For Quick Alerts
ALLOW NOTIFICATIONS  
For Daily Alerts

ಕೇಳಿ ಇಲ್ಲಿ, ಗರ್ಲ್‌ ಫ್ರೆಂಡ್‌ನ ಎಲ್ಲಾ ಮಾತು ನಂಬಬೇಡಿ!

By Arshad
|

ನಾಲ್ಕು ಜನರ ಮಧ್ಯೆ ಇದ್ದಾಗ ಪರಸ್ಪರರ ಮೇಲಿನ ಅವಲಂಬನೆ ಮತ್ತು ನಂಬಿಕೆ ಅಗತ್ಯ ಮತ್ತು ಅನಿವಾರ್ಯ. ಅಂತೆಯೇ ನೀಡಿದ ವಾಗ್ದಾನ ಮತ್ತು ಭರವಸೆಗಳನ್ನು ಈಡೇರಿಸುವುದೂ ಅಷ್ಟೇ ಮುಖ್ಯ. ಆದರೆ ವಾಸ್ತವವಾಗಿ ಎಲ್ಲಾ ಜನರೂ ತಮ್ಮ ವಾಗ್ದಾನಗಳನ್ನು ಚಾಚೂ ತಪ್ಪದೆ ಆಚರಿಸುವುದಿಲ್ಲ, ಅಥವಾ ಆಚರಿಸಲು ಸಾಧ್ಯವಾಗುವುದೂ ಇಲ್ಲ. ಉದಾಹರಣೆಗೆ ಗ್ಯಾಸ್ ಸಿಲಿಂಡರ್‌ನವನಿಗೆ ಫೋನ್ ಮಾಡಿದಾಗ ಆರು ಗಂಟೆಗೆ ಬರುತ್ತೇನೆ ಎಂದು ಉತ್ತರಿಸಿದವನು ಏಳು ಗಂಟೆಯಾದರೂ ಪತ್ತೆ ಇರುವುದಿಲ್ಲ.

ಏಕೆಂದರೆ ಅದಕ್ಕೂ ಮೊದಲು ಬೇರೆಯವರಿಗೆ ಸಮಯ ಕೊಟ್ಟು ಆಗಿರುತ್ತದೆ. ತಡವಾಗಿ ತರುತ್ತೇನೆಂದರೆ ಗಿರಾಕಿ ಕಳೆದುಕೊಳ್ಳುವ ಭಯ. ಆದ್ದರಿಂದ ಜಾಣತನವನ್ನು ಉಪಯೋಗಿಸಿಕೊಂಡು ಚಿಕ್ಕ ಸುಳ್ಳು ಹೇಳುವುದೇ ಇಂದಿನ ದಿನದ ಯಶಸ್ಸಿನ ಗುಟ್ಟು. ಆದರೆ ಈ ತಂತ್ರ ಜೀವನಸಂಗಾತಿಗಳಲ್ಲಿ ಸಲ್ಲದು. ಅದರಲ್ಲೂ ಪರಸ್ಪರ ಮೆಚ್ಚಿ ಮದುವೆಯಾಗಬಯಸುವ ಯುವಜನತೆಯಲ್ಲಂತೂ ಖಂಡಿತಾ ಸಲ್ಲದು. ಇವರು ಅಂತಿಂಥ ಹುಡುಗಿಯರಲ್ಲ, ನೇರವಾಗಿ ಹೇಳಿಬಿಡುತ್ತಾರೆ!

ಪ್ರೀತಿಯಲ್ಲಿದ್ದಾಗ ಪರಸ್ಪರರ ಕುರಿತಾದ ಬದ್ಧತೆ ಮತ್ತು ವಿಶ್ವಾಸವೇ ಯಾವುದೇ ಸಂಪತ್ತಿಗೂ ಮಿಗಿಲಾದ ಐಶ್ವರ್ಯವಾಗಿದೆ. ಒಂದು ವೇಳೆ ಇಬ್ಬರಲ್ಲೊಬ್ಬರು ತಮ್ಮ ಸಂಗಾತಿಯ ಕುರಿತು ಅನುಮಾನಪಟ್ಟು ಅಥವಾ ಬೇರೆ ಆಕರ್ಷಣೆಗೆ ಒಳಗಾಗಿ ಇದರಿಂದ ದೂರ ಹೋಗಲು ಪ್ರಯತ್ನಪಟ್ಟರೆ ಸುಳ್ಳಿನ ಸಹಕಾರವನ್ನು ಪಡೆಯಬೇಕಾಗುತ್ತದೆ. ಅಯ್ಯಯ್ಯೋ ಗರ್ಲ್ ಫ್ರೆಂಡ್ ಸಹವಾಸ ಬೇಡಪ್ಪಾ ಬೇಡ..!

ಒಂದು ವೇಳೆ ನಿಮ್ಮ ಪ್ರಿಯತಮೆಯೂ ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದರೆ, ಅಥವಾ ನಿಮ್ಮಲ್ಲಿ ಹೇಳುವ ಮಾತುಗಳು ಸುಳ್ಳಾಗಿದ್ದರೆ ಇದನ್ನು ಸುಲಭವಾಗಿ ಕಂಡುಹಿಡಿಯಬಹುದು. ವಾಸ್ತವವಾಗಿ ಪ್ರೇಮದಲ್ಲಿರುವವರು ತಮ್ಮ ಪ್ರಿಯತಮೆ ಹೇಳುವ ಎಲ್ಲಾ ಮಾತುಗಳನ್ನು ನೇರವಾಗಿ ನಂಬಿಬಿಡುತ್ತಾರೆ. ಕೊಂಚ ಕಾಲ ನಿಮ್ಮೊಂದಿಗೆ ಕಳೆದಿರುವ ನಿಮ್ಮ ಪ್ರಿಯತಮೆಗೆ ನಿಮ್ಮನ್ನು ಪಳಗಿಸಲು ಯಾವ ಮಾತುಗಳನ್ನಾಡಬೇಕು ಎಂದು ಈಗಾಗಲೇ ತಿಳಿದಿರುತ್ತದೆ. ಆದರೆ ಈ ಮಾತುಗಳು ನಿಜವೇ ಎಂದು ಒರೆಹಚ್ಚಿ ನೋಡಲು ನಿಮಗೆ ಕೆಳಗಿನ ಸ್ಲೈಡ್ ಶೋ ನಿಮಗೆ ನೆರವಾಗಲಿದೆ..

ಆಕೆ ನಿಮ್ಮ ಗಮನವನ್ನು ಬೇರೆಡೆ ಹರಿಸಲು ಯತ್ನಿಸುತ್ತಾಳೆ

ಆಕೆ ನಿಮ್ಮ ಗಮನವನ್ನು ಬೇರೆಡೆ ಹರಿಸಲು ಯತ್ನಿಸುತ್ತಾಳೆ

ನೀವು ಯಾವುದಾದರೊಂದು ವಿಷಯದಲ್ಲಿ ಮಾತನಾಡುತ್ತಿದ್ದಾಗ ಥಟ್ಟನೇ ಆಕೆ ನಡುವೆ ಮಾತು ತುಂಡರಿಸಿ ಇದಕ್ಕೆ ಸಂಬಂಧವೇ ಇಲ್ಲದ ಇನ್ನಾವುದೋ ವಿಷಯವನ್ನು ಕೆದಕಿ ನಿಮ್ಮ ಗಮನವತ್ತ ಅತ್ತ ಸೆಳೆದರೆ,ಅದರಲ್ಲೂ ಇದು ಅನಾಗತ್ಯವಾಗಿದ್ದರೆ ಆಕೆ ಸುಳ್ಳು ಹೇಳುತ್ತಿದ್ದಾಳೆ ಎಂಬುದು ಖಾತ್ರಿ.

ನಿಮ್ಮ ಗಮನವನ್ನು ತನ್ನ ಒಯ್ಯಾರದಿಂದ ಬದಲಿಸಲು ಯತ್ನಿಸುತ್ತಾಳೆ

ನಿಮ್ಮ ಗಮನವನ್ನು ತನ್ನ ಒಯ್ಯಾರದಿಂದ ಬದಲಿಸಲು ಯತ್ನಿಸುತ್ತಾಳೆ

ಹೆಚ್ಚಿನ ಮಹಿಳೆಯರಿಗೆ ತಮ್ಮ ಪತಿಯರ ಋಣಾತ್ಮಕ ಅಂಶಗಳು ಗೊತ್ತಿರುತ್ತವೆ. ನಿಮ್ಮ ಪ್ರಿಯತಮೆಗೂ ಇದು ತಿಳಿದೇ ಇರುತ್ತದೆ. ಒಂದು ವೇಳೆ ಆಕೆಯ ಸುಳ್ಳು ನಿಮ್ಮ ಗಮನಕ್ಕೆ ಬರುತ್ತಿದೆ ಎಂದು ಆಕೆಗೆ ಆರಿವಾದ ತಕ್ಷಣ ಆಕೆ ತನ್ನ ಪರಿ ಬದಲಿಸಿ ತನ್ನ ಒಯ್ಯಾರದಿಂದ ನಿಮ್ಮ ದೌರ್ಬಲ್ಯದ ಮೇಲೆ ಧಾಳಿ ಮಾಡಿ ನಿಮ್ಮನ್ನು ಒಲಿಸಿಕೊಳ್ಳಲು ಯತ್ನಿಸುತ್ತಾಳೆ.

ತನ್ನ ಮೊಬೈಲ್ ಫೋನನ್ನು ಮುಚ್ಚಿಡುತ್ತಾಳೆ

ತನ್ನ ಮೊಬೈಲ್ ಫೋನನ್ನು ಮುಚ್ಚಿಡುತ್ತಾಳೆ

ಒಂದು ವೇಳೆ ಆಕೆಯ ಮೊಬೈಲಿನಲ್ಲಿ ಯಾವುದಾದರೂ ಸಂದೇಶವಿದ್ದು ಅದು ನಿಮ್ಮ ಸಂಬಂಧಕ್ಕೆ ಧಕ್ಕೆಯುಂಟುಮಾಡುತ್ತದೆ ಎಂದು ಆಕೆಗೆ ಅರಿವಿದ್ದರೆ ಆಕೆ ಆ ಮೊಬೈಲ್ ಫೋನನ್ನು ನಿಮ್ಮಿಂದ ಮುಚ್ಚಿಡಲು ಯತ್ನಿಸುತ್ತಾಳೆ.

ಆಕೆಯ ಮಾತುಗಳು ತಡವರಿಸುತ್ತವೆ

ಆಕೆಯ ಮಾತುಗಳು ತಡವರಿಸುತ್ತವೆ

ಕಳ್ಳನ ಮನಸ್ಸು ಹುಳ್ಳಹುಳ್ಳಗೆ ಎಂಬಂತೆ ಸುಳ್ಳು ಹೇಳುತ್ತಿರುವ ಪ್ರಿಯತಮೆ ತನ್ನ ನಲ್ಲನ ನೋಟವನ್ನು ಎದುರಿಸಲಾಗದೇ ಮಾತಿನಲ್ಲಿ ತಡವರಿಸಲು ತೊಡಗುತ್ತಾಳೆ.

ಕಣ್ಣಿನಲ್ಲಿ ಕಣ್ಣಿಟ್ಟು ನೋಡಲು ನಿರಾಕರಿಸುತ್ತಾಳೆ

ಕಣ್ಣಿನಲ್ಲಿ ಕಣ್ಣಿಟ್ಟು ನೋಡಲು ನಿರಾಕರಿಸುತ್ತಾಳೆ

ಒಂದು ವೇಳೆ ಆಕೆ ತಪ್ಪಿತಸ್ಥೆಯಾಗಿದ್ದರೆ ಅಥವಾ ಹೇಳುತ್ತಿರುವ ಮಾತುಗಳು ಸುಳ್ಳಾಗಿದ್ದರೆ ಆಕೆ ನಿಮ್ಮ ಕಣ್ಣಿನಲ್ಲಿ ಕಣ್ಣಿಟ್ಟು ನೋಡದೇ ಬೇರೆಲ್ಲೋ ನೋಡುತ್ತಾ ಮಾತನಾಡುತ್ತಿದ್ದರೆ ಆಕೆ ನಿಮ್ಮಲ್ಲಿ ಸುಳ್ಳಾಡುತ್ತಿರುವುದು ವೇದ್ಯವಾಗುತ್ತದೆ.

English summary

Is Your Girlfriend Lying?

All of us do lie in some situations and it is perfectly human. But if it happens in a love relationship, the trust factor can get damaged. Relationships are built on the foundation of trust and integrity. Bonds get broken when the trust factor disappears. Is your girlfriend hiding something from you? Is she lying? Well, there are some simple ways to sense whether she is lying.
X
Desktop Bottom Promotion