For Quick Alerts
ALLOW NOTIFICATIONS  
For Daily Alerts

ಸಂಗಾತಿಯೊಂದಿಗೆ ಮನಬಿಚ್ಚಿ ಮಾತನಾಡಲು ನಾಚಿಕೆ ಯಾಕೆ?

By Arshad
|

ಹಿಂದಿನ ಕಾಲದಲ್ಲಿ ವಿವಾಹದ ನಿಶ್ಚಯವನ್ನು ಮದುವೆಯಾಗುವವರನ್ನು ಕೇಳದೆಯೇ ಹಿರಿಯರೇ ನಿಶ್ಚಯ ಮಾಡುತ್ತಿದ್ದರು. ಬಹುತೇಕ ಜನರು ತಮ್ಮ ಸಂಗಾತಿಯ ಮುಖವನ್ನು ನೋಡುವುದೇ ಮದುವೆಯ ಮಂಟಪದಲ್ಲಿ! ಆದರೆ ಇಂದು ದಿನ ಬದಲಾಗಿದೆ. ಹಿರಿಯರು ಒಪ್ಪಿದರೂ ಗಂಡು ಹೆಣ್ಣು ಇಬ್ಬರೂ ಪರಸ್ಪರ ಒಪ್ಪಿಗೆ ಸೂಚಿಸಿದ ಬಳಿಕವೇ ವಿವಾಹಕ್ಕೆ ಮನ್ನಣೆ.

ಅದರಲ್ಲೂ ಇಂದಿನ ಯುವಪೀಳಿಗೆ ತಮ್ಮ ಜೀವನಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಳ್ಳುವ ಇರಾದೆ ಹೊಂದಿರುತ್ತಾರೆ. ತಮ್ಮ ಜೀವನಸಂಗಾತಿಯಾಗುವವರೊಡನೆ ಪ್ರಥಮವಾಗಿ ಭೇಟಿಯಾದಾದ ಸ್ವಾಭಾವಿಕವಾಗಿ ನಾಚಿಕೆ ಮತ್ತು ಸಂಕೋಚ ಆವರಿಸಿ ನಿರಾಳವಾಗಿ ಮಾತನಾಡಲು ಅಡ್ಡಿಯಾಗುತ್ತದೆ.

Overcome Shyness On Your First Date

ಆದರೆ ನಾಚಿಕೆಯಿಂದ ಮಾತನಾಡದೇ ಕುಳಿತುಬಿಟ್ಟರೆ ಸಂಬಂಧ ಕುದುರುವ ಬದಲು ದೂರಸರಿಯುವ ಅಪಾಯವಿರುತ್ತದೆ. ಹಾಗಾದರೆ ಏನು ಮಾಡಬೇಕು? ಸುಲಭವಾಗಿ ಹೇಳುವುದಾದರೆ ಕೊಂಚ ಧೈರ್ಯ ತಂದುಕೊಳ್ಳಬೇಕು. ಧೈರ್ಯ ತಂದುಕೊಂಡಿರುವುದು ಸರಿ, ಏನನ್ನು ಕೇಳಬೇಕು? ಯಾವ ವಿಷಯವನ್ನು ಕೆದಕಬೇಕು? ತಮ್ಮ ವಿಷಯದಲ್ಲಿ ಯಾವ ವಿವರಗಳನ್ನು ಹೇಳಬೇಕು, ಯಾವ ವಿವರಗಳನ್ನು ಹೇಳಬಾರದು? ಎಂಬ ವಿಷಯಗಳನ್ನು ಆಯ್ದುಕೊಳ್ಳುವುದೇ ನಿಜವಾದ ಚಾತುರ್ಯ.

ಪ್ರತಿಯೊಬ್ಬರಲ್ಲಿಯೂ ಕೆಲವೊಂದು ಕೊರತೆಗಳಿರುತ್ತವೆ. ಈ ಕೊರತೆಗಳನ್ನು ಈಗಲೇ ಹೇಳಿಬಿಡುವುದೇ? ಅಥವಾ ಮದುವೆಯ ಬಳಿಕ ತನ್ನಿಂತಾನಾಗಿ ಗೊತ್ತಾಗತ್ತದೆ ಎಂಬ ಉಢಾಫೆಯಿಂದ ಬಿಟ್ಟುಬಿಡುವುದೇ? ಇದೂ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ. ಆದ್ದರಿಂದ ಪ್ರಥಮ ಭೇಟಿಯಲ್ಲಿ ಚಲನಚಿತ್ರದಲ್ಲಿ ನೋಡುವಂತೆ ಕೇವಲ ಸಲ್ಲಾಪದ ಮಾತುಗಳಿಗಿಂತ ನೇರವಾದ ಮತ್ತು ಅಗತ್ಯವಾದ ವಿಷಯಗಳನ್ನು ಸ್ಪಷ್ಟವಾಗಿ ಮತ್ತು ಕಣ್ಣಿನಲ್ಲಿ ಕಣ್ಣಿಟ್ಟು ಹೇಳುವುದರ ಮೂಲಕ ಉತ್ತಮ ಸಂಬಂಧ ಕುದುರಬಲ್ಲದು ಅಥವಾ ಇಬ್ಬರಿಗೂ ಸರಿಹೋಗದಿದ್ದರೆ ಯಾವುದೇ ಕೆಟ್ಟ ಅಭಿಪ್ರಾಯವಿಲ್ಲದೇ ಈ ಸಂಬಂಧ ಇಬ್ಬರಿಗೂ ಸರಿಹೋಗದು, ನಿಮಗೆ ಶುಭವಾಗಲಿ ಎಂದು ಬೇರಾಗಲೂಬಹುದು. ಆದರೆ ಈ ಕಾರ್ಯಕ್ಕೆ ಮುಖ್ಯವಾಗಿ ನಾಚಿಕೆ ಮತ್ತು ಸಂಕೋಚವನ್ನು ಕೊಂಚ ಬದಿಗಿಡುವುದು ಒಳಿತು. ಆದರೆ ಹೇಗೆ? ಮುಂದೆ ಓದಿ...

ಮೊತ್ತ ಮೊದಲು ನಿಮ್ಮನ್ನು ಹೀಗಿದ್ದೀರೋ ಹಾಗೇ ಒಪ್ಪಿಕೊಳ್ಳಲು ತಯಾರಾಗಿ
ಜಗತ್ತಿಯಲ್ಲಿ ಯಾವೊಂದೂ ಕೊರತೆ ಇದರ ವ್ಯಕ್ತಿಯೇ ಇಲ್ಲ. ಲತಾ ಮಂಗೇಶ್ಕರ್ ರವರಿಗೆ ಕ್ರಿಕೆಟ್ ಆಡಲು ಬರುವುದಿಲ್ಲ, ಸಚಿನ್ ಟೆಂಡೂಲ್ಕರ್ ರವರಿಗೆ ಹಾಡು ಹೇಳಲು ಬರುವುದಿಲ್ಲ. ಆದರೆ ಇವು ಅವರ ಕೊರತೆ ಎಂದು ನಮಗೆಲ್ಲಾದರೂ ಅನ್ನಿಸಿದೆಯೇ? ಅಂತೆಯೇ ನಮ್ಮಲ್ಲೂ ಕೆಲವೊಂದು ಸಾಮರ್ಥ್ಯವಿರುತ್ತವೆ, ಕೆಲವು ಕೊರತೆಗಳಿರುತ್ತವೆ. ನೀವು ಯಾವ ಕ್ಷೇತ್ರದಲ್ಲಿ ಅತ್ಯುತ್ತಮರಿದ್ದೀರಿ ಮತ್ತು ಇಲ್ಲ ಎಂಬುದನ್ನು ನೀವು ತಿಳಿದುಕೊಂಡಷ್ಟೂ ನಿಮ್ಮ ಬಗ್ಗೆ ಸ್ವಾಭಿಮಾನ ಹೊಂದಲು ಸಾಧ್ಯವಾಗುತ್ತದೆ. ನಿಮ್ಮ ಪ್ರಥಮ ಭೇಟಿಯಲ್ಲಿ ಈ ಬಗ್ಗೆ ಕ್ಷಿಪ್ರವಾಗಿ ಮತ್ತು ಸಹಜವಾಗಿ ಹೇಳಲು ಹಿಂದೇಟು ಹಾಕಬೇಡಿ. ಉದಾಹರಣೆಗೆ ನೀವು ಕನ್ನಡಕ ಧರಿಸದೇ ಕಾಂಟಾಕ್ಟ್ ಲೆನ್ಸ್ ಧರಿಸುತ್ತಿದ್ದರೆ, ಸಾಮಾನ್ಯ ಸ್ಥಿತಿಯಲ್ಲಿ ಈ ವಿಷಯ ಗೊತ್ತಾಗದಿದ್ದರೆ ಸ್ಪಷ್ಟವಾಗಿ ಹೇಳುವುದು ಉತ್ತಮ. ಆಪ್ತ ಸಮಾಲೋಚನೆ ನಡೆಸಿ, ಸಮಸ್ಯೆ ಬಗೆಹರಿಸಿಕೊಳ್ಳಿ!

ನಿಮ್ಮ ಮಾದರಿ ಹೀರೋ ಅಥವಾ ಬೇರೆ ವ್ಯಕ್ತಿಯನ್ನು ಅನುಸರಿಸದಿರಿ
ಮನುಕುಲದ ಒಂದು ದೊಡ್ಡ ಕೊರತೆ ಎಂದರೆ ಇದು. ಅಂದರೆ ನಾವು ಖ್ಯಾತನಾಮರನ್ನು ಅತಿ ಹೆಚ್ಚಾಗಿ ನಂಬುವುದು. ಉದಾಹರಣೆಗೆ ಒಂದು ಬಾರಿ ಖ್ಯಾತ ಸಂಸ್ಥೆಯ ಉತ್ಪನ್ನದಲ್ಲಿ ಉಪಯೋಗಿಸಿದ ನೀರು ಕಲುಷಿತ ಎಂದು ಕೋರ್ಟ್ ತಡೆ ನೀಡಿದ್ದಾಗ ಖ್ಯಾತ ತಾರೆಯೊಬ್ಬರು ಜಾಹೀರಾತಿನಲ್ಲಿ ಬಂದು ಇದು ನನಗೆ ಏನೂ ತೊಂದರೆ ಮಾಡುತ್ತಿಲ್ಲ, ನಿಮಗೂ ಮಾಡುವುದಿಲ್ಲ ಎಂದು ಹೇಳಿದ ಒಂದೇ ವಾಕ್ಯ ಸಕಲ ಭಾರತೀಯರು ಮತ್ತೆ ಆ ಉತ್ಪನ್ನವನ್ನು ಮರಳಿ ಖರೀದಿಸುವಂತಾಯ್ತು. ಹಾಗಾದರೆ ಖ್ಯಾತ ತಾರೆ ಹೇಳಿದಾಕ್ಷಣ ಆ ನೀರು ಒಳ್ಳೆಯದಾಗಿಬಿಟ್ಟಿತೇ? ಇಲ್ಲ, ಇದು ನಾವು ನಮ್ಮ ಮಾದರಿಗಳನ್ನು ನಂಬುವ ಪರಿಯಾಗಿದೆ. ಅಂತೆಯೇ ನೀವು ನಂಬುವ ತಾರೆ ಅಥವಾ ವ್ಯಕ್ತಿಯನ್ನು ಎಷ್ಟು ಅಭಿಮಾನದಿಂದ ನೋಡಿದರೂ ಈ ಕ್ಷಣದಲ್ಲಿ ಯಾರನ್ನೂ ಅನುಕರಿಸದೇ ನಿಮ್ಮ ಸ್ವಂತ ವ್ಯಕ್ತಿತ್ವವನ್ನು ಪ್ರಕಟಿಸಿ.

ಇದರಿಂದ ಏನಾಗಬಹುದು ಎಂಬ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ
ಪ್ರಥಮ ಭೇಟಿಯಲ್ಲಿಯೇ ಎಲ್ಲಾ ವಿಷಯಗಳನ್ನು ತಿಳಿಸಿ ಒರೆಹಚ್ಚಲು ಸಾಧ್ಯವಿಲ್ಲ ಅಥವಾ ಮುಂದಿರುವವರ ಬಗ್ಗೆ ಎಲ್ಲಾ ವಿಷಯಗಳನ್ನು ತಿಳಿಯಲು ಸಾಧ್ಯವಿಲ್ಲ. ನಿಮ್ಮ ಬಗ್ಗೆ ಕೆಲವೊಂದು ವಿಷಯಗಳನ್ನು ಹೇಳಿಕೊಂಡು ಬಳಿಕ ಇದರ ಪರಿಣಾಮ ಏನಾಗುತ್ತದೆ ಎಂದು ಆತಂಕ ಪಡುವ ಬದಲು ಈ ವಿಷಯವನ್ನು ಹೇಳಿಯೇ ಇದರ ಫಲಿತಾಂಶ ಬಂದರೆ ಒಳಿತು ಎಂದು ನಿರಾತಂಕರಾಗಿರಿ. ಏಕೆಂದರೆ ಸ್ಪಷ್ಟವಾಗಿ ಹೇಳಿದ ಮಾತುಗಳ ಮೂಲಕ ನಿಮ್ಮ ಬಗ್ಗೆ ಮೂಡುವ ಅಭಿಪ್ರಾಯಕ್ಕಿಂತಲೂ ಒಂದು ವೇಳೆ ಹೇಳದೇ ಇದ್ದರೆ ಮೂಡುವ ಅಭಿಪ್ರಾಯ ಭಿನ್ನವಾಗಿರುತ್ತದೆ. ನಿಮ್ಮ ಬಗ್ಗೆ ಹೇಳಿಕೊಳ್ಳುವಾಗ ಫಲಿತಾಂಶ ಏನಾಗಬಹುದು ಎಂಬ ಆತಂಕ ಇಲ್ಲದಿದ್ದರೆ ನಿಮ್ಮ ಬಗ್ಗೆ ಹೇಳಿಕೊಳ್ಳಲು ನಿಮಗೆ ಸುಲಭವಾಗುತ್ತದೆ. ಅಂತೆಯೇ ನಿಮ್ಮ ಸಂಗಾತಿಯಾಗುವವರು ಹೇಳುವ ವಿವರಗಳನ್ನೂ ಪಡೆಯಲು ಸಾಧ್ಯವಾಗುತ್ತದೆ. ಮದುವೆಯ ಬಳಿಕ ಏಕೆ ಇಷ್ಟೊಂದು ನೀರಸ ಮೌನ?

ಹೇಳಬೇಕಾದ ವಿಷಯಗಳನ್ನು ಹೇಳಿ, ಹೇಳಬಾರದಂತಹ ವಿಷಯಗಳನ್ನು ಅಗತ್ಯಬಿದ್ದರೆ ಮಾತ್ರ ಹೇಳಿ
ನಿಮ್ಮ ಬಗ್ಗೆ ಹೇಳಿಕೊಳ್ಳಲು ಸಾಕಷ್ಟು ವಿಷಯಗಳಿದ್ದರೂ ಚುಟುಕಾಗಿ ಮುಖ್ಯ ಅಂಶಗಳನ್ನು ಮಾತ್ರ ತಿಳಿಸಿ. ಕೆಲವು ಹೇಳಬಾರದಂತಹ ಗುಟ್ಟುಗಳಿದ್ದು, ಒಂದು ವೇಳೆ ಹೇಳದೇ ಇದ್ದರೆ, ನಾಳೆ ಮೂರನೆಯವರಿಂದ ಈ ವಿಷಯ ಸಂಗಾತಿಗೆ ಗೊತ್ತಾಗಿ ಅನಾಹುತವಾಗುವ ಸಂಭವವಿದ್ದರೆ ಇವುಗಳ ಬಗ್ಗೆ ಚುಟುಕಾಗಿ ಹೇಳಿ ಇದರಿಂದ ಈಗ ಹೊರಬಂದಿರುವ ಮತ್ತು ಸುಧಾರಣೆಯಾಗಿರುವ ಬಗ್ಗೆ ಸ್ಪಷ್ಟವಾಗಿ ತಿಳಿಸಿ. ಒಂದು ವೇಳೆ ಈ ವಿಷಯ ಮುಂದೆ ತೊಂದರೆ ಕೊಡುವಂತಹದ್ದಾಗಿದ್ದರೆ, ಇದ್ದುದನ್ನು ಇದ್ದ ಹಾಗೇ ಸ್ವೀಕರಿಸುವ ಸಂಭವ ಇಲ್ಲದೇ ಇದ್ದರೆ ಮಾತು ಮುಂದುವರೆಸದೇ ಈ ಸಂಬಂಧದಿಂದ ಹೊರಬನ್ನಿ. ಇದು ಇಬ್ಬರಿಗೂ ಕ್ಷೇಮವಾದ ದಾರಿಯಾಗಿದೆ.

English summary

Overcome Shyness On Your First Date

Do you feel shy to approach someone to convey your feelings? Well, shedding shyness is important in order to initiate relationships. Of course, you don't need to be a totally 'outgoing' person just to initiate a chat with someone you love. It just takes some courage.
X
Desktop Bottom Promotion