮಾಡುವ ಜೊತೆಗೇ ಮುಂದಿನ ಕೆಲಸಗಳನ್ನೂ ಹಾಳುಮಾಡುತ್ತದೆ.

ಸದ್ಯಕ್ಕೆ ತಪ್ಪನ್ನು ಸರಿಪಡಿಸಿದರೂ ನಿಂದನೆಯ ಗಾಯ ಮನಸ್ಸಿನಲ್ಲಿ ಬರೆ ಮೂಡಿಸಿದ್ದು ನಿಂದಿಸಿದವರಿಂದಲೂ ಯಾವಾಗಲಾದರೂ ತಪ್ಪಾದಾಗ ನಿಂದನೆಗೊಳಗಾದವರು ಗೊತ್ತಿದ್ದರೂ ಸುಮ್ಮನಿದ್ದು ನಷ್ಟಕ್ಕೆ ಕಾರಣರಾಗುತ್ತಾರೆ. ಸಂಬಂಧದಲ್ಲಂತೂ ಪತಿ ಪತ್ನಿಯರು ಒಬ್ಬರನ್ನೊಬ್ಬರು ನಿಂದಿಸುವುದು ಅತಿ ಕೆಟ್ಟ ಚಾಳಿಯಾಗಿದೆ. ಎಷ್ಟೋ ವಿಚ್ಛೇದನಗಳಿಗೆ ಪರಸ್ಪರ ನಿಂದನೆಗಳೇ ಕಾರಣವಾಗಿವೆ. ಇದಕ್ಕೆ ಕಾರಣಗಳೇನು ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ಅರಿಯೋಣ:

ನಿಮ್ಮ ನಿಂದನೆ ನಿಮ್ಮ ಸಂಗಾತಿಗೆ ಗರಿಷ್ಟ ಪ್ರಭಾವ ಬೀರುತ್ತದೆ

ನಿಮ್ಮ ನಿಂದನೆ ನಿಮ್ಮ ಸಂಗಾತಿಗೆ ಗರಿಷ್ಟ ಪ್ರಭಾವ ಬೀರುತ್ತದೆ

ತಮ್ಮ ತಪ್ಪಿಗಾಗಿ ಹೊರಗಿನವರ ನಿಂದನೆಗಿಂತಲೂ ನಮ್ಮ ಆಪ್ತರ, ಅದರಲ್ಲೂ ತಾಯಿ, ಜೀವನ ಸಂಗಾತಿ, ಅತ್ಯಂತ ನಿಕಟವರ್ತಿಗಳಾದ ಸ್ನೇಹಿತರು ನಿಂದಿಸಿದರೆ ಆ ನಿಂದನೆ ಮನಸ್ಸಿಗೆ ಆಳವಾಗಿ ನಾಟುತ್ತದೆ. ಇದರ ಪರಿಣಾಮವನ್ನು ಊಹಿಸಲೂ ಸಾಧ್ಯವಿಲ್ಲ. ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದುಕೊಂಡ ವಿದ್ಯಾರ್ಥಿಗಳು ಮನೆಯಲ್ಲಿ ಈ ವಿಷಯ ತಿಳಿದರೆ ಯಾವ ನಿಂದನೆ ಬರುತ್ತದೆಯೋ ಎಂಬ ಭಯದಿಂದಲೇ ಜೀವನ ಕೊನೆಗೊಳಿಸಿರುವ ನಿದರ್ಶನಗಳಿವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನಿಮ್ಮ ನಿಂದನೆ ನಿಮ್ಮ ಸಂಗಾತಿಗೆ ಗರಿಷ್ಟ ಪ್ರಭಾವ ಬೀರುತ್ತದೆ

ನಿಮ್ಮ ನಿಂದನೆ ನಿಮ್ಮ ಸಂಗಾತಿಗೆ ಗರಿಷ್ಟ ಪ್ರಭಾವ ಬೀರುತ್ತದೆ

ಆದ್ದರಿಂದ ನಿಮ್ಮ ಆಪ್ತರ ತಪ್ಪನ್ನು ಒಪ್ಪಿಕೊಂಡು ಅವರನ್ನು ನಯವಾದ ಮಾತುಗಳಿಂದ ನಿರ್ದೇಶಿಸುವುದು ಮತ್ತು ಸರಿಯಾದ ಕ್ರಮವನ್ನು ವಿವರಿಸುವುದು ಉತ್ತಮ ಮಾರ್ಗವಾಗಿದೆ. ಜೀವನಸಂಗಾತಿಯ ತಪ್ಪನ್ನು ನಿನ್ನ ತಪ್ಪು ಎನ್ನುವ ಬದಲಿಗೆ ನಮ್ಮ ತಪ್ಪು ಎಂದು ಒಪ್ಪಿಕೊಳ್ಳುವ ಮೂಲಕ ಸಂಬಂಧ ಕೊನೆಗೊಳ್ಳುವುದನ್ನು ತಪ್ಪಿಸಬಹುದು.

ನಿಂದನೆ ಯಾವತ್ತಿಗೂ ಪರಿಹಾರವಲ್ಲ

ನಿಂದನೆ ಯಾವತ್ತಿಗೂ ಪರಿಹಾರವಲ್ಲ

ಯಾವುದೇ ತಪ್ಪಿನಿಂದ ಪ್ರಮಾದವಾದರೆ ನಿಂದಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದರಲ್ಲೂ ಹೆಚ್ಚಿನ ತಪ್ಪುಗಳು ಬೇಕೆಂದೇ ಯಾರೂ ಮಾಡಿರುವುದಿಲ್ಲ. ಅನೈಚ್ಛಿಕವಾಗಿ ಆದ ತಪ್ಪುಗಳನ್ನು ಒಪ್ಪಿ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವುದು ಜಾಣತನ ಮತ್ತು ಸರಿಯಾದ ಮಾರ್ಗ. ಬದಲಿಗೆ ಪರಸ್ಪರ ನಿಂದನೆಯಿಂದ ಮಾತಿಗೆ ಮಾತು ಬೆಳೆಯುತ್ತದೆ. ನಿಂದನೆಗೊಳಗಾದವರ ಅಹಮ್ಮಿಕೆ ಭುಗಿಲೆದ್ದು ಇದಕ್ಕೆ ಪ್ರತೀಕಾರದ ಕ್ರಮವನ್ನು ಯೋಚಿಸತೊಡಗುತ್ತಾರೆ.

ನಿಂದನೆ ಯಾವತ್ತಿಗೂ ಪರಿಹಾರವಲ್ಲ

ನಿಂದನೆ ಯಾವತ್ತಿಗೂ ಪರಿಹಾರವಲ್ಲ

ಇದೊಂದು ವಿಷಬೀಜವಾಗಿ ಇಬ್ಬರ ಮನದಲ್ಲೂ ಹುಟ್ಟಿಕೊಳ್ಳುತ್ತದೆ. ಈ ವಿಷಬೀಜ ಬೆಳೆದು ವೃಕ್ಷವಾದರೆ ಯಾವ ಅನಾಹುತ ತಂದೊಡ್ಡಬಲ್ಲದು ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಕೊಲೆಗಳ ವಿಚಾರಣೆಯ ಬಳಿಕ ಇದಕ್ಕೆ ಕಾರಣ ಹಿಂದೆಂದೋ ಆಗಿದ್ದ ಕ್ಷುಲ್ಲುಕ ಕಾರಣ ಮತ್ತು ನಿಂದನೆ ಎಂದು ಗೊತ್ತಾಗಿದೆ.

ನಿಂದನೆಯಿಂದ ನಿಮ್ಮ ಸಂಗಾತಿ ಪಶ್ಚಾತ್ತಾಪದಲ್ಲಿ ಬೇಯಬಹುದು

ನಿಂದನೆಯಿಂದ ನಿಮ್ಮ ಸಂಗಾತಿ ಪಶ್ಚಾತ್ತಾಪದಲ್ಲಿ ಬೇಯಬಹುದು

ಒಂದು ವೇಳೆ ಎಲ್ಲಾ ತಪ್ಪಿಗೂ ನಿಮ್ಮ ಸಂಗಾತಿಯನ್ನೇ ಗುರಿಯಾಗಿಸಿದರೆ ಅವರ ಮನದಲ್ಲಿ ಸದಾ ಪಶ್ಚಾತ್ತಾಪ ಬೇಯುತ್ತಿರಬಹುದು. ಈ ನಿಂದನೆಗಾಗಿ ಅವರು ಮಾಡಿದ ತಪ್ಪಿಗಾಗಿ ಅಲ್ಲ, ನಿಮ್ಮನ್ನು ತಮ್ಮ ಜೀವನಸಂಗಾತಿಯನ್ನಾಗಿ ಪಡೆದುದಕ್ಕಾಗಿ!

ನಿಂದನೆ ನಿಮ್ಮಿಬ್ಬರ ಅಂತರವನ್ನು ಹೆಚ್ಚಿಸಬಹುದು

ನಿಂದನೆ ನಿಮ್ಮಿಬ್ಬರ ಅಂತರವನ್ನು ಹೆಚ್ಚಿಸಬಹುದು

ಪರಸ್ಪರ ನಿಂದನೆಯಿಂದ ನಿಮ್ಮಿಬ್ಬರ ನಡುವಣ ಅಂತರ ಪ್ರತಿ ಪದದ ಬಳಕೆಯ ಬಳಿಕ ಹೆಚ್ಚುತ್ತಾ ಹೋಗುತ್ತದೆ. ಕೆಲವೇ ದಿನಗಳಲ್ಲಿ ಪರಸ್ಪರರಿಂದ ದೂರವಾಗುವ ಬಯಕೆ ಹುಟ್ಟುತ್ತದೆ. ನಿಂದನೆ ಹೆಚ್ಚುತ್ತಿದ್ದಂತೆಯೇ ಈ ಬಯಕೆ ಗಾಢವಾಗುತ್ತಾ ಹೋಗುತ್ತದೆ. ಈ ಸಂದರ್ಭದಲ್ಲಿ ಅಪಾರ ತಾಳ್ಮೆ ವಹಿಸುವುದು ಅಗತ್ಯ. ಪರಸ್ಪರ ನಿಂದನೆಯ ಬದಲಿಗೆ ಇಬ್ಬರೂ ಗೌರವಿಸುವ ಮೂರನೆಯ ವ್ಯಕ್ತಿಯ ಬಳಿ ತಮ್ಮ ಅಹವಾಲುಗಳನ್ನು ಹೇಳಿಕೊಂಡು ಪರಿಹಾರ ಪಡೆಯುವುದು ಉತ್ತಮ. ಅಥವಾ ಇಬ್ಬರೂ ತಮ್ಮ ಅಹಮ್ಮಿಕೆಗಳನ್ನು ಇಳಿಸಿ ಪರಸ್ಪರ ಶರಣಾಗತರಾಗುವುದು ಇನ್ನೂ ಉತ್ತಮ.

English summary

Why Blaming Each Other Never Works

Yes, blame game is injurious to your health and relationships too. Blaming each other can spoil your relationships and it is never going to make things better. Of course, we generally blame the other person to point out a mistake or throw an allegation. Sometimes, we do it with vengeance.
X
Desktop Bottom Promotion