For Quick Alerts
ALLOW NOTIFICATIONS  
For Daily Alerts

ವಿಚ್ಛೇದನದ ವಿಷಯ ಬಂದಾಗ ದಂಪತಿಗಳು ಅದೇಕೆ ಹಿಂಜರಿಯುತ್ತಾರೆ?

By Deepak
|

ಮದುವೆ ಎಂಬ ಭಾಂದವ್ಯ ಬೆಸೆಯುವ ಒಂದು ಪ್ರಕ್ರಿಯೆಯನ್ನು ಅಂತ್ಯ ಮಾಡುವಂತಹ ಪ್ರಕ್ರಿಯೆಯೇ "ವಿಚ್ಛೇದನ". ವಿಚ್ಛೇದನವು ವ್ಯಕ್ತಿಯನ್ನು ಕೇವಲ ಭಾವನಾತ್ಮಕವಾಗಿ ಮಾತ್ರವಲ್ಲದೆ, ದೈಹಿಕವಾಗಿ ಸಹ ಆಯಾಸ ಮಾಡಿ ಬಿಡುತ್ತದೆ. ವೈವಾಹಿಕ ಸಂಬಂಧದಲ್ಲಿ ಒಬ್ಬರು ವಿಚ್ಛೇದನ ಮಾಡಿಕೊಳ್ಳಲು ಕಾರಣ ಹುಡುಕಿಕೊಂಡರೆ, ಮತ್ತೊಬ್ಬರು ವಿಚ್ಛೇದನ ಮಾಡಿಕೊಳ್ಳದೆ ಇರಲು ಕಾರಣವನ್ನು ಹುಡುಕುತ್ತಾರೆ!

ಇಂದಿನ ದಿನಗಳಲ್ಲಿ ವಿಚ್ಛೇದನ ಪಡೆಯುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ತಮ್ಮ ಸಂಗಾತಿಗೆ ದ್ರೋಹ ಬಗೆಯುವುದು, ಆಲ್ಕೋಹಾಲ್ ಸೇವನೆ, ಸಂವಹನದ ಕೊರತೆ ಮತ್ತು ದೈಹಿಕ ಹಿಂಸೆ, ಅವಾಚ್ಯ ಪದಗಳ ಬಳಕೆ ಹೀಗೆ ಹತ್ತು ಹಲವು ಕಾರಣಗಳಿಗಾಗಿ ವಿಚ್ಛೇದನಪಡೆಯಲು ಜನ ನ್ಯಾಯಾಲಯಗಳ ಮೊರೆ ಹೋಗುತ್ತಾರೆ.

ಇತ್ತೀಚೆಗೆ ವಿಚ್ಛೇದನ ಎಂಬ ಪದವು ಅಂತಹ ಆಘಾತಕಾರಿ ಪದವಾಗಿ ಸಮಾಜದಲ್ಲಿ ಉಳಿದಿಲ್ಲ. ಹೊಸದಾಗಿ ಮದುವೆಯಾದವರು ಸಹ ಈಗ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸುವುದು ಸಾಮಾನ್ಯವಾಗಿದೆ. ಒಂದು ವೇಳೆ ನೀವು ಮದುವೆಯಾಗಿದ್ದೀರಿ, ನಿಮ್ಮ ಸಂಗಾತಿ ನಿಮ್ಮನ್ನು ನಿರಂತರವಾಗಿ ಮೋಸ ಮಾಡುತ್ತಿದ್ದರೆ, ನಿಂದಿಸುತ್ತಿದ್ದಲ್ಲಿ, ಟೀಕಿಸುತ್ತಿದ್ದಲ್ಲಿ, ಅಥವಾ ಮಾದಕ ವಸ್ತುಗಳ ದಾಸನಾಗಿದ್ದರೆ, ಅಥವಾ ಬೇರೊಬ್ಬ ವ್ಯಕ್ತಿಗಾಗಿ ನಿಮ್ಮನ್ನು ತೊರೆದು ಹೋಗಿದ್ದಲ್ಲಿ, ಆಗ ನಿಮಗೆ ಆ ಸಂಬಂಧದಲ್ಲಿ ಉಳಿಯಲು ಯಾವುದೇ ಕಾರಣಗಳು ಇರುವುದಿಲ್ಲ.

ಆದರೂ ನಾವು ಈ ಅಂಕಣದಲ್ಲಿ ನಿಮಗೆ ವಿಚ್ಛೇದನ ಪಡೆಯದೆ ಇರಲು ಕೆಲವು ಕಾರಣಗಳ ಕುರಿತು ನಾವು ಇಂದು ನಿಮಗೆ ತಿಳಿಸುತ್ತಿದ್ದೇವೆ. ನಿಮ್ಮ ಸಂಬಂಧವನ್ನು ಅಂತ್ಯಗೊಳಿಸಿಕೊಳ್ಳಲು ತಯಾರಾಗಿದ್ದರೆ, ಖಂಡಿತ ಈ ಅಂಕಣ ನಿಮಗೆ ಖುಷಿಯನ್ನು ತರುವುದಿಲ್ಲ. ಮುಂದೆ ಓದಿ.... ವಿಚ್ಛೇದನ ಸುಲಭ, ನಂತರದ ಜೀವನ?

ಮಕ್ಕಳಿಗಾಗಿ

Reasons For Not Getting A Divorce

ಮಕ್ಕಳಿದ್ದರೆ ವಿಚ್ಛೇದನ ಸಿಗುವುದು ಕಷ್ಟ. ಒಂದು ವೇಳೆ ನಿಮಗೆ ಮಕ್ಕಳಿದ್ದಲ್ಲಿ, ನಿಮ್ಮ ವಿಚ್ಛೇದನದಿಂದ ಮಕ್ಕಳ ಜೀವನದ ಮೇಲೆ ಪ್ರಭಾವ ಬೀರುವಂತಿದ್ದಲ್ಲಿ, ವಿಚ್ಛೇದನ ಸಿಗುವುದಿಲ್ಲ. ನಿಮ್ಮ ವಿಚ್ಛೇದನವು ಮಕ್ಕಳನ್ನು ಭಾವನಾತ್ಮಕವಾಗಿ ಆಘಾತಕ್ಕೀಡು ಮಾಡುತ್ತದೆ. ತಮ್ಮ ಪೋಷಕರ ಜೊತೆಯಲ್ಲಿ ಬೆಳೆದ ಮಕ್ಕಳು, ಒಬ್ಬರೆ ಪೋಷಕರ ಬಳಿಯಲ್ಲಿ ಬೆಳೆದ ಮಕ್ಕಳಿಗಿಂತ ಅಧಿಕ ಪ್ರಮಾಣದ ಆತ್ಮ ವಿಶ್ವಾಸವನ್ನು, ಏಕಾಗ್ರತೆಯನ್ನು, ಸೃಜನಶೀಲ ಕೌಶಲ್ಯಗಳನ್ನು ಮತ್ತು ಒಟ್ಟಾರೆ ಉತ್ತಮ ಶಾಲಾ ದಾಖಲೆಗಳನ್ನು ಹೊಂದಿರುತ್ತಾರೆ.

ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ


ವಿಚ್ಛೇದನವು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಅಧ್ಯಯನದ ಪ್ರಕಾರ, ವಿಚ್ಛೇದನ ಹೊಂದಿದ ಜನರಲ್ಲಿ, ಅನ್ಯೋನ್ಯವಾಗಿ ಬಾಳುವ ಗಂಡ-ಹೆಂಡತಿಯರಿಗಿಂತ ಹೆಚ್ಚಾಗಿ ಗಂಭೀರವಾದ ಕಾಯಿಲೆಗಳು, ಅದರಲ್ಲೂ ವಿಪರೀತವಾದ ಹೃದ್ರೋಗದ ಸಮಸ್ಯೆಗಳು, ಮಧುಮೇಹ ಮತ್ತು ಖಿನ್ನತೆ ಮುಂತಾದವು ಹೆಚ್ಚಾಗಿ ಕಂಡು ಬರುತ್ತವೆ.

ಖರ್ಚು-ವೆಚ್ಚಗಳನ್ನು ಅಧಿಕಗೊಳಿಸುತ್ತದೆ


ವಿಚ್ಛೇದನವು ಜನರ ಖರ್ಚು ವೆಚ್ಚಗಳನ್ನು ಅಧಿಕಗೊಳಿಸುತ್ತದೆ. ಏಕೆಂದರೆ ವಿಚ್ಛೇದನ ಮಾಡಿಕೊಂಡವರು ತಮ್ಮ ಉಡುಗೆ, ತೊಡುಗೆ, ಸ್ನೇಹಿತರು ಮತ್ತು ರಜಾ ದಿನಗಳು ಇತ್ಯಾದಿಗಳಿಗಾಗಿ ಅಧಿಕವಾಗಿ ಖರ್ಚು ಮಾಡುತ್ತಾರೆ. ಆದರೆ ಇದೇ ವಿಚಾರವಾಗಿ ಮದುವೆಯಾದವರು ಕಡಿಮೆ ಹಣವನ್ನು ಖರ್ಚು ಮಾಡುತ್ತಾರೆ ಮತ್ತು ಅವರು ತಮ್ಮ ಮುಂದಿನ ಭವಿಷ್ಯಕ್ಕಾಗಿ ಹಣವನ್ನು ಕೂಡಿಡುತ್ತಾರೆ. ವಿಚ್ಛೇದನಕ್ಕೆ ಮುನ್ನ ಈ ರೀತಿ ಮಾಡುವುದರಲ್ಲಿ ತಪ್ಪೇನು?

ಇಷ್ಟಾನಿಷ್ಟಗಳು


ಒಂದು ವೇಳೆ ನೀವು ಯಾರ ಜೊತೆಗಾದರು ವಾಸವಾಗಿದ್ದಲ್ಲಿ, ನಿಮಗೆ ನಿಮ್ಮದೇ ಆದ ಕೋಪ, ತಾಪ, ಇಷ್ಟ ಮತ್ತು ಕಷ್ಟಗಳು ಇರುತ್ತವೆ ಎಂಬುದನ್ನು ನಿಮ್ಮ ಸಂಗಾತಿಗೆ ತಿಳಿಸಿಕೊಡಿ. ಒಂದು ಹೊಸ ಸಂಬಂಧವು ಬೆಳೆಯಲು ತುಂಬಾ ಪರಿಶ್ರಮವನ್ನು ಬೇಡುತ್ತದೆ. ಅದೆಲ್ಲದಕ್ಕಿಂತ ಮುಖ್ಯವಾಗಿ ವಿಚ್ಛೇದನದ ನಂತರ ಒಂದು ವೇಳೆ ನೀವು ಇನ್ನೊಂದು ಮದುವೆಯಾದರೆ, ನೀವು ನಿಮ್ಮ ಮಾಜಿ ಸಂಗಾತಿಯೊಂದಿಗೆ ಪ್ರಸ್ತುತ ಇರುವವರನ್ನು ಹೋಲಿಕೆ ಮಾಡುತ್ತಲೆ ಇರುತ್ತೀರಿ.
English summary

Reasons For Not Getting A Divorce

Divorce is considered to be a daunting word for those who believe in the pious institution of marriage. Divorce not only affects a person emotionally but it takes a toll on you physically as well. Hence, this article is certainly not meant for you if you are willing to end your marriage.
Story first published: Monday, February 16, 2015, 16:54 [IST]
X
Desktop Bottom Promotion