For Quick Alerts
ALLOW NOTIFICATIONS  
For Daily Alerts

ಹುಡುಗಿಯರು ತಮ್ಮ ಮದುವೆಯ ವಿಷಯದಲ್ಲಿ ಭಯಪಡಲು ಕಾರಣಗಳೇನು?

By Super
|

ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳ ಮದುವೆಯೇ ಅತ್ಯಂತ ದೊಡ್ಡ ಯೋಚನೆಯಾಗಿತ್ತು. ಅದರಲ್ಲೂ 20 ವರ್ಷ ದಾಟಿಬಿಟ್ಟರೆ, ಮುಗಿಯಿತು ಆ ಹೆಣ್ಣು ಮಗು ಮತ್ತು ಅವರ ಪೋಷಕರು ಆತಂಕಕ್ಕೆ ಈಡಾಗುತ್ತಿದ್ದರು. ಇಂದಿಗು ಬಹುತೇಕ ಸಿನಿಮಾ ಮತ್ತು ಧಾರಾವಾಹಿಗಳು ನಮಗೆ ತೋರಿಸುವುದು ಇದನ್ನೆ, ಹೆಣ್ಣು ಮಕ್ಕಳ ಜನ್ಮದ ನಿಜವಾದ ಸಾರ್ಥಕ್ಯವೇ, "ಮದುವೆಯಾಗುವುದು". ಆದರೆ ಸತ್ಯಾಂಶ ಬೇರೆಯೇ ಇದೆ. ಹೆಣ್ಣು ಮಕ್ಕಳು ನಿಜವಾಗಿ ತಮ್ಮ ಮದುವೆ ಪ್ರಕ್ರಿಯೆಯನ್ನು ಮುಂದೂಡಲು ಬಯಸುತ್ತಾರೆ.

ಇದಕ್ಕೆ ಕಾರಣ, ಮುಕ್ತವಾದ ಸಮಾಜ, ಆರ್ಥಿಕ ಸ್ವಾತಂತ್ರ್ಯ, ಇತ್ಯಾದಿಗಳು ಸೇರಿ ಯುವತಿಯರ ಮನೋಭಾವವನ್ನು ಬದಲಾಯಿಸಿವೆ ಎಂಬ ಮಾತು ಸತ್ಯವಲ್ಲ. ಬದಲಿಗೆ ಮದುವೆಗೆ ಸಂಬಂಧಿಸಿದ ಹಲವಾರು ಅಂಶಗಳು ಅವರನ್ನು ಈ ವಿಚಾರದಿಂದ ದೂರವಿಟ್ಟಿವೆ. ಇದನ್ನು ನೀವು ಒಪ್ಪುವಿರಲ್ಲವೆ? ಬನ್ನಿ ಹಾಗಾದರೆ ಯುವತಿಯರನ್ನು ಮದುವೆಯ ಕುರಿತಾಗಿ ಭಯಭೀತರನ್ನಾಗಿಸುವ ಆ ಅಂಶಗಳಾವುವು ಎಂಬುದನ್ನು ಕುರಿತು ತಿಳಿದುಕೊಂಡು ಬರೋಣ... ಮದುವೆ ಬಗ್ಗೆ ಮಗಳಿಗೆ ತಾಯಿ ಹೇಳಲೇಬೇಕಾದ ಹತ್ತು ರಹಸ್ಯವೇನು?

ಸ್ವಾತಂತ್ರ್ಯ ಕಳೆದುಹೋಗುತ್ತದೆ

ಸ್ವಾತಂತ್ರ್ಯ ಕಳೆದುಹೋಗುತ್ತದೆ

ಬಹಳಷ್ಟು ಹೆಣ್ಣು ಮಕ್ಕಳು ಆಲೋಚಿಸುವ ಮೊದಲನೆಯ ಅಂಶ. ಮದುವೆಯಾದ ಕೂಡಲೆ ಸ್ವಾತಂತ್ರ್ಯ ಕಳೆದು ಹೋಗುತ್ತದೆ ಎಂಬುದು. ತಾವು ಒಂಟಿಯಾಗಿದ್ದಾಗ ಇರುವ ಸ್ವಾತಂತ್ರ್ಯ ಮದುವೆಯಾದ ಮೇಲೆ ದೊರೆಯುವುದಿಲ್ಲ ಎಂಬುದು ಇವರ ಚಿಂತೆ. ಮದುವೆಯಾದ ಮೇಲೆ ಗಂಡ, ಅತ್ತೆ-ಮಾವ ಇವರು ಹೇಳಿದ ಹಾಗೆ ಕೇಳಬೇಕು, ಅವರು ಬಯಸಿದಂತೆ ಇರಬೇಕು ಎಂಬ ಭಾವನೆ ಇವರನ್ನು ಮದುವೆಯಿಂದ ದೂರವಿಡುತ್ತದೆ. ಹೀಗೆ ಅವರು ಮದುವೆ ವಿರೋಧಿಗಳಾಗುತ್ತಾರೆ.

ಅತಿ ದೊಡ್ಡ ಬದಲಾವಣೆ

ಅತಿ ದೊಡ್ಡ ಬದಲಾವಣೆ

ಬಹುತೇಕರಿಗೆ ಬದಲಾವಣೆಗೆ ಹೊಂದಿಕೊಳ್ಳುವುದೇ ದೊಡ್ಡ ಚಿಂತೆಯಾಗಿರುತ್ತದೆ. ಆದ್ದರಿಂದ ಅವರು ತಮ್ಮ ಕಂಫರ್ಟ್ ಜೋನ್‍ನಿಂದ ಹೊರಬರಲಾರರು. ಈ ವಿಚಾರದಲ್ಲಿ ಹೆಂಗಸರೇನು ಬೇರೆಯಲ್ಲವಲ್ಲವೇ? ಆದ್ದರಿಂದಲೆ ಬಹುತೇಕ ಹೆಣ್ಣು ಮಕ್ಕಳು ತಮ್ಮ ಮನೆಯನ್ನು ಬದಲಾಯಿಸಲು (ಕೆಲವೊಮ್ಮೆ ಊರು, ದೇಶ ಸಹ) ಒಪ್ಪದೆ ತಮ್ಮ ಮನೆಯಲ್ಲಿಯೇ, ತಮ್ಮ ಕುಟುಂಬ ಮತ್ತು ಜೀವನಶೈಲಿ ಇತ್ಯಾದಿಗಳ ಸಂಗ ತೊರೆಯಲು ಇಷ್ಟವಿಲ್ಲದೆ ಮದುವೆಯೆಂದರೆ ತಲೆ ಅಡ್ಡಡ್ಡ ಆಡಿಸುತ್ತಾರೆ. ಇದು ಮದುವೆಗೆ ಒಲ್ಲೆ ಎನ್ನಲು ಸರಿಯಾದ ಕಾರಣವಲ್ಲವೇನು?

ಮುದ್ದು ಮಾಡುವವರು ಇರುವುದಿಲ್ಲ

ಮುದ್ದು ಮಾಡುವವರು ಇರುವುದಿಲ್ಲ

ಒಂದು ಹೆಣ್ಣಿಗೆ ತನ್ನನ್ನು ಮುದ್ದು ಮಾಡಿ ನೋಡಿಕೊಳ್ಳುವವರು ಯಾವಾಗಲು ಬೇಕು ಎಂಬ ಭಾವನೆಯಿರುತ್ತದೆ. ಅದನ್ನು ತವರಿನಲ್ಲಿ ತಾಯಿ ಮಾಡುತ್ತಿರುತ್ತಾಳೆ. ಆದರೆ ಮದುವೆಯಾದರೆ, ಇದು ಆಕೆಗೆ ದೂರವಾಗುತ್ತದೆ. ಆದ್ದರಿಂದಲೆ ಅವರಿಗೆ ಮದುವೆಯೆನ್ನುವುದು ಕಳೆದುಕೊಳ್ಳುವ ಭಾವನೆ ನೀಡುವ ಬಂಧನವಾಗಿರುತ್ತದೆ. ಇದಕ್ಕೂ ಮೇಲಾಗಿ " ಇಲ್ಲಿ ನಾನು ಸಹಿಸಿಕೊಂಡಂತೆ ನಿನ್ನ ಕೋಪವನ್ನು ನಿಮ್ಮ ಅತ್ತೆ ಸಹಿಸಿಕೊಳ್ಳುವುದಿಲ್ಲ" ಎಂಬ ತಾಯಿಯ ಎಚ್ಚರಿಕೆಗಳು ಸಹ ಭಯಬೀರುವ ಮಾತುಗಳಾಗಿ ಪರಿಣಮಿಸಿ, ಅವರು ಮದುವೆಯೆಂದರೆ ಮಾರುದ್ದ ನಿಲ್ಲುವಂತೆ ಮಾಡುತ್ತವೆ.

"ಮದುವೆಯ ಶಿಷ್ಟಾಚಾರ"ವನ್ನು ನಿರ್ವಹಿಸುವುದು

ಮದುವೆಯಾದ ನಂತರ ಭಾರತೀಯ ಹೆಂಗಸರ ಜೀವನದಲ್ಲಿ ನಿರೀಕ್ಷೆಗಳು ತುಂಬಿ ತುಳುಕುತ್ತವೆ. ಮಗು, ಅದರ ಲಾಲನೆ ಪಾಲನೆ, ಅವರ ವಿದ್ಯಾಭ್ಯಾಸಕ್ಕಾಗಿ ಉಳಿತಾಯ, ಇತ್ಯಾದಿ ಅಂಶಗಳು ಅವರ ಮನಸ್ಸನ್ನು ಆವರಿಸಿಕೊಳ್ಳುತ್ತವೆ. ಆಗಲಿಂದ ಹೆಂಗಸರು " ನನ್ನ ಜೀವನ, ನನ್ನ ಆಯ್ಕೆ" ಎಂಬ ಮಂತ್ರವನ್ನು ಪಾಲಿಸಲು ಆರಂಭಿಸುತ್ತಾರೆ. ಈ ಕಾರಣಗಳು ಮದುವೆಯಾದ ಕೂಡಲೆ ಸಂಶಯಗಳಾಗಿ ಪರಿವರ್ತನೆಯಾಗಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತವೆ.

ಬದ್ಧತೆಯ ಭಯ

ಬದ್ಧತೆಯ ಭಯ

ಹೌದು, ಕೇವಲ ಗಂಡಸರು ಮಾತ್ರ ಬದ್ಧತೆಯ ಭಯವನ್ನು ಹೊಂದಿರುವುದಿಲ್ಲ. ಮಹಿಳೆಯರಿಗು ಸಹ ಸಂಬಂಧದಲ್ಲಿ ಈ ಭಯ ಕಾಡುತ್ತ ಇರುತ್ತದೆ. " ಒಂದು ವೇಳೆ ಎಲ್ಲವೂ ಸರಿ ಹೋಗಲಿಲ್ಲ ಎಂದರೆ?" ಮತ್ತು ಇದೇ ರೀತಿಯ " ಆದರೆಗಳು" ಅವರನ್ನು ಮದುವೆಯ ಕುರಿತಾಗಿ ಅಸ್ಪಷ್ಟತೆಯ ಆಗರದಲ್ಲಿ ಮುಳುಗಿಸಿ ಬಿಡುತ್ತವೆ. ಹೀಗಾಗಿ ಅವರು ಮದುವೆಯಿಂದ ದೂರವಿರ ಬಯಸುತ್ತಾರೆ.

ವೃತ್ತಿಯ ಸಂದಿಗ್ಧತೆ

ವೃತ್ತಿಯ ಸಂದಿಗ್ಧತೆ

ಮದುವೆಯಾದ ಕೂಡಲೆ ತಮ್ಮ ಆಕಾಂಕ್ಷೆಗಳು ಮತ್ತು ವೃತ್ತಿಯಲ್ಲಿನ ಯೋಜನೆಗಳು ಕೊನೆಗೊಳ್ಳುತ್ತವೆ ಎಂಬುದು ಬಹುತೇಕ ಹುಡುಗಿಯರ ಅಭಿಪ್ರಾಯವಾಗಿರುತ್ತದೆ. ಇದು ತಮ್ಮ ಸ್ವಂತ ಊರನ್ನು ಬಿಟ್ಟು ದೂರದಲ್ಲಿರುವ ವರನ ಜೊತೆಗೆ ಮದುವೆಯಾಗುವ ಹುಡುಗಿಯರ ಬಾಳಿನಲ್ಲಿ ಸತ್ಯವಾಗುತ್ತದೆ. ಏಕೆಂದರೆ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ತೊಡಗುವ ಈಕೆ, ಹೊಸ ಕೆಲಸ ಹುಡುಕಲು ತೊಡಗಿಸಿಕೊಳ್ಳುವುದು ಕಡಿಮೆ. ಅದೂ ಅಲ್ಲದೆ ಯಾರೇ ಆಗಲಿ ತಮ್ಮ ವೃತ್ತಿಯಲ್ಲಿ ತಡೆಯನ್ನು ಎದುರು ನೋಡುವುದಿಲ್ಲ.

ಹೆಚ್ಚುವರಿ ಜವಾಬ್ದಾರಿಗಳು

ಹೆಚ್ಚುವರಿ ಜವಾಬ್ದಾರಿಗಳು

ಮದುವೆಯಾದ ನಂತರ ಹೆಂಗಸರ ಜವಾಬ್ದಾರಿಗಳಲ್ಲಿ ಗಣನೀಯ ಬದಲಾವಣೆಗಳು ಕಂಡು ಬರುತ್ತವೆ ಮತ್ತು ಇವು ದಿನೇ ದಿನೇ ಹೆಚ್ಚುತ್ತಲೆ ಹೋಗುತ್ತವೆ. ಬಹುತೇಕರು ಅಡುಗೆ ಮಾಡಬೇಕು, ಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಮತ್ತು ಮನೆಯ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕು. ಅದರಲ್ಲೂ ತಮ್ಮ ಮಗನಿಗೆ ಹೆಣ್ಣನ್ನು ಹುಡುಕುವಾಗ ಪ್ರತಿಯೊಬ್ಬ ಅತ್ತೆಯು ತನಗೆ ಸಹಾಯ ಮಾಡುವಂತಹ ಹುಡುಗಿಯನ್ನು ಮದುವೆ ಮಾಡಿಕೊಳ್ಳಲು ಬಯಸುತ್ತಾರೆ. ಈ ವಿಚಾರದಲ್ಲಿ ಅಂದಿಗು-ಇಂದಿಗು ಯಾವುದೇ ಬದಲಾವಣೆಗಳಿಲ್ಲ. ಆದರೆ ಇಂದಿನ ಯುವತಿಯರು ಈ ವಿಚಾರದ ಬಗ್ಗೆ ಅಸಮಾಧಾನ ಹೊಂದಿರುತ್ತಾರೆ. ಹಾಗಾಗಿಯೇ ಮದುವೆಗೆ ಅವರು ನಿರಾಕರಿಸುತ್ತಾರೆ ಎಂಬ ಮಾತನ್ನು ನೀವು ಒಪ್ಪುವಿರೋ, ಇಲ್ಲವೋ?

ಇಡೀ ಕುಟುಂಬದವರ ಜೊತೆಯಲ್ಲಿ ನೆಲೆಗೊಳ್ಳುವುದು

ಇಡೀ ಕುಟುಂಬದವರ ಜೊತೆಯಲ್ಲಿ ನೆಲೆಗೊಳ್ಳುವುದು

ಭಾರತದಲ್ಲಿ ಎಲ್ಲರಿಗು ತಿಳಿದಿರುವಂತೆ ಮದುವೆಯೆಂಬುದು ಕೇವಲ ಗಂಡ-ಹೆಂಡತಿ ಕೂಡಿ ಇರುವ ಪ್ರಕ್ರಿಯೆಯಲ್ಲ. ಬದಲಿಗೆ ಗಂಡನ ಇಡೀ ಕುಟುಂಬದವರ ಜೊತೆಯಲ್ಲಿ ಕೂಡಿ ನೆಲೆಸುವ ಪ್ರಕ್ರಿಯೆಯಾಗಿರುತ್ತದೆ. ಸಾಮಾನ್ಯವಾಗಿ ಮದುವೆಯಾದ ಕೂಡಲೆ ಅವರ ಮುಂದೆ ಸಂಬಂಧಗಳ ದೊಡ್ಡ ಪಟ್ಟಿಯೆ ತೆರೆದುಕೊಳ್ಳುತ್ತದೆ. ಇಲ್ಲಿ ಮದುವೆಯಾದ ಯುವತಿಯು ತನ್ನನ್ನು ಯಾರು ಇಷ್ಟಪಡದಿದ್ದರು, ಅವರ ಆದರ ಉಪಚಾರ ಮಾಡಬೇಕಾಗುತ್ತದೆ. ಇದಕ್ಕೂ ಮೇಲಾಗಿ, ಆಕೆ ಮದುವೆಯಾದ ಕೂಡಲೆ ಇದ್ದಕ್ಕಿದ್ದಂತೆ ಇನ್ನೊಬ್ಬರ ಅತ್ತಿಗೆ, ಚಿಕ್ಕಮ್ಮ, ಇತ್ಯಾದಿಗಳಾಗಿ ಪರಿವರ್ತನೆ ಹೊಂದುತ್ತಾಳೆ. ಇದು ಸಹ ಆಕೆಯಲ್ಲಿ ಭಯವನ್ನು ಹುಟ್ಟಿಸುತ್ತದೆ. ಇವರೆಲ್ಲರೊಂದಿಗೆ ಹೊಂದಿಕೊಳ್ಳುವ ವಿಚಾರವು ಆಕೆಯನ್ನು ಗೊಂದಲದಲ್ಲಿ ಮತ್ತು ಸಂಶಯದಲ್ಲಿ ತಳ್ಳಿಬಿಡುತ್ತದೆ. ಹೀಗಾಗಿ ಆಕೆ ಮದುವೆಯೆಂದರೆ ಕಣ್ಣು ಬಾಯಿ ಬಿಡುತ್ತಾಳೆ.

ಗುರುತಿನಲ್ಲೂ ಬದಲಾವಣೆ

ಗುರುತಿನಲ್ಲೂ ಬದಲಾವಣೆ

ಪ್ರತಿಯೊಬ್ಬ ಮನುಷ್ಯನು ತನ್ನನ್ನು ತಾನು ಗುರುತಿಸಿಕೊಳ್ಳಲು ಇಷ್ಟಪಡುತ್ತಾನೆ. ಅದರಲ್ಲಿ ಹೆಂಗಸರು ಬೇರೆಯಲ್ಲ. ಇಲ್ಲಿ ಮದುವೆಯಾಗುವವರೆಗು ಹೆಣ್ಣನ್ನು ಒಂದು ರೀತಿಯಲ್ಲಿ ಗುರುತಿಸುತ್ತಾರೆ. ಮದುವೆಯಾದ ನಂತರ, ಅವರ ಅಡ್ಡ ಹೆಸರು ಗೋತ್ರ ಎಲ್ಲವೂ ಗಂಡನ ಮನೆಯವರ ಪ್ರಕಾರ ಬದಲಾಗುತ್ತದೆ. ಇದು ಹೆಂಗಸರಲ್ಲಿ ಒಂದು ಬಗೆಯ ಐಡೆಂಟಿಟಿ ಕ್ರಿಸಿಸ್‍ಗೆ ಕಾರಣವಾಗುತ್ತದೆ. ಹುಟ್ಟಿನಿಂದ ಬರುವ ಗುರುತುಗಳನ್ನು ತ್ಯಾಗ ಮಾಡುವ ವಿಚಾರದಲ್ಲಿ ಹೆಂಗಳೆಯರ ರಗಳೆ ಆರಂಭವಾಗುತ್ತದೆ. ಹೀಗೆ ಈ ಪಟ್ಟಿಗೆ ನೀವು ಸಹ ಅನೇಕ ಕಾರಣಗಳನ್ನು ನೀಡಬಹುದು. ಆದರೆ ನಮ್ಮ ಸಲಹೆ ಏನೆಂದರೆ, ಯಾವುದೇ ಸಮಸ್ಯೆಯಾಗಲಿ ಅದನ್ನು ಆಳಕ್ಕೆ ಇಳಿದು ನೋಡಬೇಡಿ. ಪ್ರತಿಯೊಬ್ಬರು ಮದುವೆಯಾಗಬೇಕು. ಎಲ್ಲಾ ಕಡೆಯು ಸ್ವಲ್ಪ ಏರು-ಪೇರು ಇರುವುದು ಸಹಜ. ಸ್ವಲ್ಪ ಹೊಂದಾಣಿಕೆ ಮಾಡಿಕೊಂಡರೆ ಮದುವೆಯು ನಿಮ್ಮ ಜೀವನದಲ್ಲಿ ರಮ್ಯ ಚೈತ್ರ ಕಾಲವನ್ನು ತರುವುದರಲ್ಲಿ ಯಾವುದೇ ಸಂಶಯವಿಲ್ಲ. ಏನಂತಿರೀ......

English summary

Reasons Why Young Indian Women Are Scared Of Marriage

Gone are the days when getting married used to be one of the biggest concerns for Indian women as soon as they reached early 20s. Don’t agree with us? Well, then let us tell you some real reasons why young Indian women are scared of getting married.
Story first published: Tuesday, January 13, 2015, 17:42 [IST]
X
Desktop Bottom Promotion