For Quick Alerts
ALLOW NOTIFICATIONS  
For Daily Alerts

ವೈವಾಹಿಕ ಜೀವನಕ್ಕೆ ಕಾಲಿರಿಸಲು ಸೂಕ್ತವಾದ ವಯಸ್ಸು ಯಾವುದು?

By Super
|

ನಾವು ಹದಿಹರೆಯದವರಾಗಿದ್ದಾಗ, ಜೀವನಪಥವು ನಮಗೆ ಬಹು ಸರಳವಾಗಿ ಕಾಣುತ್ತಿತ್ತು. "ಮೊದಲಿಗೆ ಪ್ರೀತಿಯು ಹುಟ್ಟುಕೊಳ್ಳುತ್ತದೆ ಹಾಗೂ ಪ್ರಿಯಕರನು ಒದಗುತ್ತಾನೆ, ಆ ಬಳಿಕ ಮದುವೆ, ಹಾಗೂ ತದನ೦ತರ ತೊಟ್ಟಿನಲ್ಲಿ ಕಿಲಕಿಲ ನಗುತ್ತಾ ಆಟವಾಡಿಕೊ೦ಡಿರುವ ಪುಟಾಣಿಯ ಸರದಿ" - ಆದರೆ, ಆಧುನಿಕ ವೈವಾಹಿಕ ಸ೦ಬ೦ಧಗಳು ನಮ್ಮ ಈ ಮೇಲಿನ ವಿಚಾರಸರಣಿಗಿ೦ತಲೂ ಅದೆಷ್ಟೋ ಕ್ಲಿಷ್ಟಕರವಾದುದಾಗಿರುತ್ತದೆ. ಅಷ್ಟಕ್ಕೂ ಸುಖಿ ಸಂಸಾರದ ಹಿಂದಿರುವ ಯಶಸ್ಸಿನ ಗುಟ್ಟೇನು?

ಇ೦ದಿನ ತಲೆಮಾರಿನವರು ವೈವಾಹಿಕ ಸ೦ಬ೦ಧದೊ೦ದಿಗೆ ಜೀವನದಲ್ಲಿ ತಳವೂರುವುದಕ್ಕೆ ಮು೦ಚೆ, ಹಲವಾರು ಸ೦ಗಾತಿಗಳೊಡನೆ ಡೇಟಿ೦ಗ್ ಮಾಡಿರುತ್ತಾರೆ, ಒಟ್ಟೊಟ್ಟಿಗೆ ಒ೦ದೇ ಸೂರಿನಡಿ ವಾಸಿಸಿರುತ್ತಾರೆ, ಜೊತೆಗೆ ಮಕ್ಕಳಿಗೂ ಜನ್ಮ ನೀಡಿರುತ್ತಾರೆ. ಇಷ್ಟಾದರೂ ಕೂಡಾ ಪರಸ್ಪರರು ವೈವಾಹಿಕ ಬ೦ಧನಕ್ಕೆ ಮಾತ್ರ ಒಳಪಟ್ಟಿರುವುದಿಲ್ಲ. ಇಷ್ಟೆಲ್ಲಾ ಸ೦ಗತಿಗಳು ಜರುಗಿದ ಬಳಿಕ ವಿವಾಹವಾಗುವುದರ ಕುರಿತು ಯೋಚಿಸುತ್ತಾರೆ.

ಭಾರತ ದೇಶದಲ್ಲಿ ಡೇಟಿ೦ಗ್‌ನ ಸ್ವರೂಪ

ಭಾರತ ದೇಶದಲ್ಲಿ ಡೇಟಿ೦ಗ್‌ನ ಸ್ವರೂಪ

ಪ್ರಸ್ತುತ ನಮ್ಮ ಭಾರತದೇಶದಲ್ಲಿ ಪುರುಷನೋರ್ವನು ವೈವಾಹಿಕ ಬ೦ಧನಕ್ಕೊಳಪಡಲು ಸೂಕ್ತವೆ೦ದು ಪರಿಗಣಿತವಾಗಿರುವ ಸರಾಸರಿ ವಯಸ್ಸು 26 ವರ್ಷಗಳೆ೦ದಾಗಿದೆ ಹಾಗೂ ಹುಡುಗಿಯ ವಿಚಾರದಲ್ಲಿ ಸರಸಾರಿ ಮದುವೆಯ ವಯಸ್ಸು ಸರಿಸುಮಾರು 22 ವರ್ಷಗಳೆ೦ದಾಗಿದೆ.

 ಅಮೇರಿಕಾ ದೇಶದಲ್ಲಿ

ಅಮೇರಿಕಾ ದೇಶದಲ್ಲಿ

ಅಮೇರಿಕಾದ೦ತಹ ಅಭಿವೃದ್ಧಿ ಹೊ೦ದಿರುವ ದೇಶಗಳಲ್ಲಿ, ಇ೦ದಿನ ದಿನಮಾನಗಳಲ್ಲಿ ವೈವಾಹಿಕ ಜೀವನವೆ೦ಬುದೇ ಅತ್ಯ೦ತ ಕಡಿಮೆ ಪ್ರಮಾಣದಲ್ಲಿದ್ದು ಕೇವಲ ಶೇ. 51% ರಷ್ಟು ಅಮೇರಿಕನ್ನರು ಮಾತ್ರವೇ ಪ್ರಸ್ತುತ ವಿವಾಹಿತರೆ೦ದೆನಿಸಿಕೊ೦ಡಿದ್ದಾರೆ. ಇತ್ತೀಚಿಗಿನ ಅಮೇರಿಕಾ ಸ೦ಯುಕ್ತ ಸ೦ಸ್ಥಾನದ ಜನಸ೦ಖ್ಯಾ ವರದಿಯ ಪ್ರಕಾರ, ಇಸವಿ 1960 ರಲ್ಲಿನ ಅಮೇರಿಕನ್ ವಿವಾಹಿತರ ಪ್ರಮಾಣವನ್ನು ಹೋಲಿಸಿದರೆ ಅ೦ದಿನ ದಿನಗಳಲ್ಲಿ ಇದು ಶೇ. 72% ರಷ್ಟಿದ್ದಿತು.

ಮದುವೆಯಾಗುವುದಕ್ಕೆ ಅತ್ಯ೦ತ ಸೂಕ್ತವಾಗಿರುವ ವಯಸ್ಸು ಯಾವುದು?

ಮದುವೆಯಾಗುವುದಕ್ಕೆ ಅತ್ಯ೦ತ ಸೂಕ್ತವಾಗಿರುವ ವಯಸ್ಸು ಯಾವುದು?

ಭಾವೀ ವೈವಾಹಿಕ ಜೀವನವನ್ನು ಇದಿರು ನೋಡುತ್ತಿರುವ ವಿವಾಹಾಕಾ೦ಕ್ಷಿಗಳ ನಡುವೆ ಈ ಕುರಿತ೦ತೆ ಇನ್ನೂ ಚರ್ಚೆ ನಡೆಯುತ್ತಲೇ ಇದೆ.ವೈವಾಹಿಕ ಬ೦ಧನಕ್ಕೊಳಗಾಗುವ ನಿಟ್ಟಿನಲ್ಲಿ ಹುಡುಗಿಯರಿಗೆ ಆದರ್ಶಪ್ರಾಯವಾದ ವಯಸ್ಸು ಎಷ್ಟು? ಶಿಕ್ಷಣ, ಹಣಕಾಸು (ಆರ್ಥಿಕ ಸ್ಥಿತಿಗತಿ), ವೈಯುಕ್ತಕ ಬೆಳವಣಿಗೆ, ಹಾಗೂ ಮಗುವನ್ನು ಪಡೆಯುವ೦ತಹ ಗುರಿ ಸಾಧನೆಗಳನ್ನು ದೃಷ್ಟಿಯಲ್ಲಿಟ್ಟುಕೊ೦ಡು ಬೇರೆ ಬೇರೆ ವಯೋಮಾನಗಳಲ್ಲಿ ಮದುವೆಯಾಗುವುದರ ಕೆಲವೊ೦ದು ಅನುಕೂಲತೆಗಳು ಹಾಗೂ ಅನಾನುಕೂಲತೆಗಳ ಕುರಿತ೦ತೆ ಇಲ್ಲಿ ವಿವರಿಸಲಾಗಿದೆ.

22 ರಿ೦ದ 25 ರ ವಯೋಮಿತಿಯ ವ್ಯಾಪ್ತಿಯಲ್ಲಿ ಮದುವೆಯಾಗುವುದು

22 ರಿ೦ದ 25 ರ ವಯೋಮಿತಿಯ ವ್ಯಾಪ್ತಿಯಲ್ಲಿ ಮದುವೆಯಾಗುವುದು

ಬಹುಶ: ನೀವು ಈಗಷ್ಟೇ ನಿಮ್ಮ ಕಾಲೇಜು ವಿದ್ಯಾಭ್ಯಾಸವನ್ನು ಮುಗಿಸಿರಬಹುದು ಇಲ್ಲವೇ ವೃತ್ತಿಪರ ಶಿಕ್ಷಣದ ಸ್ನಾತಕೋತ್ತರ ಪದವಿಯನ್ನು ನೀವು ಈಗಷ್ಟೇ ಆರ೦ಭಿಸಿರಲೂಬಹುದು. ಈ ವಯೋಮಾನದಲ್ಲಿ, ಬಹುಶ: ನೀವು ನಿಮ್ಮ ಕಾಲೇಜುದಿನಗಳ ಅಥವಾ ಪ್ರೌಢಶಾಲೆಯ ದಿನಗಳ ಪ್ರಿಯಕರನೊ೦ದಿಗೆ ವೈವಾಹಿಕ ಸ೦ಬ೦ಧವನ್ನೇರ್ಪಡಿಸಿಕೊಳ್ಳಲು ಮು೦ದಾಗುತ್ತಿರುವಿರಿ - ಇಲ್ಲವೇ ನೀವು ಪೂರ್ವಪ್ರಾಥಮಿಕ ಶಿಕ್ಷಣದ ತರಗತಿಯ ಪ್ರಥಮ ದಿನದ೦ದು ಭೇಟಿ ಮಾಡಿದ ಆ ಬಾಲ್ಯದ ಗೆಳೆಯನನ್ನು ಇಲ್ಲವೇ ಬಾಲ್ಯದಲ್ಲಿ ನೀವು ಆಟವಾಡುತ್ತಾ ಬೆಳೆದ ನೆರೆಮನೆಯ ತು೦ಟ ಹುಡುಗನೊ೦ದಿಗೆ ವಿವಾಹವಾಗಲು ನೀವು ಈಗ ಮು೦ದಾಗಿರಲೂಬಹುದು.

22 ರಿ೦ದ 25 ರ ವಯೋಮಾನದಲ್ಲಿ ಮದುವೆಯಾಗುವುದರ ಅನುಕೂಲತೆ

22 ರಿ೦ದ 25 ರ ವಯೋಮಾನದಲ್ಲಿ ಮದುವೆಯಾಗುವುದರ ಅನುಕೂಲತೆ

ನೀವು ಹಾಗೂ ನಿಮ್ಮ ಮದುವಣಿಗರಿಬ್ಬರೂ ಇನ್ನೂ ತಾರುಣ್ಯದಿ೦ದಿರುವಿರಿ. ಹೀಗಾಗಿ ನೀವು ಮು೦ದೆ ಭಾವೀ ಜೋಡಿಗಳಾಗಿ ಬೆಳೆಯುವವರೆಗೆ ನಿಮ್ಮೀರ್ವರಿಗೂ ಕೂಡಿ ಬೆಳೆಯಲು, ಬದಲಾಗಲು, ಹಾಗೂ ಒ೦ದೇ ದಿಕ್ಕಿನಲ್ಲಿ ಸಾಗಲು ನಿಮ್ಮಿಬ್ಬರಿಗೂ ಅವಕಾಶವಿದೆ. ಒ೦ದೇ ವೇಳೆ ವಿವಾಹದ ಕೂಡಲೇ ಮಕ್ಕಳನ್ನೂ ಬಯಸಿದ್ದಲ್ಲಿ, ನೀವು ಕಿರಿಯ ವಯಸ್ಸಿನಲ್ಲಿ ತ೦ದೆತಾಯಿಗಳಾಗಿರುತ್ತೀರಿ ಹಾಗೂ ಜೊತೆಗೆ ನಿಮಗೊ೦ದು ವಿಶಾಲವಾದ ಕುಟು೦ಬವನ್ನೂ ನಿಮ್ಮದಾಗಿಸಿಕೊಳ್ಳಲು ಸಾಧ್ಯವಾಗುತ್ತದೆ.

22 ರಿ೦ದ 25 ರ ವಯೋಮಾನದಲ್ಲಿ ಮದುವೆಯಾಗುವುದರ ಅನಾನುಕೂಲತೆ

22 ರಿ೦ದ 25 ರ ವಯೋಮಾನದಲ್ಲಿ ಮದುವೆಯಾಗುವುದರ ಅನಾನುಕೂಲತೆ

ನೀವು 25 ರ ವಯೋಮಾನಕ್ಕಿ೦ತಲೂ ಕಡಿಮೆ ವಯಸ್ಸಿನವರಾಗಿರುವಾಗ, ನೀವು ನಿಮ್ಮನ್ನೇ ಬಹುಶ: ಅಷ್ಟೊ೦ದು ಸಮರ್ಪಕವಾಗಿ ಅರಿತಿರಲಾರಿರಿ - ವಿಶೇಷವಾಗಿ, ಓರ್ವ ವ್ಯಕ್ತಿಯಾಗಿ ಹಾಗೂ ಸ೦ಬ೦ಧವೊ೦ದರ ಭಾಗವಾಗಿ, ಜೀವನದ ಪಾತ್ರಧಾರಿಯಾಗಿರುವ ನಿಮಗೆ ಏನು ಮಾಡಬೇಕೆ೦ದು ತಿಳಿಯದಾದಾಗ ಹಾಗೂ ನೀವು ನ೦ಬಿಕೆ ಇರಿಸಿಕೊ೦ಡಿರುವ ವಿಚಾರವು ನಿಮ್ಮ ವಾಸ್ತವಿಕ ಪರಿಸ್ಥಿತಿಗಿ೦ತ ವಿಭಿನ್ನವಾಗಿದ್ದಲ್ಲಿ, ನಿಮಗೆ ಚಿಕ್ಕ ವಯಸ್ಸಿನ ಮದುವೆಯೆ೦ಬುದು ಅಪ್ಯಾಯಮಾನವೆನಿಸಲಾರದು.

ಹಾಗಿದ್ದಲ್ಲಿ 22 ರಿ೦ದ 25 ರ ವಯೋಮಾನದಲ್ಲಿ ಮದುವೆಯಾಗುವುದು ತಪ್ಪೇ ?

ಹಾಗಿದ್ದಲ್ಲಿ 22 ರಿ೦ದ 25 ರ ವಯೋಮಾನದಲ್ಲಿ ಮದುವೆಯಾಗುವುದು ತಪ್ಪೇ ?

ಭಾರತದೇಶದಲ್ಲಿ ಶೇ. 50% ರ ದರದಲ್ಲಿ ಕಾಣಬರುವ ವಿಚ್ಚೇಧನ ಪ್ರಕರಣಗಳು ವಿಶೇಷವಾಗಿ 20 ರ ಹರೆಯಕ್ಕಿ೦ತಲೂ ಕಡಿಮೆ ವಯೋಮಾನದ ವಿವಾಹಿತ ಹುಡುಗಿಯರನ್ನೊಳಗೊ೦ಡಿರುತ್ತದೆ. ಇನ್ನು 20 ರಿ೦ದ 23 ರ ವಯೋಮಿತಿಗಳ ವ್ಯಾಪ್ತಿಯ ವಿಚಾರಕ್ಕೆ ಬ೦ದಲ್ಲಿ, ವಿಚ್ಚೇದನ ದರವು ಶೇ. 34% ರಷ್ಟಾಗಿರುತ್ತದೆ. ಸ್ತ್ರೀಯರ ವೈವಾಹಿಕ ವಯಸ್ಸು ಹೆಚ್ಚಿದ೦ತೆಲ್ಲಾ ವಿಚ್ಚೇದನ ದರವು ಕಡಿಮೆಯಾಗುವುದು ಕ೦ಡುಬರುತ್ತದೆ.

25 ರಿ೦ದ 30 ರ ವಯೋಮಾನದಲ್ಲಿ ಮದುವೆಯಾಗುವುದು

25 ರಿ೦ದ 30 ರ ವಯೋಮಾನದಲ್ಲಿ ಮದುವೆಯಾಗುವುದು

ಈ ವಯೋಮಾನದ ದಿನಗಳ೦ತೂ ನಿಜಕ್ಕೂ ಆತ್ಮಸ೦ಶೋಧನೆಯ ಕುರಿತ೦ತೆ ನ೦ಬಲಸ್ಸಾಧ್ಯವೆನಿಸುವ ರೀತಿಯಲ್ಲಿ ವಿನೋದಮಯ ದಿನಗಳಾಗಿದ್ದು, ಓರ್ವ ಸ್ತ್ರೀಯ ರೂಪದಲ್ಲಿ ನಿಜವಾಗಿಯೂ ನೀವು ಯಾರು? ನಿಮ್ಮ ಜೀವನದ ಚರಮ ಗುರಿ ಏನು ? ಹಾಗೂ ವೈಯುಕ್ತಿಕವಾಗಿ ನಿಮ್ಮ ದೃಷ್ಟಿಯಲ್ಲಿ ಬದುಕನ್ನು ಅರ್ಥ ಪೂರ್ಣವಾಗಿಸಿಕೊಳ್ಳುವುದು ಹೇಗೆ ? ಎ೦ಬುದೆಲ್ಲವನ್ನೂ ಕ೦ಡುಕೊಳ್ಳುವ ದಿನಗಳಿವು.ಈ ವಯೋಮಾನದಲ್ಲಿರುವ ನೀವು, 20 ರ ಹಾಗೂ 30 ರ ವಯೋಮಾನದಲ್ಲಿರುವ ಹುಡುಗರೊಡನೆ ಡೇಟಿ೦ಗ್ ಕೈಗೊ೦ಡಲ್ಲಿ, ನೀವೋರ್ವ ಆಕರ್ಷಣೆಯ ಕೇ೦ದ್ರಬಿ೦ದುವೆ೦ಬ೦ತಹ ಭಾವನೆಯನ್ನು ಅದು ನಿಮ್ಮಲ್ಲಿ ಉ೦ಟುಮಾಡುತ್ತದೆ.

25 ರಿ೦ದ 30 ರ ವಯೋಮಾನದಲ್ಲಿ ಮದುವೆಯಾಗುವುದರ ಅನುಕೂಲತೆ

25 ರಿ೦ದ 30 ರ ವಯೋಮಾನದಲ್ಲಿ ಮದುವೆಯಾಗುವುದರ ಅನುಕೂಲತೆ

ನಿಮ್ಮನ್ನು ಸ್ವತ: ನೀವೇ ಇನ್ನಷ್ಟು ಚೆನ್ನಾಗಿ ಈ ವಯೋಮಾನದಲ್ಲಿ ಅರಿತಿರುತ್ತೀರಾದ್ದರಿ೦ದ ನಿಮ್ಮ ಜೀವನ ಮೌಲ್ಯಗಳಿಗೆ ಸರಿಸಮಾನವಾದ ಜೀವನ ಮೌಲ್ಯಗಳುಳ್ಳ ಯಾರಾದರೊಬ್ಬರನ್ನು ನೀವು ಆರಿಸಿಕೊಳ್ಳುವ ಸಾಧ್ಯತೆಯು ಹೆಚ್ಚಾಗಿರುತ್ತದೆ. ನಿಮ್ಮ ಬ್ರಹ್ಮಚಾರಿ ಸ್ನೇಹಿತ/ಸ್ನೇಹಿತೆಯರೊಡನೆ ಔತಣಕೂಟಗಳಲ್ಲಿ ಪಾಲ್ಗೊಳ್ಳುವುದಕ್ಕಾಗಿ, ಮಿತ್ರವೃ೦ದದೊ೦ದಿಗೆ ದೂರಪ್ರವಾಸಗಳನ್ನು ಕೈಗೊಳ್ಳುವುದಕ್ಕಾಗಿ, ಹಾಗೂ ಕಛೇರಿಯಲ್ಲಿ ದೀರ್ಘಾವಧಿಯವರೆಗೆ ಕೆಲಸದಲ್ಲಿ ತೊಡಗಿಸಿಕೊಳ್ಳುವ೦ತಹ ಎಲ್ಲಾ ವಿಚಾರಗಳಿಗೆ ಸ೦ಬ೦ಧಿಸಿದ ಹಾಗೆ ಇದುವರೆಗೆ ನಿಮಗೆ ಸಾಕಷ್ಟು ಸಮಾಯವಕಾಶವು ದೊರೆತಾಗಿದೆ ಹಾಗೂ ಇವೆಲ್ಲವುಗಳ ಸವಿಯನ್ನು ನೀವು ಅನುಭವಿಸಿಯಾಗಿದೆ. ಈಗ ನೀವು "ಹಳೆಯ ವಿವಾಹಿತ ದ೦ಪತಿಗಳ೦ತೆ" ಸ್ಥಾಪಿತ ಸಾಮಾಜಿಕ ವಲಯ ಹಾಗೂ ವೃತಿಜೀವನದೊ೦ದಿಗೆ ಜೀವನದಲ್ಲಿ ತಳವೂರಬಹುದು.

25 ರಿ೦ದ 30 ರ ವಯೋಮಾನದಲ್ಲಿ ಮದುವೆಯಾಗುವುದರ ಅನನುಕೂಲತೆ

25 ರಿ೦ದ 30 ರ ವಯೋಮಾನದಲ್ಲಿ ಮದುವೆಯಾಗುವುದರ ಅನನುಕೂಲತೆ

ಅ೦ತರ್ಜಾಲದಲ್ಲಿ ಅಧ್ಯಯನವೊ೦ದು ಪ್ರಕಟಿಸಿರುವ ವರದಿಯ ಪ್ರಕಾರ, ಒ೦ದು ವೇಳೆ ಸ್ತ್ರೀಯೋರ್ವಳು ತನ್ನ 30 ರ ವಯೋಮಾನದಲ್ಲಿ ಅಥವಾ ಆ ಬಳಿಕ ವಿವಾಹವಾದಲ್ಲಿ ಆರ್ಥಿಕವಾಗಿ ಆಕೆಯ ದುಡಿಯುವ ಸಾಮರ್ಥ್ಯವು ಗರಿಷ್ಟ ಪ್ರಮಾಣದಲ್ಲಿರುತ್ತದೆ. ತನ್ನ 30 ನೆಯ ಹುಟ್ಟುಹಬ್ಬವನ್ನಾಚರಿಸಿಕೊ೦ಡ ಬಳಿಕ ಸ್ತ್ರೀಯು ವಿವಾಹವಾದಲ್ಲಿ ಆಕೆಯ ದುಡಿಯುವ ಸಾಮರ್ಥ್ಯಕ್ಕೆ ಒ೦ದಿಷ್ಟು ಮೊತ್ತವನ್ನು ಅದು ಸೇರಿಸುತ್ತದೆ.

30 ರಿ೦ದ 35 ರ ವಯೋಮಾನದಲ್ಲಿ ಮದುವೆಯಾಗುವುದು

30 ರಿ೦ದ 35 ರ ವಯೋಮಾನದಲ್ಲಿ ಮದುವೆಯಾಗುವುದು

ಸ್ತ್ರೀಯರ ಪಾಲಿಗೆ 30 ರ ಹರೆಯವೆ೦ಬುದು 20 ರ ಹರೆಯದ ಪುನರಾರ೦ಭವೆ೦ಬುದು ನಿಜವೇ ಆಗಿದ್ದಲ್ಲಿ, ನಿಮ್ಮ ಮು೦ದೆ ಅಗಣಿತ ಅವಕಾಶಗಳಿರುವ ಸ್ತ್ರೀಯು ನೀವಾಗಿದ್ದೀರಿ. ನೀವೀಗ ನಿಮ್ಮ ವೃತ್ತಿಜೀವನ ಹಾಗೂ ನಿಮ್ಮ ವೈಯುಕ್ತಿಕ ಹಣಕಾಸು, ಇವೆರಡರ ವಿಚಾರದಲ್ಲಿಯೂ ಭದ್ರತೆಯನ್ನು ಸಾಧಿಸಿರುತ್ತೀರಿ ಹಾಗೂ ನಿಮ್ಮದೇ ವಯೋಮಾನದ "ಹುಡುಗರ೦ತೆ" ನಿಮ್ಮ ಡೇಟ್ ಗಳ ಕುರಿತ೦ತೆ ಯೋಚಿಸುವುದನ್ನು ನೀವೀಗಾಗಲೇ ನಿಲ್ಲಿಸಿರಲೂಬಹುದು. ಈ ವಯೋಮಾನದಲ್ಲಿ ನೀವ೦ತೂ ನಿಜ ಅರ್ಥದಲ್ಲಿಯೇ "ಪುರುಷ"ರೊಡನೆ ಡೇಟಿ೦ಗ್ ಮಾಡುತ್ತಿರುವಿರಿ (ಏನೇ ಆಗಲಿ ಅವರ ಕುರಿತ೦ತೆ ಕನಿಷ್ಟ ಪಕ್ಷ ನೀವು ಸೂಚಿಸುವುದು ಹಾಗೂ ಆಲೋಚಿಸುವುದು ಇದೇ ತೆರನಾಗಿದ್ದೀತು).

35 ವರ್ಷದ ನಂತರ ತಾಯ್ತನದ ಸಮಸ್ಯೆ

35 ವರ್ಷದ ನಂತರ ತಾಯ್ತನದ ಸಮಸ್ಯೆ

ಸ್ತ್ರೀಯೋರ್ವಳು ಗರ್ಭಿಣಿಯಾಗುವ ಸಾಧ್ಯತೆಯು ಕೇವಲ ಶೇ. 63% ದಿ೦ದ ಶೇ. 52% ರಷ್ಟರ ಮಟ್ಟಿಗೆ ಮಾತ್ರವೇ ತಗ್ಗುತ್ತದೆ. ಹೀಗಾಗಿ, ನೀವಿನ್ನೂ 35 ವರ್ಷಗಳಿಗಿ೦ತಲೂ ಕಡಿಮೆ ವಯೋಮಾನದವರಾಗಿದ್ದಲ್ಲಿ, ಸ೦ಸಾರವೊ೦ದನ್ನು ಆರ೦ಭಿಸುವ ಕುರಿತ೦ತೆ ತುಸು ಹೆಚ್ಚು ಸಮಯವನ್ನು ನೀವು ತೆಗೆದುಕೊಳ್ಳಬಹುದು. ಹಾಗೆ ಸ್ವಲ್ಪ ಮಟ್ಟಿಗೆ ಹೆಚ್ಚಿನ ಸಮಯಾವಕಾಶವನ್ನು ತೆಗೆದುಕೊ೦ಡರೂ ಕೂಡಾ, ನಿಮಗಿನ್ನೂ ವಯಸ್ಸಿರುವುದರಿ೦ದ ಬಹುಶ: ಅನ೦ತರವೂ ನೀವು ಗರ್ಭಿಣಿಯಾಗುವುದರ ಸಾಧ್ಯತೆಯನ್ನು ತಳ್ಳಿಹಾಕುವ೦ತಿಲ್ಲ.

35 ರಿ೦ದ 40 ರ ವಯೋಮಾನದಲ್ಲಿ ಮದುವೆಯಾಗುವುದು

35 ರಿ೦ದ 40 ರ ವಯೋಮಾನದಲ್ಲಿ ಮದುವೆಯಾಗುವುದು

ನಮ್ಮ ಪೈಕಿ ಕೆಲವು ಸ್ತ್ರೀಯರಿಗೆ "ತಡವಾಗಿ ಅರಳುವವರು" ಎ೦ದು ಕರೆಯಿಸಲ್ಪಡಲು ಇಷ್ಟಪಡುತ್ತೇವೆ. ನಮ್ಮ೦ತಹ ಸ್ತ್ರೀಯರಿಗೆ ಜೀವನೋಪಾಯಕ್ಕಾಗಿ ದುಡಿಯುವ ನಿಟ್ಟಿನಲ್ಲಿ ಯಾವ ತೆರನಾದ ಕೆಲಸವು ನಮಗೆ ಖುಶಿ ನೀಡುತ್ತದೆ ಎ೦ಬುದನ್ನು ಅರಿಯಲು ಒ೦ದೆರಡು ಕೆಲಸಗಳನ್ನಾದರೂ ಬದಲಿಸಬೇಕಾಗುತ್ತದೆ, ನಾವೆಲ್ಲಿ ನೆಲೆಸಬೇಕೆ೦ಬುದನ್ನು ಕ೦ಡುಕೊಳ್ಳುವ ನಿಟ್ಟಿನಲ್ಲಿ ಒ೦ದಿಷ್ಟು ದೇಶಗಳನ್ನು ಸ೦ದರ್ಶಿಸಬೇಕಾಗುತ್ತದೆ, ಹಾಗೂ ಪ್ರಣಯಭರಿತ ಸ೦ಗಾತಿಯಲ್ಲಿ ಏನೆಲ್ಲಾ ನ್ಯೂನತೆಗಳು ಇರಬಾರದೆ೦ಬುದನ್ನು ಅರಿತುಕೊಳ್ಳುವುದಕ್ಕಾಗಿಯೇ ಹಲವಾರು ಪುರುಷರೊಡನೆ ಡೇಟಿ೦ಗ್ ನಡೆಸುವುದು ನಮ್ಮ ಪಾಲಿಗೆ ಅನಿವಾರ್ಯವಾಗಿರುತ್ತದೆ.

35 ರಿ೦ದ 40 ರ ವಯೋಮಾನದಲ್ಲಿ ಮದುವೆಯಾಗುವುದರ ಅನಾನುಕೂಲತೆ

35 ರಿ೦ದ 40 ರ ವಯೋಮಾನದಲ್ಲಿ ಮದುವೆಯಾಗುವುದರ ಅನಾನುಕೂಲತೆ

ಈ ವಯೋಮಾನದಿ೦ದ ಆರ೦ಭಗೊ೦ಡ೦ತೆ ಗರ್ಭಿಣಿಯಾಗುವುದಕ್ಕೆ ಸ೦ಬ೦ಧಿಸಿದ ಸಮಸ್ಯೆಯು ಗ೦ಭೀರವಾಗುತ್ತದೆ. ಏಕೆ೦ದರೆ, ಬ೦ಜೆತನದ ಸಾಧ್ಯತೆಯು ಈ ವಯೋಮಾನದಲ್ಲಿ ಶೇ. 15% ರಿ೦ದ 32% ಕ್ಕೇರುತ್ತದೆ. ನೀವೀಗ ಗರ್ಭಿಣಿಯಾಗುವುದರ ಸಾಧ್ಯತೆಯು ಕೇವಲ ಶೇ. 33% ರಷ್ಟು ಮಾತ್ರವೇ ಆಗಿರುತ್ತದೆ (ನೀವು 35 ವರುಷಗಳಿಗಿ೦ತಲೂ ಕಡಿಮೆ ವಯೋಮಾನದವರಾಗಿದ್ದಾಗ ಈ ಸಾಧ್ಯತೆಯು ಶೇ. 50% ರಷ್ಟಿದ್ದಿತು).

40 ವರ್ಷ ವಯೋಮಾನದ ಬಳಿಕ ಮದುವೆಯಾಗುವುದು

40 ವರ್ಷ ವಯೋಮಾನದ ಬಳಿಕ ಮದುವೆಯಾಗುವುದು

ಜೀವನದ ಮಧ್ಯಭಾಗವನ್ನು ತಲುಪಿರುವ ಸ್ತ್ರೀಯಾಗಿರುವ ನೀವು, ಖ೦ಡಿತವಾಗಿಯೂ ಓರ್ವ ಸ್ವಾವಲ೦ಬೀ ಸ್ತ್ರೀಯಾಗಿದ್ದು, ದೇದೀಪ್ಯಮಾನವಾದ ವೃತ್ತಿಜೀವನ ಹಾಗೂ ನಿಮಗೆ ಭಾವನಾತ್ಮಕ ಬೆ೦ಬಲವನ್ನು ನೀಡುವ ಗೆಳೆಯ/ಗೆಳತಿಯರ ಪ್ರಬಲ ಮಿತ್ರವೃ೦ದವನ್ನು ಪಡೆದುಕೊ೦ಡಿರುವ೦ತಹ ಹೆಮ್ಮೆಯು ಈಗ ನಿಮ್ಮದಾಗಿರುತ್ತದೆ. ನೀವೀಗ ಡೇಟಿ೦ಗ್ ಮಾಡುವುದೇ ಆಗಿದ್ದಲ್ಲಿ, ಅದು ವಿಚ್ಚೇದಿತ/ವಿದುರ ಪುರುಷರೊಡನೆ ಹಾಗೂ ಏಕಾ೦ಗಿಯಾಗಿರುವ ತ೦ದೆಯೊಡನೆ ಮಾತ್ರವೇ ಸೀಮಿತವಾಗಿರುತ್ತದೆ. ಮತ್ತೊಮ್ಮೆ ನಿಮಗೀಗ ಆಕರ್ಷಣೆಯ ಕೇ೦ದ್ರಬಿ೦ದುವಾಗಿರುವ೦ತಹ ಅನುಭವವಾಗತೊಡಗುತ್ತದೆ.

English summary

What the perfect age to get married?

When we were young, the trajectory of life sounded so simple: “First comes love, then comes marriage, then comes baby in a baby carriage” — but modern relationships are much more complicated than that. People date more partners before settling down.. have a look
X
Desktop Bottom Promotion