For Quick Alerts
ALLOW NOTIFICATIONS  
For Daily Alerts

ಹುಡುಗಿ ಜೊತೆ ಮೊದಲ ಡೇಟಿಂಗ್ - ನರ್ವಸ್ ಆಗಬೇಡಿ!

|

ಡೇಟಿಂಗ್ ಎಂಬ ಪದವೇ ಮನಸ್ಸಿನಲ್ಲಿ ಸಿಕ್ಕಾಪಟ್ಟೆ ಖುಷಿಯನ್ನುಂಟು ಮಾಡುತ್ತದೆ. ಅದರ ಜೊತೆಗೆ ಇದು ಸ್ವಲ್ಪ ಉದ್ವೇಗವನ್ನು ಸಹ ಉಂಟು ಮಾಡುತ್ತದೆ. ಹುಡುಗಿಯರು ಸಾಮಾನ್ಯವಾಗಿ ಡೇಟಿಂಗ್ ಕುರಿತಾಗಿ ಹೆದರುವುದು ಸಹಜ. ಆದರೆ ಇದರಲ್ಲಿ ಹುಡುಗರು ಹೆದರುವಂತಹದ್ದೇನು ಇಲ್ಲ ಎಂದು ಭಾವಿಸಬೇಡಿ. ಅವರು ಸಹ ಮನುಷ್ಯರೇ, ಅವರಿಗೆ ಹೆದರಿಕೆ, ಭಯ ಮತ್ತು ಭೀತಿಗಳು ಇರುತ್ತವೆ.

ನೋಡಲು ಆತ್ಮವಿಶ್ವಾಸದಿಂದ ಕೂಡಿರುವ ಹುಡುಗನು ಸಹ ಮೊದಲ ಬಾರಿಗೆ ಡೇಟಿಂಗ್ ಹೋಗುವಾಗ ಬೆವೆತು ಹೋಗುವುದು ಸಹಜ! ಆಗ ಆತನ ಉದ್ವೇಗವನ್ನು ಕಡಿಮೆ ಮಾಡುವುದು ಹೇಗೆ? ನಿಮ್ಮ ಗಂಡಂದಿರ ವಿಚಿತ್ರ ನಡವಳಿಕೆಯ ಬಗ್ಗೆ ಒಂದು ಕಣ್ಣಿಡಿ!

ಮೊದಲ ಬಾರಿಗೆ ಹುಡುಗಿಯ ಜೊತೆಗೆ ಡೇಟಿಂಗ್ ಮಾಡುವಾಗ ಹುಡುಗರಿಗೆ ಸಿಕ್ಕಾಪಟ್ಟೆ ಗೊಂದಲವಾಗುವುದು ಸಹಜ. ಆಗ ಆತನಿಗೆ ಹುಡುಗಿಯನ್ನು ಹೇಗೆ ಮಾತನಾಡಿಸುವುದು, ಹೇಗೆ ಆಕೆಯನ್ನು ಸ್ಪರ್ಶಿಸುವುದು, ಇದೆಲ್ಲದ್ದಕ್ಕಿಂತ ಮುಖ್ಯವಾಗಿ ಆಕೆಯನ್ನು ಮೆಚ್ಚಿಸುವುದು ಹೇಗೆ ಎಂಬ ಅಂಶಗಳು ಅತಿಯಾಗಿ ಗೊಂದಲವನ್ನುಂಟು ಮಾಡುತ್ತಿರುತ್ತದೆ. ಆದ್ದರಿಂದ ಹುಡುಗರಿಗೆ ಕೆಲವೊಂದು ಡೇಟಿಂಗ್ ಸಲಹೆಗಳು ಅತ್ಯಗತ್ಯವಾಗಿ ಬೇಕಾಗುತ್ತವೆ. ಇದರಿಂದ ಅವರ ಉದ್ವೇಗ ಮತ್ತು ಭೀತಿಯು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಮುಜುಗರವು ಸಹ ತಪ್ಪುತ್ತದೆ. ಗರ್ಲ್‌ ಫ್ರೆಂಡ್‌ನ ಕಿರಿಕಿರಿ ದಿನೇ ದಿನೇ ಹೆಚ್ಚಾಗುತ್ತಿದೆ ಕಣ್ರೀ!

ಕೆಲವೊಮ್ಮೆ ಡೇಟಿಂಗ್ ಮಾಡುವಾಗ ಹುಡುಗರು ಕೆಲವೊಂದು ಅನೈತಿಕವಾದ ಸಂಗತಿಗಳನ್ನು ಮಾಡುತ್ತಾರೆ. ಕೆಟ್ಟ ಮಾತುಗಳನ್ನು ಬಳಸುತ್ತಾರೆ, ಹುಡುಗಿ ಮುಜುಗರ ಪಡುವ ರೀತಿಯಲ್ಲಿ ಸ್ಪರ್ಶಿಸುತ್ತಾರೆ. ಇದರಲ್ಲಿ ಕೆಟ್ಟ ಉದ್ದೇಶಗಳು ಇಲ್ಲದಿದ್ದರು, ಅವರು ಈ ಪರಿಸ್ಥಿತಿಯಲ್ಲಿ ತಪ್ಪಾಗಿ ವರ್ತಿಸುವುದು ಸ್ಪಷ್ಟ. ಏಕೆಂದರೆ ಅವರ ಉದ್ವೇಗವು ಅವರನ್ನು ಹೀಗೆ ಮಾಡಿಬಿಡುತ್ತದೆ. ಅದಕ್ಕಾಗಿ ಅವರಿಗಾಗಿ ಕೆಲವೊಂದು ಸಲಹೆಗಳನ್ನು ನಾವು ನೀಡುತ್ತಿದ್ದೇವೆ. ಓದಿಕೊಳ್ಳಿ....

ಹೆಚ್ಚು ಹಗಲುಗನಸು ಕಾಣಬೇಡಿ

ಹೆಚ್ಚು ಹಗಲುಗನಸು ಕಾಣಬೇಡಿ

ಇದು ಡೇಟಿಂಗ್‌ನಲ್ಲಿ ಉದ್ವೇಗಕ್ಕೆ ಒಳಗಾಗುವ ಹುಡುಗನಿಗೆ ಮೊದಲ ಕಿವಿಮಾತು. ನೀವು ಒಂದು ಹೊಸ ತಾಣದಲ್ಲಿ, ನಿಮ್ಮ ಪರಿಚಿತ ಆದರೆ ಹೆಚ್ಚಾಗಿ ಆಕೆಯ ಕುರಿತು ತಿಳಿಯದ ಹುಡುಗಿಯೊಂದಿಗೆ ಹೊಸ ಕ್ಷಣಗಳನ್ನು ಕಳೆಯಲು ಹೋಗುತ್ತಿರುವಿರಿ. ಇದರ ಕುರಿತು ಹೆಚ್ಚು ಕನಸುಗಳನ್ನು ಕಾಣದಿದ್ದರೆ, ಒಳ್ಳೆಯದು.

ಕೈ-ಕಾಲುಗಳನ್ನು ಸುಮ್ಮನಿರಿಸಿಕೊಳ್ಳಿ

ಕೈ-ಕಾಲುಗಳನ್ನು ಸುಮ್ಮನಿರಿಸಿಕೊಳ್ಳಿ

ಡೇಟಿಂಗ್‍ನಲ್ಲಿ ಉದ್ವೇಗಕ್ಕೆ ಒಳಗಾದ ವ್ಯಕ್ತಿಗೆ ಅಗತ್ಯವಾದ ಸಲಹೆ ಇದು. ಹುಡುಗರು ಹುಡುಗಿಯ ಮುಂದೆ ಕುಳಿತರೆ, ಅವರ ಎದೆಯಲ್ಲಿ ಖುಷಿಯ ಹೊಸ ಅಲೆ ಭೋರ್ಗರೆಯುತ್ತಿರುತ್ತದೆ. ಅದೇ ಸಮಯಕ್ಕೆ ಅದರ ಹಿಂದೆಯೇ ಉದ್ವೇಗ ಎಂಬ ಚಳಿಗಾಳಿ ಅವರನ್ನು ನಡುಗಿಸುತ್ತಿರುತ್ತದೆ. ಆಗ ಅವರು ಅವರಿಗೆ ಗೊತ್ತಿಲ್ಲದೆ, ಕೈ-ಕಾಲುಗಳನ್ನು ಆಡಿಸುವುದು, ಟೇಬಲ್ ಹೊಡೆಯುವುದು ಮುಂತಾದ ಕುಚೇಷ್ಟೆಗಳನ್ನು ಮಾಡುತ್ತಿರುತ್ತಾರೆ. ನೀವು ಹೀಗೆ ಮಾಡಿದರೆ, ಆಕೆ ನಿಮ್ಮ ಕುರಿತಾಗಿ ಆಸಕ್ತಿ ಕಳೆದುಕೊಳ್ಳಬಹುದು ಎಚ್ಚರ.

ಜಾಗರೂಕತೆಯಿಂದ ಕೇಳಿ

ಜಾಗರೂಕತೆಯಿಂದ ಕೇಳಿ

ಹಲವಾರು ಹುಡುಗರಿಗೆ ಈ ಸಮಯದಲ್ಲಿ ಏನು ಮಾತನಾಡಬೇಕು ಎಂದು ತೋಚುವುದಿಲ್ಲ. ಡೇಟಿಂಗ್‌ನಲ್ಲಿ ಮಾತನಾಡಲೇ ಬೇಕು ಎಂಬ ನಿಯಮವೇನಿಲ್ಲ. ಒಂದು ವೇಳೆ ನಿಮಗೆ ಮಾತನಾಡಲು ಸಾಧ್ಯವಾಗದಿದ್ದಲ್ಲಿ, ಸುಮ್ಮನೆ ಕುಳಿತು ಆಕೆ ಮಾತನಾಡುವುದನ್ನು ಕೇಳಿ. ಆಕೆ ಇಷ್ಟಾನಿಷ್ಟಗಳ ಕುರಿತು ಕೇಳಿ ತಿಳಿದುಕೊಳ್ಳಿ. ನಂತರ ನಿಧಾನವಾಗಿ ಮುಂದುವರಿಯಿರಿ.

ಸಭ್ಯ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ

ಸಭ್ಯ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ

ನಿಮಗಿಬ್ಬರಿಗು ಮಾತನಾಡಲು ಒಂದು ಏಕಾಂತ ಸ್ಥಳ ಅಗತ್ಯವಿದೆ ಎಂದು ನಮಗೂ ಗೊತ್ತು. ಆದರೆ ಇದನ್ನು ನೀವೊಬ್ಬರೆ ನಿರ್ಧರಿಸಬೇಡಿ. ನಿಮ್ಮ ಹುಡುಗಿಯನ್ನು ಸಹ ಈ ಕುರಿತು ಕೇಳಿ. ಆಕೆಯ ಸಲಹೆಯನ್ನು ಪಡೆಯಿರಿ. ಇದರಿಂದ ನಿಮ್ಮ ಉದ್ವೇಗ ಕಡಿಮೆಯಾಗಲು ಸಹಕಾರಿಯಾಗುತ್ತದೆ.

English summary

Simple Dating Tips For Nervous Guy

Dating is such a matter which creates fantasy in your head. If girls get nervous at the thought of first date, guys are also not behind them in stressing out about dating. Even the cool guy of your friend circle can have wet palms while going on a new date. What are the ways to overcome this nervousness?
X
Desktop Bottom Promotion