For Quick Alerts
ALLOW NOTIFICATIONS  
For Daily Alerts

ಹಳೆಯ ಸಂಪ್ರದಾಯ ಭದ್ರತೆ, ಸುಭದ್ರ ಜೀವನಕ್ಕೆ ರಹದಾರಿ

|

ಹಳೆಯ ಆಂಗ್ಲ ಗಾದೆ "ಓಲ್ಡ್ ಈಸ್ ಗೋಲ್ಡ್" ಎಂದು ಹೇಳುತ್ತದೆ. ಇಂದು ಈ ಓಲ್ಡ್ ಎಂಬುದು ಎಲ್ಲಾ ಅಂಶಗಳಲ್ಲಿ ನಮ್ಮನ್ನು ಕಾಡುತ್ತ ಇರುತ್ತದೆ. ಹಳೆಯದಕ್ಕೆ ಬೆಲೆ ಹೆಚ್ಚು. ಇದು ಕೇವಲ ವಸ್ತುಗಳಿಗಷ್ಟೇ ಅಲ್ಲದೆ, ಸ್ನೇಹ, ಸಂಬಂಧ ಮುಂತಾದವುಗಳ ಮೌಲ್ಯವು ಹಳೆಯದಾದಷ್ಟು ಹೆಚ್ಚಾಗುತ್ತ ಹೋಗುತ್ತದೆ. ಇಂದಿನ ಕಾಲದಲ್ಲಿ ನೀವು ಹಳೆಯ ಕಟ್ಟು ಪಾಡುಗಳನ್ನು ಮತ್ತು ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಫಲಿತಾಂಶವನ್ನು ಪಡೆಯಬಹುದು.

ಇದಕ್ಕೆ ಸಂಬಂಧಗಳು ಸಹ ಹೊರತಲ್ಲ, ಒಮ್ಮೆ ಪ್ರಯತ್ನಿಸಿ ನೋಡಬಾರದೇಕೆ? ಯಾವಾಗಲು ಲವ್ ಬರ್ಡ್ಸ್ ರೀತಿಯಲ್ಲಿ ಪ್ರೀತಿ ಮಾಡುವುದೇ ಕೆಲಸವಾಗಿರುವ ಸಂಬಂಧಗಳು ಭೂಮಿಯ ಮೇಲೆ ಯಾವುದೂ ಇಲ್ಲ. ಸಂಬಂಧದಲ್ಲಿ ಪರಸ್ಪರರನ್ನು ಆರೈಕೆ ಮಾಡಬೇಕು ಮತ್ತು ಪರಸ್ಪರರ ಕುರಿತು ಕಾಳಜಿ ಹೊಂದಿರಬೇಕು.ಆಗಲೇ ಸಂತೋಷವೆಂಬುದು ಆ ಸಂಬಂಧದಲ್ಲಿ ಮನೆ ಮಾಡುವುದು.

Old Fashioned Relationship Habits We Need To Bring Back

ಬಹು ಕಾಲ ಸತಿ-ಪತಿಗಳಾಗಿ ಜೀವಿಸುತ್ತಿರುವ, ಇಂದಿಗು ಸಂತೋಷವನ್ನು ತಮ್ಮ ನಡುವೆ ಹಸಿರಾಗಿ ಇರಿಸಿಕೊಂಡಿರುವ ದಂಪತಿಗಳು ಹಲವರು ನಮ್ಮ ನಿಮ್ಮ ನಡುವೆ ಇರುತ್ತಾರೆ. ಅಷ್ಟೇಕೆ ಮನೆಯಲ್ಲಿರುವ ನಮ್ಮ ಅಪ್ಪ-ಅಮ್ಮ ಮುಂತಾದವರೇ ಸಾಕು ನಮಗೆ ಈ ಜೀವಂತ ಉದಾಹರಣೆಯನ್ನು ನೀಡಲು.

ಹಾಗಾದರೆ ಅವರಲ್ಲಿ ಇರುವ ಮತ್ತು ನಮ್ಮಲ್ಲಿ ಇಲ್ಲದ ಆ ಅಂಶ ಯಾವುದು ಈ ಸಂಬಂಧವನ್ನು ಗಟ್ಟಿಗೊಳಿಸುವಂತಹದು ಎಂದು ನೀವು ಕೇಳಿದರೆ, ನಮಗೆ ದೊರಕುವ ಉತ್ತರ "ಪ್ರಾಮಾಣಿಕತೆ". ಸಂಬಂಧದಲ್ಲಿರುವವರು ಪರಸ್ಪರರ ಕುರಿತು ಪ್ರಾಮಾಣಿಕ ಅಭಿಪ್ರಾಯವನ್ನು ಹೊಂದಿರಬೇಕು, ಅದರ ಕೊರತೆಯೇ ಇಂದಿನ ಸಂಬಂಧಗಳು ಸದೃಢರಾಗಲು ಬಿಡುತ್ತಿಲ್ಲ.

ಹಳೆಯ ಕಾಲದವರ ಸಂಬಂಧದಲ್ಲಿ ಈ ಪ್ರಾಮಾಣಿಕತೆಯು ತುಂಬಿ ತುಳುಕುತ್ತಿತ್ತು. ಆದ್ದರಿಂದಲೇ ಅವರದು ದಶಕಗಳಾದರು ಕದಲಿಸಲಾಗದ ಬಂಡೆಯಂತಹ ಸಂಬಂಧಗಳಾಗಿವೆ. ಆದರೆ ಈ ಎಲೆಕ್ಟ್ರಾನಿಕ್ ಯುಗದಲ್ಲಿ ಜನರು ಈ ಪ್ರಾಮಾಣಿಕತೆಯನ್ನು ಮರೆಯುತ್ತಿದ್ದಾರೆ. ಇಲ್ಲಿ ಕನ್‌ಫ್ಯೂಶಿಯಸ್ ಹೇಳಿದ ಒಂದು ಮಾತು ನೆನಪಿಗೆ ಬರುತ್ತಿದೆ "ಸತ್ಯ ಮತ್ತು ಪ್ರಾಮಾಣಿಕತೆ ತಿಳಿದಿರುವ ಯಾವ ವ್ಯಕ್ತಿಗು ಬೇರೆ ವಿಚಾರಗಳನ್ನು ಕಲಿಸಿಕೊಡಬೇಕಾದ ಅಗತ್ಯವಿರುವುದಿಲ್ಲ". ಇದರರ್ಥ ಸತ್ಯ ಮತ್ತು ಪ್ರಾಮಾಣಿಕತೆಯು ಜೀವನದ ಭದ್ರ ಬುನಾದಿಗಳು.

ಅವುಗಳು ಸಂಬಂಧದಿಂದ ಯಶಸ್ಸಿನವರೆಗೆ ಎಲ್ಲದರಲ್ಲು ನಮಗೆ ಬೆಂಬಲವಾಗಿ ನಿಲ್ಲುತ್ತವೆ. ಆದರೆ ಅದೇ ಇಲ್ಲದ ನಮ್ಮ ಈ ಕಾಲದ ಸಂಬಂಧಗಳ ಬುಡದಲ್ಲಿಯೇ ದುರ್ಬಲವಾಗಿ ಕುಸಿಯುತ್ತಿವೆ. ಜೊತೆಗೆ ನಾವೀಗ ಸಾಮಾಜಿಕ ಜಾಲ ತಾಣಗಳ ಯುಗದಲ್ಲಿದ್ದೇವೆ. ಇವುಗಳು ನಮ್ಮ ಸಂಬಂಧದ ಮೇಲೆ ಅಡ್ಡ ಪರಿಣಾಮಗಳನ್ನುಂಟು ಮಾಡುತ್ತಿವೆ. ಇವು ಭಾವಾನಾತ್ಮಕವಾಗಿ ಮತ್ತು ದೈಹಿಕವಾಗಿ ನಮ್ಮ ಮೇಲೆ ಪ್ರಭಾವ ಬೀರುವಷ್ಟರ ಮಟ್ಟಿಗೆ ಬೆಳೆದಿವೆ. ಇವುಗಳಿಗೆ ಉತ್ತರಿಸುತ್ತ, ಓದುತ್ತ ಕಾಲ ಕಳೆಯುವ ನಾವು ನಿಜವಾದ ಸಂಬಂಧಕ್ಕೆ ನೀಡುವಷ್ಟು ಸಮಯವನ್ನು ನೀಡುತ್ತಿಲ್ಲ. ಸುಖಾಸುಮ್ಮನೆ ಗಂಡನ ಪ್ರೀತಿಯ ಮೇಲೆ ಸಂಶಯ ಪಡಬೇಡಿ!

ಹಾಗಾಗಿಯೇ ಸಂಬಂಧದಲ್ಲಿ ಇಬ್ಬರ ನಡುವೆ ಅನ್ಯೋನ್ಯತೆ ಕಾಣೆಯಾಗಿರುವುದು. ತಂತ್ರಜ್ಞಾನವು ಸಮಾಜವನ್ನು ಉದ್ಧಾರ ಮಾಡುತ್ತಿದೆ. ಆದರೆ ಸಮಾಜದ ಮೂಲ ಘಟಕವಾದ ಸಂಸಾರದಲ್ಲಿ ಹುಳಿ ಹಿಂಡಲು ಸಹಾಯ ಮಾಡುತ್ತಿದೆ. ಜೊತೆಗೆ ಇದು ಸಿಗುವ ಅಲ್ಪ ಸ್ವಲ್ಪ ಸಮಯವನ್ನು ಸಹ ಸಂಗಾತಿಗೆ ನೀಡದಂತೆ ತಡೆಯುತ್ತದೆ.

ನಾವು ಸದಾ ಯಾವುದಾದರು ಒಂದು ಕೆಲಸದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ಇರುತ್ತೇವೆ. ಆದರೆ ನಮ್ಮ ಹಿರಿಯರು ಇಬ್ಬರೂ ಒಟ್ಟಿಗೆ ಮನೆಯ ಅಥವಾ ತೋಟದ ಕೆಲಸಗಳನ್ನು ಮಾಡುತ್ತಿದ್ದರು. ಒಟ್ಟಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಪರಸ್ಪರ ಮಾತನಾಡುತ್ತಿದ್ದರು, ಸಮಸ್ಯೆಗಳ ಕುರಿತು ಚರ್ಚಿಸುತ್ತಿದ್ದರು. ಹಬ್ಬ-ಹರಿದಿನ, ಮದುವೆ ಮತ್ತು ಮುಂಜಿಗಳಿಗೆ ಒಟ್ಟಿಗೆ ಹೋಗಿ ಬರುತ್ತಿದ್ದರು. ಆದರೆ ಇದು ಇಂದಿನ ದಿನಗಳಲ್ಲಿ ಸಾಧ್ಯವೇ?

ಮದುವೆಗಳಿಗೆ ಹೋಗುವುದಿದ್ದರು, ಅದನ್ನು ಒಂದು ಕಷ್ಟ ಎಂದುಕೊಂಡು ಹೋಗುವವರು ಸ್ವಲ್ಪ ಜನವಾದರೆ, ಅದಕ್ಕೆ ತಯಾರಾಗಲು ಗಂಟೆಗಳನ್ನು ವ್ಯಯಿಸುವ ಸ್ವಲ್ಪ ಜನ ಹೀಗೆ ನಾನಾ ಸಮಸ್ಯೆಗಳು ಇವರನ್ನು ಕಾಡುತ್ತಿವೆ. ಆದರೆ ಒಟ್ಟಿಗೆ ಹೋಗಿ ಒಂದು ಸಮಾರಂಭದಲ್ಲಿ ನಿಮ್ಮ ಉಪಸ್ಥಿತಿಯನ್ನು ಸಾರುವಂತಹ ಮತ್ತು ಅದರ ಫಲವನ್ನು ಅಂದರೆ ಒಟ್ಟಿಗೆ ಹೋಗಿ ಬರುವ ಸಂದರ್ಭವನ್ನು ಆನಂದಿಸುವ ಪ್ರಜ್ಞೆ ಸಹ ಇವರಿಗೆ ಇಲ್ಲವಾಗಿರುತ್ತದೆ.

ಗಂಟೆಗೆ ಹಲವು ಬಾರಿ ಮೆಸೆಜ್ ಮಾಡಿಕೊಂಡರು, ಮಾತನಾಡಿಕೊಂಡರು ಸಂಬಂಧದಲ್ಲಿ ಹಲವಾರು ಕೊರತೆಗಳು ಕಾಣುತ್ತಿರುತ್ತವೆ. ಅದಕ್ಕೆ ಕಾರಣ, ಎಲ್ಲಾ ಇದ್ದು ಏನೋ ಇಲ್ಲವೆಂಬ ಭಾವನೆ. ಆ ಭಾವನೆಯನ್ನು ನಿಮ್ಮ ಸಂಬಂಧದಿಂದ ಹೊರಗೆ ಕಳುಹಿಸಬೇಕೆಂದರೆ, ಪರಸ್ಪರ ಕಾಳಜಿ ವಹಿಸಿ. ಆಕೆಗಾಗಿ ಹೂವು ತೆಗೆದುಕೊಂಡು ಹೋಗಿ ಕೊಡಿ.

ಆತನಿಗಾಗಿ ಇಂದು ಅವನ ಮೆಚ್ಚಿನ ಕೆಲಸವನ್ನು ಮಾಡಿ. ಹುಡುಕು, ಆತ ಓದಬೇಕು ಎಂದುಕೊಂಡು ಮರೆತು ಬಿಟ್ಟ ಪುಸ್ತಕವನ್ನು ಆತನಿಗೆ ಕೊಡಿ, ಇಲ್ಲವೇ ಸಿನಿಮಾದ ಸಿಡಿ ತೆಗೆದುಕೊಂಡು ಬನ್ನಿ. ಗಂಡನಾದವನು ಹೆಂಡತಿ ಇಷ್ಟಪಟ್ಟ ಸೀರಿಯಲ್ ನಟಿಯ ಉಡುಗೆಯನ್ನು ಹುಡುಕಿ ತಂದು ಕೊಡಬಹುದು. ಈ ಹುಡುಕಾಟಗಳನ್ನು ಒಂದು ರೋಚಕ ಕಥೆಯನ್ನಾಗಿಸಿ ಹೇಳಿ, ನಿಮ್ಮ ಸಂಗಾತಿ ಕಣ್ಣು ರೆಪ್ಪೆ ಮಿಟುಕಿಸದೆ ನಿಮ್ಮನ್ನು ನೋಡುತ್ತಿರಲಿ.

ಈ ಸಂದರ್ಭದ ರಸಮಯ ಘಳಿಗೆಯನ್ನು ಹೆಚ್ಚಿಸಲು ನಿಮ್ಮಿಬ್ಬರ ನೆಚ್ಚಿನ ಆಹಾರ ಮತ್ತು ಪಾನೀಯಗಳನ್ನು ಜೊತೆಯಾಗಿರಿಸಿಕೊಳ್ಳಿ. ಒಂದು ಕ್ಯಾಂಡಲ್ ಲೈಟ್ ಡಿನ್ನರ್ (ಮನೆಯಲ್ಲಿಯೇ) ಅಥವಾ ಬೆಳದಿಂಗಳಲ್ಲಿ ಊಟ ಮಾಡಿ. ಪರಸ್ಪರ ಮಾತನಾಡಿ. ನಿಮ್ಮ ಸಂಗಾತಿಗೆ ನೀವು ಮತ್ತು ನಿಮಗೆ ನಿಮ್ಮ ಸಂಗಾತಿ ಬಿಟ್ಟರೆ ಬೇರೆ ಯಾರೂ ಇಲ್ಲ ಎಂಬ ಭಾವನೆಯನ್ನು ಮನಸ್ಸಿಗೆ ತಂದು ಕೊಂಡು ನೋಡಿ. ಹುಡುಗಿ ಜೊತೆ ಮೊದಲ ಡೇಟಿಂಗ್ - ನರ್ವಸ್ ಆಗಬೇಡಿ!

ಆಗ ಇಡೀ ಪ್ರಪಂಚದಲ್ಲಿ ನೀವು ಪರಸ್ಪರ ಒಬ್ಬರಿಗೊಬ್ಬರು ಮಾತ್ರವೇ ಕಾಣುತ್ತೀರಿ. ಅದೇ ಹಳೆಯ ಕಾಲದ ಸಂಬಂಧದಲ್ಲಿದ್ದವರು ಮಾಡುತ್ತಿದ್ದ ಕೆಲಸ. ನಿಮಗಿಬ್ಬರಿಗು ಪರಸ್ಪರ ಜೊತೆಯಾಗಿ ಕಳೆಯುವ ಒಂದು ಅವಕಾಶವನ್ನು ಬಿಟ್ಟು ಕೊಡಬೇಡಿ. ಟಿವಿ, ಲ್ಯಾಪ್‌ಟಾಪ್, ಫೋನ್, ಗ್ಯಾಡ್ಜೆ‍ಟ್‌ಗಳಿಂದ ದೂರ ಕೆಲವು ನಿಮಿಷಗಳಾದರು ಮಾತನಾಡುತ್ತ ಕಳೆಯಿರಿ.

English summary

Old Fashioned Relationship Habits We Need To Bring Back

An old saying goes 'old is gold'. Yes, they work now-a-days as well such as certain old fashioned tricks, beliefs, ideas come out to be great even in this 21st century. Likewise, if you use some of them to build your relationships in today’s context, you may reap good fruits out.
X
Desktop Bottom Promotion