For Quick Alerts
ALLOW NOTIFICATIONS  
For Daily Alerts

ದಾಂಪತ್ಯದಲ್ಲಿ ಪ್ರೀತಿ, ವಿಶ್ವಾಸವೇ ಸುಖಕರ ಜೀವನದ ತಳಹದಿ

By Arshad
|

ಸಂಗಾತಿಗಳ ನಡುವೆ ಪ್ರೀತಿ ಸದಾ ಹಸಿರಾಗಲು ಪ್ರೀತಿ ಅವಶ್ಯವೇ? ಹೌದು ಎನ್ನುತ್ತದೆ ಜೀವಶಾಸ್ತ್ರ. ಯಾವುದೇ ಸಂಬಂಧದಲ್ಲಿ ಸಂಗಾತಿಗಳ ನಡುವೆ ಇರುವ ನಿಕಟ ಬಾಂಧವ್ಯ, ಇದು ಮಾನಸಿಕವೇ ಇರಲಿ, ದೈಹಿಕವೇ ಇರಲಿ, ಅತ್ಯಂತ ಅವಶ್ಯವಾಗಿದೆ. ಆದರೆ ಇಂದಿನ ದಿನಗಳಲ್ಲಿ ಇಬ್ಬರೂ ಉದ್ಯೋಗಸ್ಥರಾಗಿರುವುದರಿಂದ ಅಥವಾ ಬೇರೆ ಬೇರೆ ಸ್ಥಳಗಳಲ್ಲಿ, ದೇಶಗಳಲ್ಲಿರುವುದರಿಂದ ಒಬ್ಬರಿಂದೊಬ್ಬರು ದೂರವಾಗಿರುವುದು, ನಿರಾಸಕ್ತಿ, ಕೆಲಸದ ಒತ್ತಡ ಮೊದಲಾದ ಕಾರಣಗಳಿಂದ ನಿಕಟ ಬಾಂಧವ್ಯ ಸಾಧ್ಯವಾಗುತ್ತಿಲ್ಲ.

ಆದರೆ ಸಾಕಷ್ಟು ಸಮಯಾವಕಾಶ, ಅನುಕೂಲತೆ ಎಲ್ಲವೂ ಇದ್ದರೂ ಏಕೋ ಒಬ್ಬರಿಗೂಬ್ಬರು ಸಾಕಷ್ಟು ಹತ್ತಿರಾಗುವುದೇ ಇಲ್ಲ. ಇದಕ್ಕೆ ಪ್ರೀತಿಯ ಕೊರತೆಯೇ ಕಾರಣ. ಪ್ರೀತಿಯೇ ಇಲ್ಲದ ಪ್ರಣಯವೂ ಕೇವಲ ಯಾಂತ್ರಿಕ ಚಟುವಟಿಕೆಯಂತಾಗುವುದರಿಂದ ಸಮಯ ಕಳೆದಂತೆ ದೂರವೂ ಹೆಚ್ಚುತ್ತಾ ಹೋಗುತ್ತದೆ. ಆದ್ದರಿಂದ ಸಂಗಾತಿಗಳ ನಡುವೆ ಅಂತರ ಕಡಿಮೆಯಾಗಲು ಪ್ರೀತಿಯ ಜೊತೆಗೆ ಪ್ರಣಯವೂ ಅಗತ್ಯವಾಗಿದೆ.

ಕೆಲವು ದಂಪತಿಗಳು ಸದಾ ಸಂತೋಷವಾಗಿ ಇರುತ್ತಾರೆ. ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಾ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತೆ ಜೀವನ ನಡೆಸುತ್ತಿರುತ್ತಾರೆ. ಇವರಿಗೆ ಅಲ್ಲಾವುದ್ದೀನನ ದೀಪವೇನೂ ಸಿಕ್ಕಿಲ್ಲ, ಸಿಕ್ಕಿರುವುದೇನಿದ್ದರೂ ಒಬ್ಬರಿಗೊಬ್ಬರು ಪರಸ್ಪರ ನೀಡುವ ಪ್ರೀತಿ, ವಿಶ್ವಾಸ, ಸಮಯ ಮತ್ತು ಸಾಮೀಪ್ಯ ಮಾತ್ರ. ಇದಕ್ಕೆ ಬಹಳ ಕಷ್ಟಪಡಬೇಕಾಗಿಯೇನೂ ಇಲ್ಲ. ನಿತ್ಯದ ಚಟುವಟಿಕೆಗಳನ್ನೇ ಜೊತೆಯಾಗಿ ನಿರ್ವಹಿಸಿದರಾಯಿತು ಅಷ್ಟೇ. ಉದಾಹರಣೆಗೆ ಜೊತೆಯಾಗಿ ಅಡುಗೆ ಮಾಡುವುದು, ಬಟ್ಟೆ ಒಣಗಿಸುವುದು, ಮನೆಗೆಲಸಗಳಲ್ಲಿ ಸಹಕರಿಸುವುದು ಮೊದಲಾದವು. ಈ ಆಪ್ತತೆಯೇ ಸುಖಜೀವನದ ತಳಹದಿಯಾಗಿದೆ. ಈ ಬಗ್ಗೆ ಕೆಲವು ಉಪಯುಕ್ತ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಸಂಸಾರದಲ್ಲಿ ಕಲಹ ತರುವ ಅಂಶಗಳಿವು

Is Romance Necessary In A Relationship

ಪ್ರೇಮ ನಿಮ್ಮ ಸಾಮಾನ್ಯ ಜೀವನವನ್ನು ಸುಖಮಯವಾಗಿಸಬಲ್ಲದು
ನಮ್ಮಲ್ಲಿ ಹೆಚ್ಚಿನವರಲ್ಲಿ ಪೂರ್ವಾಗ್ರಹ ನಂಬಿಕೆಯಿದೆ. ಅದೆಂದರೆ ಶ್ರೀಮಂತರೇ ಸುಖವಾಗಿರುತ್ತಾರೆ ಎನ್ನುವುದು. ಹಣವೇ ಸುಖಕ್ಕೆ ಮೂಲ ಎಂಬ ನಂಬಿಕೆಗೆ ಕಟ್ಟುಬಿದ್ದಿರುವ ಜನ ಹಣವಿದ್ದವರನ್ನೇ ಉದಾಹರಿಸಿ, ಅವರೊಂದಿಗೇ ಹೋಲಿಸಿ ತಮ್ಮನ್ನು ತಾವೇ ಹಳಿದುಕೊಳ್ಳುತ್ತಾ ಅಸಂತುಷ್ಟರಾಗಿರುತ್ತಾರೆ. ವಾಸ್ತವವಾಗಿ ಶ್ರೀಮಂತಿಕೆಗೂ ಜೀವನದ ಸುಖಕ್ಕೂ ಯಾವುದೇ ಸಂಬಂಧವಿಲ್ಲ.
ಸುಖವೇನಿದ್ದರೂ ನಿಮ್ಮ ಮತ್ತು ನಿಮ್ಮ ಮನೆಯವರ ನಡುವಣ ಪ್ರೀತಿಯೇ ಹೊರತು ಹಣ ಒದಗಿಸುವ ಸೌಲಭ್ಯಗಳಿಲ್ಲಿಲ್ಲ. ಉದಾಹರಣೆಗೆ ಒಬ್ಬರೇ ಅಡುಗೆ ಮಾಡುವಾಗ ಎಷ್ಟು ಬೇಸರವಾಗುತ್ತದೆಯೋ ಅದೇ ನಿಮ್ಮ ಸಂಗಾತಿಯೊಡನೆ ಜೊತೆಯಾಗಿ ಕೆಲಸವನ್ನು ಹಂಚಿಕೊಂಡು ಮಾಡುವುದರಿಂದ ಇದೇ ಕಾರ್ಯ ಎಷ್ಟು ಸಂತೋಷಕರವಾಗಿ ನಡೆಯುತ್ತದೆ ಗೊತ್ತೇ? ಒಬ್ಬರೇ ಊಟ ಮಾಡುವುದಕ್ಕೂ ಮನೆಯವರೆಲ್ಲಾ ಜೊತೆಯಾಗಿ ಹಂಚಿ ತಿನ್ನುವುದಕ್ಕೂ ಎಷ್ಟು ಅಂತರವಿದೆ ಎಂದು ಅರಿವಿದೆಯೇ?

ಪ್ರೀತಿ ಜೀವನದ ಕಷ್ಟಗಳನ್ನು ಎದುರಿಸಲು ಸ್ಥೈರ್ಯ ನೀಡಬಲ್ಲುದು
ಜೀವನದಲ್ಲಿ ಯಶಸ್ಸು ಯಾರಿಗೂ ಸುಲಭದಲ್ಲಿ ಸಿಕ್ಕಿಲ್ಲ. ಜೀವನದಲ್ಲಿ ಹಲವು ಕಷ್ಟಗಳು ಎದುರಾಗುತ್ತಲೇ ಇರುತ್ತವೆ. ಇವನ್ನು ಸಮರ್ಥವಾಗಿ ಎದುರಿಸಲು ನಮಗೆ ಸಂಗಾತಿಯ ಬೆಂಬಲ ಮುಖ್ಯ. ಈ ಬೆಂಬಲಕ್ಕೆ ಪ್ರೀತಿಯೇ ಜೀವಾಳ. ಪ್ರತಿ ಯಶಸ್ವೀ ಪುರುಷನ ಹಿಂದೆ ಓರ್ವ ಮಹಿಳೆ ಇರುತ್ತಾಳೆ ಎಂಬ ಸುಭಾಷಿತಕ್ಕೆ ಆ ಮಹಿಳೆಯ ಪ್ರೀತಿಯೇ ಮೂಲ.

ಪ್ರೀತಿಯಿಂದ ಜೀವನದಲ್ಲಿ ಬೇಸರವೇ ಇರದು
ನಿನ್ನ ಜೀವನದ ಅತ್ಯಂತ ದೊಡ್ಡ ಸೋಲು ಎಂದರೆ ನೀನು ಒಬ್ಬಂಟಿಯಾಗಿರುವುದು ಎಂದು ಒಂದು ಒಂದು ಸುಭಾಷಿತ ತಿಳಿಸುತ್ತದೆ. ಅಂದರೆ ನಿಮ್ಮ ಅಕ್ಕಪಕ್ಕ ಯಾರೂ ಇರದಿದ್ದು ನಿಮ್ಮ ಬಗ್ಗೆ ಕಾಳಜಿ ತೋರದವರು ಯಾರೂ ಇಲ್ಲದೇ ಹೋದಾಗ ನಿಮ್ಮಲ್ಲಿರುವ ಯಾವುದೇ ಐಶ್ವರ್ಯ ತನ್ನ ಅರ್ಥ ಕಳೆದುಕೊಳ್ಳುತ್ತದೆ. ಪ್ರೇಮ ನಿಮ್ಮನ್ನು ನಿಮ್ಮ ಸಂಗಾತಿ ಮತ್ತು ಮನೆಯವರೊಂದಿಗೆ ನಿಕಟವಾಗಿಸಿ ನಿಮ್ಮ ಬಗ್ಗೆ ಕಾಳಜಿ ವಹಿಸಲು ನೆರವಾಗುತ್ತದೆ. ನಿಮ್ಮೊಂದಿಗೆ ನಿಮ್ಮ ಸಂಗಾತಿಯ ಪ್ರೇಮ ಸದಾ ಇದೆ ಎಂಬ ಒಂದೇ ಭಾವನೆ ನಿಮ್ಮಲ್ಲಿರುವ ಬೇಸರವನ್ನು ಓಡಿಸಿ ಜೀವನದಲ್ಲಿ ಬಹಳಷ್ಟನ್ನು ಸಾಧಿಸಲು ಕಾರಣವಾಗುತ್ತದೆ.

ಪ್ರೀತಿಯಿಂದ ವೈವಾಹಿಕ ಸಂಬಂಧ ಕಡೆಯತನಕ ಇರಲು ಸಾಧ್ಯ
ಕೆಲವೊಮ್ಮೆ ಮೇಲಿನಿಂದ ಸುಖವಾಗಿದ್ದಾರೆ ಎಂದು ಕಂಡುಬಂದ ದಂಪತಿಗಳೂ ಕೆಲವರ್ಷಗಳ ಬಳಿಕ ದೂರವಾಗುವುದನ್ನು ಕಾಣಬಹುದು. ಇದಕ್ಕೆ ಪ್ರಮುಖ ಕಾರಣ ಅವರ ನಡುವೆ ಇದ್ದ ಪ್ರೀತಿಯ ಕೊರತೆ. ಯಾವುದೋ ಮುಲಾಜಿಗೆ ಕಟ್ಟುಬಿದ್ದು ಪ್ರಾರಂಭವಾದ ಜೊತೆ ಪ್ರೀತಿಯಿಲ್ಲದೇ ಸೊರಗುತ್ತದೆ. ಬದಲಿಗೆ ಪ್ರೀತಿಯ ಸಂಕೋಲೆಯಲ್ಲಿ ಬಂಧಿಸಲ್ಪಟ್ಟ ಜೋಡಿ ಕಡೆಯತನಕ (till death do us apart) ಸಂತೋಷದಿಂದಿರುತ್ತಾರೆ.

English summary

Is Romance Necessary In A Relationship

Is romance necessary in a relationship? Absolutely. Though romance is an ingredient that brings all the fun to any relationship, often it is ignored by most of the couples due to various reasons like busy lives, boredom and so on. Also, the number of distractions that exist around us today make it difficult
X
Desktop Bottom Promotion